ಹುಬ್ಬಳ್ಳಿ-ಬೆಂಗಳೂರು ಸೂಪರ್ ಫಾಸ್ಟ್ ವಿಶೇಷ ರೈಲು ಸೇವೆ ಪುನಾರಂಭ-ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ
ಹುಬ್ಬಳ್ಳಿ-ಬೆಂಗಳೂರು-ಹುಬ್ಬಳ್ಳಿ ಸೂಪರ್ ಫಾಸ್ಟ್ ರೈಲು ಓಡಾಟದ ಪುನರಾರಂಭದ ಅಗತ್ಯತೆಯನ್ನು ಸಚಿವ ಹಾಗೂ ಅಧಿಕಾರಿಗಳಿಗೆ ಮನವರಿಕೆ ಮಾಡಿದರು. ಪ್ರಲ್ಹಾದ್ ಜೋಶಿಯವರ ಮಾತುಕತೆಯ ಫಲವಾಗಿ ನೈರುತ್ಯ ರೈಲ್ವೆ ಆಡಳಿತ ಮಂಡಳಿ, ಈ ರೈಲು ಸೇವೆಯನ್ನು ನವೆಂಬರ್ 30 ರಿಂದ 2024 ಮಾ.01 ರವರೆಗೆ ಮುಂದುವರೆಸಿ ಇಂದೇ ಆದೇಶ ಹೊರಡಿಸಿದೆ.
ಬೆಂಗಳೂರು, ನ.26: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ(Pralhad Joshi)ಯವರ ಮನವಿಗೆ ಸ್ಪಂದಿಸಿದ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್(Ashwini Vaishnaw) ಅವರು ಹುಬ್ಬಳ್ಳಿ-ಬೆಂಗಳೂರು-ಹುಬ್ಬಳ್ಳಿ ಸೂಪರ್ ಫಾಸ್ಟ್(Bangalore-Hubli Super Fast) ವಿಶೇಷ ರೈಲು ಸೇವೆಯನ್ನು ಇದೇ ನ. 30 ರಿಂದ ಮತ್ತೆ ಪುನಾರಂಭ ಮಾಡಲಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ತಿಳಿಸಿದ್ದಾರೆ. ಬೆಂಗಳೂರು-ಹುಬ್ಬಳ್ಳಿ ಸೂಪರ್ ಫಾಸ್ಟ್ ವಿಶೇಷ ರೈಲು (ರೈಲು ಸಂಖ್ಯೆ 07339 / 07340) ಸಂಚಾರ ಸೇವೆಯನ್ನು ಇದೇ 30 ರಿಂದ ಮತ್ತೆ ಪುನರಾರಂಭಗೊಳ್ಳಲಿದೆ ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ.
ಕಡಿಮೆ ಪ್ರಯಾಣಿಕರ ಕೊರತೆ ಕಾರಣ ಓಡಾಟ ರದ್ದಾಗಿತ್ತು
ಕಡಿಮೆ ಪ್ರಯಾಣಿಕರ ಕೊರತೆ ಕಾರಣ ಓಡಾಟ ರದ್ದುಗೊಳಿಸಲಾಗಿದೆಯೆಂದು ನೈರುತ್ಯ ರೈಲ್ವೆ ಆಡಳಿತ ಮಂಡಳಿ ತಿಳಿಸಿತ್ತು. ನಂತರ ಈ ಭಾಗದ ಪ್ರಯಾಣಿಕರಿಗೆ ಆಗುವ ಅನಾನುಕೂಲತೆ ಬಗ್ಗೆ ಹಾಗೂ ಜನರ ಆಗ್ರಹದ ಕಾರಣದಿಂದ ಸಚಿವ ಪ್ರಲ್ಹಾದ್ ಜೋಶಿಯವರು, ರೈಲ್ವೆ ಸಚಿವ ಆಶ್ವಿನಿ ವೈಷ್ಣವ್ ಹಾಗೂ ನೈರುತ್ಯ ರೈಲ್ವೆ ಮಹಾ ಪ್ರಭಂದಕ ಸಂಜೀವ ಕಿಶೋರ್ ಅವರೊಂದಿಗೆ ಮಾತುಕತೆ ನಡೆಸಿದರು.
Hubballi-Bengaluru Superfast Express Special Train resumes service. Immediately after I returned from Rajasthan, I took up this issue with Railway authorities and they assured that the train will resume within couple of days and accordingly they have restored the train.
I thank… pic.twitter.com/bR8wPvM4mk
— Pralhad Joshi (@JoshiPralhad) November 26, 2023
ಇದನ್ನೂ ಓದಿ:ನಾಳೆ ಜನ್ಮದಿನ: ಕ್ಷೇತ್ರದ ಕಾರ್ಯಕರ್ತರು ಹಾಗೂ ಅಭಿಮಾನಿಗಳಿಗೆ ಪ್ರಲ್ಹಾದ್ ಜೋಶಿ ವಿಶೇಷ ಮನವಿ
ಈ ವೇಳೆ ಈ ರೈಲು ಓಡಾಟದ ಪುನರಾರಂಭದ ಅಗತ್ಯತೆಯನ್ನು ಸಚಿವ ಹಾಗೂ ಅಧಿಕಾರಿಗಳಿಗೆ ಮನವರಿಕೆ ಮಾಡಿದರು. ಪ್ರಲ್ಹಾದ್ ಜೋಶಿಯವರ ಮಾತುಕತೆಯ ಫಲವಾಗಿ ನೈರುತ್ಯ ರೈಲ್ವೆ ಆಡಳಿತ ಮಂಡಳಿ, ಈ ರೈಲು ಸೇವೆಯನ್ನು ನವೆಂಬರ್ 30 ರಿಂದ 2024 ಮಾ.01 ರವರೆಗೆ ಮುಂದುವರೆಸಿ ಇಂದೇ ಆದೇಶ ಹೊರಡಿಸಿದೆ. ತಮ್ಮ ಹಾಗೂ ಜನತೆಯ ಆಗ್ರಹಕ್ಕೆ ಸ್ಪಂದಿಸಿದ ಕೇಂದ್ರ ರೈಲ್ವೆ ಸಚಿವ ಆಶ್ವಿನಿ ವೈಷ್ಣವ್ ಹಾಗೂ ನೈರುತ್ಯ ರೈಲ್ವೆ ಮಹಾಪ್ರಭಂದಕರಿಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಯವರು ಧನ್ಯವಾದ ತಿಳಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:43 pm, Sun, 26 November 23