ಬೆಂಗಳೂರು: ನಗರ ಪೊಲೀಸರು ಜಫ್ತಿ ಮಾಡಿದ್ದ ಹಳೆಯ ವಾಹನಗಳಿಗೆ ಬೆಂಕಿ ಬಿದ್ದಿದೆ. ಬೆಂಗಳೂರಿನ ಕೆಂಗೇರಿ ಪೊಲೀಸ್ ಠಾಣೆ ಹಿಂಭಾಗದಲ್ಲಿ ಮಧ್ಯಾಹ್ನ 1:30ರ ಸುಮಾರಿಗೆ ಘಟನೆ ನಡೆದಿದೆ. ಸೀಜ್ ಮಾಡಿದ್ದ ಹಳೇ ವಾಹನಗಳನ್ನು ಸ್ಟೇಷನ್ ಹಿಂಭಾಗದಲ್ಲಿ ನಿಲ್ಲಿಸಲಾಗಿತ್ತು. ದಿಢೀರನೆ ಬೆಂಕಿ ಕಾಣಿಸಿಕೊಂಡಿದ್ದು. ದ್ವಿಚಕ್ರ ವಾಹನಗಳು, ಕಾರುಗಳ ಸಹಿತ 15 ವಾಹನಗಳು ಬೆಂಕಿಗಾಹುತಿಯಾಗಿವೆ. ಸಕಾಲಕ್ಕೆ ಆಗಮಿಸಿದ ಅಗ್ನಿಶಾಮಕ ದಳದವರು ಬೆಂಕಿ ಆರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕೆ ಜಿ ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿಯೂ …
ಇನ್ನು ಕೆ ಜಿ ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿಯೂ ಬೆಂಕಿ ಅವಘಡ ನಡೆದಿದೆ. ಕೆ ಜಿ ಹಳ್ಳಿ ಪೊಲೀಸರು ಸೀಜ್ ಮಾಡಿದ್ದ ಕಾರುಗಳ ಪೈಕಿ ಆರು ಬೆಂಕಿಗಾಹುತಿಯಾಗಿವೆ. ಪೊಲೀಸರು ವಿವಿಧ ಕೇಸ್ ಗಳಲ್ಲಿ ಸೀಜ್ ಮಾಡಿದ್ದ ಕಾರುಗಳು ಇವಾಗಿವೆ. ಅಗ್ನಿಶಾಮಕ ಸಿಬ್ಬಂದಿ ತಕ್ಷಣ ಬೆಂಕಿ ನಂದಿಸಿದ್ದಾರೆ.
ಹಾಡಹಗಲೇ ಸಿನಿಮೀಯವಾಗಿ ಹೆದ್ದಾರಿಯಲ್ಲಿ ಚಿನ್ನದ ವ್ಯಾಪಾರಿಗೆ ಸೇರಿದ 1 ಕೋಟಿ ಹಣ ದರೋಡೆ:
ನೆಲಮಂಗಲ: ಹಾಡಹಗಲೇ ಸಿನಿಮೀಯ ರೀತಿಯಲ್ಲಿ ಹೆದ್ದಾರಿಯಲ್ಲಿ ಭಾರೀ ದರೋಡೆ ನಡೆದಿದೆ. ಹುಬ್ಬಳ್ಳಿಯಿಂದ ಬೆಂಗಳೂರಿಗೆ ಬರುತ್ತಿದ್ದವರ ಹಣ ಮತ್ತು ಕಾರು ಕಿತ್ತುಕೊಂಡು ದರೋಡೆಕೋರರ ತಂಡವು ಪರಾರಿಯಾಗಿದೆ. ಬೆಂಗಳೂರು ಉತ್ತರ ತಾಲೂಕಿನ ಮಾದವಾರ ಬಳಿ ಈ ಘಟನೆ ನಡೆದಿದೆ. ಚಿನ್ನದ ವ್ಯಾಪಾರಿ ಯೋಗೇಶ್ ಸೇರಿದಂತೆ ಮೊವರನ್ನ ಕಾರಿನಿಂದ ಬೆದರಿಸಿ ಇಳಿಸಿ, ಕಾರಿನ ಸಮೇತವಾಗಿ ದರೋಡೆಕೋರರು ಪರಾರಿಯಾಗಿದ್ದಾರೆ.
ಕಾರಿನಲ್ಲಿ ಒಂದು ಕೋಟಿ ರೂಪಾಯಿವರೆಗೂ ಹಣವಿದ್ದ ಬಗ್ಗೆ ಪ್ರಾಥಮಿಕ ಮಾಹಿತಿ ದೊರೆತಿದೆ. ಇನ್ನೋವಾ ಕಾರಿನಲ್ಲಿ ಬಂದಿದ್ದ ದರೋಡೆಕೋರರ ಗ್ಯಾಂಗ್ ಉದ್ಯಮಿ ಯೋಗೇಶ್ ಗೆ ಸೇರಿದ ಬ್ರೀಜಾ ಕಾರು ಕಿತ್ತುಕೊಂಡು ಪರಾರಿಯಾಗಿದೆ. ಸ್ಥಳಕ್ಕೆ ಮಾದನಾಯಕನಹಳ್ಳಿ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಓವರ್ ಲೋಡ್ ಧಾವಂತದಿಂದ ಟ್ರ್ಯಾಕ್ಟರ್ ಪಲ್ಟಿ -ನಿಶ್ಚಿತಾರ್ಥಕ್ಕೆ ಹೊರಟಿದ್ದ 4 ಮಂದಿ ಸಾವು
ಕೊಪ್ಪಳ: ಸುಮಾರು 25 ಜನರನ್ನು ಹೊತ್ತೊಯ್ಯುತ್ತಿದ್ದ ಟ್ರ್ಯಾಕ್ಟರ್ ಪಲ್ಟಿಯಾಗಿ ಸ್ಥಳದಲ್ಲೇ ಇಬ್ಬರು, ಚಿಕಿತ್ಸೆ ಫಲಿಸದೆ ಕಾರಟಗಿ ಆಸ್ಪತ್ರೆಯಲ್ಲಿ ಇಬ್ಬರು ದುರ್ಮರಣಕ್ಕೀಡಾಗಿರುವ ಘಟನೆ ಕೊಪ್ಪಳ ಜಿಲ್ಲೆ ಕನಕಗಿರಿ ತಾಲೂಕಿನ ನವಲಿಯಲ್ಲಿ ನಡೆದಿದೆ. ನಿಶ್ಚಿತಾರ್ಥಕ್ಕೆ ಟ್ರ್ಯಾಕ್ಟರ್‌ನಲ್ಲಿ ತೆರಳುತ್ತಿದ್ದಾಗ ದುರ್ಘಟನೆ ಸಂಭವಿಸಿದೆ. ಯಮನೂರಪ್ಪ(55) ಮತ್ತು ಅಂಬಮ್ಮ(50) ಸ್ಥಳದಲ್ಲೇ ಅಸುನೀಗಿದವರು. ಶೇಶಪ್ಪ ಬಂಡಿ (40) ಮತ್ತು ಯಮನಪ್ಪ ಸಿಂಧನೂರು (35) ಆಸ್ಪತ್ರೆಯಲ್ಲಿ ಸಾವನ್ನಪ್ಪಿದರು.ಇವರೆಲ್ಲಾ ಕೊಪ್ಪಳ ಜಿಲ್ಲೆ ಕಾರಟಗಿಯ ಇಂದ್ರನಗರ ನಿವಾಸಿಗಳು. ಇಬ್ಬರ ಸ್ಥಿತಿ ಗಂಭೀರವಾಗಿದ್ದು, ಕಾರಟಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲು ಮಾಡಲಾಗಿದೆ. ಸ್ಥಳಕ್ಕೆ ಡಿವೈಎಸ್ಪಿ ಸೇರಿದಂತೆ ಕನಕಗಿರಿ ಪೊಲೀಸ್ ತಂಡ ಭೇಟಿ ನೀಡಿದೆ.
ನಿಶ್ಚಿತಾರ್ಥಕ್ಕೆ ಹೊರಟಿದ್ದವರು ಸೇರಿದ್ದು ಮಸಣಕ್ಕೆ:
ನವಲಿ ಗ್ರಾಮದ ಬಳಿಯ ರೈಸ್ ಟೆಕ್ನಾಲಜಿ ಪಾರ್ಕ್ ಬಳಿ ಈ ದುರ್ಘಟನೆ ನಡೆದಿದ್ದು, ಮೃತರು ಕಾರಟಗಿ ಪಟ್ಟಣದ 18ನೇ ವಾರ್ಡ್ ನ ನಿವಾಸಿಗಳು ಎಂದು ತಿಳಿದುಬಂದಿದೆ. ಕಾರಟಗಿಯಿಂದ ಕನಕಗಿರಿಯ ಸಿರವಾರ ಕಡೆಗೆ ಟ್ರ್ಯಾಕ್ಟರ್ ಹೊರಟಿತ್ತು.
ಇದನ್ನೂ ಓದಿ:
ಎಷ್ಟೇ ಪ್ರಯತ್ನಿಸಿದರೂ ವಿವಾಹ ಭಾಗ್ಯ ಬರುತ್ತಿಲ್ಲವೇ? ಹೀಗೆ ಮಾಡಿ ಕಂಕಣ ಬಲ ಕೂಡಿ ಬರಬಹುದು! ಶೀಘ್ರಮೇವ ಕಲ್ಯಾಣ ಪ್ರಾಪ್ತಿ ರಸ್ತು
ಇದನ್ನೂ ಓದಿ:
Kama kasturi: ಬೇಸಿಗೆ ಕಾಲ ಬರುತ್ತಿದೆ, ಉರಿ ಮೂತ್ರ ಕಾಡಿದರೆ ಇದನ್ನು ಬಳಸಿ ನಿಶ್ಚಿಂತೆಯಿಂದ ಇರಿ!
Published On - 2:40 pm, Fri, 11 March 22