Sign In

By signing in or creating an account, you agree with Associated Broadcasting Company's Terms & Conditions and Privacy Policy.

Bengaluru airport ಕಣ್ಮನ ಸೆಳೆಯುವ ಬೆಂಗಳೂರು ವಿಮಾನ ನಿಲ್ದಾಣದ ಟರ್ಮಿನಲ್ 2; ಹೇಗಿದೆ ವಿನ್ಯಾಸ?

ಪ್ರಮುಖ ಪ್ರಯಾಣಿಕರ ಚೆಕ್-ಇನ್ ಅವಶ್ಯಕತೆಗಳೊಂದಿಗೆ ಟರ್ಮಿನಲ್ 2 ಸಿದ್ಧವಾಗಿದ್ದರೂ, ಅದರ ಪ್ರವೇಶ ರಸ್ತೆ ಇನ್ನೂ ನಿರ್ಮಾಣ ಹಂತದಲ್ಲಿದೆ. 10 ಪಥಗಳ ಪ್ರವೇಶ ರಸ್ತೆ ಶೀಘ್ರದಲ್ಲೇ ಕಾರ್ಯಾಚರಣೆಗೆ ಸಿದ್ಧವಾಗಲಿದೆ ಎಂದು ಮಾರಾರ್ ಹೇಳಿದರು.

Bengaluru airport ಕಣ್ಮನ ಸೆಳೆಯುವ ಬೆಂಗಳೂರು ವಿಮಾನ ನಿಲ್ದಾಣದ ಟರ್ಮಿನಲ್ 2; ಹೇಗಿದೆ ವಿನ್ಯಾಸ?
ಬೆಂಗಳೂರು ವಿಮಾನ ನಿಲ್ದಾಣದ ಟರ್ಮಿನಲ್ 2
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Nov 14, 2022 | 4:08 PM

ಪ್ರಧಾನಿ ನರೇಂದ್ರ ಮೋದಿ(Narendra Modi) ಅವರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ(Kempegowda International Airport) ಟರ್ಮಿನಲ್ 2 ಅನ್ನು ಉದ್ಘಾಟಿಸಿದ ಒಂದು ದಿನದ ನಂತರ  ಮಾತನಾಡಿದ ಬೆಂಗಳೂರು ಇಂಟರ್ನ್ಯಾಷನಲ್ ಏರ್ಪೋರ್ಟ್ ಲಿಮಿಟೆಡ್ ನ ಮುಖ್ಯ ಕಾರ್ಯನಿರ್ವಾಹಕ ಮತ್ತು ವ್ಯವಸ್ಥಾಪಕ ನಿರ್ದೇಶಕ ಹರಿ ಮಾರಾರ್, ಈ ಟರ್ಮಿನಲ್ ವಾರ್ಷಿಕವಾಗಿ ಕನಿಷ್ಠ 25 ಮಿಲಿಯನ್ ಫ್ಲೈಯರ್ಸ್ (ವಿಮಾನ ಪ್ರಯಾಣಿಕರನ್ನು) ಅನ್ನು ನಿಭಾಯಿಸಲು ಸಜ್ಜುಗೊಂಡಿದೆ. ಇದು ಒಂದು ಅಥವಾ ಒಂದೂವರೆ ತಿಂಗಳ ನಂತರ ಮಾತ್ರ ಕಾರ್ಯನಿರ್ವಹಿಸಲಿದೆ ಎಂದು ಹೇಳಿದ್ದಾರೆ. “ಟರ್ಮಿನಲ್ ಅನ್ನು ಈಗಷ್ಟೇ ಉದ್ಘಾಟನೆ ಮಾಡಲಾಗಿದೆ. ಇನ್ನೂ ಒಂದೆರಡು ಪ್ರಕ್ರಿಯೆಗಳು ಪೂರ್ಣಗೊಳ್ಳಬೇಕಿದೆ. ಕೆಲವು ಪ್ರಯೋಗಗಳು ಮತ್ತು ಭದ್ರತಾ ಪರಿಶೀಲನೆ ನಡೆಸಬೇಕು. ಇವುಗಳು ಪೂರ್ಣಗೊಂಡ ತಕ್ಷಣ, ನಾವು ಅದನ್ನು ಸರಿಸುಮಾರು ಒಂದು ಅಥವಾ ಒಂದೂವರೆ ತಿಂಗಳ ನಡುವೆ ಕಾರ್ಯಗತಗೊಳಿಸುತ್ತೇವೆ ಎಂದು ಮಾರಾರ್ ಹೇಳಿರುವುದಾಗಿ ದಿ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ. ಟರ್ಮಿನಲ್ 2 ರ 1ನೇ ಹಂತವನ್ನು 5,000 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಇದು 2,55,000 ಚದರ ಮೀಟರ್‌ ವ್ಯಾಪ್ತಿಯಲ್ಲಿದೆ. ಹಂತ 2 ಸಿದ್ಧವಾದ ನಂತರ, , ಟರ್ಮಿನಲ್ 20 ಮಿಲಿಯನ್ ಗಿಂತಲೂ ಹೆಚ್ಚು ವಿಮಾನ ಪ್ರಯಾಣಿಕರನ್ನು ನಿಭಾಯಿಸುತ್ತದೆ ವಿಮಾನ ನಿಲ್ದಾಣದ ಅಧಿಕಾರಿಗಳು ಹೇಳಿದರು. ಟರ್ಮಿನಲ್ 1 ಮತ್ತು ಟರ್ಮಿನಲ್ 2 ಅನ್ನು ಒಟ್ಟುಗೂಡಿಸಿ, ವಿಮಾನ ನಿಲ್ದಾಣವು ವಾರ್ಷಿಕವಾಗಿ ಕನಿಷ್ಠ 65 ಮಿಲಿಯನ್ ಫ್ಲೈಯರ್‌ಗಳನ್ನು ನಿರ್ವಹಿಸಲು ಸಾಧ್ಯವಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಮುಖ ಪ್ರಯಾಣಿಕರ ಚೆಕ್-ಇನ್ ಅವಶ್ಯಕತೆಗಳೊಂದಿಗೆ ಟರ್ಮಿನಲ್ 2 ಸಿದ್ಧವಾಗಿದ್ದರೂ, ಅದರ ಪ್ರವೇಶ ರಸ್ತೆ ಇನ್ನೂ ನಿರ್ಮಾಣ ಹಂತದಲ್ಲಿದೆ. 10 ಪಥಗಳ ಪ್ರವೇಶ ರಸ್ತೆ ಶೀಘ್ರದಲ್ಲೇ ಕಾರ್ಯಾಚರಣೆಗೆ ಸಿದ್ಧವಾಗಲಿದೆ ಎಂದು ಮಾರಾರ್ ಹೇಳಿದರು. ಟರ್ಮಿನಲ್ ಮೊದಲು ದೇಶೀಯ ವಿಮಾನ ಕಾರ್ಯಾಚರಣೆಯನ್ನು ಪ್ರಾರಂಭಿಸುತ್ತದೆ. ಅಂತರಾಷ್ಟ್ರೀಯ ಕಾರ್ಯಾಚರಣೆಗಳಿಗೆ, ವಲಸೆ ಮತ್ತು ಅಂತರಾಷ್ಟ್ರೀಯ ಕಾರ್ಗೋ ಮೂಲಸೌಕರ್ಯ ಇನ್ನೂ ಪೂರ್ಣಗೊಂಡಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಟರ್ಮಿನಲ್ 2 ಗಾಗಿ ದೀರ್ಘಾವಧಿಯ ಬೇಡಿಕೆಯ ಯೋಜನೆಯ 2018 ರಲ್ಲಿ ಪ್ರಾರಂಭವಾಯಿತು. ವಿವಿಧ ಜಾತಿಯ ಸಸ್ಯಗಳು ಮತ್ತು ಮರಗಳಿಂದ ಸುತ್ತುವರಿದಿರುವ ಈ ಟರ್ಮಿನಲ್ ನ್ನು ” terminal in the garden ” ಎಂದು ಕರೆಯಲಾಗುತ್ತಿದೆ. ಈ ಟರ್ಮಿನಲ್ ನಲ್ಲಿ 180 ಅಪರೂಪದ ಮತ್ತು ಅಳಿವಿನಂಚಿನಲ್ಲಿರುವ ಜಾತಿಯ ಸಸ್ಯಗಳಿವೆ. 3,600 ಕ್ಕೂ ಹೆಚ್ಚು ಸಸ್ಯ ಪ್ರಭೇದಗಳು, ಬಿದಿರು, 620 ಸ್ಥಳೀಯ ಸಸ್ಯಗಳು, 7,700 ಕಸಿ ಮರಗಳು, 96 ಕಮಲ ಮತ್ತು ಇನ್ನೂ ಹೆಚ್ಚಿನ ಸಸ್ಯಗಳಿವೆ.

ಇಲ್ಲಿನ ಸಸ್ಯಗಳಿಗೆ ಟಾಪ್- ಬಾಟಮ್ ಮಾದರಿಯ ಮೂಲಕ ಸಸ್ಯಗಳಿಗೆ ನೀರುಣಿಸಲಾಗುತ್ತದೆ. ಇದರಲ್ಲಿ ಕಡಿಮೆ ನೀರು ಸೇವಿಸುವ ಸಸ್ಯಗಳನ್ನು ಮೇಲ್ಭಾಗದಲ್ಲಿ ನೆಡಲಾಗುತ್ತದೆ ಮತ್ತು ಹೆಚ್ಚು ನೀರು ಅಗತ್ಯವಿರುವವುಗಳನ್ನು ಕೆಳಭಾಗದಲ್ಲಿ ನೆಡಲಾಗುತ್ತದೆ. ಈ ಟರ್ಮಿನಲ್ ಕರ್ನಾಟಕದ ಸಂಸ್ಕೃತಿಗಳನ್ನು ಪ್ರತಿಬಿಂಬಿಸುವ ಸಾಂಪ್ರದಾಯಿಕ ಮತ್ತು ಆಧುನಿಕ ಸಂಗತಿಗಳ ಮಿಶ್ರಣವಾಗಿದೆ ಎಂದು ಮಾರಾರ್ ಹೇಳಿದ್ದಾರೆ.

ಸ್ವಯಂಚಾಲಿತ ಬಯೋಮೆಟ್ರಿಕ್ ಗೇಟ್‌ಗಳು, ಸೆಲ್ಫ್-ಬ್ಯಾಗೇಜ್-ಡ್ರಾಪ್ ಕೌಂಟರ್‌ಗಳು, ಫುಲ್ ಬಾಡಿ ಸ್ಕ್ಯಾನರ್‌ಗಳು ಮತ್ತು ಆಟೋಮ್ಯಾಟಿಕ್ ಟ್ರೇ ಮರುಪಡೆಯುವಿಕೆ ವ್ಯವಸ್ಥೆಯೊಂದಿಗೆ ಬಳಕೆದಾರರ ಅನುಕೂಲವಿದ್ದು, ಟರ್ಮಿನಲ್ ಪ್ರವೇಶ ಸ್ಥಳದಿಂದ ಪ್ರಯಾಣಿಕರು ವಿಮಾನವನ್ನು ಹತ್ತುವ ಹಂತದವರೆಗೆ ತಾಂತ್ರಿಕವಾಗಿ ಸಜ್ಜುಗೊಂಡಿದೆ.

“ಇತರ ದೇಶಗಳಲ್ಲಿನ ಭದ್ರತಾ ಸ್ಕ್ಯಾನಿಂಗ್ ಮಾದರಿಗಳಂತೆ, T2 ಸಂಪೂರ್ಣವಾಗಿ ಸ್ವಯಂಚಾಲಿತವಾಗಿದೆ. ನಾವು ಸ್ವಯಂಚಾಲಿತ ದೇಹ ಸ್ಕ್ಯಾನರ್‌ಗಳನ್ನು ಸ್ಥಾಪಿಸಲು ಸಿಐಎಸ್‌ಎಫ್ ಸಿಬ್ಬಂದಿಯಿಂದ ಅನುಮತಿ ಕೋರಿದ್ದೇವೆ. ಇದು ಭಾರತದಲ್ಲಿ ಮೊದಲನೆಯದು.ಇದಕ್ಕೆ ಭೌತಿಕ ತಪಾಸಣೆ ಅಗತ್ಯವಿಲ್ಲ. ಅಗತ್ಯವಿದ್ದರೆ, ಸಿಐಎಸ್ಎಫ್ ಕೂಡಾ ಪ್ರಯಾಣಿಕರನ್ನು ಪರೀಕ್ಷಿಸಬಹುದುಎಂದು ವಿಮಾನ ನಿಲ್ದಾಣದ ಅಧಿಕಾರಿಯೊಬ್ಬರು ಹೇಳಿದರು. ಟರ್ಮಿನಲ್ ಡಿಜಿ ಯಾತ್ರಾವನ್ನು ಸಹ ಬೆಂಬಲಿಸುತ್ತದೆ. ಅದರ ಮೂಲಕ ಪ್ರಯಾಣಿಕರ ಮುಖವು ಒಂದೇ ಬಯೋಮೆಟ್ರಿಕ್ ಟೋಕನ್ ಆಗುತ್ತದೆ. ಸ್ಮಾರ್ಟ್ ಸೆಕ್ಯೂರಿಟಿ ನಿಖರ ಮತ್ತು ವೇಗದ ಸ್ಕ್ರೀನಿಂಗ್ ಅನ್ನು ಸುಗಮಗೊಳಿಸುತ್ತದೆ.

ಟರ್ಮಿನಲ್ 2ನಲ್ಲಿರುವ ಕಲೆ ಮತ್ತು ಅಲಂಕಾರದ ಅಂಶಗಳು ಮತ್ತು ಕರ್ನಾಟಕದ ಶ್ರೀಮಂತ ಪರಂಪರೆ ಮತ್ತು ಸಂಸ್ಕೃತಿ ಮತ್ತು ಭರತನಾಟ್ಯಶಾಸ್ತ್ರದ ನವರಸ ಅಥವಾ ಒಂಬತ್ತು ಭಾವನೆಗಳ ವಿಷಯಗಳ ಮೇಲೆ ಕ್ಯುರೇಟ್ ಮಾಡಿದ 60 ಕಲಾಕೃತಿಗಳೊಂದಿಗೆ ಕಣ್ಮನ ಸೆಳೆಯುತ್ತದೆ. ಬೋರ್ಡಿಂಗ್ ಬದಿಯಲ್ಲಿರುವ ಕೃಷ್ಣರಾಜ್ ಚೋನಾಟ್ ಅವರ ತಾಮ್ರದ ಶಿಲ್ಪದಿಂದ ಗಾಥಾವರೆಗೆ ಮತ್ತು ಎಂ ಎ ರೌಫ್ ಅವರ ಬಿದ್ರಿ ವಾಲ್ ಆರ್ಟ್ ನಿಂದ ಧಾತು ವರೆೆಗೆ, ಬೋರ್ಡಿಂಗ್ ಗೇಟ್‌ಗಳ ಬಳಿ ಚಾವಣಿಗೆ ನೇತು ಹಾಕಿದ ಅನುಪಮಾ ಹೊಸ್ಕರ್ ಅವರ ಮರದ ಬೊಂಬೆಗಳು, ಫಾಲಿ ಡಿಸೈನ್ ಮತ್ತು ಗುಂಡುರಾಜು ಅವರ ಚರ್ಮದ ಬೊಂಬೆಗಳವರೆಗೆ ವಿವಿಧ ಕಲಾಕೃತಿಗಳು ಸಂಸ್ಕೃತಿಯ ಶ್ರೀಮಂತಿಕೆಯನ್ನು ಬಿಂಬಿಸುತ್ತದೆ.

ಟರ್ಮಿನಲ್‌ನ ಸೌಂದರ್ಯಕ್ಕೆ ಕೊಡುಗೆ ನೀಡುವುದರ ಜೊತೆಗೆ, ಬಿದಿರಿನ ಒಳಾಂಗಣಗಳು ಮತ್ತು ಸೊಂಪಾದ ಉದ್ಯಾನಗಳು ಅದರ ಸುಸ್ಥಿರತೆಯ ಸ್ತಂಭದ ಅಗತ್ಯ ಅಂಶಗಳನ್ನು ರೂಪಿಸುತ್ತವೆ. ಇಲ್ಲಿರುವ ಬಿದಿರುಗಳನ್ನು ಬೆಂಕಿ-ನಿರೋಧಕ ಮತ್ತು ದೀರ್ಘಕಾಲ ಬಾಳಿಕೆ ಬರುವಂತೆ ವಿನ್ಯಾಸಗೊಳಿಸಲಾಗಿದೆ. ಸೋಲಾರ್ ಪ್ಯಾನೆಲ್ ಮತ್ತು ಡೇ ಲೈಟ್ ಹಾರ್ವೆಸ್ಟಿಂಗ್ 24.9 ರಷ್ಟು ವಿದ್ಯುತ್ ಉಳಿಸುತ್ತದೆ. ಮಳೆನೀರು ಕೊಯ್ಲು, ವಿಮಾನ ನಿಲ್ದಾಣದ ಅವಶ್ಯಕತೆಗಳನ್ನು ಪೂರೈಸಲು 413 ಮಿಲಿಯನ್ ಲೀಟರ್ ನೀರನ್ನು ಹೊಂದಿರುವ ಆರು ಪ್ರಮುಖ ಮಳೆನೀರು-ಆಧಾರಿತ ಕೊಳಗಳು ಮತ್ತು ಮಾಲಿನ್ಯಕಾರಕಗಳನ್ನು ನೈಸರ್ಗಿಕವಾಗಿ ಸ್ವಚ್ಛಗೊಳಿಸುವ ವಿವಿಧೋದ್ದೇಶ ಕೆರೆಗಳು ಟರ್ಮಿನಲ್‌ನ ಸುಸ್ಥಿರತೆಯ ಯೋಜನೆಯ ಅವಿಭಾಜ್ಯ ಅಂಗಗಳಾಗಿವೆ.

ಪಾಕಿಸ್ತಾನಕ್ಕೆ ಹೋದ ಅನುಭವವನ್ನು ಬಿಚ್ಚಿಟ್ಟ ಗ್ಲೋಬಲ್ ಕನ್ನಡಿಗ
ಪಾಕಿಸ್ತಾನಕ್ಕೆ ಹೋದ ಅನುಭವವನ್ನು ಬಿಚ್ಚಿಟ್ಟ ಗ್ಲೋಬಲ್ ಕನ್ನಡಿಗ
ಜೈಸ್ವಾಲ್ ಸಿಡಿಲಬ್ಬರದ ಬ್ಯಾಟಿಂಗ್​ಗೆ ಪಂಜಾಬ್ ಬೌಲರ್ಸ್​ ಸುಸ್ತು
ಜೈಸ್ವಾಲ್ ಸಿಡಿಲಬ್ಬರದ ಬ್ಯಾಟಿಂಗ್​ಗೆ ಪಂಜಾಬ್ ಬೌಲರ್ಸ್​ ಸುಸ್ತು
ಒಂದೇ ಊರಿನವರಾದರೂ ನಾನು ವಿನಯ್​ರನ್ನು ನೋಡಿರಲಿಲ್ಲ: ಶಾಸಕ
ಒಂದೇ ಊರಿನವರಾದರೂ ನಾನು ವಿನಯ್​ರನ್ನು ನೋಡಿರಲಿಲ್ಲ: ಶಾಸಕ
ಶ್ರೀಲಂಕಾದಲ್ಲಿರುವ ತಮಿಳು ಮೀನುಗಾರರ ಬಿಡುಗಡೆಗೆ ಪ್ರಧಾನಿ ಮೋದಿ ಒತ್ತಾಯ
ಶ್ರೀಲಂಕಾದಲ್ಲಿರುವ ತಮಿಳು ಮೀನುಗಾರರ ಬಿಡುಗಡೆಗೆ ಪ್ರಧಾನಿ ಮೋದಿ ಒತ್ತಾಯ
ಯತ್ನಾಳ್ ಆದಷ್ಟು ಬೇಗ ಪಕ್ಷಕ್ಕೆ ವಾಪಸ್ಸಾಗುವ ನಿರೀಕ್ಷೆ ಇದೆ: ಸುಧಾಕರ್
ಯತ್ನಾಳ್ ಆದಷ್ಟು ಬೇಗ ಪಕ್ಷಕ್ಕೆ ವಾಪಸ್ಸಾಗುವ ನಿರೀಕ್ಷೆ ಇದೆ: ಸುಧಾಕರ್
ಸಪ್ತಗಿರಿ ವಿಶ್ವವಿದ್ಯಾಲಯ ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸುತ್ತಿದೆ: ಉಮೇಶ್
ಸಪ್ತಗಿರಿ ವಿಶ್ವವಿದ್ಯಾಲಯ ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸುತ್ತಿದೆ: ಉಮೇಶ್
ಛತ್ತೀಸ್‌ಗಢದ ದಾಂತೇಶ್ವರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಅಮಿತ್ ಶಾ
ಛತ್ತೀಸ್‌ಗಢದ ದಾಂತೇಶ್ವರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಅಮಿತ್ ಶಾ
ಹಾಲ್​ ಟಿಕೆಟ್​​ನೊಂದಿಗೆ ಮಾದರಿ ಒಎಂಆರ್ ಶೀಟ್ ಕೂಡ ಡೌನ್ಲೋಡ್: ಪ್ರಸನ್ನ
ಹಾಲ್​ ಟಿಕೆಟ್​​ನೊಂದಿಗೆ ಮಾದರಿ ಒಎಂಆರ್ ಶೀಟ್ ಕೂಡ ಡೌನ್ಲೋಡ್: ಪ್ರಸನ್ನ
ಪುಟ್ಟ ಬಾಲಕನ ದೈವ ನರ್ತನ: ಮೈ ಜುಮ್ಮೆನಿಸುವ ವಿಡಿಯೋ ನೋಡಿ
ಪುಟ್ಟ ಬಾಲಕನ ದೈವ ನರ್ತನ: ಮೈ ಜುಮ್ಮೆನಿಸುವ ವಿಡಿಯೋ ನೋಡಿ
CET ಪರೀಕ್ಷೆ ಬಗ್ಗೆ ಭಯ ಬೇಡ; ತಜ್ಞರು ನೀಡಿರುವ ಟಿಪ್ಸ್​​ ಇಲ್ಲಿದೆ
CET ಪರೀಕ್ಷೆ ಬಗ್ಗೆ ಭಯ ಬೇಡ; ತಜ್ಞರು ನೀಡಿರುವ ಟಿಪ್ಸ್​​ ಇಲ್ಲಿದೆ