ಸಿಲಿಕಾನ್ ಸಿಟಿಯಲ್ಲೊಬ್ಬ ವಿಚಿತ್ರ ಕಳ್ಳ-ಕಳ್ಳತನ, ಎಲ್ಲ ಬಿಟ್ಟು ಶನಿ ವಿಗ್ರಹವನ್ನೇ ಯಾಕೆ ಹೊತ್ತೊಯ್ದ ಎಂಬುದೇ ನಿಗೂಢ!

ಸಿಲಿಕಾನ್ ಸಿಟಿಯಲ್ಲೊಬ್ಬ ವಿಚಿತ್ರ ಕಳ್ಳ-ಕಳ್ಳತನ, ಎಲ್ಲ ಬಿಟ್ಟು ಶನಿ ವಿಗ್ರಹವನ್ನೇ ಯಾಕೆ ಹೊತ್ತೊಯ್ದ ಎಂಬುದೇ ನಿಗೂಢ!
ಸಿಲಿಕಾನ್ ಸಿಟಿಯಲ್ಲೊಬ್ಬ ವಿಚಿತ್ರ ಕಳ್ಳ-ಕಳ್ಳತನ! ಎಲ್ಲ ಬಿಟ್ಟು ಶನಿ ವಿಗ್ರಹವನ್ನೇ ಹೊತ್ತೊಯ್ದ

ಶನಿ ವಿಗ್ರಹವನ್ನೇ ಕದ್ದಿದ್ದಕ್ಕೆ ಕಾರಣವೇನು ಎಂಬುದು ಗೊತ್ತಾಗಿಲ್ಲ. ಎಲ್ಲ ಬಿಟ್ಟು ಶನಿ ವಿಗ್ರಹವನ್ನೇ ಯಾಕೆ ಹೊತ್ತೊಯ್ದ ಎಂಬುದು ನಿಜಕ್ಕೂ ನಿಗೂಢವಾಗಿದೆ. ಈ ಕುರಿತು ಯಡಿಯೂರು ಜನ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

TV9kannada Web Team

| Edited By: sadhu srinath

Jan 20, 2022 | 11:43 AM


ಬೆಂಗಳೂರು: ಸಿಲಿಕಾನ್ ಸಿಟಿಯಲ್ಲೊಂದು ವಿಚಿತ್ರ ಕಳ್ಳತನ ಪ್ರಕರಣ ನಡೆದಿದೆ. ಬೆಳ್ಳಿ, ಬಂಗಾರ, ವಜ್ರ ವೈಢೂರ್ಯ ಕದಿಯೋದು ಬಿಟ್ಟು ಇಲ್ಲೊಬ್ಬ ಶನಿ ವಿಗ್ರಹವನ್ನೇ ಕಳ್ಳತನ ಮಾಡಿದ್ದಾನೆ ಭೂಪ. ನವ ಗ್ರಹ ಕಟ್ಟೆಯಲ್ಲಿ ಶನಿ ಮಹಾತ್ಮ ವಿಗ್ರಹವನ್ನೇ ಕಳವು ಮಾಡಿದ್ದಾನೆ. ಎಲ್ಲ ವಿಗ್ರಹಗಳನ್ನು ಬಿಟ್ಟ ಭೂಪ ಶನಿ ವಿಗ್ರಹವನ್ನೇ ಹೊತ್ತೊಯ್ದಿರುವುದು ಕುತೂಹಲಕಾರಿಯಾಗಿದೆ. ಶನಿ ವಿಗ್ರಹ ಹೊತ್ತೊಯ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಯಡಿಯೂರು ಕೆರೆ ಮುಂಭಾಗದ ಅಶ್ವತ್ಥ ಕಟ್ಟೆಯಲ್ಲಿ ರಾತ್ರಿ ವೇಳೆ ಈ ಘಟನೆ ನಡೆದಿದೆ. ಬೆಳಗ್ಗೆ ಪೂಜೆಗೆ ಬಂದ ಭಕ್ತರಿಗೆ ಶನಿ ವಿಗ್ರಹ ಕಾಣದಿದ್ದಾಗ ಪ್ರಕರಣ ಬೆಳಕಿಗೆ ಬಂದಿದೆ! ಕಳ್ಳತನ ಮಾಡಿದ ಗಣೇಶನ ವಿಗ್ರಹ ಪೂಜೆ ಮಾಡಿದರೆ ಒಳಿತು ಎಂಬ ಪ್ರತೀತಿ ಇದೆ ಎಂಬುದು ಇಲ್ಲಿ ಗಮನಾರ್ಹ.

ಆದಾಗ್ಯೂ ಶನಿ ವಿಗ್ರಹವನ್ನೇ ಕದ್ದಿದ್ದಕ್ಕೆ ಕಾರಣವೇನು ಎಂಬುದು ಗೊತ್ತಾಗಿಲ್ಲ. ಎಲ್ಲ ಬಿಟ್ಟು ಶನಿ ವಿಗ್ರಹವನ್ನೇ ಯಾಕೆ ಹೊತ್ತೊಯ್ದ ಎಂಬುದು ನಿಜಕ್ಕೂ ನಿಗೂಢವಾಗಿದೆ. ಈ ಕುರಿತು ಸ್ಥಳೀಯರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಶನಿ ವಿಗ್ರಹ ಹೊತ್ತೊಯ್ಯುವಾಗ ಪಾದದ ಸ್ವಲ್ಪ ಭಾಗವು ಕಟ್ಟೆ ಭಾಗದಲ್ಲಿಯೇ ಉಳಿದಿದೆ. ಸಂಪೂರ್ಣ ವಿಗ್ರಹ ಕಳವು ಮಾಡಲು ಬಂದು ಮುಕ್ಕಾದ ಶನಿ ವಿಗ್ರಹವನ್ನು ಹೊತ್ತೊಯ್ದಿದ್ದಾನೆ ಎಂಬುದು ಸ್ಪಷ್ಟವಾಗಿದೆ. ಶನಿ ದೇವನ ವಿಗ್ರಹದ ಪಾದದ ಭಾಗ ಕಟ್ಟೆಯಲ್ಲಿಯೇ ಉಳಿದುಕೊಂಡಿದೆ.

ಸಿಸಿಟಿವಿ ಕಂಡಂತೆ.. ಹೇಗಾಯ್ತು ಈ ವಿಗ್ರಹದ ವಿಚಿತ್ರ ಕಳ್ಳತನ?
ಮೊನ್ನೆ ಸೋಮವಾರ ರಾತ್ರಿ 10 ಗಂಟೆಗೆ ಆಟೋದಲ್ಲಿ ಓರ್ವ ವ್ಯಕ್ತಿ ಆಗಮನವಾಗುತ್ತದೆ. ಆಟೋದಿಂದ ಇಳಿಯುವ ಮುನ್ನ ಸುತ್ತಮುತ್ತಲೂ ಪರಿಶೀಲನೆ ನಡೆಸುತ್ತಾನೆ. ಮುಂದೆ.. ಅಶ್ವತ್ಥ ಕಟ್ಟೆ ದೇಗುಲದ ಒಳಗಿರುವ ನವಗ್ರಹ ಕಟ್ಟೆಯತ್ತ ಸಾಗುತ್ತಾನೆ. ಅಲ್ಲಿ ಮತ್ತೊಮ್ಮೆ ಸುತ್ತಮುತ್ತ ಒಮ್ಮೆ ಕಣ್ಣಾಡಿಸಿ, ಕಳ್ಳತನಕ್ಕೆ ಇಳಿಯುತ್ತಾನೆ. ನೇರವಾಗಿ ಶನಿ ವಿಗ್ರಹ ಮಾತ್ರ ಕಿತ್ತುಕೊಳ್ಳುತ್ತಾನೆ. ಅಲ್ಲಿಂದ ಶನಿ ವಿಗ್ರಹವನ್ನು ತಂದು ಆಟೋದಲ್ಲಿಟ್ಟುಕೊಂಡು ಮುಂದೆ ಸಾಗುತ್ತಾನೆ ಈ ವಿಚಿತ್ರ ಆಸಾಮಿ!

ಸಿಲಿಕಾನ್ ಸಿಟಿ ಬೆಂಗಳೂರಲ್ಲಿದ್ದಾನೆ ಖತರ್ನಾಕ್​ ಖದೀಮ

Also Read:
ಕೊವಿಡ್ ಮಾರ್ಗಸೂಚಿ ಸಡಿಲಗೊಳಿಸುವುದೋ, ಬಿಗಿಯೋ?: ಗೊಂದಲಾಪುರದಲ್ಲಿ ಬೊಮ್ಮಾಯಿ ಸರ್ಕಾರ, ದಾರಿ ಯಾವುದು?

Follow us on

Related Stories

Most Read Stories

Click on your DTH Provider to Add TV9 Kannada