ಬೆಂಗಳೂರು: ನಗರದಲ್ಲಿ ಕಳೆದ ಕೆಲ ದಿನಗಳಿಂದ ವರುಣರಾಯನ ಅಬ್ಬರ ಜೋರಾಗಿದೆ. ಪ್ರತಿ ದಿನ ಸಂಜೆ, ರಾತ್ರಿ ಮಳೆ ಸುರಿಯುತ್ತಿದೆ. ಉರಿ ಬಿಸಿಲಿನಿಂದ ಹೈರಾಣಾಗಿದ್ದ ಸಿಟಿ ಮಂದಿ ಮಳೆಗೆ ಕೂಲ್ ಆಗಿದ್ದಾರೆ. ಆದ್ರೆ ಮೇ 9ರ ಮಂಗಳವಾರ ರಾತ್ರಿ ಸುರಿದ ಮಳೆಯಿಂದಾಗಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ(Kempegowda International Airport Bengaluru) ಸೋರಿಕೆ ಕಂಡು ಬಂದಿದೆ. ವಿಮಾನ ನಿಲ್ದಾಣದ ಹೊಸ ಟರ್ಮಿನಲ್‌ನಲ್ಲಿ ಮೇಲ್ಚಾವಣಿ ಸೋರುತ್ತಿದ್ದು ಸಿಬ್ಬಂದಿ ಮತ್ತು ಪ್ರಯಾಣಿಕರು ಸಮಸ್ಯೆ ಎದುರಿಸುವಂತಾಗಿದೆ. ಹಾಗೂ ವಿಮಾನ ನಿಲ್ದಾಣದಲ್ಲಿ ನಿಂತಿದ್ದ ಮಳೆ ನೀರನ್ನು ಸ್ವಚ್ಛಗೊಳಿಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
5,000 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಟರ್ಮಿನಲ್ 2ರ ಆಗಮನ ದ್ವಾರ ಪ್ರದೇಶದ ಹೊರಗೆ ನೀರಿನ ಸೋರಿಕೆ ಕಂಡುಬಂದಿದೆ. ಇದರಿಂದ ಪ್ರಯಾಣಿಕರು ಮತ್ತು ವಿಮಾನ ನಿಲ್ದಾಣ ನೈರ್ಮಲ್ಯ ಸಿಬ್ಬಂದಿ ಸಂಕಷ್ಟಕ್ಕೆ ಸಿಲುಕಿದ ಘಟನೆ ನಡೆದಿದೆ. 2022ರ ನವೆಂಬರ್ 11ರಂದು ಅನಾವರಣಗೊಂಡ ನಂತರ ಟರ್ಮಿನಲ್ ಈ ವರ್ಷ ಜನವರಿ 15 ರಂದು ಹಾರಾಟದ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಮೂಲಸೌಕರ್ಯ ಸಮಸ್ಯೆಯನ್ನು ಒಪ್ಪಿಕೊಂಡ ಅಧಿಕಾರಿಗಳು ಅದನ್ನು ಸರಿಪಡಿಸುವ ಕಾರ್ಯಗಳು ನಡೆಯುತ್ತಿವೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: Bengaluru Airport: ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಸೇವೆಗೆ ಸಿದ್ದವಾದ ಟರ್ಮಿನಲ್ 2
Looks all fancy but can’t withstand Bangalore rains. #terminal2 #bengalururains #kempegowdainternationalairport pic.twitter.com/P3XNQm4LmH
— Pragna L Krupa (@pragnalkrupa) May 2, 2023
@JM_Scindia @ministry_ca @Pib_MoCA
Dear Civil Aviation minister could you please investigate this and fix the accountability of the Architect/Civil Engineer/Contractors who did the Shabby job of putting Leaky roofs on Terminal-2 of Bangalore Airport ????@PMOIndia @narendramodi https://t.co/v9BY5gQJuM
— IamWatchingYou (@NationPassion) May 4, 2023
ಇನ್ನು ಕಳೆದ 2 ತಿಂಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಟರ್ಮಿನಲ್-2 ಉದ್ಘಾಟನೆ ಮಾಡಿದ್ರು. ಉದ್ಘಾಟನೆಗೊಂಡ ಕೆಲವೇ ತಿಂಗಳಲ್ಲಿ ಮಳೆ ನೀರು ಸೋರಿಕೆಯಾಗುತ್ತಿದೆ. ಕೇವಲ 30 ನಿಮಿಷಗಳ ಕಾಲ ಸುರಿದ ಮಳೆಗೆ ಟರ್ಮಿನಲ್-2 ರಲ್ಲಿ ನೀರು ತುಂಬಿಕೊಂಡಿದೆ. ಹವಾಮಾನ ವರದಿಗಳು ವಿಮಾನ ನಿಲ್ದಾಣದ ಸುತ್ತಮುತ್ತಲಿನ ಪ್ರದೇಶಗಳಲ್ಲಿ 25 ಮಿಮೀ ಮಳೆಯನ್ನು ದಾಖಲಿಸಿದರೆ, ವಿಮಾನ ನಿಲ್ದಾಣವು ರಾತ್ರಿ 7 ರಿಂದ 10 ರವರೆಗೆ ಕನಿಷ್ಠ 9.8 ಮಿಮೀ ಮಳೆಯನ್ನು ದಾಖಲಿಸಿದೆ. ಇನ್ನು ಹೊಸ ಟರ್ಮಿನಲ್‌ನ ಕರ್ಬ್‌ಸೈಡ್‌ನಲ್ಲಿ ಸೋರಿಕೆಯಾಗಿರುವುದನ್ನು ವಿಮಾನ ನಿಲ್ದಾಣದ ನಿರ್ವಾಹಕರಾದ ಬೆಂಗಳೂರು ಇಂಟರ್‌ನ್ಯಾಶನಲ್ ಏರ್‌ಪೋರ್ಟ್ ಲಿಮಿಟೆಡ್ (ಬಿಐಎಎಲ್) ಖಚಿತಪಡಿಸಿದೆ.
ರಾಜ್ಯ ವಿಧಾನಸಭಾ ಚುನಾವಣೆ ಸಂಬಂಧದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ