AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆರ್​ಎಸ್​ಎಸ್​ ಭಯೋತ್ಪಾದಕ ಸಂಘಟನೆ: ಎನ್​ಐಎ ದಾಳಿಗೆ ಎಸ್​ಡಿಪಿಐ ನಾಯಕರ ಆಕ್ಷೇಪ

ಆರ್​ಎಸ್​ಎಸ್​ನ ಹಲವು ನಾಯಕರು ಆಯುಧ ಇಟ್ಟುಕೊಂಡಿದ್ದಾರೆ ಎಂದು ಎಸ್​ಡಿಪಿಐ ಪ್ರಧಾನ ಕಾರ್ಯದರ್ಶಿ ಭಾಸ್ಕರ್ ಪ್ರಸಾದ್ ದೂರಿದರು.

ಆರ್​ಎಸ್​ಎಸ್​ ಭಯೋತ್ಪಾದಕ ಸಂಘಟನೆ: ಎನ್​ಐಎ ದಾಳಿಗೆ ಎಸ್​ಡಿಪಿಐ ನಾಯಕರ ಆಕ್ಷೇಪ
ಬೆಂಗಳೂರಿನಲ್ಲಿ ಎಸ್​ಡಿಪಿಐ ನಾಯಕರು ಮಾಧ್ಯಮಗೋಷ್ಠಿ ನಡೆಸಿದರು.
TV9 Web
| Updated By: Digi Tech Desk|

Updated on:Sep 26, 2022 | 2:32 PM

Share

ಬೆಂಗಳೂರು: ಆರ್​ಎಸ್​ಎಸ್ ಒಂದು ಭಯೋತ್ಪಾದಕ ಸಂಘಟನೆ. ಅದಕ್ಕೆ ಇನ್ನೂ ಅಧಿಕೃತವಾಗಿ ಸಂಘಟನೆಯ ಸ್ಥಾನಮಾನವೇ ಸಿಕ್ಕಿಲ್ಲ. ಆರ್​ಎಸ್​ಎಸ್​ನ ಹಲವು ನಾಯಕರು ಆಯುಧ ಇಟ್ಟುಕೊಂಡಿದ್ದಾರೆ ಎಂದು ಎಸ್​ಡಿಪಿಐ ಪ್ರಧಾನ ಕಾರ್ಯದರ್ಶಿ ಭಾಸ್ಕರ್ ಪ್ರಸಾದ್ ದೂರಿದರು. ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್​ಡಿಪಿಐ ಒಂದೇ ಒಂದು ದೇಶ ವಿರೋಧಿ ‌ಕೆಲಸ ಮಾಡಿಲ್ಲ. ಎಸ್​ಡಿಪಿಐ ಮೇಲೆ ದಾಖಲಾಗಿದ್ದ ಶೇ 98ರಷ್ಟು ಪ್ರಕರಣಗಳನ್ನು ನ್ಯಾಯಾಲಯಗಳು ಖುಲಾಸೆಗೊಳಿಸಿವೆ. ಮಲೆಗಾಂವ್ ಸೇರಿದಂತೆ ಹಲವು ಬಾಂಬ್ ಸ್ಫೋಟ ಪ್ರಕರಣಗಳಲ್ಲಿ ಆರ್​ಎಸ್​ಎಸ್​ ಹೆಸರು ಕೇಳಿಬಂದಿದೆ. ಬಿಜೆಪಿ ಅಧಿಕಾರ ದುರ್ಬಳಕೆ ಮಾಡಿಕೊಂಡು ಪ್ರತಿಪಕ್ಷಗಳನ್ನು ಹಣಿಯುತ್ತಿದೆ ಎಂದು ದೂರಿದರು.

ಎಸ್​ಡಿಪಿಐ ಬ್ಯಾನ್ ಮಾಡುವಂತೆ ಕಾಂಗ್ರೆಸ್ ಕೂಡ ಬಿಜೆಪಿಗೆ ಬೆಂಬಲ ನೀಡುತ್ತಿದೆ. ಮನುವಾದಿ ಭಾರತ ನಿರ್ಮಾಣವಾಗುವುದನ್ನು ತಡೆಯಲು ಎಸ್​ಡಿಪಿಐ ಕೆಲಸ ಮಾಡುತ್ತಿದೆ ಎಂದರು. ಆಯುಧಪೂಜೆ ವೇಳೆ ಬಂದೂಕು, ಕತ್ತಿ, ತಲವಾರ್ ಸೇರಿದಂತೆ ಹಲವು ಆಯುಧಗಳನ್ನು ಹಿಡಿದು ಆರ್​ಎಸ್​ಎಸ್​ ಕಾರ್ಯಕರ್ತರು ಪೂಜೆ ಮಾಡಿದ್ದಾರೆ. ಆರ್​ಎಸ್​ಎಸ್​ ಸರಸಂಘಚಾಲಕರಾದ ಮೋಹನ್ ಭಾಗವತ್ ಅವರೇ ಸ್ವತಃ ಆಯುಧಗಳನ್ನು ಹಿಡಿದಿದ್ದರು. ಹೆಣ್ಣುಮಕ್ಕಳಿಗೆ ಆಯುಧ, ಗನ್ ಬಳಕೆ ತರಬೇತಿಯನ್ನೂ ಆರ್​ಎಸ್​ಎಸ್​ ಕೊಡುತ್ತಿದೆ. ಈ ವಿಷಯವನ್ನು ಖುದ್ದು ಮೋಹನ್ ಭಾಗವತ್ ಅವರೇ ಹೇಳಿದ್ದರು. ರಿಜಿಸ್ಟರ್ ಆಗದ ಸಂಘಟನೆಯಾಗಿರುವ ಆರ್​ಎಸ್​ಎಸ್​ಗೆ ಇಷ್ಟೆಲ್ಲಾ ಆಯುಧಗಳು ಎಲ್ಲಿಂದ ಬಂದವು? ಆಯುಧಗಳಿಗೆ ಪರವಾನಗಿ ಕೊಟ್ಟವರು ಯಾರು? ದೇಶದ ಅತಿದೊಡ್ಡ ಭಯೋತ್ಪಾದನಾ ಸಂಘಟನೆ ಆರ್​ಎಸ್​ಎಸ್​ ಎಂದು ದೂರಿದರು. ಎಸ್​ಡಿಪಿಐ ಕಚೇರಿ ಬೀಗ ಒಡೆದು ದಾಳಿ ನಡೆಸಿದ್ದಕ್ಕೆ ಆಕ್ಷೇಪಿಸಿದರು.

ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಇವರ ಮೇಲೆ ಏಕೆ ದಾಳಿ ಮಾಡುತ್ತಿಲ್ಲ? ಎನ್​ಐಎ ಸಂಸ್ಥೆಯ ಕುತ್ತಿಗೆಗೆ ಬೆಲ್ಟ್ ಹಾಕಿ ಕೇಂದ್ರ ಸರ್ಕಾರವು ಸಾಕಿಕೊಂಡಿದೆ. ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಗೃಹ ಸಚಿವರಾಗಿದ್ದಾಗ ಎನ್​ಐಎ ಆರಂಭಿಸಿದ್ದರು. ನಂತರದ ದಿನಗಳಲ್ಲಿ ಎನ್​ಐಎ ದಾರಿ ತಪ್ಪಿತು ಎಂದು ಅವರೇ ಸಾಕಷ್ಟು ಬಾರಿ ಹೇಳಿದ್ದರು.

ಎಸ್​ಡಿಪಿಐ ಮುಖಂಡ ದೇವನೂರು ಪುಟ್ಟನಂಜಯ್ಯ ಮಾತನಾಡಿ, ಬ್ರಾಹ್ಮಣವಾದಿಗಳು, ಮನುವಾದಿಗಳು ಸಂವಿಧಾನವನ್ನು ಕಟ್ಟಿ ಹಾಕಿದ್ದಾರೆ. ಎಸ್​ಡಿಪಿಐ, ಪಿಎಫ್ಐ ಧರ್ಮದ ಬಗ್ಗೆ ಎಲ್ಲಿಯೂ ಮಾತನಾಡಿಲ್ಲ. ಎಸ್​ಡಿಪಿಐ ದೇಶದ ಬಗ್ಗೆ ಧ್ವನಿ ಎತ್ತುತ್ತಿದೆ. ದೇಶ ಇವತ್ತು ಗಂಡಾಂತರದಲ್ಲಿದೆ. ಕೊರೊನಾ ಬಂದಾಗ ಹೆಣಗಳನ್ನು ಯಾರು ಮುಟ್ಟಲಿಲ್ಲ. ಆದರೆ ಎಸ್​ಡಿಪಿಐ ಕಾರ್ಯಕರ್ತರು ಅಂತ್ಯಸಂಸ್ಕಾರ ಮಾಡಿದರು.

ನಾನು ಒಬ್ಬ ಹಿಂದೂ. ನಮ್ಮ ಪಕ್ಷವನ್ನು ಮುಸ್ಲಿಂ ಪಕ್ಷ ಎಂದು ಏಕೆ ಕರೀತೀರಿ? ಎಎಸ್​ಪಿಐ ಹುಟ್ಟುಹಾಕಿದವರು ಮುಸ್ಲಿಮರೇ ಇರಬಹುದು. ಆದರೆ ಇಲ್ಲಿರುವ ನಾವೆಲ್ಲರೂ ಹಿಂದೂಗಳೇ ಆಗಿದ್ದೇವೆ. ನಾನು ನಿವೃತ್ತ ಡಿಡಿಪಿಐ. ಎಸ್​ಡಿಪಿಐನಲ್ಲಿ ಆಂತರಿಕ ಪ್ರಜಾಪ್ರಭುತ್ವ ಇದೆ. ನಾನು ಬೇಕಾದರೆ ರಾಜ್ಯಾಧ್ಯಕ್ಷನೂ ಆಗಬಹುದು. ದೇಶದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಆದರೆ ಮೋದಿ ಒಂದೇ ಒಂದು ಪ್ರೆಸ್​ಮೀಟ್ ಮಾಡಿಲ್ಲ. ಇವರು ಹಿಂದೂ ರಾಷ್ಟ್ರ ಮಾಡುತ್ತಿಲ್ಲ. ಬ್ರಾಹ್ಮಣ್ಯದ ರಾಷ್ಟ್ರ ಮಾಡುತ್ತಿದ್ದಾರೆ. ಹಿಂದೂ ಅಂತ ಯುವಕರನ್ನು ಎತ್ತಿಕಟ್ಟಿ, ಆಯುಧ ಕೊಟ್ಟು ಕಳುಹಿಸುತ್ತಿದ್ದಾರೆ ಎಂದು ದೂರಿದರು.

ಅಡ್ವಾಣಿ ಅವರು ರಥ ಯಾತ್ರೆ ಮಾಡಿ ಸಾವಿರಾರು ಜನರನ್ನು ಕೊಂದರು. ನಮ್ಮ ಮನೆಗಳಲ್ಲಿ ನಮ್ಮ ಧರ್ಮ ಆಚರಿಸೋಣ. ಸಾರ್ವಜನಿಕ ಬದುಕಿನಲ್ಲಿ ಒಂದಾಗಿ ಬಾಳೋಣ. ಎಲ್ಲರ ಮನಸ್ಸು ಒಂದಾಗುವಂತೆ ಮಾಡೋಣ ಎಂದರು.

Published On - 1:44 pm, Mon, 26 September 22

IND vs ENG: ಇಂಡಿಯಾ ವಿರುದ್ಧ ಇಂಗ್ಲೆಂಡ್ ಮೋಸದಾಟ... ಆದ್ರೂ ಗೆಲ್ಲಲಿಲ್ಲ..
IND vs ENG: ಇಂಡಿಯಾ ವಿರುದ್ಧ ಇಂಗ್ಲೆಂಡ್ ಮೋಸದಾಟ... ಆದ್ರೂ ಗೆಲ್ಲಲಿಲ್ಲ..
ಟೀಮ್ ಇಂಡಿಯಾ ಆಟಗಾರರ ಶತಕ ತಪ್ಪಿಸಲು ಮುಂದಾಗಿದ್ದ ಸ್ಟೋಕ್ಸ್
ಟೀಮ್ ಇಂಡಿಯಾ ಆಟಗಾರರ ಶತಕ ತಪ್ಪಿಸಲು ಮುಂದಾಗಿದ್ದ ಸ್ಟೋಕ್ಸ್
ವರಮಹಾಲಕ್ಷ್ಮೀ ಹಬ್ಬ ಆಚರಣೆ ದಿನಾಂಕ ಯಾವಾಗ? ಆಚರಣೆ ಹೇಗೆ , ಫಲಗಳೇನು?
ವರಮಹಾಲಕ್ಷ್ಮೀ ಹಬ್ಬ ಆಚರಣೆ ದಿನಾಂಕ ಯಾವಾಗ? ಆಚರಣೆ ಹೇಗೆ , ಫಲಗಳೇನು?
ಇಂದು ವಿನಾಯಕಿ ಚತುರ್ಥಿ: ದ್ವಾದಶ ರಾಶಿ ಭವಿಷ್ಯ ಹೇಗಿದೆ ನೋಡಿ
ಇಂದು ವಿನಾಯಕಿ ಚತುರ್ಥಿ: ದ್ವಾದಶ ರಾಶಿ ಭವಿಷ್ಯ ಹೇಗಿದೆ ನೋಡಿ
ಪ್ರಥಮ್​ ಮೇಲೆ ಅಟ್ಯಾಕ್: ಅಲ್ಲೇ ಇದ್ದರು ರಕ್ಷಕ್ ಸುಮ್ಮನಿದ್ದಿದ್ದು ಏಕೆ?
ಪ್ರಥಮ್​ ಮೇಲೆ ಅಟ್ಯಾಕ್: ಅಲ್ಲೇ ಇದ್ದರು ರಕ್ಷಕ್ ಸುಮ್ಮನಿದ್ದಿದ್ದು ಏಕೆ?
ರೌಡಿಗಳ ಜೊತೆಗೆ ರಕ್ಷಕ್​ಗೆ ಏನು ಕೆಲಸ: ಪ್ರಥಮ್ ಆಕ್ರೋಶ
ರೌಡಿಗಳ ಜೊತೆಗೆ ರಕ್ಷಕ್​ಗೆ ಏನು ಕೆಲಸ: ಪ್ರಥಮ್ ಆಕ್ರೋಶ
ಚಡ್ಡಿಯಲ್ಲಿ ಬಂದು ಒಣಗಲು ಹಾಕಿದ್ದ ಬಟ್ಟೆಗಳನ್ನು ಕದ್ದು ಓಡಿದ ಭೂಪ
ಚಡ್ಡಿಯಲ್ಲಿ ಬಂದು ಒಣಗಲು ಹಾಕಿದ್ದ ಬಟ್ಟೆಗಳನ್ನು ಕದ್ದು ಓಡಿದ ಭೂಪ
‘ಸು ಫ್ರಮ್ ಸೋ’ ನಿರ್ದೇಶಕರಿಗೆ ತಾಯಿಯಿಂದ ಸಿಕ್ತು ಬೆಸ್ಟ್ ಪ್ರತಿಕ್ರಿಯೆ
‘ಸು ಫ್ರಮ್ ಸೋ’ ನಿರ್ದೇಶಕರಿಗೆ ತಾಯಿಯಿಂದ ಸಿಕ್ತು ಬೆಸ್ಟ್ ಪ್ರತಿಕ್ರಿಯೆ
ಬಿಳಿ ಪಂಚೆ ಧರಿಸಿ ಚೋಳಪುರಂ ದೇವಸ್ಥಾನಕ್ಕೆ ಭೇಟಿ ಕೊಟ್ಟ ಪ್ರಧಾನಿ ಮೋದಿ
ಬಿಳಿ ಪಂಚೆ ಧರಿಸಿ ಚೋಳಪುರಂ ದೇವಸ್ಥಾನಕ್ಕೆ ಭೇಟಿ ಕೊಟ್ಟ ಪ್ರಧಾನಿ ಮೋದಿ
ಮೈಸೂರಿನಲ್ಲೇ ಡ್ರಗ್ಸ್​ ತಯಾರಿಕಾ ಘಟಕ: ಸ್ಫೋಟಕ ಅಂಶ ಬಾಯ್ಬಿಟ್ಟ ಪೆಡ್ಲರ್
ಮೈಸೂರಿನಲ್ಲೇ ಡ್ರಗ್ಸ್​ ತಯಾರಿಕಾ ಘಟಕ: ಸ್ಫೋಟಕ ಅಂಶ ಬಾಯ್ಬಿಟ್ಟ ಪೆಡ್ಲರ್