Viral: ಬೆಂಗಳೂರಿನಲ್ಲಿ ಸ್ಯಾಂಡ್‌ವಿಚ್‌ ಮಾರಾಟ ಮಾಡಿ ವರ್ಷಕ್ಕೆ 50 ಕೋಟಿ ರೂ. ಗಳಿಸುತ್ತಿರುವ ಫ್ರೆಂಚ್‌ ವ್ಯಕ್ತಿ

ವಿದೇಶಕ್ಕೆ ಹೋಗಿ ಹಣ ಗಳಿಸಬೇಕೆಂಬ ಆಸೆ ಅನೇಕರಿಗೆ ಇರುತ್ತೆ ಅಲ್ವಾ. ಆದ್ರೆ ಇಲ್ಲೊಬ್ರು ಫ್ರೆಂಚ್‌ ಮೂಲದ ವ್ಯಕ್ತಿ ಭಾರತಕ್ಕೆ ಬಂದು ಕೋಟ್ಯಾಧಿಪತಿಯಾಗಿದ್ದಾರೆ. ಹೌದು ಓದಿನ ಉದ್ದೇಶಕ್ಕಾಗಿ ಭಾರತಕ್ಕೆ ಬಂದ ಇವರು ನಮ್ಮ ಬೆಂಗಳೂರಿನಲ್ಲಿ ಸ್ಯಾಂಡ್‌ವಿಚ್‌ ಮಾರಾಟ ಮಾಡಿ ಕೋಟಿ ಕೋಟಿ ಹಣವನ್ನು ಗಳಿಸುತ್ತಿದ್ದಾರೆ. ಈ ಸುದ್ದಿ ಇದೀಗ ಸಖತ್‌ ವೈರಲ್‌ ಆಗುತ್ತಿದೆ.

Viral: ಬೆಂಗಳೂರಿನಲ್ಲಿ ಸ್ಯಾಂಡ್‌ವಿಚ್‌ ಮಾರಾಟ ಮಾಡಿ ವರ್ಷಕ್ಕೆ 50 ಕೋಟಿ ರೂ. ಗಳಿಸುತ್ತಿರುವ ಫ್ರೆಂಚ್‌ ವ್ಯಕ್ತಿ
ನಿಕೋಲಸ್
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Dec 09, 2024 | 1:55 PM

ವಿದೇಶದಲ್ಲಿ ದೇಶಿಯ ಸೊಗಡಿನ ಸ್ವಾದವನ್ನು ಹರಡುವ ಭಾರತೀಯ ರೆಸ್ಟೋರೆಂಟ್‌ಗಳನ್ನು ತೆರೆದು, ಹೋಟೆಲ್‌ ಉದ್ಯಮದಲ್ಲಿ ಯಶಸ್ಸು ಕಂಡವರ ಕಥೆಗಳ ಬಗ್ಗೆ ಕೇಳಿರುತ್ತೀರಿ ಅಲ್ವಾ. ಅದೇ ರೀತಿ ಫ್ರೆಂಚ್‌ ಮೂಲದ ವ್ಯಕ್ತಿಯೊಬ್ಬರು ಭಾರತಕ್ಕೆ ಬಂದು ಸ್ಯಾಂಡ್‌ವಿಚ್‌ ಉದ್ಯಮವನ್ನು ಆರಂಭಿಸಿ ಯಶಸ್ಸನ್ನು ಕಂಡಿದ್ದಾರೆ. ಹೌದು ಉನ್ನತ ಶಿಕ್ಷಣಕ್ಕಾಗಿ ಫ್ರೆಂಚ್‌ನಿಂದ ಭಾರತಕ್ಕೆ ಬಂದ ಇವರು ನಮ್ಮ ಬೆಂಗಳೂರಿನಲ್ಲಿ ಸ್ಯಾಂಡ್‌ವಿಚ್‌ ಮಾರಾಟ ಮಾಡಿ ಕೋಟಿ ಕೋಟಿ ಹಣವನ್ನು ಗಳಿಸುತ್ತಿದ್ದಾರೆ. ಈ ಸುದ್ದಿ ಇದೀಗ ಸಖತ್‌ ವೈರಲ್‌ ಆಗುತ್ತಿದೆ.

ಫ್ರಾನ್ಸ್‌ನ ನಿಕೋಲಸ್‌ ಗ್ರೊಸೆಮಿ ಬೆಂಗಳೂರಿನಲ್ಲಿ ಸ್ಯಾಂಡ್‌ವಿಚ್‌ ಉದ್ಯಮವನ್ನು ಆರಂಭಿಸಿ ದೊಡ್ಡ ಉದ್ಯಮಿ ಎನಿಸಿಕೊಂಡಿದ್ದಾರೆ. ಉನ್ನತ ಶಿಕ್ಷಣಕ್ಕಾಗಿ ಬೆಂಗಳೂರಿಗೆ ಬಂದ ಇವರು ಇಲ್ಲಿ ಪ್ಯಾರಿಸ್‌ ಪಾನಿನಿ ಎಂಬ ಸ್ಯಾಂಡ್‌ವಿಚ್‌ ಬ್ರ್ಯಾಂಡ್‌ ಪ್ರಾರಂಭಿಸಿ ಇದೀಗ ಕೋಟಿ ಕೋಟಿ ಸಂಪಾದನೆ ಮಾಡುತ್ತಿದ್ದಾರೆ. ಹೌದು ಬೆಂಗಳೂರಿನಲ್ಲಿ ಅನೇಕ ಬ್ರ್ಯಾಂಚ್‌ಗಳನ್ನು ಹೊಂದಿರುವ ಇವರು ಸ್ಯಾಂಡ್‌ವಿಚ್ ಮಾರಾಟ ಮಾಡಿಯೇ ವಾರ್ಷಿಕವಾಗಿ 50 ಕೋಟಿ ಆದಾಯ ಗಳಿಸುತ್ತಿದ್ದಾರೆ.

ಫ್ರಾನ್ಸ್‌ನ ಒಂದು ಸಾಮಾನ್ಯ ಕುಟುಂಬದಲ್ಲಿ ಜನಿಸಿದ ನಿಕೋಲಸ್‌ ತನ್ನ 22 ನೇ ವಯಸ್ಸಿನಲ್ಲಿ ಉನ್ನತ ಶಿಕ್ಷಣಕ್ಕಾಗಿ ಭಾರತಕ್ಕೆ ಬಂದರು. ಇವರ ಪೋಷಕರು ಶಿಕ್ಷಕರಾಗಿದ್ದು, ಇವರು ತಮ್ಮ ತಾಯಿಯಿಂದ ಅಡುಗೆ ಕಲಿಯುವ ಆಸಕ್ತಿಯನ್ನು ಬೆಳೆಸಿದರು. ಇದೇ ಅಡುಗೆಯ ಆಸಕ್ತಿ ಇವರನ್ನು ಇಂದು ಒಬ್ಬ ಯಶಸ್ವಿ ಉದ್ಯಮಿಯನ್ನಾಗಿ ಮಾಡಿದೆ.

ಭಾರತದಲ್ಲಿ ಸ್ನಾತ್ತಕೋತ್ತರ ಪದವಿಯನ್ನು ಮುಗಿಸಿದ ನಂತರ 2015 ರಲ್ಲಿ ಫುಡ್‌ ಟ್ರಕ್‌ ಮೂಲಕ ಸ್ಯಾಂಡ್‌ವಿಚ್‌ ಮಾರಾಟ ಮಾಡುವ ಬ್ಯುಸಿನೆಸ್‌ ಆರಂಭ ಮಾಡಿದ ಇವರು ಇದೀಗ ಬೆಂಗಳೂರಿನಲ್ಲಿ 8 ರೆಸ್ಟೋರೆಂಟ್‌ ಮತ್ತು 7 ಕ್ಲೌಡ್‌ ಕಿಚನ್‌ಗಳನ್ನು ಹೊಂದಿದ್ದಾರೆ.

ನಿಕೋಲಸ್ ಅವರಿಗೆ ಬಾಲ್ಯದಿಂದಲೂ ಸ್ಯಾಂಡ್ವಿಚ್‌ಗಳೆಂದರೆ ಬಹಳ ಅಚ್ಚುಮೆಚ್ಚು. ಈ ಕಾರಣದಿಂದಲೇ ಇವರು ಸ್ಯಾಂಡ್‌ವಿಚ್‌ ಉದ್ಯಮವನ್ನು ಆರಂಭಿಸಿದರು. ಇಂದು ಅವರ ಬ್ರ್ಯಾಂಡ್ ಪ್ಯಾರಿಸ್ ಪಾನಿನಿ ವಿವಿಧ ಸ್ಯಾಂಡ್‌ವಿಚ್‌ಗಳನ್ನು ಮಾರಾಟ ಮಾಡುತ್ತಿದೆ. 70% ಶೇಕಡದಷ್ಟು ಆನ್‌ಲೈನ್‌ನಲ್ಲಿ ಸ್ಯಾಂಡ್‌ವಿಚ್‌ ಸೇಲ್‌ ಆದ್ರೆ, ರೆಸ್ಟೋರೆಂಟ್‌ನಲ್ಲಿ 30% ನಷ್ಟು ವ್ಯಾಪಾರ ನಡೆಯುತ್ತೆ ಎಂದು ನಿಕೋಲಸ್‌ ಹೇಳಿದ್ದಾರೆ.

ಇದನ್ನೂ ಓದಿ: ಡಿಜಿಟಲ್‌ ಅರೆಸ್ಟ್; ಸೈಬರ್‌ ಜಗತ್ತಿನ ಹೊಸ ಬಗೆಯ ವಂಚನೆ ಬಗ್ಗೆ ಇರಲಿ ಎಚ್ಚರ !ಈ ಜಾಲದ ಬಗ್ಗೆ ಹಂಚಿಕೊಂಡ ನವೀನ್‌ ಶೌರಿ

ತಿಂಗಳಿಗೆ 4 ಕೋಟಿ ರೂ. ಗಳಿಸುವ ನಿಕೋಲಸ್:

ನಿಕೋಲಸ್ ತಾನು ಗಳಿಸುವ ಆದಾಯಗಳ ಬಗ್ಗೆಯೂ ಹೇಳಿದ್ದಾರೆ. ಇವರು ತಿಂಗಳಿಗೆ ನಾಲ್ಕು ಕೋಟಿ ಹಾಗೂ ವಾರ್ಷಿಕವಾಗಿ ಸುಮಾರು 50 ಕೋಟಿ ರೂ. ಹಣವನ್ನು ಗಳಿಸುತ್ತಿದ್ದಾರೆ. ಒಟ್ಟು ಆದಾಯದಲ್ಲಿ ಆಹಾರ ವೆಚ್ಚದ ಪಾಲು ಶೇ.28% ರಷ್ಟಿದೆ, 10% ರಷ್ಟು ಹಣವನ್ನು ಬಾಡಿಗೆ ಪಾವತಿಸಲು ಖರ್ಚು ಮಾಡಲಾಗುತ್ತದೆ. 35% ರಷ್ಟು ಮೊತ್ತವನ್ನು ಕೆಲಸಗಾರರಿಗೆ ಸಂಬಳ ನೀಡಲು ಖರ್ಚು ಮಾಡಲಾಗುತ್ತಿದೆ. 10% ರಷ್ಟು ಹಣವನ್ನು ಮಾರ್ಕೆಟಿಂಗ್‌ಗಾಗಿ ಖರ್ಚು ಮಾಡಲಾಗುತ್ತದೆ. ಇವೆಲ್ಲಾ ಖರ್ಚು ಕಳೆದು ಶೇಕಡಾ 15% ನಷ್ಟು ಲಾಭಂಶ ಉಳಿಯುತ್ತದೆ ಎಂದು ಹೇಳಿದ್ದಾರೆ.

ಮತ್ತಷ್ಟು ವೈರಲ್​​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ