ಬೆಂಗಳೂರು: ರಾಜ್ಯದಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಸುಮಾರು 15 ದಿನಗಳಿಂದ ಸುರಿಯುತ್ತಿರುವ ಮಹಾಮಳೆಗೆ ರೈತರು ಬೆಳೆದ ಬೆಳೆಗಳು ಜಲಾವೃತವಾಗಿವೆ. ಫಸಲು ಅನ್ನದಾತನ ಕೈ ಸೇರುವ ಮೊದಲೇ ವರುಣಾರ್ಭಟಕ್ಕೆ ನೀರು ಪಾಲಾಗಿವೆ. ಹೀಗೆ ರಾಜ್ಯದಲ್ಲಿ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆ ತರಕಾರಿ ಬೆಲೆ ಏರಿಕೆಯಾಗಿದೆ. ಟೊಮ್ಯಾಟೋ, ಈರುಳ್ಳಿ ಬೆಲೆ ಗಗನಕ್ಕೇರಿದೆ.
ಒಂದು ಕೆಜಿ ಟೊಮ್ಯಾಟೋಗೆ 100 ರೂಪಾಯಿ ಆಗಿದೆ. 15 ದಿನದಿಂದ ನಿರಂತರ ಮಳೆಯಾಗುತ್ತಿದೆ. ಹೀಗಾಗಿ ತರಕಾರಿಗಳು ಹೆಚ್ಚಿನದಾಗಿ ಮಾರುಕಟ್ಟೆಗೆ ಬರುತ್ತಿಲ್ಲ. ಬರುವ ಅಲ್ಪ ತರಕಾರಿಗೆ ವ್ಯಾಪಾರಸ್ಥರು ಹೆಚ್ಚಿನ ಬೆಲೆ ನಿಗದಿ ಮಾಡಿದ್ದಾರೆ.
ತರಕಾರಿಗಳ ಬೆಲೆ ಹೀಗಿದೆ
ಒಂದು ಕೆಜಿ ಟೊಮ್ಯಾಟೋಗೆ- 80ರಿಂದ 120 ರೂ.
ಈರುಳ್ಳಿ- 40ರಿಂದ 60 ರೂ.
ಕ್ಯಾರೆಟ್- 60 ರೂ.
ಆಲೂಗಡ್ಡೆ- 30ರಿಂದ 50 ರೂ.
ಸೋರೆಕಾಯಿ- 40ರಿಂದ 60 ರೂ.
ಮೆಣಸಿನಕಾಯಿ- 100ರಿಂದ 130 ರೂ. ಇದೆ.
ಹೀಗೆ ಮಳೆಯಿಂದ ಬಹುತೇಕ ತರಕಾರಿಗಳ ದರ ಹೆಚ್ಚಳವಾಗಿದ್ದು, ಮಳೆ ಮುಂದುವರೆದರೆ ಟೊಮ್ಯಾಟೋಗೆ 150 ರೂ. ದಾಟುವ ಸಾಧ್ಯತೆಯಿದೆ. ಸದ್ಯ ಟೊಮ್ಯಾಟೋ ಬೆಲೆ ಕೇಳಿ ಗ್ರಾಹಕರು ದಂಗಾಗಿದ್ದಾರೆ.
ಟೊಮ್ಯಾಟೋ ಭರ್ಜರಿ ವ್ಯಾಪಾರ
ಕೋಲಾರ ಎಪಿಎಂಸಿಯಲ್ಲಿ ಟೊಮ್ಯಾಟೊ ಭರ್ಜರಿ ವ್ಯಾಪಾರವಾಗುತ್ತಿದೆ. 15 ಕೆಜಿ ಬಾಕ್ಸ್ಗೆ 1,500 ರೂ. ರಿಂದ 2 ಸಾವಿರಕ್ಕೆ ಮಾರಾಟವಾಗುತ್ತಿದೆ. ಇಳುವರಿ ಕಡಿಮೆಯಾಗಿರುವ ಹಿನ್ನೆಲೆ ಭರ್ಜರಿ ಬೆಲೆಯಲ್ಲಿ ಮಾರಾಟವಾಗುತ್ತಿದೆ. ಒಂದು ಕೆಜಿ ಟೊಮ್ಯಾಟೋ ಬೆಲೆ ಬರೋಬ್ಬರಿ 140 ರೂಪಾಯಿ ಆಗಿದೆ. ಕಳೆದ ಒಂದು ತಿಂಗಳಿನಿಂದ ತೇವಾಂಶ ಹೆಚ್ಚಾಗಿ ಟೊಮ್ಯಾಟೋ ಸೇರಿ ಇನ್ನಿತರೆ ತರಕಾರಿಗಳಿಗೆ ರೋಗಬಾಧೆ ಎದುರಾಗಿತ್ತು. ಇಳುವರಿಯಲ್ಲಿ ತೀವ್ರ ಕುಸಿತ ಮತ್ತು ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ತರಕಾರಿ ಹಾನಿಹಾನಿಯಾಗಿದೆ. ಹೀಗಾಗಿ ತರಕಾರಿ ಬೆಲೆಯಲ್ಲಿ ಏರಿಕೆ ಕಂಡಿದೆ.
ಇದನ್ನೂ ಓದಿ
Payal Rajput: ಫೋಟೋಶೂಟ್ ವೇಳೆ ಮಿತಿ ಮೀರಿ ವರ್ತಿಸಿದ ಜೋಡಿ; ಕನ್ನಡಕ್ಕೆ ಕಾಲಿಡಲಿರುವ ನಟಿಯ ಹಾಟ್ ಫೋಟೋ ವೈರಲ್
ಈ ಕೆಲಸ ಮೊದಲೇ ಮಾಡಿದ್ದರೆ 700ಕ್ಕೂ ಹೆಚ್ಚು ರೈತರ ಪ್ರಾಣ ಉಳಿಯುತ್ತಿತ್ತು: ಪ್ರಧಾನಿ ಮೋದಿಗೆ ಪತ್ರ ಬರೆದ ಬಿಜೆಪಿ ಸಂಸದ
Published On - 2:02 pm, Sat, 20 November 21