ಬೆಂಗಳೂರು: ಪೀಣ್ಯ ಎಲಿವೇಟೆಡ್ ಫ್ಲೈಓವರ್ ಮೇಲೆ ಮಧ್ಯರಾತ್ರಿ 12 ರಿಂದ ಮುಂಜಾನೆ 5 ಗಂಟೆ ವರೆಗೆ ಸಂಚಾರ ನಿಷೇಧಿಸಲಾಗಿದೆ. ಎಲ್ಲಾ ರೀತಿಯ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಿ ಆದೇಶ ಹೊರಡಿಸಲಾಗಿದೆ. ಮೇಲ್ಸೇತುವೆ ಮೇಲೆ ಭಾರಿ ವಾಹನ ಹಾಗೂ ಲಘು ವಾಹನ ಪ್ರತ್ಯೇಕಿಸಿ ಕಳುಹಿಸುವುದು ಪೊಲೀಸರಿಗೆ ಕಷ್ಟವಾದ ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಗಿದೆ. ಜೊತೆಗೆ ಭಾರಿ ವಾಹನಗಳನ್ನು ತಡೆಗಟ್ಟಲು ಅಳವಡಿಸಿರುವ ಗ್ಯಾಂಟ್ರಿ ಪದೇ ಪದೆ ಹಾನಿಗೆ ಒಳಗಾಗುತ್ತಿರುವ ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಗಿದೆ. ರಾತ್ರಿ 12 ಗಂಟೆ ನಂತರ ಎಲ್ಲಾ ರೀತಿಯ ವಾಹನ ಸಂಚಾರಕ್ಕೆ ಟ್ರಾಫಿಕ್ ಪೊಲೀಸರು ನಿರ್ಬಂಧ ಹೇರಿದ್ದಾರೆ. ಬೆಳಗಿನ ಜಾವ 5 ಗಂಟೆಯವರೆಗೂ ಮೇಲ್ಸೇತುವೆಯ ಮೇಲೆ ವಾಹನ ಓಡಾಟಕ್ಕೆ ನಿರ್ಬಂಧ ವಿಧಿಸಲಾಗಿದೆ.
ರಾತ್ರಿ 12 ಗಂಟೆ ನಂತರ ಸರ್ವಿಸ್ ರಸ್ತೆ ಮೂಲಕ ದಾಸರಹಳ್ಳಿ, ಪೀಣ್ಯ, ಜಾಲಹಳ್ಳಿ ಕ್ರಾಸ್ ಮೂಲಕ ಗೊರಗುಂಟೆಪಾಳ್ಯ ತಲುಪುವುದು, ಗೊರಗುಂಟೆಪಾಳ್ಯದಿಂದ ಔಟರ್ ರಿಂಗ್ ರೋಡ್ ಬಳಸಿ ನಗರದಿಂದ ಹೊರ ಹೋಗುವುದು ಸೂಕ್ತ ಎಂದು ತಿಳಿಸಲಾಗಿದೆ. ನಗರಕ್ಕೆ ಬರುವ ವಾಹನಗಳು ಮಾದಾವಾರ ಬಳಿ ನೈಸ್ ರಸ್ತೆ ಬಳಸಿಕೊಂಡು ಬರುವುದು ಎಂದು ಸಂಚಾರಿ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ಆದೇಶ ಮಾಡಿದ್ದಾರೆ.
ನಗರದ ಪೀಣ್ಯ ಫ್ಲೈಓವರ್ ವಾಹನ ಸಂಚಾರಕ್ಕೆ ಈ ಮೊದಲು ಮುಕ್ತವಾಗಿತ್ತು. ಮೊದಲಿಗೆ ಲಘು ವಾಹನಗಳ ಸಂಚಾರಕ್ಕೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಅವಕಾಶ ನೀಡಿತ್ತು. ಕಳೆದ 58 ದಿನಗಳಿಂದ ಬಂದ್ ಆಗಿದ್ದ ಪೀಣ್ಯ ಫ್ಲೈಓವರ್, ಗೊರಗುಂಟೆಪಾಳ್ಯ-ನಾಗಸಂದ್ರ ನಡುವಿನ ಫ್ಲೈಓವರ್ ವಾಹನ ಸಂಚಾರಕ್ಕೆ ಮುಕ್ತವಾಗಿತ್ತು. ಆದರೆ, ಭಾರಿ ವಾಹನಗಳ ಸಂಚಾರಕ್ಕೆ ನಿರ್ಬಂಧ ಮುಂದುವರಿಸಲಾಗಿತ್ತು. ಇದೀಗ ಭಾರಿ ವಾಹನ ಹಾಗೂ ಲಘು ವಾಹನ ಪ್ರತ್ಯೇಕಿಸಿ ಕಳುಹಿಸುವುದು ಕಷ್ಟವಾದ ಹಿನ್ನೆಲೆ ಮತ್ತೆ ನಿರ್ಬಂಧ ವಿಧಿಸಲಾಗಿದೆ.
ಇದನ್ನೂ ಓದಿ: ಬೆಂಗಳೂರು ವಿವಿ ಅಕ್ರಮಗಳ ಅಡ್ಡೆಯಾಗುತ್ತಿದೆ; ಸಿಂಡಿಕೇಟ್ ಸದಸ್ಯರಿಂದಲೇ ರಾಜ್ಯಪಾಲರಿಗೆ ದೂರು
ಇದನ್ನೂ ಓದಿ: Petrol Diesel Rate Today: ಬೆಂಗಳೂರು ಹಾಗೂ ಇತರ ನಗರಗಳ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟು? ಇಲ್ಲಿದೆ ಮಾಹಿತಿ
Published On - 9:39 am, Sun, 13 March 22