ಬೆಂಗಳೂರು ಕಂಬಳ; ಲಕ್ಕಿ ಡ್ರಾ ಕೂಪನ್​ನಲ್ಲಿ ಕಾರು, ರಾಯಲ್ ಎನ್ಫೀಲ್ಡ್ ಗೆದ್ದ ಅದೃಷ್ಟವಂತರು

ಕಾಂತಾರ ಸಿನಿಮಾದಿಂದ ಹೆಚ್ಚಿನ ಖ್ಯಾತಿ ಪಡೆದ ಕಂಬಳ ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ನಡೆದಿದೆ. ಈ ಕಾರ್ಯಕ್ರಮದಲ್ಲಿ ಲಕ್ಕಿ ಡ್ರಾ ಕೂಪನ್ ವಿಜೇತರಿಗೆ ಪ್ರಶಸ್ತಿ ಘೋಷಣೆ ಮಾಡಲಾಗಿದೆ. ಮೊದಲ ಬಹುಮಾನವಾಗಿ ಗೆದ್ದವರಿಗೆ ಮಾರುತಿ ಬ್ರಿಜಾ ಕಾರು ನೀಡಲಾಗಿದೆ. ಎರಡನೇ ಬಹುಮಾನ ರಾಯಲ್ ಎನ್ಫೀಲ್ಡ್ ಬೈಕ್, ಮೂರನೇ ಬಹುಮಾನ ಹೋಂಡಾ ಶೈನ್ ಬೈಕ್, ನಾಲ್ಕನೇ ಬಹುಮಾನ ಎಲೆಕ್ಟ್ರಿಕ್ ಸ್ಕೂಟರ್

ಬೆಂಗಳೂರು ಕಂಬಳ; ಲಕ್ಕಿ ಡ್ರಾ ಕೂಪನ್​ನಲ್ಲಿ ಕಾರು, ರಾಯಲ್ ಎನ್ಫೀಲ್ಡ್ ಗೆದ್ದ ಅದೃಷ್ಟವಂತರು
ಬೆಂಗಳೂರು ಕಂಬಳ ಲಕ್ಕಿ ಡ್ರಾ ಕೂಪನ್
Follow us
ರಾಚಪ್ಪಾಜಿ ನಾಯ್ಕ್
| Updated By: ಆಯೇಷಾ ಬಾನು

Updated on: Nov 27, 2023 | 7:53 AM

ಬೆಂಗಳೂರು, ನ.27: ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ನಡೆದ ಬೆಂಗಳೂರು ಕಂಬಳಕ್ಕೆ (Bengaluru Kambala) ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಅರಮನೆ ಮೈದಾನದಲ್ಲಿ ಎರಡು ದಿನಗಳ ಕಾಲ ನಡೆದ ಕಂಬಳ ಕೊನೆಗೊಂಡಿದ್ದು ಲಕ್ಷಾಂತರ ಜನರು ಕರಾವಳಿಯ ಕಂಬಳವನ್ನ ಕಣ್ತುಂಬಿಕೊಂಡಿದ್ದಾರೆ. ನಿನ್ನೆ(ನ.26) ತಡರಾತ್ರಿವರೆಗೆ ಕಂಬಳ ಕಾರ್ಯಕ್ರಮ ನಡೆದಿದ್ದು ಲಕ್ಕಿ ಡ್ರಾ ಕೂಪನ್ ವಿಜೇತರಿಗೆ ಪ್ರಶಸ್ತಿ ಘೋಷಣೆಯಾಗಿದೆ. ಮಾರುತಿ ಬ್ರಿಜಾ ಕಾರು, ರಾಯಲ್ ಎನ್ಫೀಲ್ಡ್ ಬೈಕ್, ಹೋಂಡಾ ಶೈನ್ ಬೈಕ್, ಎಲೆಕ್ಟ್ರಿಕ್ ಸ್ಕೂಟರ್ ಬಹುಮಾನವಾಗಿ ಪಡೆದು ಫುಲ್ ಖುಷ್ ಆಗಿದ್ದಾರೆ.

ಕಾಂತಾರ ಸಿನಿಮಾದಿಂದ ಹೆಚ್ಚಿನ ಖ್ಯಾತಿ ಪಡೆದ ಕಂಬಳ ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ನಡೆದಿದೆ. ಈ ಕಾರ್ಯಕ್ರಮದಲ್ಲಿ ಲಕ್ಕಿ ಡ್ರಾ ಕೂಪನ್ ವಿಜೇತರಿಗೆ ಪ್ರಶಸ್ತಿ ಘೋಷಣೆ ಮಾಡಲಾಗಿದೆ. ಮೊದಲ ಬಹುಮಾನವನ್ನು ಪೂಜಾ ಎಂ ವಿ ಎಂಬುವವರು ಗೆದ್ದಿದ್ದಾರೆ. ಎರಡನೇ ಬಹುಮಾನವನ್ನು ಖುಷಿ ಪೂಜಾರಿ ಎಂಬುವವರು ಗೆದ್ದಿದ್ದಾರೆ. ಮೂರನೇ ಬಹುಮಾನ ವಿಜೇತರು ಅಮೀತ. ನಾಲ್ಕನೇ ಬಹುಮಾನ ವಿಜೇತರು ನವೀನ ಎಂ ಎಲ್.

ಬಹುಮಾನವಾಗಿ ಕಾರು, ಬೈಕು

ಇನ್ನು ಮೊದಲ ಬಹುಮಾನವಾಗಿ ಗೆದ್ದವರಿಗೆ ಮಾರುತಿ ಬ್ರಿಜಾ ಕಾರು ನೀಡಲಾಗಿದೆ. ಎರಡನೇ ಬಹುಮಾನ ರಾಯಲ್ ಎನ್ಫೀಲ್ಡ್ ಬೈಕ್, ಮೂರನೇ ಬಹುಮಾನ ಹೋಂಡಾ ಶೈನ್ ಬೈಕ್, ನಾಲ್ಕನೇ ಬಹುಮಾನ ಎಲೆಕ್ಟ್ರಿಕ್ ಸ್ಕೂಟರ್ ನೀಡಲಾಯಿತು. ಬೆಂಗಳೂರು ಕಂಬಳ ಪ್ರಯಕ್ತ ಪಾಸ್ ಪಡೆದವರು ಲಕ್ಕಿ ಡ್ರಾ ಕೂಪನ್ ನ್ನು ಬಾಕ್ಸ್ ಗೆ ಹಾಕಿದ್ದರು. ಎಂಆರ್​ಜಿ ಗ್ರೂಪ್ ಪ್ರಕಾಶ್ ಶೆಟ್ಟಿ ಅವರ ಪ್ರಯೋಜಕತ್ವದಲ್ಲಿ ಲಕ್ಕಿ ಡ್ರಾ ಬಹುಮಾನ ನೀಡಲಾಯಿತು. ಪುನೀತ್ ರಾಜ್ ಕುಮಾರ್ ವೇದಿಕೆಯಲ್ಲಿ ಪ್ರಶಸ್ತಿ ಘೋಷಣೆ ಮಾಡಲಾಯಿತು.

ಇದನ್ನೂ ಓದಿ: ಬೆಂಗಳೂರು ಕಂಬಳಕ್ಕೆ ತೆರೆ, ಫೈನಲ್​ನಲ್ಲಿ ಚಿನ್ನ ಬೇಟೆಯಾಡಿದ ಕೋಣಗಳ ವಿವರ ಇಲ್ಲಿದೆ

ಕಂಬಳ ಕೂಟದಲ್ಲಿ ಭಾಗಿಯಾಗಿದ್ದ 178 ಜೋಡಿ ಎಲ್ಲಾ ಬಹುಮಾನ ಗೆಲ್ಲಲು ಸಾಧ್ಯವಾಗದೇ ಇದ್ರೂ ಬೆಂಗಳೂರು ಕಂಬಳದಲ್ಲಿ ನೋಡುಗರ ಮನಸ್ಸು ಗೆದ್ದಿದಂತೂ ನಿಜ. ಕಾಂತರ ಚಿತ್ರದಲ್ಲಿ ಸಿನಿ ಪ್ರಿಯರ ಮನಸ್ಸು ಗೆದ್ದಿದ್ದ ಕೋಣಗಳು‌ ಜನರ ಮನಸು ಗೆಲ್ಲುವುದರ ಜೊತೆ ಜೊತೆಗೆ ಕರಾವಳಿಯ ವೈಭವವನ್ನ ಅನಾವರಣ ಮಾಡೋ ಮೂಲಕ ಸಿಲಿಕಾನ್ ಸಿಟಿಯಲ್ಲಿ ಕಂಬಳದ ಕಂಪು ಹರಡಿದೆ.

ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ