ರಾಷ್ಟ್ರೀಯ ಯುನಾನಿ ಸಂಸ್ಥೆಯ ಆಡಳಿತಾಧಿಕಾರಿ ಸಿಬಿಐ ಬಲೆಗೆ; ಪಡೆದ ಲಂಚವೇಷ್ಟು?

ರಾಷ್ಟ್ರೀಯ ಯುನಾನಿ ಸಂಸ್ಥೆಯ ಆಡಳಿತಾಧಿಕಾರಿ ಲಂಚ ಪಡೆಯುವಾಗ ಸಿಬಿಐ ಬಲೆಗೆ ಬಿದ್ದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಈ ಹಿನ್ನಲೆ ರಾಷ್ಟ್ರೀಯ ಯುನಾನಿ ಆಡಳಿತಾಧಿಕಾರಿಯನ್ನು ಬೆಂಗಳೂರಿನ ಸಿಬಿಐ ಅಧಿಕಾರಿಗಳು ವಿಶೇಷ ಕೋರ್ಟ್​ಗೆ ಹಾಜರುಪಡಿಸಿದ್ದಾರೆ. ಸದ್ಯ ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ.

ರಾಷ್ಟ್ರೀಯ ಯುನಾನಿ ಸಂಸ್ಥೆಯ ಆಡಳಿತಾಧಿಕಾರಿ ಸಿಬಿಐ ಬಲೆಗೆ; ಪಡೆದ ಲಂಚವೇಷ್ಟು?
ಸಿಬಿಐ
Follow us
Shivaprasad
| Updated By: ಕಿರಣ್ ಹನುಮಂತ್​ ಮಾದಾರ್

Updated on:Nov 26, 2023 | 7:00 PM

ಬೆಂಗಳೂರು, ನ.26: ರಾಷ್ಟ್ರೀಯ ಯುನಾನಿ ಸಂಸ್ಥೆಯ ಆಡಳಿತಾಧಿಕಾರಿ ಲಂಚ(Bribe)ಪಡೆಯುವಾಗ ಸಿಬಿಐ ಬಲೆಗೆ ಬಿದ್ದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬಿಲ್ ಕ್ಲಿಯರ್ ಮಾಡಿಕೊಡಲು 1.1 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆಯಿಟ್ಟು 50 ಸಾವಿರ ರೂ ಮುಂಗಡವಾಗಿ ಪಡೆಯುವಾಗ ರೆಡ್​ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಇನ್ನು ಸಿಬಿಐ ಅಧಿಕಾರಿಗಳು ಪರಿಶೀಲನೆ ವೇಳೆ 2 ಲಕ್ಷ ನಗದು ಪತ್ತೆಯಾಗಿದ್ದು, ಈ ಹಿನ್ನಲೆ ರಾಷ್ಟ್ರೀಯ ಯುನಾನಿ ಆಡಳಿತಾಧಿಕಾರಿಯನ್ನು ಬೆಂಗಳೂರಿನ ಸಿಬಿಐ ಅಧಿಕಾರಿಗಳು ವಿಶೇಷ ಕೋರ್ಟ್​ಗೆ ಹಾಜರುಪಡಿಸಿದ್ದಾರೆ. ಸದ್ಯ ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ.

ಶಾಲೆಗೆ ಗೈರಾಗಿದ್ದರೂ ಶಿಕ್ಷಕನಿಗೆ ವೇತನ;ಕಡ್ಡಾಯ ನಿವೃತ್ತಿಗೆ ಆದೇಶ

ಕಲಬುರಗಿ: 11 ತಿಂಗಳು ಶಾಲೆಗೆ ಗೈರಾಗಿದ್ದರೂ ಶಿಕ್ಷಕನಿಗೆ ವೇತನ ಬಿಡುಗಡೆ ಹಿನ್ನೆಲೆ ಬಿಇಒ ಹಾಗೂ ಇಬ್ಬರು ಎಫ್‌ಡಿಎಗಳನ್ನು ಕಡ್ಡಾಯ ನಿವೃತ್ತಿಗೊಳಿಸಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಿಂದ ಆದೇಶಿಸಲಾಗಿದೆ. ಬಿಇಒ ಆಗಿದ್ದ ಚಿತ್ರಶೇಖರ ದೇಗುಲಮಡಿ, FDAಗಳಾದ ಲೋಕಪ್ಪ ಜಾಧವ್ ಹಾಗೂ ಗುರುರಾಜರಾವ್ ಕುಲಕರ್ಣಿ, 2011ರ ಅಕ್ಟೋಬರ್‌ನಿಂದ 2012ರ ಆಗಸ್ಟ್‌ವರೆಗೂ ಶಾಲೆಗೆ ಗೈರಾಗಿದ್ರು, ಇಲಾಖಾ ತನಿಖೆಯಲ್ಲಿ ಆರೋಪ ಸಾಬೀತಾದ ಹಿನ್ನೆಲೆ ಮೂವರ ವಿರುದ್ಧ ಕ್ರಮ ಕೈಗೊಂಡು, ಕಡ್ಡಾಯ ನಿವೃತ್ತಿಗೊಳಿಸಿ ಆದೇಶಿಸಲಾಗಿದೆ.

ಇದನ್ನೂ ಓದಿ:ಬೆಂಗಳೂರು: ಲಂಚ ಪಡೆಯುತ್ತಿದ್ದ ಬೆಸ್ಕಾಂ ಚೀಫ್ ಜನರಲ್ ಮ್ಯಾನೇಜರ್ ಲೋಕಾಯುಕ್ತ ಬಲೆಗೆ

ಕಾರು ವಾಪಸ್ ನೀಡಲು ಲಂಚ ಪಡೆದ ಕಾನ್ಸ್​ಟೇಬಲ್​ ಅಮಾನತು

ಹಾವೇರಿ: ಕಾರು ವಾಪಸ್ ನೀಡಲು ಜಿಲ್ಲೆಯ ಶಿಗ್ಗಾಂವಿ ಪೊಲೀಸ್ ಠಾಣೆಯ ಕಾನ್ಸ್‌ಟೇಬಲ್ ರಮೇಶ ಭಜಂತ್ರಿ ಎಂಬುವವರು 15 ಸಾವಿರ ಲಂಚಕ್ಕೆ ಬೇಡಿಕೆಯಿಟ್ಟಿದ್ದ ವಿಡಿಯೋ ವೈರಲ್ ಆಗಿತ್ತು. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹಾವೇರಿ ಎಸ್ಪಿ ಅಂಶುಕುಮಾರ ಅವರು ಕಾನ್ಸ್‌ಟೇಬಲ್​ನ್ನು ಅಮಾನತು ಮಾಡಿ ತನಿಖೆಗೆ ಆದೇಶಿಸಿದ್ದಾರೆ. ಇನ್ನು ಲಂಚಕ್ಕೆ ಬೇಡಿಕೆಯಿಟ್ಟ ವಿಡಿಯೋವನ್ನು ಚಾಲಕ ರೆಕಾರ್ಡ್ ಮಾಡಿ ವೈರಲ್ ಮಾಡಿದ್ದ. ಈ ಹಿನ್ನಲೆ ಎಸ್ಪಿ ಅವರು ವಿಡಿಯೋ ಮತ್ತು ಪ್ರಕರಣದ ಕುರಿತು ತನಿಖೆ ಮಾಡುವಂತೆ ಆದೇಶಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:47 pm, Sun, 26 November 23