ಬೆಂಗಳೂರನ್ನು ಕಾಪಾಡಿ ಎಂದು ಈಡಿಗಾಯಿ ಒಡೆದು ದೇವಸ್ಥಾನಗಳ ಮುಂದೆ ವಾಟಾಳ್ ನಾಗರಾಜ್ ವಿನೂತನ ಪ್ರತಿಭಟನೆ

| Updated By: ವಿವೇಕ ಬಿರಾದಾರ

Updated on: Sep 09, 2022 | 5:14 PM

ವಾಟಾಳ್ ನಾಗರಾಜ್ ವಿನೂತನ ಚಳುವಳಿ ಮಾಡಿದ್ದು, ದೇವಸ್ಥಾನಗಳ ಮುಂದೆ ಬೆಂಗಳೂರನ್ನುಕಾಪಾಡಿ ಕಾಪಾಡಿ ಎಂದು ಈಡಿಗಾಯಿ ಒಡೆದು ವಿನೂತನ ಪ್ರತಿಭಟನೆ ಮಾಡಿದ್ದಾರೆ.

ಬೆಂಗಳೂರನ್ನು ಕಾಪಾಡಿ ಎಂದು ಈಡಿಗಾಯಿ ಒಡೆದು ದೇವಸ್ಥಾನಗಳ ಮುಂದೆ ವಾಟಾಳ್ ನಾಗರಾಜ್ ವಿನೂತನ ಪ್ರತಿಭಟನೆ
ವಾಟಾಳ ನಾಗರಾಜ
Follow us on

ಬೆಂಗಳೂರು: ವಾಟಾಳ್ ನಾಗರಾಜ್ (Vatal Nagaraj)​ ವಿನೂತನ ಚಳುವಳಿ ಮಾಡಿದ್ದು, ದೇವಸ್ಥಾನಗಳ ಮುಂದೆ ಬೆಂಗಳೂರನ್ನು (Bengaluru) ಕಾಪಾಡಿ ಕಾಪಾಡಿ ಎಂದು ಈಡಿಗಾಯಿ ಒಡೆದು ವಿನೂತನ ಪ್ರತಿಭಟನೆ ಮಾಡಿದ್ದಾರೆ. ಮಳೆಯಿಂದಾಗಿ ಬೆಂಗಳೂರು ಮುಳುಗಿ ಜನರು ಕಣ್ಣೀರಿಡುವ ಪರಿಸ್ಥಿತಿ ಎದುರಾಗಿದೆ. ಹೀಗಾಗಿ ತಾಯಿ ಅಣ್ಣಮ್ಮ ದೇವಿಯೇ ಬೆಂಗಳೂರನ್ನು ಉಳಿಸಬೇಕು ಎಂದು ಕನ್ನಡ ಚಳವಳಿ ವಾಟಾಳ್‌ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಹೇಳಿದ್ದಾರೆ.

ಬೆಂಗಳೂರು ಈಗ ಪರ ಭಾಷಿಗರ ರಾಜ್ಯ ಹಾಗೆ ಆಗಿಬಿಟ್ಟಿದೆ. ತೆಲುಗು, ತಮಿಳು, ಮಲಯಾಳಿ, ಗುಜರಾತಿ, ಹೀಗೆ ಎಲ್ಲರೂ ಬಂದು ಬೆಂಗಳೂರನ್ನು ಹಾಳು ಮಾಡಿದ್ದಾರೆ. ಎಲ್ಲಂದರೆ ಅಲ್ಲಿ ಮನೆ, ಅಪಾರ್ಟ್ಮೆಂಟ್ ಕಟ್ಟುವ ಮೂಲಕ ಹಾಳು ಮಾಡಿದ್ದಾರೆ. ಬೆಂಗಳೂರಿನಲ್ಲಿ ಇದ್ದ ನೂರಾರು ಕೆರೆಗಳು ಮಾಯಾವಾಗಿವೆ. ಬೆಂಗಳೂರು ದರೋಡೆ ಕೋರರ ಪಾಲಾಗಿದೆ ಎಂದು ಆರೋಪಿಸಿದ್ದಾರೆ.

‘ಬೆಂಗಳೂರನ್ನು ಉಳಿಸಬೇಕಾದ ಕರ್ತವ್ಯ ಕನ್ನಡಿಗರದ್ದು. ಕನ್ನಡಿಗರ ರಾಜಧಾನಿ ಕನ್ನಡಿಗರದ್ದ ಆಗಬೇಕು. ಮಳೆ ಬಂದು ಬೆಂಗಳೂರು ಮುಳುಗಿ ಹೋಗಿದೆ ಅಂದರೆ ಅದಕ್ಕೆ ಸರ್ಕಾರವೇ ಕಾರಣ. ಸರ್ಕಾರದ ಬೇಜವಾಬ್ದಾರಿಯಿಂದ ಮಳೆಗೆ ಬೆಂಗಳೂರು ಮುಳುಗಿ ಹೋಗಿದೆ ಎಂದು ವಾಗ್ದಾಳಿ ಮಾಡಿದರು.

ಬಿಬಿಎಂಪಿ, ಬಿಡಿಎ, ಬೆಸ್ಕಾಂ, BWSSB, ಕೇಂದ್ರ ಗಳು ಬೆಂಗಳೂರಿನ ಶತ್ರುಗಳು ಆಗಿದ್ದಾರೆ. ಪ್ರಮುಖವಾಗಿ ಐಟಿಬಿಟಿ. ಐಟಿಬಿಟಿಯರವರು ಬೆಂಗಳೂರಿನ ಜಾಗಾ ಸರಿಯಿಲ್ಲ ಎಂದು ಹೇಳಿದ್ದಾರೆ. ಅಷ್ಟಕ್ಕೂ ನಿಮ್ಮ ಕೊಡುಗೆ ಏನಿದೇ ಬೆಂಗಳೂರಿಗೆ. ಐಟಿಬಿಟಿ ಹೆಸರನ್ನು ಹೇಳಿಕೊಂಡು ಎಷ್ಟು ಕನ್ನಡಗರಿಗೆ ನೀವು ಉದ್ಯೋಗ ಕೊಟ್ಟಿರಿ ? ನೀವೇನು ಚಕ್ರವರ್ತಿಗಳ ಅಥವಾ ದೊರೆಗಳೇ ಬೆಂಗಳೂರು ಬಿಟ್ಟು ಹೋಗುತ್ತೇವೆ ಅಂದರೆ ಹೋಗಿ. ನಾಳೆ ಬೆಳಗ್ಗೆನೇ ಗಂಟು ಮೂಟೆ ಕಟ್ಟಿಕೊಂಡು ಬೆಂಗಳೂರನ್ನು ಬಿಟ್ಟು ಹೋಗಿ. ಮೋಹನ್ ದಾಸ್ ಪೈ ಬೆಂಗಳೂರಿನ ಬಗ್ಗೆ ಮಾತನಾಡುವಾಗ ಎಚ್ಚರಿಕೆ ಇರಲಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ