ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ರೈತರಿಂದ ವಿಧಾನಸೌಧ ಚಲೋ ಹಮ್ಮಿಕೊಳ್ಳಲಾಗಿದೆ. ಪಂಜಾಬ್, ಹರಿಯಾಣ, ರಾಜಸ್ಥಾನ, ತಮಿಳುನಾಡು, ಆಂಧ್ರ, ಉತ್ತರಪ್ರದೇಶ ಸೇರಿದಂತೆ ಬೇರೆ ಬೇರೆ ರಾಜ್ಯದಿಂದ ರೈತ ಮುಖಂಡರು ಆಗಮಿಸಿದ್ದು ಬೆಂಗಳೂರಿನ ಕೆಎಸ್ಆರ್ ರೈಲು ನಿಲ್ದಾಣ ಬಳಿ ಪ್ರತಿಭಟನೆ ನಡೆಸಿದ್ದಾರೆ. ಆದರೆ ಪ್ರತಿಭಟನೆ ವೇಳೆ ಪೊಲೀಸರು, ರೈತರ ನಡುವೆ ಮಾತಿನ ಚಕಮಕಿ ನಡೆದಿದ್ದು ಪ್ರತಿಭಟನಾ ನಿರತ ರೈತರನ್ನು ವಶಕ್ಕೆ ಪಡೆಯಲಾಗಿದೆ.
ಇನ್ನು ಮತ್ತೊಂದು ಕಡೆ ಬೆಂಗಳೂರಿನಲ್ಲಿ ರೈತರ ಬೃಹತ್ ಪ್ರತಿಭಟನಾ ರ‍್ಯಾಲಿ ಹಿನ್ನೆಲೆ ಭದ್ರತೆಗೆ ಒಟ್ಟು 695 ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಒಬ್ಬರು ಡಿಸಿಪಿ, ಆರು ಎಸಿಪಿಗಳು, 21 ಇನ್ಸ್ಪೆಕ್ಟರ್ಗಳು, 47 ಸಬ್ ಇನ್ಸ್ಪೆಕ್ಟರ್ಗಳು, 10 KSRP ತುಕಡಿ ನಿಯೋಜನೆ ಮಾಡಲಾಗಿದೆ. ಹಾಗೂ ರೈತರನ್ನು ವಶಕ್ಕೆ ಪಡೆಯಲು 15 BMTC ಬಸ್ ನಿಯೋಜನೆ ಮಾಡಿದ್ದಾರೆ.
ಸರ್ಕಾರ ನಮ್ಮ ಮನವಿಯನ್ನು ಪರಿಗಣಿಸಿಲ್ಲ
ರಾಜ್ಯದ ರೈತರು ಸರ್ಕಾರದ ನಡುವಳಿಕೆಗಳನ್ನು ಗಮನಿಸುತ್ತಿದ್ದಾರೆ. ಎರಡು ತಿಂಗಳಿಂದ ನಾವು ನಮ್ಮ ಸಮಸ್ಯೆಗಳ ಬಗ್ಗೆ ಮನವಿ ನೀಡಿದ್ದೇವೆ. ಆದ್ರೂ ಸರ್ಕಾರ ನಮ್ಮ ಮನವಿಯನ್ನು ಪರಿಗಣಿಸಿಲ್ಲ. ಹಾಗಾಗಿ ನಾವು ಇವತ್ತು ಇಲ್ಲಿ ಸೇರಿದ್ದೇವೆ ನಮ್ಮ ನಡಿಗೆ ವಿಧಾನ ಸೌಧದ ಕಡೆಗೆ ನಡೆಯಲಿದೆ ಎಂದು ರೈತ ಮುಖಂಡ ಕುರುಬೂರು ಶಾಂತಕುಮಾರ್ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಇದನ್ನೂ ಓದಿ: Democratic Azad Party: ಹೊಸ ಪಕ್ಷದ ಹೆಸರು ಘೋಷಿಸಿದ ಗುಲಾಂ ನಬಿ ಆಜಾದ್
ವಿಧಾನಸೌಧಕ್ಕೆ ತೆರಳಿ ನಾವು ನಮ್ಮ ಜನಪ್ರತಿನಿಧಿಗಳಿಗೆ ಹಾಗೂ ಸರ್ಕಾರಕ್ಕೆ ನಮ್ಮ ಮನವಿ ಸಲ್ಲಿಸಲ್ಲಿದ್ದೇವೆ. ರ‍್ಯಾಲಿಗೆ ಪರ್ಮಿಷನ್ ತೆಗೆದುಕೊಂಡಿಲ್ಲ ಎನ್ನುವ ವಿಚಾರಕ್ಕೆ, 20 ದಿನಗಳಿಂದ ನಾವು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಮುಖ್ಯಮಂತ್ರಿಗಳಿಗೆ, ಪೊಲೀಸ್ ಆಯುಕ್ತರಿಗೆ ಮನವಿ ನೀಡಿದ್ದೇವೆ. ನಮ್ಮ ಮನವಿ ಸ್ವೀಕರಿಸಿ ಚರ್ಚಿಸಿ ಪರಿಹಾರ ನೀಡಿದ್ರೆ ನಾವು ಇವತ್ತು ಈ ರೀತಿ ರ‍್ಯಾಲಿ ಮಾಡುವ ಅವಶ್ಯಕತೆ ಇರಲಿಲ್ಲ. ನಾವು ರೈತರು ನಮಗೆ ಎಲ್ಲಿ ಯಾವ ರೀತಿಯಲ್ಲಿ ಪರ್ಮಿಷನ್ ತೆಗೆದುಕೊಳ್ಳಬೇಕು ಅನ್ನೋದು ತಿಳಿದಿಲ್ಲ. ರಾಷ್ಟ್ರಪತಿಗಳಿಗೆ ಅಗೌರವ ನೀಡುವ ಮನಸ್ಥಿತಿ ನಮ್ಮದಲ್ಲ. ನಾವು ರೈತರು ಈ ದೇಶದ ಸಂವಿಧಾನ, ಕಾನೂನುಗಳನ್ನು ಗೌರವಿಸುವವರು. ಇವತ್ತು ಈ ಹೋರಾಟದಲ್ಲಿ ಪಾಲ್ಗೊಳ್ಳುವ ಪ್ರತಿಯೊಬ್ಬ ರೈತನು ಸಾವಿರ ರೈತರಿಗೆ ಸಮಾನ. ಪೊಲೀಸರು ಪ್ರತಿಭಟನೆ ಹತ್ತಿಕ್ಕು ಯತ್ನದಲ್ಲಿ ರೈತರಿಗೆ ಹಾನಿಯಾದ್ರೆ, ತೊಂದರೆಗಳಾದ್ರೆ ಅದರ ಪರಿಣಾಮ ಬೇರೆಯದ್ದೆ ರೀತಿಯಲ್ಲಿ ಎದುರಿಸಬೇಕಾಗುತ್ತದೆ ಎಂದು ರೈತ ಮುಖಂಡ ಕುರುಬೂರು ಶಾಂತಕುಮಾರ್ ಎಚ್ಚರಿಕೆ ನೀಡಿದ್ದಾರೆ.
ರೈತರ ಬೇಡಿಕೆಗಳೇನು?
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 1:07 pm, Mon, 26 September 22