AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

BLR Metaport: ಬೆಂಗಳೂರು ವಿಮಾನ ನಿಲ್ದಾಣದ ಟರ್ಮಿನಲ್ 2 ಮೆಟಾವರ್ಸ್​​ನಲ್ಲಿ ಲಭ್ಯ; ಇದು ವಿಶ್ವದಲ್ಲೇ ಮೊದಲು

ಅಮೆಜಾನ್ ವೆಬ್ ಸರ್ವೀಸಸ್ ಹಾಗೂ ಪಾಲಿಗಾನ್ ಬ್ಲಾಕ್​​ಚೈನ್​ ಸಹಯೋಗದೊಂದಿಗೆ ‘ಬಿಎಲ್​ಆರ್ ಮೆಟಾಪೋರ್ಟ್’ ನಿರ್ಮಿಸಲಾಗಿದೆ. ಇದು ಹೊಸದಾಗಿ ಆರಂಭವಾಗಿರುವ ಟರ್ಮಿನಲ್ 2ರ 3ಡಿ (3D) ಹಾಗೂ ತಾಜಾ ವರ್ಚುವಲ್ ಅನುಭವ ನೀಡುತ್ತದೆ.

BLR Metaport: ಬೆಂಗಳೂರು ವಿಮಾನ ನಿಲ್ದಾಣದ ಟರ್ಮಿನಲ್ 2 ಮೆಟಾವರ್ಸ್​​ನಲ್ಲಿ ಲಭ್ಯ; ಇದು ವಿಶ್ವದಲ್ಲೇ ಮೊದಲು
ಬೆಂಗಳೂರು ವಿಮಾನ ನಿಲ್ದಾಣದ ಟರ್ಮಿನಲ್ 2ರ ನೋಟ
TV9 Web
| Updated By: Ganapathi Sharma|

Updated on:Dec 14, 2022 | 3:52 PM

Share

ಬೆಂಗಳೂರು: ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (BIAL) ಇತ್ತೀಚೆಗೆ ಉದ್ಘಾಟನೆಗೊಂಡಿರುವ ‘ಟರ್ಮಿನಲ್ 2’ ಅನ್ನು ಇನ್ನು ಮೆಟಾವರ್ಸ್​​ (Metaverse) ಮೂಲಕ ನೋಡಬಹುದು, ವರ್ಚುವಲ್ ಆಗಿ ಒಳ ಪ್ರವೇಶಿಸಿದ ಅನುಭವ ಪಡೆಯಬಹುದು! ಮೊದಲ ಹಂತದ ‘ಬಿಎಲ್​ಆರ್ ಮೆಟಾಪೋರ್ಟ್ (BLR Metaport) ಯೋಜನೆಗೆ ಚಾಲನೆ ನೀಡಿರುವುದಾಗಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (BLR Airport) ಆಡಳಿತ ತಿಳಿಸಿದೆ. ಇದರೊಂದಿಗೆ ಬೆಂಗಳೂರು ವಿಮಾನ ನಿಲ್ದಾಣವು ವಿಶ್ವದಲ್ಲೇ ‘ಮೆಟಾವರ್ಸ್’​ನಲ್ಲಿ ಕಾಣಿಸಿಕೊಂಡ ಮೊದಲ ವಿಮಾನ ನಿಲ್ದಾಣವಾಗಿ ಗುರುತಿಸಿಕೊಂಡಿದೆ ಎಂದು ಪ್ರಕಟಣೆ ತಿಳಿಸಿದೆ.

ಜನರಿಗೆ ಸಿಗಲಿದೆ 3ಡಿ ಅನುಭವ

ಅಮೆಜಾನ್ ವೆಬ್ ಸರ್ವೀಸಸ್ (AWS) ಹಾಗೂ ಪಾಲಿಗಾನ್ ಬ್ಲಾಕ್​​ಚೈನ್​ ಸಹಯೋಗದೊಂದಿಗೆ ‘ಬಿಎಲ್​ಆರ್ ಮೆಟಾಪೋರ್ಟ್’ ನಿರ್ಮಿಸಲಾಗಿದೆ. ಇದು ಹೊಸದಾಗಿ ಆರಂಭವಾಗಿರುವ ಟರ್ಮಿನಲ್ 2ರ 3ಡಿ (3D) ಹಾಗೂ ತಾಜಾ ವರ್ಚುವಲ್ ಅನುಭವ ನೀಡುತ್ತದೆ.

ಆಸಕ್ತ ಪ್ರಯಾಣಿಕರು ಹಾಗೂ ಸಾರ್ವಜನಿಕರು www.blrmetaport.com ವೆಬ್​ಸೈಟ್​ಗೆ ಲಾಗಿನ್ ಆಗಿ ತಮ್ಮ ಸ್ಮಾರ್ಟ್​ಫೋನ್ ಅಥವಾ ಇತರ ಡಿವೈಸ್​ಗಳ ಮೂಲಕ ‘ಟರ್ಮಿನಲ್ 2’ ವರ್ಚುವಲ್ ಅನುಭವ ಪಡೆಯಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: Bengaluru airport ಕಣ್ಮನ ಸೆಳೆಯುವ ಬೆಂಗಳೂರು ವಿಮಾನ ನಿಲ್ದಾಣದ ಟರ್ಮಿನಲ್ 2; ಹೇಗಿದೆ ವಿನ್ಯಾಸ?

‘ಬಿಎಲ್​ಆರ್ ಮೆಟಾಪೋರ್ಟ್’ ಎಂಬುದು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಅಮೆಜಾನ್ ವೆಬ್​ ಸರ್ವೀಸಸ್ ಮತ್ತು ಇಂಟೆಲ್ ಜಂಟಿಯಾಗಿ ಘೋಷಿಸಿದ್ದ ಜಂಟಿ ಅನ್ವೇಷಣಾ ಕೇಂದ್ರದ (JIC) ಫಲಶ್ರುತಿಯಾಗಿದೆ. ಜಂಟಿ ಅನ್ವೇಷಣಾ ಕೇಂದ್ರವು ವಿಮಾನ ನಿಲ್ದಾಣದ ಅಭಿವೃದ್ಧಿ ಮತ್ತು ಡಿಜಿಟಲ್ ಸೊಲ್ಯೂಷನ್ಸ್​ ಆವಿಷ್ಕರಿಸುವ ನಿಟ್ಟಿನಲ್ಲಿ ಕಾರ್ಯಾಚರಿಸುತ್ತಿದೆ.

ವಿವಿಧ ಸೇವೆಗಳೂ ಲಭ್ಯ

‘ಬಿಎಲ್​ಆರ್ ಮೆಟಾಪೋರ್ಟ್’ ಮೂಲಕ ವಿಮಾನ ನಿಲ್ದಾಣದ ಟರ್ಮಿನಲ್​ 2ರ ವರ್ಚುವಲ್ ಅನುಭವ ಮಾತ್ರವಲ್ಲದೆ ಇತರ ಹಲವು ಸೇವೆಗಳೂ ಲಭ್ಯವಿವೆ. ಈ ವ್ಯವಸ್ಥೆಯ ಮೂಲಕ ಪ್ರಯಾಣಿಕರು ವಿಮಾನ ನಿಲ್ದಾಣದ ಸಿಬ್ಬಂದಿ ಜತೆ ಸಂವಹನ ನಡೆಸಬಹುದು. ವಿಮಾನಗಳ ವೇಳಾಪಟ್ಟಿ ಪರಿಶೀಲನೆ, ಶಾಪಿಂಗ್, ಇತರ ಪ್ರಯಾಣಿಕರ ಜತೆ ಸಂಪರ್ಕ ಸಾಧಿಸಲೂ ಸಾಧ್ಯವಿದೆ.

ಇದನ್ನೂ ಓದಿ: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2 ಉದ್ಘಾಟನೆಗೊಳಿಸಿದ ಪ್ರಧಾನಿ ಮೋದಿ

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೊಸದಾಗಿ ನಿರ್ಮಾಣವಾಗಿರುವ ಟರ್ಮಿನಲ್ 2 ಅನ್ನು ಪ್ರಧಾನಿ ನರೇಂದ್ರ ಮೋದಿ ನವೆಂಬರ್ 11ರಂದು ಉದ್ಘಾಟಿಸಿದ್ದರು. ಸುಮಾರು 13,000 ಕೋಟಿ ರೂಪಾಯಿ ವೆಚ್ಚದಲ್ಲಿ ಸಿದ್ಧವಾಗಿರುವ ಈ ಟರ್ಮಿನಲ್ ಉದ್ಯಾನ ನಗರಿಯ ಖ್ಯಾತಿಗೆ ಮತ್ತೊಂದು ಗರಿಯಾಗಿದೆ. ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಹೊಸದಾಗಿ ನಿರ್ಮಾಣವಾಗಿರುವ ಟರ್ಮಿನಲ್ 2ರಲ್ಲಿ ಎರಡನೇ ರನ್‌ ವೇ, ಮಲ್ಟಿಮೋಡಲ್ ಸಾರಿಗೆ ಕೇಂದ್ರ, ಪ್ರವೇಶ ರಸ್ತೆಗಳ ವಿಸ್ತರಣೆ ಮತ್ತು ಆಂತರಿಕ ರಸ್ತೆ ಮೂಲಸೌಕರ್ಯಗಳು ಪ್ರಯಾಣಿಕರಿಗೆ ಲಭ್ಯವಾಗಲಿವೆ. ಈ ಟರ್ಮಿನಲ್ ಅನ್ನು ಗಾರ್ಡನ್ ಟರ್ಮಿನಲ್ ಎಂದೂ ಕರೆಯಲಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:41 pm, Wed, 14 December 22

ಸಾಂಪ್ರದಾಯಿಕ ಡ್ರೆಸ್ ತೊಟ್ಟು ಓಣಂ ಹಬ್ಬದೂಟ ಮಾಡಿದ ಮುದ್ದು ನಾಯಿ
ಸಾಂಪ್ರದಾಯಿಕ ಡ್ರೆಸ್ ತೊಟ್ಟು ಓಣಂ ಹಬ್ಬದೂಟ ಮಾಡಿದ ಮುದ್ದು ನಾಯಿ
ಗಂಡನನ್ನು ನಿಮಗೆ ಒಪ್ಪಿಸಿದ್ದೇನೆ, 4 ತಿಂಗಳು ಲಾಕ್ ಮಾಡಿಕೊಳ್ಳಿ: ಹರ್ಷಿಕಾ
ಗಂಡನನ್ನು ನಿಮಗೆ ಒಪ್ಪಿಸಿದ್ದೇನೆ, 4 ತಿಂಗಳು ಲಾಕ್ ಮಾಡಿಕೊಳ್ಳಿ: ಹರ್ಷಿಕಾ
ಇಂದೋರ್​​ನ ಸರ್ಕಾರಿ ಆಸ್ಪತ್ರೆಯ ಐಸಿಯುನಲ್ಲಿ ಇಲಿ ಕಚ್ಚಿ 2 ಶಿಶುಗಳು ಸಾವು
ಇಂದೋರ್​​ನ ಸರ್ಕಾರಿ ಆಸ್ಪತ್ರೆಯ ಐಸಿಯುನಲ್ಲಿ ಇಲಿ ಕಚ್ಚಿ 2 ಶಿಶುಗಳು ಸಾವು
ದರ್ಶನ್ ಆ ರೀತಿ ವ್ಯಕ್ತಿ ಅಲ್ಲ, ಯಾಕೆ ಹೀಗಾಯ್ತೋ ಗೊತ್ತಿಲ್ಲ: ಎಂಡಿ ಶ್ರೀಧರ್
ದರ್ಶನ್ ಆ ರೀತಿ ವ್ಯಕ್ತಿ ಅಲ್ಲ, ಯಾಕೆ ಹೀಗಾಯ್ತೋ ಗೊತ್ತಿಲ್ಲ: ಎಂಡಿ ಶ್ರೀಧರ್
ಗಣೇಶ ವಿಸರ್ಜನೆ ವೇಳೆ DJ ಬಂದ್ ಮಾಡಿಸಿದ ಪೊಲೀಸರು, ಗ್ರಾಮಸ್ಥರು ಮಾಡಿದ್ದೇನು
ಗಣೇಶ ವಿಸರ್ಜನೆ ವೇಳೆ DJ ಬಂದ್ ಮಾಡಿಸಿದ ಪೊಲೀಸರು, ಗ್ರಾಮಸ್ಥರು ಮಾಡಿದ್ದೇನು
ಅಭಿಮಾನ್ ಸ್ಟುಡಿಯೋ ಜಾಗ ಮಾರಾಟ, ರಾಜಕಾರಣಿಗೂ ಲಾಭ: ಗೀತಾ ಬಾಲಿ
ಅಭಿಮಾನ್ ಸ್ಟುಡಿಯೋ ಜಾಗ ಮಾರಾಟ, ರಾಜಕಾರಣಿಗೂ ಲಾಭ: ಗೀತಾ ಬಾಲಿ
ಅಭಿಮಾನ್ ಸ್ಟುಡಿಯೋ 10 ಎಕರೆ ಮಾರಾಟ ಆಗಿದ್ದರಲ್ಲಿ ಸರ್ಕಾರದ್ದೇ ಕೈವಾಡ: ಗೀತಾ
ಅಭಿಮಾನ್ ಸ್ಟುಡಿಯೋ 10 ಎಕರೆ ಮಾರಾಟ ಆಗಿದ್ದರಲ್ಲಿ ಸರ್ಕಾರದ್ದೇ ಕೈವಾಡ: ಗೀತಾ
EVM ಬದಲಿಗೆ ಬ್ಯಾಲೆಟ್ ಪೇಪರ್: ಚುನಾವಣಾ ಆಯುಕ್ತರು ಹೇಳಿದ್ದೇನು?
EVM ಬದಲಿಗೆ ಬ್ಯಾಲೆಟ್ ಪೇಪರ್: ಚುನಾವಣಾ ಆಯುಕ್ತರು ಹೇಳಿದ್ದೇನು?
ರಾಜಕೀಯ ನಿವೃತ್ತಿ ಬಗ್ಗೆ ವಿ ಸೋಮಣ್ಣ ಮತ್ತೆ ಸ್ಪಷ್ಟನೆ: ಹೇಳಿದ್ದೇನು ನೋಡಿ
ರಾಜಕೀಯ ನಿವೃತ್ತಿ ಬಗ್ಗೆ ವಿ ಸೋಮಣ್ಣ ಮತ್ತೆ ಸ್ಪಷ್ಟನೆ: ಹೇಳಿದ್ದೇನು ನೋಡಿ
ಉಚಿತವಾಗಿ ಊಟ ವಿತರಿಸುವಾಗ ದುಡ್ಡು ಕೊಟ್ಟು ಊಟ ಪಡೆದ ಸ್ವಾಭಿಮಾನಿ ಬಾಲಕ
ಉಚಿತವಾಗಿ ಊಟ ವಿತರಿಸುವಾಗ ದುಡ್ಡು ಕೊಟ್ಟು ಊಟ ಪಡೆದ ಸ್ವಾಭಿಮಾನಿ ಬಾಲಕ