Bengaluru Airport: ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಸೇವೆಗೆ ಸಿದ್ದವಾದ ಟರ್ಮಿನಲ್ 2

Bengaluru Airport Terminal 2: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿರ್ಮಾಣವಾಗಿರುವ ಟರ್ಮಿನಲ್ 2 ಇದೀಗ ಪ್ರಯಾಣಿಕರ ಸೇವೆಗೆ ಸಿದ್ದವಾಗಿದ್ದು, ಜನವರಿ 15ರಿಂದ ಆರಂಭವಾಗಲಿದೆ.

Bengaluru Airport: ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಸೇವೆಗೆ ಸಿದ್ದವಾದ ಟರ್ಮಿನಲ್ 2
ಬೆಂಗಳೂರು ವಿಮಾನ ನಿಲ್ದಾಣದ ಟರ್ಮಿನಲ್ 2ರ ನೋಟ
Follow us
| Updated By: Rakesh Nayak Manchi

Updated on:Jan 10, 2023 | 3:11 PM

ದೇವನಹಳ್ಳಿ: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Kempegowda International Airport Bengaluru) ನಿರ್ಮಾಣವಾಗಿರುವ ಟರ್ಮಿನಲ್ 2 (Terminal 2) ಪ್ರಯಾಣಿಕರ ಸೇವೆಗೆ ಸಿದ್ದವಾಗಿದ್ದು, ಜನವರಿ 15ರಿಂದ ವಿಮಾನಗಳ ಹಾರಟ ಆರಂಭವಾಗಲಿದೆ. ವಿಶೇಷ ತಂತ್ರಜ್ಞಾನ ಸೇರಿದಂತೆ ಹಲವು ವಿಶೇಷತೆಗಳನ್ನು ಹೊಂದಿರುವ ಟರ್ಮಿನಲ್ 2 ಅನ್ನು ಕಳೆದ ನವಂಬರ್‌ ತಿಂಗಳಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಉದ್ಘಾಟನೆ ಮಾಡಿದ್ದರು. ಸ್ಟಾರ್ ಏರ್ಲೈನ್ ಟಿಕೆಟ್ ಬುಕ್ ಮಾಡಿದ ಪ್ರಯಾಣಿಕರಿಗೆ ಟರ್ಮಿನಲ್ 2 ನಿಂದ ಹೋಗುವ ಅವಕಾಶ ಸಿಗಲಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಮೊದಲ ಹಂತವಾಗಿ ಜನವರಿ 15 ರಿಂದ ಕೇವಲ ಡಿಪಾರ್ಚರ್​ಗೆ ಮಾತ್ರ ಅವಕಾಶ ನೀಡಿದೆ. ಪೂರ್ಣ ಕಾಮಗಾರಿ ಮುಗಿದ ನಂತರ ಉಳಿದ ಏರ್​ಲೈನ್​ಗಳಿಂದ ಆಗಮನ ಮತ್ತು ನಿರ್ಗಮನಕ್ಕೆ ಅವಕಾಶ ನೀಡಲಾಗುತ್ತದೆ.

ನವೆಂಬರ್ ತಿಂಗಳಲ್ಲಿ ಪ್ರಧಾನಿ ಮೋದಿಯವರು ಉದ್ಘಾಟನೆ ಮಾಡಿದ್ದರೂ ಸಾರ್ವಜನಿಕರ ವೀಕ್ಷಣೆಗೆ ಕೆಂಪೇಗೌಡ ವಿಮಾನ ನಿಲ್ದಾಣ ಆಡಳಿತ ಮಂಡಳಿ ನಿರ್ಬಂಧ ವಿಧಿಸಿತ್ತು. ಅದರಂತೆ ಹೊಸ ಟರ್ಮಿನಲ್ ವೀಕ್ಷಣೆಗೆ ಪ್ರಯಾಣಿಕರು ತುದಿಗಾಲಲ್ಲಿ ನಿಂತಿದ್ದಾರೆ. ಇದೀಗ ಇದೇ ತಿಂಗಳ 15ರ ನಂತರ ಟರ್ಮಿನಲ್ ವೀಕ್ಷಣೆಗೆ ಸಾರ್ವಜನಿಕರಿಗೆ ಅವಕಾಶ ಸಿಗಲಿದೆ.

ಇದನ್ನೂ ಓದಿ: Bengaluru airport ಕಣ್ಮನ ಸೆಳೆಯುವ ಬೆಂಗಳೂರು ವಿಮಾನ ನಿಲ್ದಾಣದ ಟರ್ಮಿನಲ್ 2; ಹೇಗಿದೆ ವಿನ್ಯಾಸ?

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ (KIA) ಬೃಹತ್ ವಿಸ್ತರಣೆಯ ಅಂಗವಾಗಿ ಹೊಸದಾಗಿ ನಿರ್ಮಾಣವಾಗಿರುವ ಟರ್ಮಿನಲ್ 2 ಅನ್ನು ಸುಮಾರು 13,000 ಕೋಟಿ ರೂಪಾಯಿ ಹೂಡಿಕೆಯಲ್ಲಿ ನಿರ್ಮಾಣ ಮಾಡಲಾಗಿದೆ. ಟರ್ಮಿನಲ್ 2 ರ 1ನೇ ಹಂತವನ್ನು 5,000 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಇದು 2,55,000 ಚದರ ಮೀಟರ್‌ ವ್ಯಾಪ್ತಿಯಲ್ಲಿದೆ. ಹಂತ 2 ಸಿದ್ಧವಾದ ನಂತರ, , ಟರ್ಮಿನಲ್ 20 ಮಿಲಿಯನ್ ಗಿಂತಲೂ ಹೆಚ್ಚು ವಿಮಾನ ಪ್ರಯಾಣಿಕರನ್ನು ನಿಭಾಯಿಸಲಿದೆ.

ಟರ್ಮಿನಲ್ 2 ಗಾಗಿ ದೀರ್ಘಾವಧಿಯ ಬೇಡಿಕೆಯ ಯೋಜನೆಯ 2018 ರಲ್ಲಿ ಪ್ರಾರಂಭವಾಯಿತು. ವಿವಿಧ ಜಾತಿಯ ಸಸ್ಯಗಳು ಮತ್ತು ಮರಗಳಿಂದ ಸುತ್ತುವರಿದಿರುವ ಈ ಟರ್ಮಿನಲ್ ನ್ನು ” terminal in the garden ” ಎಂದು ಕರೆಯಲಾಗುತ್ತಿದೆ. ಈ ಟರ್ಮಿನಲ್ ನಲ್ಲಿ 180 ಅಪರೂಪದ ಮತ್ತು ಅಳಿವಿನಂಚಿನಲ್ಲಿರುವ ಜಾತಿಯ ಸಸ್ಯಗಳಿವೆ. 3,600 ಕ್ಕೂ ಹೆಚ್ಚು ಸಸ್ಯ ಪ್ರಭೇದಗಳು, ಬಿದಿರು, 620 ಸ್ಥಳೀಯ ಸಸ್ಯಗಳು, 7,700 ಕಸಿ ಮರಗಳು, 96 ಕಮಲ ಮತ್ತು ಇನ್ನೂ ಹೆಚ್ಚಿನ ಸಸ್ಯಗಳಿವೆ.

ಇದನ್ನೂ ಓದಿ: BLR Metaport: ಬೆಂಗಳೂರು ವಿಮಾನ ನಿಲ್ದಾಣದ ಟರ್ಮಿನಲ್ 2 ಮೆಟಾವರ್ಸ್​​ನಲ್ಲಿ ಲಭ್ಯ; ಇದು ವಿಶ್ವದಲ್ಲೇ ಮೊದಲು

ಸ್ವಯಂಚಾಲಿತ ಬಯೋಮೆಟ್ರಿಕ್ ಗೇಟ್‌ಗಳು, ಸೆಲ್ಫ್-ಬ್ಯಾಗೇಜ್-ಡ್ರಾಪ್ ಕೌಂಟರ್‌ಗಳು, ಫುಲ್ ಬಾಡಿ ಸ್ಕ್ಯಾನರ್‌ಗಳು ಮತ್ತು ಆಟೋಮ್ಯಾಟಿಕ್ ಟ್ರೇ ಮರುಪಡೆಯುವಿಕೆ ವ್ಯವಸ್ಥೆಯೊಂದಿಗೆ ಬಳಕೆದಾರರ ಅನುಕೂಲವಿದ್ದು, ಟರ್ಮಿನಲ್ ಪ್ರವೇಶ ಸ್ಥಳದಿಂದ ಪ್ರಯಾಣಿಕರು ವಿಮಾನವನ್ನು ಹತ್ತುವ ಹಂತದವರೆಗೆ ತಾಂತ್ರಿಕವಾಗಿ ಸಜ್ಜುಗೊಂಡಿದೆ.

ಟರ್ಮಿನಲ್ 2ನಲ್ಲಿರುವ ಕಲೆ ಮತ್ತು ಅಲಂಕಾರದ ಅಂಶಗಳು ಮತ್ತು ಕರ್ನಾಟಕದ ಶ್ರೀಮಂತ ಪರಂಪರೆ ಮತ್ತು ಸಂಸ್ಕೃತಿ ಮತ್ತು ಭರತನಾಟ್ಯಶಾಸ್ತ್ರದ ನವರಸ ಅಥವಾ ಒಂಬತ್ತು ಭಾವನೆಗಳ ವಿಷಯಗಳ ಮೇಲೆ ಕ್ಯುರೇಟ್ ಮಾಡಿದ 60 ಕಲಾಕೃತಿಗಳೊಂದಿಗೆ ಕಣ್ಮನ ಸೆಳೆಯುತ್ತದೆ. ಬಿದಿರಿನ ಒಳಾಂಗಣಗಳು ಮತ್ತು ಸೊಂಪಾದ ಉದ್ಯಾನಗಳು ಅದರ ಸುಸ್ಥಿರತೆಯ ಸ್ತಂಭದ ಅಗತ್ಯ ಅಂಶಗಳನ್ನು ರೂಪಿಸುತ್ತವೆ. ಇಲ್ಲಿರುವ ಬಿದಿರುಗಳನ್ನು ಬೆಂಕಿ-ನಿರೋಧಕ ಮತ್ತು ದೀರ್ಘಕಾಲ ಬಾಳಿಕೆ ಬರುವಂತೆ ವಿನ್ಯಾಸಗೊಳಿಸಲಾಗಿದೆ. ಸೋಲಾರ್ ಪ್ಯಾನೆಲ್ ಮತ್ತು ಡೇ ಲೈಟ್ ಹಾರ್ವೆಸ್ಟಿಂಗ್ 24.9 ರಷ್ಟು ವಿದ್ಯುತ್ ಉಳಿಸುತ್ತದೆ. ಮಳೆನೀರು ಕೊಯ್ಲು, ವಿಮಾನ ನಿಲ್ದಾಣದ ಅವಶ್ಯಕತೆಗಳನ್ನು ಪೂರೈಸಲು 413 ಮಿಲಿಯನ್ ಲೀಟರ್ ನೀರನ್ನು ಹೊಂದಿರುವ ಆರು ಪ್ರಮುಖ ಮಳೆನೀರು-ಆಧಾರಿತ ಕೊಳಗಳು ಮತ್ತು ಮಾಲಿನ್ಯಕಾರಕಗಳನ್ನು ನೈಸರ್ಗಿಕವಾಗಿ ಸ್ವಚ್ಛಗೊಳಿಸುವ ವಿವಿಧೋದ್ದೇಶ ಕೆರೆಗಳು ಟರ್ಮಿನಲ್‌ನ ಸುಸ್ಥಿರತೆಯ ಯೋಜನೆಯ ಅವಿಭಾಜ್ಯ ಅಂಗಗಳಾಗಿವೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:11 pm, Tue, 10 January 23

ರಾಜೀನಾಮೆ ನೀಡದಂತೆ ಸಿಎಂ ಸಿದ್ದರಾಮಯ್ಯಗೆ ರಕ್ತದಲ್ಲಿ ಪತ್ರ ಬರೆದ ಅಭಿಮಾನಿ
ರಾಜೀನಾಮೆ ನೀಡದಂತೆ ಸಿಎಂ ಸಿದ್ದರಾಮಯ್ಯಗೆ ರಕ್ತದಲ್ಲಿ ಪತ್ರ ಬರೆದ ಅಭಿಮಾನಿ
ವಿಡಿಯೋ: ವೀಕೆಂಡ್​ನಲ್ಲಿ ಅಭಿಮಾನಿಗಳ ಭೇಟಿ ಮಾಡಿದ ಧ್ರುವ ಸರ್ಜಾ
ವಿಡಿಯೋ: ವೀಕೆಂಡ್​ನಲ್ಲಿ ಅಭಿಮಾನಿಗಳ ಭೇಟಿ ಮಾಡಿದ ಧ್ರುವ ಸರ್ಜಾ
ರೀಲ್ಸ್​ ಹುಚ್ಚು, 10ಮೀ. ಎತ್ತರದ ಸೈನ್‌ಬೋರ್ಡ್ ಮೇಲೆ ಯುವಕನ ಸಾಹಸ
ರೀಲ್ಸ್​ ಹುಚ್ಚು, 10ಮೀ. ಎತ್ತರದ ಸೈನ್‌ಬೋರ್ಡ್ ಮೇಲೆ ಯುವಕನ ಸಾಹಸ
ಬಿಜೆಪಿಯಲ್ಲಿ ತೀವ್ರಗೊಂಡ ವಿಜಯೇಂದ್ರ ಹಠಾವೋ ಹೋರಾಟ
ಬಿಜೆಪಿಯಲ್ಲಿ ತೀವ್ರಗೊಂಡ ವಿಜಯೇಂದ್ರ ಹಠಾವೋ ಹೋರಾಟ
CPL 2024: ಫಾಫ್ ಡುಪ್ಲೆಸಿಸ್ ಸ್ಪೋಟಕ ಬ್ಯಾಟಿಂಗ್: ಆದರೂ ಸೋತರು..!
CPL 2024: ಫಾಫ್ ಡುಪ್ಲೆಸಿಸ್ ಸ್ಪೋಟಕ ಬ್ಯಾಟಿಂಗ್: ಆದರೂ ಸೋತರು..!
ನೇರ ಪ್ರಸಾರದಲ್ಲಿ ಅಳುತ್ತಾ ಸುದ್ದಿ ಓದಿದ​​ ಆ್ಯಂಕರ್​; ಕಾರಣ ಏನು ಗೊತ್ತಾ?
ನೇರ ಪ್ರಸಾರದಲ್ಲಿ ಅಳುತ್ತಾ ಸುದ್ದಿ ಓದಿದ​​ ಆ್ಯಂಕರ್​; ಕಾರಣ ಏನು ಗೊತ್ತಾ?
ಮಂಗಳೂರಿನ ಕಾಲೇಜಿನಲ್ಲಿ ಓಣಂ ಸಂಭ್ರಮ; ಕುಣಿದು ಕುಪ್ಪಳಿಸಿದ ವಿದ್ಯಾರ್ಥಿಗಳು
ಮಂಗಳೂರಿನ ಕಾಲೇಜಿನಲ್ಲಿ ಓಣಂ ಸಂಭ್ರಮ; ಕುಣಿದು ಕುಪ್ಪಳಿಸಿದ ವಿದ್ಯಾರ್ಥಿಗಳು
 ‘ಸತ್ಯ ಹೊರಕ್ಕೆ ಬರುತ್ತದೆ’; ಬಿಗ್​ ಬಾಸ್​ನಲ್ಲಿ ಹೊರ ಬರುತ್ತಾ ನಿಜ ವಿಚಾರ?
 ‘ಸತ್ಯ ಹೊರಕ್ಕೆ ಬರುತ್ತದೆ’; ಬಿಗ್​ ಬಾಸ್​ನಲ್ಲಿ ಹೊರ ಬರುತ್ತಾ ನಿಜ ವಿಚಾರ?
ಇಲ್ಲಿ ಪರ್ಸಂಟೇಜ್ ಲೆಕ್ಕ ಹಾಕ್ಬಾರ್ದು; ಶಿವಣ್ಣ ಹೀಗೆ ಹೇಳಿದ್ದೇಕೆ?
ಇಲ್ಲಿ ಪರ್ಸಂಟೇಜ್ ಲೆಕ್ಕ ಹಾಕ್ಬಾರ್ದು; ಶಿವಣ್ಣ ಹೀಗೆ ಹೇಳಿದ್ದೇಕೆ?
ಸೆಪ್ಟೆಂಬರ್​​ 30 ರಿಂದ ಅಕ್ಟೋಬರ್​ 6ರವರೆಗಿನ ವಾರ ಭವಿಷ್ಯ ತಿಳಿಯಿರಿ
ಸೆಪ್ಟೆಂಬರ್​​ 30 ರಿಂದ ಅಕ್ಟೋಬರ್​ 6ರವರೆಗಿನ ವಾರ ಭವಿಷ್ಯ ತಿಳಿಯಿರಿ