Viral: ಫುಡ್‌ ಡೆಲಿವರಿ ಆ್ಯಪ್‌ನ ಬಿಲ್‌ಬೋರ್ಡ್‌ ಬೆನ್ನಿಗೆ ಕಟ್ಟಿ ಬೀದಿಯಲ್ಲಿ ಅಡ್ಡಾಡಿದ ಬೆಂಗಳೂರು ಯುವಕರು

ಪ್ರತಿಯೊಂದು ಬ್ರ್ಯಾಂಡ್‌ಗಳು ತಮ್ಮ ಉತ್ಪನ್ನಗಳನ್ನು ಪ್ರಚಾರ ಮಾಡಲು ವಿಶಿಷ್ಟ ರೀತಿಯ ಮಾರುಕಟ್ಟೆ ತಂತ್ರಗಳನ್ನು ಅನುಸರಿಸುತ್ತವೆ. ಅದೇ ರೀತಿ ಇಲ್ಲೊಂದು ಫುಡ್‌ ಡೆಲಿವರಿ ಆ್ಯಪ್ ತನ್ನ ಅಪ್ಲಿಕೇಶನ್‌ ಅನ್ನು ಪ್ರಚಾರ ಮಾಡಲು ವಿಭಿನ್ನ ಮಾರುಕಟ್ಟೆ ತಂತ್ರವನ್ನು ಅನುಸರಿಸಿದ್ದು, ಮೂವರು ಯುವಕರು ಈ ಡೆಲಿವರಿ ಆ್ಯಪ್‌ನ ಜಾಹಿರಾತು ಫಲಕವನ್ನು ಬೆನ್ನಿನ ಮೇಲೆ ಹೊತ್ತೊಯ್ಯುವ ಮೂಲಕ ಪ್ರಚಾರ ಮಾಡಿದ್ದಾರೆ. ಈ ಜಾಹೀರಾತು ತಂತ್ರಕ್ಕೆ ಸೋಷಿಯಲ್‌ ಮೀಡಿಯಾದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ.

Viral: ಫುಡ್‌ ಡೆಲಿವರಿ ಆ್ಯಪ್‌ನ ಬಿಲ್‌ಬೋರ್ಡ್‌ ಬೆನ್ನಿಗೆ ಕಟ್ಟಿ ಬೀದಿಯಲ್ಲಿ ಅಡ್ಡಾಡಿದ ಬೆಂಗಳೂರು ಯುವಕರು
ವೈರಲ್​​ ಪೋಸ್ಟ್​
Follow us
ಮಾಲಾಶ್ರೀ ಅಂಚನ್​
| Updated By: Digi Tech Desk

Updated on:Dec 11, 2024 | 2:21 PM

ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ಪ್ರತಿಯೊಂದು ಬ್ರ್ಯಾಂಡ್‌ ಕೂಡಾ ತಾವೇ ಮಾರುಕಟ್ಟೆಯಲ್ಲಿ ಸೈ ಎನಿಸಿಕೊಳ್ಳಬೇಕೆಂದು, ಜನರಿಗೆ ಹತ್ತಿರವಾಗಬೇಕೆಂದು ಬಗೆ ಬಗೆಯ ಕ್ರಿಯೇಟಿವ್‌ ಮಾರುಕಟ್ಟೆ ತಂತ್ರಗಳನ್ನು ಅನುಸರಿಸುತ್ತವೆ. ಇಂತಹ ವಿಶಿಷ್ಟ ಪ್ರಚಾರಗಳಿಂದಲೇ ಫೇಮಸ್‌ ಆದ ಅದೆಷ್ಟೋ ಬ್ರ್ಯಾಂಡ್‌ಗಳು ಇವೆ. ಇದೇ ರೀತಿ ತಮ್ಮ ಬ್ರ್ಯಾಂಡ್‌ ಕೂಡಾ ಫೇಮಸ್‌ ಆಗ್ಬೇಕು ಅಂತ ಇಲ್ಲೊಂದು ಫುಡ್‌ ಡೆಲಿವರಿ ಆ್ಯಪ್ ತನ್ನ ಅಪ್ಲಿಕೇಶನ್‌ ಅನ್ನು ಪ್ರಚಾರ ಮಾಡಲು ವಿಭಿನ್ನ ಮಾರುಕಟ್ಟೆ ತಂತ್ರವನ್ನು ಅನುಸರಿಸಿದ್ದು, ಮೂವರು ಯುವಕರು ಈ ಡೆಲಿವರಿ ಆ್ಯಪ್‌ನ ಜಾಹಿರಾತು ಫಲಕವನ್ನು ಬೆನ್ನಿನ ಮೇಲೆ ಹೊತ್ತೊಯ್ಯುವ ಮೂಲಕ ಪ್ರಚಾರ ಮಾಡಿದ್ದಾರೆ. ಈ ಜಾಹೀರಾತು ತಂತ್ರಕ್ಕೆ ಸೋಷಿಯಲ್‌ ಮೀಡಿಯಾದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ.

ಗ್ರಾಹಕರನ್ನು ಆಕರ್ಷಿಸುವ ಸಲುವಾಗಿ ಬೆಂಗಳೂರಿನ ಫುಡ್‌ ಡೆಲಿವರಿ ಸ್ಟಾರ್ಟ್‌ಅಪ್‌ ಸ್ವಿಶ್‌ ವಿಶೇಷ ರೀತಿಯ ಪ್ರಚಾರ ತಂತ್ರವನ್ನು ಅಳವಡಿಸಿದ್ದು, ಈ ಜಾಹೀರಾತು ತಂತ್ರ ಸೋಷಿಯಲ್‌ ಮೀಡಿಯಾದಲ್ಲಿ ಭಾರಿ ಚರ್ಚೆಯನ್ನು ಹುಟ್ಟು ಹಾಕಿದೆ. ಹೌದು ಆ ಬಿಲ್‌ ಬೋರ್ಡ್‌ ಅನ್ನು ಮೂವರು ಯುವಕರು ತಮ್ಮ ಬೆನ್ನ ಮೇಲೆ ಹೊತ್ತು ಬೆಂಗಳೂರಿನ ಬೀದಿ ಸುತ್ತುತ್ತಾ ಫುಡ್‌ ಡೆಲಿವರಿ ಅಪ್ಲಿಕೇಷನ್‌ ಅನ್ನು ಪ್ರಚಾರ ಮಾಡಿದ್ದು, ಜನರನ್ನು ಈ ರೀತಿ ಪ್ರಾಣಿಗಳಂತೆ ಬಳಸಿ ಪ್ರಚಾರ ಮಾಡುವ ಅವಶ್ಯಕತೆ ಇದೆಯಾ? ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರೋಶನ್‌ (roshanonline) ಎಂಬವರು ಈ ಕುರಿತ ಪೋಸ್ಟ್‌ ಒಂದನ್ನು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದು, ಯಾಕೆ ಬೇಕಿತ್ತು ಈ ಹ್ಯೂಮನ್‌ ಆ್ಯಡ್‌ ಎಂದು ಪ್ರಶ್ನಿಸಿದ್ದಾರೆ. ವೈರಲ್‌ ಆಗುತ್ತಿರುವ ಈ ಫೋಟೋದಲ್ಲಿ ಮೂವರು ಪುರುಷರು ಸ್ವಿಶ್‌ ಫುಡ್‌ ಡೆಲಿವರಿ ಆ್ಯಪ್‌ನ ವಿಶೇಷ ಆಫರ್ಸ್‌ಗಳನ್ನು ಹೈಲೆಟ್‌ ಮಾಡಿರುವಂತಹ ಎಲೆಕ್ಟ್ರಾನಿಕ್‌ ಬಿಲ್‌ ಬೋರ್ಡ್‌ ಅನ್ನು ಬೆನ್ನಿಗೆ ಕಟ್ಟಿಕೊಂಡು ಬೀದಿಯಲ್ಲಿ ಸುತ್ತಾಡುತ್ತಿರುವ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: ಗ್ರಾಹಕನಿಗೆ ಯೂಸರ್‌ ಮಾನ್ಯುಯಲ್‌ ಕೊಡದ ಮೊಬೈಲ್‌ ಕಂಪೆನಿಗೆ 5 ಸಾವಿರ ರೂ. ದಂಡ ವಿಧಿಸಿದ ಗ್ರಾಹಕರ ನ್ಯಾಯಾಲಯ

ಡಿಸೆಂಬರ್‌ 6 ರಂದು ಹಂಚಿಕೊಳ್ಳಲಾದ ಈ ಪೋಸ್ಟ್‌ 1.3 ಲಕ್ಷ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಇಂತಹ ಜಾಹಿರಾತುಗಳು ಹಲವೆಡೆ ಕಾಣಸಿಗುತ್ತಿವೆ, ಆದರೆ ಹೀಗೆಲ್ಲಾ ಮಾಡಬಾರದುʼ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼಅವರನ್ನು ನೋಡಿದಾಗ ತುಂಬಾನೇ ಬೇಸರವಾಗುತ್ತಿದೆ. ಆ ಭಾರವನ್ನು ಎಷ್ಟು ಅಂತ ಸಹಿಸಲು ಸಾಧ್ಯʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ.

ಮತ್ತಷ್ಟು ವೈರಲ್​​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 5:26 pm, Mon, 9 December 24

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ