Vegetable Price Hike; ತರಕಾರಿ ಬೆಲೆ ದಿಢೀರ್ ಏರಿಕೆ, ಜನ ಹೈರಾಣು

ಬೆಂಗಳೂರಿನಲ್ಲಿ ತರಕಾರಿ ಬೆಲೆ ಏರಿಕೆಯಾಗಿದೆ. ಬೀನ್ಸ್, ಬದನೆ ಕಾಯಿ, ಸೊಪ್ಪು, ಮೆಣಸಿನಕಾಯಿ ಬೆಲೆ ದುಪ್ಪಟ್ಟಾಗಿದೆ. ಬೇಸಿಗೆಯಲ್ಲಿ ಹೆಚ್ಚು ಬಳಸುವ ಸೌತೆಕಾಯಿ, ಕ್ಯಾರೆಟ್, ನಿಂಬೆ ಹಣ್ಣುಗಳ ಬೆಲೆ ಕೂಡ ಹೆಚ್ಚಿದೆ. ಕಳೆದ ವಾರ ತರಕಾರಿಗಳ ಬೆಲೆ 20ರೂ ಜಾಸ್ತಿಯಾಗಿತ್ತು. ಈ ವಾರ ಮತ್ತೆ ತರಕಾರಿಗಳ ಬೆಲೆ 20ರೂ ಜಾಸ್ತಿಯಾಗಿದೆ.

Vegetable Price Hike; ತರಕಾರಿ ಬೆಲೆ ದಿಢೀರ್ ಏರಿಕೆ, ಜನ ಹೈರಾಣು
ಸಾಂದರ್ಭಿಕ ಚಿತ್ರ
Follow us
| Updated By: ಆಯೇಷಾ ಬಾನು

Updated on: Apr 01, 2024 | 2:58 PM

ಬೆಂಗಳೂರು, ಏಪ್ರಿಲ್.01: ಸಿಲಿಕಾನ್ ಸಿಟಿಯಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ಪ್ರಮಾಣ ಹೆಚ್ಚಾಗುತ್ತಿದೆ. ಬಿಸಿಲು ಹೆಚ್ಚಾದಂತೆ ಮತ್ತೊಂದು ಕಡೆ ತರಕಾರಿಗಳ ಬೆಲೆ (Vegetable Price Hike) ಏರಿಕೆಯಾಗುತ್ತಿದೆ. ಬೀನ್ಸ್, ಬದನೆ ಕಾಯಿ, ಸೊಪ್ಪು, ಮೆಣಸಿನಕಾಯಿ ಬೆಲೆ ದುಪ್ಪಟ್ಟಾಗಿದೆ. ಬೇಸಿಗೆಯಲ್ಲಿ ಹೆಚ್ಚು ಬಳಸುವ ಸೌತೆಕಾಯಿ, ಕ್ಯಾರೆಟ್, ನಿಂಬೆ ಹಣ್ಣುಗಳ ಬೆಲೆ ಕೂಡ ಹೆಚ್ಚಿದೆ. ಕಳೆದ ವಾರ ತರಕಾರಿಗಳ ಬೆಲೆ 20ರೂ ಜಾಸ್ತಿಯಾಗಿತ್ತು. ಈ ವಾರ ಮತ್ತೆ ತರಕಾರಿಗಳ ಬೆಲೆ 20ರೂ ಜಾಸ್ತಿಯಾಗಿದೆ. ಮುಂದಿನ ದಿನಗಳಲ್ಲಿ ಇದೆ ರೀತಿಯಾಗಿ‌ ಬಿಸಿಲು ಹೆಚ್ಚಾದ್ರೆ ತರಕಾರಿ ಬೆಲೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ವ್ಯಾಪಾರಸ್ಥರು ತಿಳಿಸಿದ್ದಾರೆ.

ಮಾರುಕಟ್ಟೆಯ ಇಂದಿನ ತರಕಾರಿ ದರ

ತರಕಾರಿ‌ ಇಂದಿನ ಬೆಲೆ ಹಿಂದಿನ‌ ಬೆಲೆ
ಬೀನ್ಸ್ 40 60
ಮೂಲಂಗಿ 35 25
ಬದನೆಕಾಯಿ 35 25
ಊಟಿ ಕ್ಯಾರೆಟ್ 40 35
ಹಾಗಲಕಾಯಿ 40 30
ಈರುಳ್ಳಿ 25 20
ಬಿಟ್ರೋಟ್ 35 30
ನವಿಲುಕೋಸು 30 25
ಬೆಂಡೆಕಾಯಿ 40 30
ಬೆಳ್ಳುಳ್ಳಿ 135 300
ಅಲೂಗಡ್ಡೆ 40 25
ಹೀರೆಕಾಯಿ 40 35
ಟೊಮೆಟೊ 25 20
ಮೆಣಸಿನಕಾಯಿ 60 45
ಕೊತ್ತಂಬರಿ 30 20
ಕ್ಯಾಪ್ಸ್ ಕಮ್ 45 20
ನುಗ್ಗೆಕಾಯಿ 80 60

ಇದನ್ನೂ ಓದಿ: ಬಡವರ ಕಣ್ಣೀರು ಒರೆಸುವ ಮನಸ್ಥಿತಿಯೇ ದೊಡ್ಡ ಕಾಲರ್, ಸಿಎಂ ವೈಟ್ ಕಾಲರ್ ಹೇಳಿಕೆಗೆ ಡಾ ಮಂಜುನಾಥ್ ಟಾಂಗ್

ಮಾರುಕಟ್ಟೆಯ ಹಣ್ಣಿನ ಬೆಲೆ

ಹಣ್ಣು ಇಂದಿನ ಬೆಲೆ ಹಿಂದಿನ ಬೆಲೆ
ಆ್ಯಪಲ್ 220 200
ಆರೆಂಜ್ 120 80
ಮೂಸಂಬಿ 100 80
ದ್ರಾಕ್ಷಿ 100 80
ಮಾವು 300 250
ದಾಳಿಂಬೆ 200 200
ಸಪೋಟ 80 70
ಗೋವಾ ಹಣ್ಣು 100 90
ಬಾಳೆಹಣ್ಣು 50 60
ಕಲ್ಲಂಗಡಿ 25 20
ಪಪ್ಪಾಯಿ 35 30
ಅನಾನಸ್ 50 40

ಇಷ್ಟೊಂದು ಬೆಲೆ ಜಾಸ್ತಿಯಾದ್ರೆ ಜೀವನ ಹೇಗೆ ಮಾಡೋದು. ಮಹಿಳೆಯರಿಗೆ ಮನೆ ನಡೆಸೋದೆ ಕಷ್ಟ ಆಗೋಗಿದೆ. 500 ರೂಪಾಯಿ ತರಕಾರಿ ತಗೋಳೊಕೆ ಬಂದ್ರೆ 1 ಸಾವಿರದ ಮೇಲೆ ಆಗುತ್ತೆ. ತರಕಾರಿಗೆ ಒಂದು ವಾರಕ್ಕೆ ಸಾವಿರ ಕೊಟ್ರೆ. ದಿನಸಿ ಹೇಗೆ ಖರೀದಿ ಮಾಡೋದು ಎಂದು ಮಹಿಳೆಯರು ಅಳಲು ತೋಡಿಕೊಂಡಿದ್ದಾರೆ. ಮಧ್ಯಮ ವರ್ಗದ ಜನರ ಬದುಕು ತುಂಬ ಕಷ್ಟವಾಗುತ್ತಿದೆ. ಬೆಲೆ ಯಾಕೆ ಜಾಸ್ತಿಯಾಗಿದೆ ಅಂದ್ರೆ ಬಿಸಿಲು ಜಾಸ್ತಿ ಅಂತರೇ. ಮನೆಗೆ ಹೋದ್ರೆ ನೀರಿಲ್ಲ. ನೀರನ್ನ ದುಡ್ಡು ಕೊಟ್ಟೇ ಖರೀದಿ ಮಾಡ್ಬೇಕು. ತರಕಾರಿಗಳಿಗೆ ದುಬಾರಿ ಹಣ ಕೊಡಬೇಕು. ಹೀಗೆ ಆದ್ರೆ ಬಡ ಜನರು ಬದುಕೋದು ಹೇಗೆ ಎಂದು ಗ್ರಾಹಕರು ಆಕ್ರೋಶ ಹೊರ ಹಾಕಿದ್ದಾರೆ.

ತರಕಾರಿ ಬೆಲೆ ತುಂಬ ಜಾಸ್ತಿಯಾಗಿದೆ. ಬಿಸಿಲಿನಿಂದಾಗಿ ಸರಿಯಾಗಿ ತರಕಾರಿ ಬರ್ತಿಲ್ಲ. ತಂದಂತಹ ತರಕಾರಿಗಳು ತುಂಬ ದಿನ ಇಟ್ಟುಕೊಳ್ಳೊಕೆ ಆಗ್ತಿಲ್ಲ. ಸಂಜೆ ಹೊತ್ತಿಗೆ ತರಕಾರಿಗಳು ಒಣಗಿ ಹೋಗುತ್ತಿವೆ. ತರಕಾರಿಗಳ ಬೆಲೆ ಕೇಳಿ ಜನರು ಶಾಕ್ ಆಗ್ತಿದ್ದಾರೆ. ಸಧ್ಯ ಚನ್ನಪಟ್ಟಣ, ಮದ್ದೂರು, ರಾಮನಗರ, ಹೊಸಕೋಟೆ, ಕೋಲಾರ್ ಚಿಂತಾಮಣಿಯಿಂದ ತರಕಾರಿಗಳು ಬರುತ್ತಿವೆ. ಬೇಡಿಕೆಗೆ ತಕ್ಕಷ್ಟು ತರಕಾರಿಗಳು ಬರ್ತಿಲ್ಲ. ಹೀಗಾಗಿ ಬೆಲೆ ಜಾಸ್ತಿಯಾಗಿದೆ. ಮುಂದಿನ ದಿನಗಳಲ್ಲಿ ತರಕಾರಿಗಳ ಬೆಲೆ ಮತ್ತಷ್ಟು ಜಾಸ್ತಿಯಾಗುವ ಸಾಧ್ಯತೆ ಇದೆ ಎಂದು ವ್ಯಾಪಾರಸ್ಥರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ತಾಜಾ ಸುದ್ದಿ
‘ಈ ಸ್ಥಿತಿ ಬಂದಿದ್ದಕ್ಕೆ ​ ಜೈಲಿನಲ್ಲಿ ದರ್ಶನ್ ಸಾಕಷ್ಟು ನೋವಿನಲ್ಲಿದ್ದಾರೆ’
‘ಈ ಸ್ಥಿತಿ ಬಂದಿದ್ದಕ್ಕೆ ​ ಜೈಲಿನಲ್ಲಿ ದರ್ಶನ್ ಸಾಕಷ್ಟು ನೋವಿನಲ್ಲಿದ್ದಾರೆ’
ಆಷಾಢ ಮಾಸದ ವಿಶೇಷ ರಾಶಿ ಭವಿಷ್ಯ 2024: ಯಾವ ರಾಶಿಗೆ ಏನು ಫಲ? ಇಲ್ಲಿದೆ ವಿವರ
ಆಷಾಢ ಮಾಸದ ವಿಶೇಷ ರಾಶಿ ಭವಿಷ್ಯ 2024: ಯಾವ ರಾಶಿಗೆ ಏನು ಫಲ? ಇಲ್ಲಿದೆ ವಿವರ
ಈ ರಾಶಿಯವರು ಮೇಲಿದ ಬಿದ್ದು ಕಾಲು ನೋವು ಮಾಡಿಕೊಳ್ಳುವ ಸಂಭವವಿದೆ, ಎಚ್ಚರ
ಈ ರಾಶಿಯವರು ಮೇಲಿದ ಬಿದ್ದು ಕಾಲು ನೋವು ಮಾಡಿಕೊಳ್ಳುವ ಸಂಭವವಿದೆ, ಎಚ್ಚರ
ಮಕ್ಕಳಿಗೆ ದೃಷ್ಠಿ ಬೊಟ್ಟುಇಡುವುದರ ಅರ್ಥವೇನು ಗೊತ್ತಾ?
ಮಕ್ಕಳಿಗೆ ದೃಷ್ಠಿ ಬೊಟ್ಟುಇಡುವುದರ ಅರ್ಥವೇನು ಗೊತ್ತಾ?
ಹೊಸ ಫೋಲ್ಡ್​ ಫೋನ್ ಪ್ರಿ ಬುಕಿಂಗ್ ಆರಂಭಿಸಿದ ಸ್ಯಾಮ್​ಸಂಗ್
ಹೊಸ ಫೋಲ್ಡ್​ ಫೋನ್ ಪ್ರಿ ಬುಕಿಂಗ್ ಆರಂಭಿಸಿದ ಸ್ಯಾಮ್​ಸಂಗ್
ಕಾಶಪ್ಪನವರ್ ಸಿಎಂ ಆಗಬೇಕೆಂದ ನಂದವಾಡಗಿ ವೀರಶೈವ ಲಿಂಗಾಯತ ಮಠದ ಸ್ವಾಮೀಜಿ
ಕಾಶಪ್ಪನವರ್ ಸಿಎಂ ಆಗಬೇಕೆಂದ ನಂದವಾಡಗಿ ವೀರಶೈವ ಲಿಂಗಾಯತ ಮಠದ ಸ್ವಾಮೀಜಿ
ಹಾವೇರಿ ಉಪ ಚುನಾವಣೆಗಾಗಿ ಈಗಿಂದಲೇ ಕೆಲಸ ಶುರುಮಾಡಿದ್ದೇವೆ:ಸತೀಶ್ ಜಾರಕಿಹೊಳಿ
ಹಾವೇರಿ ಉಪ ಚುನಾವಣೆಗಾಗಿ ಈಗಿಂದಲೇ ಕೆಲಸ ಶುರುಮಾಡಿದ್ದೇವೆ:ಸತೀಶ್ ಜಾರಕಿಹೊಳಿ
ಈ ನಟಿಯರು ಇಷ್ಟು ದಿನ ಯಾಕೆ ಸುಮ್ಮನಿದ್ರು? ರೇಣುಕಾ ಸ್ವಾಮಿ ತಂದೆ ಪ್ರಶ್ನೆ
ಈ ನಟಿಯರು ಇಷ್ಟು ದಿನ ಯಾಕೆ ಸುಮ್ಮನಿದ್ರು? ರೇಣುಕಾ ಸ್ವಾಮಿ ತಂದೆ ಪ್ರಶ್ನೆ
ದರ್ಶನ್ ₹22 ಕೋಟಿ ಸಂಭಾವನೆ ಪಡೆಯೋದು ಕೇಳಿ ಶಾಕ್ ಆಯ್ತು: ಸರಿಗಮ ವಿಜಿ
ದರ್ಶನ್ ₹22 ಕೋಟಿ ಸಂಭಾವನೆ ಪಡೆಯೋದು ಕೇಳಿ ಶಾಕ್ ಆಯ್ತು: ಸರಿಗಮ ವಿಜಿ
ಕುಡುಕ ಆಟೋರಿಕ್ಷಾ ಸೆಲ್ಫೀ ತೆಗೆಸಿಕೊಂಡ ಬಳಿಕ ಈಶ್ವರಪ್ಪ ಕುಡಿತ ಬಿಡು ಅಂದರು
ಕುಡುಕ ಆಟೋರಿಕ್ಷಾ ಸೆಲ್ಫೀ ತೆಗೆಸಿಕೊಂಡ ಬಳಿಕ ಈಶ್ವರಪ್ಪ ಕುಡಿತ ಬಿಡು ಅಂದರು