Village Accountant ಕೆಲಸ ಕೊಡಿಸುವುದಾಗಿ ನಂಬಿಸಿ ವಂಚನೆ; ವಿಧಾನಸೌಧ ಪೊಲೀಸರಿಂದ ಆರೋಪಿ ಅರೆಸ್ಟ್

| Updated By: ಸಾಧು ಶ್ರೀನಾಥ್​

Updated on: Jan 20, 2022 | 11:20 AM

ಆರೋಪಿ ಈರಣ್ಣ ತುಮಕೂರು ಜಿಲ್ಲೆಯ ಕಂಪನಹಳ್ಳಿ ನಿವಾಸಿ. ಕೇವಲ ಉತ್ತರ ಕರ್ನಾಟಕ ಮೂಲದ ಯುವಕರನ್ನೇ ಈರಣ್ಣ ಟಾರ್ಗೆಟ್ ಮಾಡಿ ವಂಚಿಸ್ತಿದ್ದ. ತಾನು ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯಲ್ಲಿ ನೌಕರ ಅಂತ ಪರಿಚಯ ಮಾಡಿಕೊಳ್ತಿದ್ದ ಈರಣ್ಣ ವಿಧಾನಸೌಧದ ಬಳಿಯೇ ಕೂತು ಅಭ್ಯರ್ಥಿಗಳನ್ನ ಖೆಡ್ಡಕ್ಕೆ ಕೆಡವುತ್ತಿದ್ದ.

Village Accountant ಕೆಲಸ ಕೊಡಿಸುವುದಾಗಿ ನಂಬಿಸಿ ವಂಚನೆ; ವಿಧಾನಸೌಧ ಪೊಲೀಸರಿಂದ ಆರೋಪಿ ಅರೆಸ್ಟ್
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: ಗ್ರಾಮ ಲೆಕ್ಕಿಗ (Village Accountant) ಕೆಲಸ ಕೊಡಿಸುವುದಾಗಿ ನಂಬಿಸಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಈರಣ್ಣನನ್ನು ವಿಧಾನಸೌಧ ಪೊಲೀಸರು ಬಂಧಿಸಿದ್ದಾರೆ. ಉತ್ತರ ಕರ್ನಾಟಕ ಮೂಲದ ಯುವಕರನ್ನೇ ಟಾರ್ಗೆಟ್ ಮಾಡಿ ಹಣ ಪೀಕುತ್ತಿದ್ದ ವಂಚನ ಅರೆಸ್ಟ್ ಆಗಿದ್ದಾನೆ.

ಆರೋಪಿ ಈರಣ್ಣ ತುಮಕೂರು ಜಿಲ್ಲೆಯ ಕಂಪನಹಳ್ಳಿ ನಿವಾಸಿ. ಕೇವಲ ಉತ್ತರ ಕರ್ನಾಟಕ ಮೂಲದ ಯುವಕರನ್ನೇ ಈರಣ್ಣ ಟಾರ್ಗೆಟ್ ಮಾಡಿ ವಂಚಿಸ್ತಿದ್ದ. ತಾನು ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯಲ್ಲಿ ನೌಕರ ಅಂತ ಪರಿಚಯ ಮಾಡಿಕೊಳ್ತಿದ್ದ ಈರಣ್ಣ ವಿಧಾನಸೌಧದ ಬಳಿಯೇ ಕೂತು ಅಭ್ಯರ್ಥಿಗಳನ್ನ ಖೆಡ್ಡಕ್ಕೆ ಕೆಡವುತ್ತಿದ್ದ. ಗ್ರಾಮಲೆಕ್ಕಿಗನ ಕೆಲಸ ಕೊಡಿಸ್ತೀನಿ, ಅದಕ್ಕಾಗಿ ಪಿಯುಸಿಯಲ್ಲಿ ಅಧಿಕ ಅಂಕ ಗಳಿಸಿರಬೇಕು. ಹೀಗಾಗಿ ನಕಲಿ ಅಂಕಪಟ್ಟಿ ಸಿದ್ಧಪಡಿಸಿಕೊಳ್ಳಿ ಎಂದು ನಂಬಿಸುತ್ತಿದ್ದ. ಆರೋಪಿ ಈರಣ್ಣನ ಮಾತು ಕೇಳಿ ಅನೇಕರು ನಕಲಿ ಅಂಕಪಟ್ಟಿ ತಯಾರಿಸಿದ್ದರು.

ಅರುಣ್ ಕುಮಾರ್, ಸಿದ್ಧನಗೌಡ ಬಿರಾದರ, ಹುಚ್ಚಯ್ಯ ಸ್ವಾಮಿ, ಶಿವಕುಮಾರ ಗಂಗಾವತಿ, ನಯನ ಬೀಳಗಿ, ಶೋಭಾ ಕಲಕೆರೆ, ಸಂಗಮೇಶ್ ವಸ್ತ್ರದ್ ಎಂಬವರಿಗೆ ಮಾತಿನಲ್ಲೇ ಪುಸಲಾಯಿಸಿ ವಂಚಿಸಿದ್ದ. ಅಷ್ಟೇ ಅಲ್ಲ ಅಭ್ಯರ್ಥಿಗಳಿಗೆ ಫೇಕ್ ಮಾರ್ಕ್ಸ್ ಕಾರ್ಡ್ ಮಾಡಿಸಿ ವಿಲೇಜ್ ಅಕೌಂಟೆಂಟ್ ಹುದ್ದೆಗೂ ಅರ್ಜಿ ಹಾಕಿಸಿದ್ದ. ಶಿವಮೊಗ್ಗ, ಹಾಸನ, ಮಂಡ್ಯ, ಚಿಕ್ಕಮಗಳೂರು ಸೇರಿದಂತೆ ಹಲವು ಕಡೆ ಗ್ರಾಮಲೆಕ್ಕಿಗನ ಪೋಸ್ಟ್ಗೆ ಅರ್ಜಿ ಕೂಡ ಹಾಕಿಸಿದ್ದ. ಬುಟ್ಟಿಗೆ ಬೀಳೋ ಅಭ್ಯರ್ಥಿಗಳಿಂದ ಲಕ್ಷಾಂತರ ರೂಪಾಯಿ ಸುಲಿಗೆ ಮಾಡಿದ್ದ ಈರಣ್ಣ ಸದ್ಯ ವಿಧಾನಸೌಧ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಆರೋಪಿಯನ್ನು ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ.

ಇದನ್ನೂ ಓದಿ: ಸಿಲಿಕಾನ್ ಸಿಟಿಯಲ್ಲೊಬ್ಬ ವಿಚಿತ್ರ ಕಳ್ಳ-ಕಳ್ಳತನ, ಎಲ್ಲ ಬಿಟ್ಟು ಶನಿ ವಿಗ್ರಹವನ್ನೇ ಯಾಕೆ ಹೊತ್ತೊಯ್ದ ಎಂಬುದೇ ನಿಗೂಢ!

Published On - 11:07 am, Thu, 20 January 22