ಬೆಂಗಳೂರು ಕಂಬಳಕ್ಕೆ ತೆರೆ, ಫೈನಲ್​ನಲ್ಲಿ ಚಿನ್ನ ಬೇಟೆಯಾಡಿದ ಕೋಣಗಳ ವಿವರ ಇಲ್ಲಿದೆ

Bengaluru Kambala: ಕೋಣಗಳ ಮಿಂಚಿನ ಓಟ.. ನಾನಾ.. ನೀನಾ ನೋಡೇ ಬಿಡೋಣ ಎನ್ನುವ ಜಿದ್ದಾಜಿದ್ದಿನ ಸ್ಪರ್ಧೆ.. ನೀರನ್ನ ಸೀಳಿ ಕೋಣಗಳು ಮುನ್ನುಗ್ಗುತ್ತಿದ್ರೆ, ಹುರ್​​ ಅ ಅನ್ನೋ ಬಲಭೀಮನ ಕೂಗು ಕೇಳಿ ಜನರು ಶಿಳ್ಳೆ ಚಪ್ಪಾಳೆ ತಟ್ಟಿ ಫುಲ್ ಎಂಜಾಯ್ ಮಾಡಿದ್ದಾರೆ. ಬೆಂಗಳೂರಿನಲ್ಲಿ ಇತಿಹಾಸದಲ್ಲೇ ಮೊದಲ ಬಾರಿಗೆ ನಡೆದ ಕರಾವಳಿ ನಾಡಿನ ಕಲೆಗೆ ತೆರೆ ಬಿದ್ದಿದ್ದು,. ಲಕ್ಷಾಂತರ ಜನರು ಕಂಬಳ ಕ್ರೀಡೆಯನ್ನ ಕಣ್ತುಂಬಿಕೊಂಡು ದಿಲ್​ಖುಷ್ ಆಗಿದ್ದಾರೆ. ಹಾಗಾದ್ರೆ, ಯಾವೆಲ್ಲಾ ಕೋಣಗಳು ಪ್ರಶಸ್ತಿ ಗೆದ್ದಿವೆ ಎನ್ನುವ ಸಂಪೂರ್ಣ ವಿವರ ಈ ಕೆಳಗಿನಂತಿದೆ ನೋಡಿ.

ಬೆಂಗಳೂರು ಕಂಬಳಕ್ಕೆ ತೆರೆ, ಫೈನಲ್​ನಲ್ಲಿ ಚಿನ್ನ ಬೇಟೆಯಾಡಿದ ಕೋಣಗಳ ವಿವರ ಇಲ್ಲಿದೆ
ಬೆಂಗಳೂರು ಕಂಬಳ
Follow us
| Updated By: ರಮೇಶ್ ಬಿ. ಜವಳಗೇರಾ

Updated on:Nov 27, 2023 | 7:03 AM

ಬೆಂಗಳೂರು, (ನವೆಂಬರ್ 27): ಬೆಂಗಳೂರಿನಲ್ಲಿ ನಡೆದ ಐತಿಹಾಸಿಕ ಕಂಬಳ (Bengaluru Kambala) ಅದ್ಧೂರಿಯಾಗಿ ತೆರೆ ಕಂಡಿದ್ದು, ಲಕ್ಷಾಂತರ ಜನ ಕಣ್ತುಂಬಿಕೊಂಡಿದ್ದಾರೆ. 2ನೇ ದಿನವೂ ರಾತ್ರಿಯಿಡೀ ಕಂಬಳ ನಡೆದಿದ್ದು ಫೈನಲ್ ಸ್ಪರ್ಧೆ ಮೈನವಿರೇಳುವಂತೆ ಮಾಡಿತ್ತು. ಹಗ್ಗ ಕಿರಿಯ ವಿಭಾಗ, ಹಗ್ಗ ಹಿರಿಯ ವಿಭಾಗ, ಅಡ್ಡಹಲಗೆ ಕಂಬಳ, ಕನಹಲಗೆಯ ಕಂಬಳ ಹೀಗೆ ಹಲವು ವಿಭಾಗಗಳಲ್ಲಿ ಕೋಣಗಳಲ್ಲಿ ಸ್ಪರ್ಧಿಸಿ ಚಿನ್ನದ ಪದಕ ಗೆದ್ದಿವೆ. ಹಾಗಾದ್ರೆ, ಯಾವೆಲ್ಲಾ ವಿಭಾಗಗಳಲ್ಲಿ ಯಾರೆಲ್ಲಾ ಕೋಣಗಳು ಗೆದ್ದಿವೆ ಎನ್ನುವ ವಿವರ ಇಲ್ಲಿದೆ.

ಕನಹಲಗೆಯ ಕಂಬಳ ವಿಭಾಗ

ಕನಹಲಗೆಯ ಕಂಬಳ ವಿಭಾಗದಲ್ಲಿ ಬೋಳಂಬಳ್ಳಿ ಶ್ರೀರಾಮ ಚೈತ್ರ ಪರಮೇಶ್ವರ್ ಭಟ್ ಮಾಲೀಕತ್ವದ ಕೋಣಗಳು ವಿಜಯ ಸಾಧಿಸಿವೆ. 61/2 ಕೋಲು ನಿಶಾನೆಗೆ ನೀರು ಚಿಮ್ಮಿಸುವ ಮೂಲಕ ಗೆಲುವು ತಮ್ಮದಾಗಿಸಿಕೊಂಡಿವೆ.

ಇದನ್ನೂ ಓದಿ: ಬೆಂಗಳೂರು ಕಂಬಳದಲ್ಲಿ ಚಿನ್ನ ಗೆದ್ದ ಕಾಂತಾರ ಚಿತ್ರದ ಅಪ್ಪು-ಕಿಟ್ಟು ಕೋಣಗಳ ಫೋಟೋಸ್

ಹಗ್ಗ ಹಿರಿಯ ವಿಭಾಗ

ಇನ್ನು, ಹಗ್ಗ ಹಿರಿಯ ವಿಭಾಗದಲ್ಲಿ ನಂದಳಿಕೆ‌ ಶ್ರೀಕಾಂತ್ ಭಟ್ ಕೋಣಗಳು ಜಯದ ಕಿರೀಟ ಮುಡಿಗೆ ಏರಿಸಿಕೊಂಡಿವೆ. ಮೊದಲ ಪ್ರಶಸ್ತಿ 16 ಗ್ರಾಂ ಚಿನ್ನ, 1 ಲಕ್ಷ ನೀಡಲಾಗಿದೆ. ಇನ್ನು, ಮಾಳ‌ ಆನಂದ ನಿಲಯ ಶೇಖರ್ ಶೆಟ್ಟಿ ಮಾಲೀಕತ್ವದ ಕೋಣಗಳು 2ನೇ ಸ್ಥಾನ ಪಡೆದಿದ್ದು 8 ಗ್ರಾಂ ಚಿನ್ನ, 50 ಸಾವಿರ ನಗದು ಪ್ರಶಸ್ತಿ ನೀಡಲಾಗಿದೆ.

ಅಡ್ಡಹಲಗೆ ಕಂಬಳ

ಅಡ್ಡಹಲಗೆ ಕಂಬಳ ಫೈನಲ್ ಸ್ಪರ್ಧೆಯಂತು ರೋಚಕವಾಗಿತ್ತು. ಬೋಳಾರ ತ್ರಿಶಾಲ್ ಪೂಜಾರಿ ಮಾಲೀಕತ್ವದ ಕೋಣಗಳು, ಎಸ್​​ಎಂಎಸ್ ಬೆಂಗಳೂರು ಮಾಲೀಕತ್ವದ ಕೋಣಗಳು ಓಟದಲ್ಲಿ 09:59 ಸೆಕೆಂಡ್ ಓಡೋ ಮೂಲಕ ಸಮಬಲ ಸಾಧಿಸಿದ್ವು. ಎರಡನೇ ಸುತ್ತಲ್ಲಿ ಬೆಂಗಳೂರಿನ SMS ಮಾಲೀಕತ್ವದ ಕೋಣ ವೇಗವಾಗಿ ಕ್ರಮಿಸೋ ಮೂಲಕ ಗೆಲುವು ಸಾಧಿಸಿದೆ.

ಕಂಬಳದ ಹಗ್ಗ ಕಿರಿಯ ವಿಭಾಗ

ಕಂಬಳದ ಹಗ್ಗ ಕಿರಿಯ ವಿಭಾಗದಲ್ಲಿ ಸುರತ್ಕಲ್​​ನ ಪಾಂಚಜನ್ಯ ಯೋಗಿಶ್ ಮಾಲೀಕತ್ವದ ಕೋಣಗಳು ಗೆಲುವು ಸಾಧಿಸಿವೆ. ಕೋಣಗಳನ್ನ ಸ್ವರೂಪ್ ಅನ್ನೋರು ಓಡಿಸಿದ್ದು ಕೇವಲ 9.74 ಸೆಕೆಂಡ್ ಗಳಲ್ಲಿ 150 ಮೀಟರ್ ಕ್ರಮಿಸಿ ಜಯಭೇರಿ ಬಾರಿಸಿದ್ದಾರೆ.

ನೇಗಿಲು ಕಿರಿಯ ವಿಭಾಗ

ನೇಗಿಲು ಕಿರಿಯ ವಿಭಾಗದಲ್ಲಿ ಜೈ ತುಳುನಾಡು ಪುತ್ತೂರು ಬೊಟ್ಯಾಡಿ ಕಿಶೋರ್ ಭಂಡಾರಿ ಎನ್ನುವ ಕೋಣಗಳು ಪ್ರಥಮ ಸ್ಥಾನ ಪಡೆದಿವೆ. ಪೆಂರ್ಗಾಲು ಕೃತಿಕ್ ಗೌಡ ಅವರು ಕೋಣಗಳನ್ನು ಓಡಿಸಿ 16 ಗ್ರಾಂ ಚಿನ್ನ ಮತ್ತು 1 ಲಕ್ಷ ರೂ. ನಗದು ಬಹುಮಾನ ತಮ್ಮದಾಗಿಸಿಕೊಂಡಿದ್ದಾರೆ.

ಇನ್ನುಎರ್ಮಾಳ್ ಪುಚ್ಚೊಟ್ಟುಬೀಡು ಬಾಲಚಂದ್ರ ಶೆಟ್ಟಿ ಎನ್ನುವ ಕೋಣಗಳು ದ್ವಿತೀಯ ಸ್ಥಾನ ಪಡೆದುಕೊಂಡಿವೆ. ಬೈಂದೂರು ವಿವೇಕ್ ಪೂಜಾರಿ ಕೋಣಗಳನ್ನು ಓಡಿಸಿದ್ದು, 8 ಗ್ರಾಂ ಚಿನ್ನ ಹಾಗೂ 50 ಸಾವಿರ ರೂ. ನಗದು ಬಹುಮಾನ ಪಡೆದುಕೊಂಡಿದ್ದಾರೆ.

ನೇಗಿಲು ಹಿರಿಯ ವಿಭಾಗ

ನೇಗಿಲು ಹಿರಿಯ ವಿಭಾಗದಲ್ಲಿ ಬಂಗಾಡಿ ಪರಂಬೇಲು ನಾರಾಯಣ ಮಲೆ ಕುಡಿಯ ಅವರ ಕೋಣಗಳು ಪ್ರಥಮ ಸ್ಥಾನ ಪಡೆದುಕೊಂಡಿವೆ. ಸರಪಾಡಿ ಧನಂಜಯ ಗೌಡ ಎನ್ನುವರು ಕೋಣಗಳನ್ನು ಓಡಿಸಿದ್ದು, 16 ಗ್ರಾಂ ಚಿನ್ನ ಹಾಗೂ 1 ಲಕ್ಷ ರೂ. ನಗದು ಬಹುಮಾನ ಪಡೆದುಕೊಂಡಿದ್ದಾರೆ.

ಇನ್ನು ಮಾಳ ಆನಂದ ನಿಲಯ ಶೇಖರ ಎ ಶೆಟ್ಟಿ ಎನ್ನುವ ಕೋಣಗಳು 2ನೇ ಸ್ಥಾನಕ್ಕೆ ತೃಪ್ತಿಪಟ್ಟಿವೆ. ಪಟ್ಟೆ ಗುರು ಚರಣ್ ಎನ್ನುವರು ಕೋಣಗಳನ್ನು ಓಡಿಸಿದ್ದು, 8 ಗ್ರಾಂ ಚಿನ್ನ ಹಾಗೂ 50 ಸಾವಿರ ರೂ. ನಗದು ಬಹುಮಾನ ಗೆದ್ದುಕೊಂಡಿದ್ದಾರೆ.

ಕಾಂತಾರ ಚಿತ್ರದಲ್ಲಿ ಮಿಂಚಿದ್ದ ಕೋಣಗಳ ಪದಕ ಬೇಟೆ

ಕಂಬಳದ ಕಣಹಲಗೆ ವಿಭಾಗದಲ್ಲಿ ಕಾಂತಾರ ಚಿತ್ರದಲ್ಲಿ ಬಳಸಿದ್ದ ಕೋಣಗಳು ಪದಕ ಗೆದ್ದಿವೆ. ಕಿಟ್ಟು-ಅಪ್ಪು ಹೆಸರಿನ ಕೋಣಗಳು ಗೆಲುವು ಸಾಧಿಸಿವೆ. ಪದಕ ಗೆದ್ದಿದ್ದಕ್ಕೆ ಮಾಲೀಕ ಪರಮೇಶ್ವರ ಭಟ್ ಹರ್ಷ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು ಕಂಬಳದ ಲಕ್ಕಿ ಡ್ರಾ ಕೂಪನ್ ವಿಜೇತರಿಗೆ ಪ್ರಶಸ್ತಿ ಘೋಷಿಸಲಾಗಿದೆ. ಮೊದಲ ಬಹುಮಾನ ವಿಜೇತೆ ಪೂಜಾ ಎಂ.ವಿಗೆ ಮಾರುತಿ ಬ್ರಿಜಾ ಕಾರು ನೀಡಲಾಗಿದ್ದು, 2ನೇ ಬಹುಮಾನ ರಾಯಲ್ ಎನ್​ಫೀಲ್ಡ್ ಬೈಕ್ ಗಿಫ್ಟ್ ಆಗಿ ಪ್ರದಾನ ಮಾಡಲಾಯ್ತು.

ಬೆಂಗಳೂರಿನಲ್ಲಿ ಇತಿಹಾಸದಲ್ಲೇ ಮೊದಲ ಬಾರಿಗೆ ನಡೆದ ಕರಾವಳಿ ನಾಡಿನ ಕಲೆಗೆ ಅದ್ಧುರಿ ತೆರೆ ಬಿದ್ದಿದೆ. ಲಕ್ಷಾಂತರ ಜನರು ಕಂಬಳ ಕ್ರೀಡೆಯನ್ನ ಕಣ್ತುಂಬಿಕೊಂಡು ದಿಲ್​ಖುಷ್ ಆಗಿದ್ದಾರೆ.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:57 am, Mon, 27 November 23