Justice Is Due ಎಂದು ಕತ್ತಿಗೆಗೆ ಬೋರ್ಡ್ ಹಾಕಿಕೊಂಡು ವ್ಯಕ್ತಿ ಆತ್ಮಹತ್ಯೆ, ಸಾಯಲು ಟೈಮ್​ ಟೇಬಲ್ ಹಾಕಿದ್ದ

| Updated By: Digi Tech Desk

Updated on: Dec 12, 2024 | 10:59 AM

ಬೆಂಗಳೂರಿನಲ್ಲಿ ಒಂದು ವಿಚಿತ್ರ ಪ್ರಕರಣ ಬೆಳಕಿಗೆ ಬಂದಿದೆ. ವ್ಯಕ್ತಿಯೋರ್ವ ತನ್ನ ಕುತ್ತಿಗೆಗೆ ನ್ಯಾಯ ಇನ್ನೂ ಬಾಕಿ ಇದೆ (JUSTICE IS DUE) ಎಂದು ಬೋರ್ಡ್‌ ಹಾಕಿಕೊಂಡು ಜೀವ ಬಿಟ್ಟಿದ್ದಾನೆ. ಹಾಗೇ 40ಕ್ಕೂ ಹೆಚ್ಚು ಪೇಜ್ ಗಳ ಡೆತ್ ನೋಟ್ ಬರೆದಿಟ್ಟಿದ್ದಾನೆ. ಹೆಂಡತಿಯ ಕಿರುಕುಳದಿಂದ ಖಿನ್ನತೆಗೆ ಒಳಗಾಗಿದ್ದ ಟೆಕ್ಕಿ ಆತ್ಮಹತ್ಯೆಗೆ ಶರಣಾಗಿದ್ದಾನೆ.

Justice Is Due ಎಂದು ಕತ್ತಿಗೆಗೆ ಬೋರ್ಡ್ ಹಾಕಿಕೊಂಡು ವ್ಯಕ್ತಿ ಆತ್ಮಹತ್ಯೆ, ಸಾಯಲು ಟೈಮ್​ ಟೇಬಲ್ ಹಾಕಿದ್ದ
ಅತುಲ್ ಸುಭಾಷ್
Follow us on

ಬೆಂಗಳೂರು, (ಡಿಸೆಂಬರ್ 09): , ಕಿರುಕುಳ ಸಂಬಂಧ ಮಹಿಳೆಯರು ಧ್ವನಿ ಎತ್ತಲು ಮೀಟು ಹುಟ್ಟಿಕೊಂಡಿದ್ದು, ಈ ಮೀಟುನಿಂದಲೇ ಹಲವು ನಟಿಮಣಿಯರು ತಮಗಾದ ಸಮಸ್ಯೆಗಳನ್ನು ಹೊರಹಾಕಿದ್ದಾರೆ. ಇದೀಗ MenToo ಟ್ರೆಂಡ್​ ಆಗುತ್ತಿದೆ. ಸಾಮಾಜಿಕ ಜಾಲತಾಣ ಟ್ವಿಟರ್​ ಎಕ್ಸ್​ ನಲ್ಲಿ ಈ ಮೆನ್​ಟು ಟ್ರೆಂಡ್​ ಆಗುತ್ತಿರುವುದರ ಹಿಂದೆ ಓರ್ವ ಗಂಡಸಿನ ನೋವಿನ ಕಹಾನಿ ಇದೆ. ಹೌದು…ಹೆಂಡತಿಯ ನಿರಂತರ ಕಿರುಕುಳದಿಂದ ಖಿನ್ನತೆಗೆ ಒಳಗಾಗಿ ವ್ಯಕ್ತಿಯೋರ್ವ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಮಾರತಹಳ್ಳಿಯ ಮಂಜುನಾಥ್ ಲೇಔಟ್ ನಲ್ಲಿ ನಡೆದಿದೆ.

ಉತ್ತರ ಪ್ರದೇಶ ಮೂಲದ ಅತುಲ್ ಸುಭಾಷ್ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಅಚ್ಚರಿ ಅಂದ್ರೆ, ಅತುಲ್ ಸುಭಾಷ್, ನ್ಯಾಯ ಇನ್ನೂ ಬಾಕಿ ಇದೆ (JUSTICE IS DUE) ಎಂದು ಬೋರ್ಡ್​ ತನ್ನ ಕುತ್ತಿಗೆ ಹಾಕಿಕೊಂಡು ನೇಣಿಗೆ ಶರಣಾಗಿದ್ದಾನೆ. ಅಲ್ಲದೇ 40ಕ್ಕೂ ಹೆಚ್ಚು ಪೇಜ್ ಗಳ ಡೆತ್ ನೋಟ್ ಬರೆದಿಟ್ಟಿದ್ದಾರೆ. ಆ ಡೆತ್​ನೋಟ್​ಗಳನ್ನು ಮಧ್ಯರಾತ್ರಿ NGO ವಾಟ್ಸಾಪ್ ಗ್ರೂಪ್​ಗೆ ಶೇರ್​ ಮಾಡಿ ಸಾಧ್ಯವಾದ್ರೆ ನನ್ನ ಕುಟುಂಬಕ್ಕೆ ಸಹಾಯ ಮಾಡಿ ಎಂದು ಮನವಿ ಮಾಡಿಕೊಂಡಿದ್ದಾನೆ.

ಉತ್ತರ ಪ್ರದೇಶ ಮೂಲದ ಅತುಲ್ ಸುಭಾಶ್ ಮಾರತಹಳ್ಳಿಯ ಲೇಔಟ್‌ನಲ್ಲಿ ವಾಸವಿದ್ದರು. ಈತನಿಗೆ ಮದುವೆಯಾಗಿದ್ದು, ಅತುಲ್ ಮೇಲೆ ಪತ್ನಿ ಉತ್ತರ ಪ್ರದೇಶದಲ್ಲಿ ಕೇಸ್ ಹಾಕಿದ್ದಳು. ಕೌಟುಂಬಿಕ ಕಲಹದಿಂದ ನೊಂದಿದ್ದ ಪತಿ ಸಾಯುವ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ಹೆಂಡತಿ ಸುಳ್ಳು ಕೇಸ್ ಹಾಕಿದ್ರೆ ಹೋರಾಟ ಮಾಡುವ Save Indian family foundation ಎನ್ನುವ NGO ಕೂಡ ಸೇರಿದ್ದ. ಹೀಗಾಗಿ NGOದ ವಾಟ್ಸ್‌ಆ್ಯಪ್ ಗ್ರೂಪ್​ಗೆ ಡೆತ್ ನೋಟ್ ಕಳಿಸಿದ್ದಾನೆ. ಅದರಲ್ಲಿ ಸಾಧ್ಯವಾದ್ರೆ ನನ್ನ ಕುಟುಂಬಕ್ಕೆ ಸಹಾಯ ಮಾಡಿ ಎಂದು ಮೆಸೇಜ್ ಮಾಡಿದ್ದಾನೆ.

ಇದನ್ನೂ ಓದಿ: ಗುಟ್ಟು ರಟ್ಟು ಮಾಡಿದ ಮೈದುನನ ಸ್ಟೇಟಸ್​: ಸಾವಿಗೆ ಶರಣಾದ ಮಹಿಳೆ!

ಕುತ್ತಿಗೆಗೆ justice is due ಎಂಬ ಬೋರ್ಡ್​ ಹಾಕಿಕೊಂಡಿರುವ ಈತ ಮುಕ್ತಿಗಾಗಿ 2 ದಿನ ಟೈಮ್​ ಟೇಬಲ್ ಹಾಕಿ ಪ್ಲಾನ್ ಮಾಡಿದ್ದಾನೆ. ಸಾಯುವ ಮುನ್ನ ದಿನ ಡೇ-1 ಹಾಗೂ ಸಾಯುವ ದಿನ ಡೇ-2 ಏನ್ ಮಾಡಬೇಕು ಎಂದು ಗೋಡೆಗೆ JUSTICE IS DUE ಪತ್ರ ಅಂಟಿಸಿದ್ದಾನೆ. ಪ್ರಾಣ ಬಿಡಲು ಕಳೆದ ಎರಡು ದಿನಗಳಿಂದ ತಯಾರಿ ನಡೆಸಿದ್ದಾನೆ. ಸ್ನಾನದಿಂದ ಸಾವಿನವರೆಗೂ ಏನು ಮಾಡಬೇಕೆನ್ನುವ ಬಗ್ಗೆ ಪ್ರಾಕ್ಟೀಸ್ ಮಾಡಿದ್ದು, ಡೇ-1, ಡೇ-2 ಏನೇನು ಮಾಡ್ಬೇಕೆಂದು ಡೆತ್‌ನೋಟ್‌ನಲ್ಲಿ ಬರೆದಿಟ್ಟಿದ್ದಾನೆ.

ಸಾವಿಗೂ ಮುನ್ನ ಏನೇನು ಮಾಡಬೇಕು?

ಸ್ನಾನ ಮಾಡಬೇಕು, ಕಿಟಕಿ ತೆಗೆಯಬೇಕು ಮತ್ತು ಗೇಟ್​ ಲಾಕ್​ ಮಾಡಬೇಕು. ಶಿವನಾಮವನ್ನ 100 ಬಾರಿ ಪಠಿಸಬೇಕು. ಫ್ರಿಡ್ಜ್ ಮೇಲೆ ಕಾರು ಬೈಕ್ ಕೀ ಇಡಬೇಕು. ರೂಮ್ ಕೀ ಫ್ರಿಡ್ಜ್ ಮೇಲಿಡಬೇಕು. ಡೆತ್‌ ನೋಟ್​ ಅನ್ನ ಟೇಬಲ್ ಮೇಲಿಡಬೇಕು. ಡೆತ್‌ ನೋಟ್ ಅನ್ನು ಹೈಕೋರ್ಟ್​, ಸುಪ್ರೀಂಕೋರ್ಟ್​, ಆಫೀಸ್, ಕುಟುಂಬಸ್ಥರಿ​ಗೆ ಮೇಲ್​ ಕಳಿಸಬೇಕು. ನಾನು ಅನ್ನೋದನ್ನ ನಾಶ ಮಾಡಬೇಕು ಎಂದು ಬರೆಯಲಾಗಿದೆ.

ಸಾವಿಗೂ ಮುನ್ನ ದಿನ

ಹಣಕಾಸಿನ ವಿಚಾರಗಳನ್ನು ಕ್ಲಿಯರ್ ಮಾಡಬೇಕು. ಎಲ್ಲಾ ಕಮ್ಯುನಿಕೇಷನ್ ಪೂರ್ಣಗೊಳಿಸಬೇಕು. ಆಫೀಸ್‌ನ ಎಲ್ಲಾ ಕೆಲಸ ಮುಗಿಸಬೇಕು. ಕಾನೂನಾತ್ಮಕ ತಯಾರಿ ಮುಗಿಸಬೇಕು. ಮುಖ್ಯ ದಾಖಲೆಗಳನ್ನ ಪ್ಯಾಕ್ ಮಾಡಬೇಕು. ಆನಂತರ ಕೊನೇ ದಿನದ ಆರಂಭಕ್ಕೆ ತಯಾರಾಗಬೇಕು ಅನ್ನೋದು ಇವನ ಟೈಮ್ ಟೇಬಲ್‌ನಲ್ಲಿ ಬರೆದಿದ್ದು, ಅಚ್ಚರಿಗೆ ಕಾರಣವಾಗಿದೆ.

ಕೊನೆಯ ದಿನ

ಈತನ ಟೈಮ್‌ ಟೇಬಲ್ ಪ್ರಕಾರ ಕೊನೆಯ ದಿನ ವೀಡಿಯೋ ನೋಟ್ ಅಪ್ಲೋಡ್‌ ಮಾಡಬೇಕು. ಪೋನ್‌ನಿಂದ ಫಿಂಗರ್‌ಪ್ರಿಂಟ್‌, ಫೇಸ್ ರೆಕಗ್ನಿಷನ್‌‌ ಅಳಿಸಿ ಹಾಕಬೇಕು. ಲ್ಯಾಪ್‌ಟಾಪ್, ಚಾರ್ಜರ್‌, ಐಡಿ, ಆಫೀಸ್‌ಗೆ ಸಲ್ಲಿಕೆ ಮಾಡಿ ಸ್ಕ್ಯಾನ್ ಮಾಡಿರೋ ಡೆತ್‌ನೋಟ್‌ ಅಪ್ಲೋಡ್‌ ಮಾಡಬೇಕು. ಎಲ್ಲಾ ಪೇಮೆಂಟ್‌ಗಳನ್ನ ಕಂಪ್ಲೀಟ್ ಮಾಡಬೇಕು. ಕೊನೆಗೆ ಹಗ್ಗದ ಕುಣಿಕೆ ತಯಾರು ಮಾಡಬೇಕು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 3:19 pm, Mon, 9 December 24