- Kannada News Photo gallery Cricket photos IPL 2025 Points Table: IPL 2025 Team Standings after pbks vs rr match
IPL 2025 Points Table: CSK ಗೆ ಸೋಲು: ಒಂದು ಸ್ಥಾನ ಮೇಲೇರಿದ RCB
IPL 2025 New Points Table: ಇಂಡಿಯನ್ ಪ್ರೀಮಿಯರ್ ಲೀಗ್ನ (ಐಪಿಎಲ್ 2025) 18ನೇ ಪಂದ್ಯದ ಮುಕ್ತಾಯದ ಬೆನ್ನಲ್ಲೇ ಐಪಿಎಲ್ ಅಂಕ ಪಟ್ಟಿಯಲ್ಲಿ ಮಹತ್ವದ ಬದಲಾವಣೆ ಕಂಡು ಬಂದಿದೆ. ಕಳೆದ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಸೋತು ಮೂರನೇ ಸ್ಥಾನಕ್ಕೆ ಕುಸಿದಿದ್ದ ಆರ್ಸಿಬಿ ತಂಡವು ಈ ಬಾರಿ 2ನೇ ಸ್ಥಾನಕ್ಕೇರಿದೆ. ಅಲ್ಲದೆ ಮೊದಲ ಸ್ಥಾನದಲ್ಲಿದ್ದ ಪಂಜಾಬ್ ಕಿಂಗ್ಸ್ ತಂಡವು ಎರಡು ಸ್ಥಾನಗಳ ಕುಸಿತ ಕಂಡಿದೆ.
Updated on: Apr 06, 2025 | 7:34 AM

IPL 2025: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-18ರ 18 ಪಂದ್ಯಗಳು ಮುಗಿದಿವೆ. ಈಗಾಗಲೇ ಎಲ್ಲಾ ತಂಡಗಳು 3 ಪಂದ್ಯಗಳನ್ನಾಡಿದ್ದು, ಈ ಮ್ಯಾಚ್ಗಳಲ್ಲಿ ಗೆಲುವಿನ ರುಚಿ ಮಾತ್ರ ನೋಡಿರುವುದು ಕೇವಲ ಒಂದು ತಂಡ ಮಾತ್ರ. ಇನ್ನುಳಿದ ಎಲ್ಲಾ ತಂಡಗಳು ಕನಿಷ್ಠ ಒಂದು ಪಂದ್ಯದಲ್ಲಿ ಸೋಲನುಭವಿಸಿದೆ.

ಅದರಲ್ಲೂ ಕಳೆದ ಎರಡು ಮ್ಯಾಚ್ಗಳಲ್ಲಿ ಗೆಲುವು ದಾಖಲಿಸಿದ್ದ ಪಂಜಾಬ್ ಕಿಂಗ್ಸ್ ತಂಡ ರಾಜಸ್ಥಾನ್ ರಾಯಲ್ಸ್ ವಿರುದ್ಧ ಸೋಲನುಭವಿಸಿದೆ. ಈ ಸೋಲಿನ ಬೆನ್ನಲ್ಲೇ ಐಪಿಎಲ್ ಅಂಕಪಟ್ಟಿಯಲ್ಲೂ ಮಹತ್ವದ ಬದಲಾವಣೆಯಾಗಿದೆ. ಅದರಂತೆ ನೂತನ ಅಂಕ ಪಟ್ಟಿಯಲ್ಲಿ ಯಾವ ತಂಡ ಯಾವ ಸ್ಥಾನದಲ್ಲಿದೆ ಎಂದು ನೋಡುವುದಾದರೆ...

ಡೆಲ್ಲಿ ಕ್ಯಾಪಿಟಲ್ಸ್: ಅಕ್ಷರ್ ಪಟೇಲ್ ನಾಯಕತ್ವದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಭರ್ಜರಿ ಪ್ರದರ್ಶನ ನೀಡುತ್ತಿದೆ. ಈವರೆಗೆ ಆಡಿದ 4 ಪಂದ್ಯಗಳಲ್ಲೂ ಡೆಲ್ಲಿ ಪಡೆ ಎಲ್ಲಾ ಮ್ಯಾಚ್ಗಳಲ್ಲೂ ಜಯ ಸಾಧಿಸಿದೆ. ಈ ಮೂಲಕ ಈ +1.278 ನೆಟ್ ರನ್ ರೇಟ್ನೊಂದಿಗೆ ಒಟ್ಟು 8 ಅಂಕಗಳನ್ನು ಪಡೆದು ಮೊದಲ ಸ್ಥಾನ ಅಲಂಕರಿಸಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು: ಆರ್ಸಿಬಿ ತಂಡವು 5 ಪಂದ್ಯಗಳಲ್ಲಿ 2 ರಲ್ಲಿ ಮ್ಯಾಚ್ನಲ್ಲಿ ಸೋಲನುಭವಿಸಿದೆ. ಹೀಗಾಗಿ ಒಟ್ಟು 6 ಅಂಕಗಳನ್ನು ಹೊಂದಿದ್ದರೂ, ನೆಟ್ ರನ್ ರೇಟ್ನಲ್ಲಿ ಹಿಂದೆ ಉಳಿಯುವ ಮೂಲಕ 5ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಆರ್ಸಿಬಿ ತಂಡದ ಪ್ರಸ್ತುತ ನೆಟ್ ರನ್ ರೇಟ್ +0.539

ಗುಜರಾತ್ ಟೈಟಾನ್ಸ್: ಶುಭ್ಮನ್ ಗಿಲ್ ಮುಂದಾಳತ್ವದ ಗುಜರಾತ್ ಟೈಟಾನ್ಸ್ ತಂಡವು ಈವರೆಗೆ 6 ಪಂದ್ಯಗಳನ್ನಾಡಿದ್ದು, ಈ ವೇಳೆ 4 ಪಂದ್ಯಗಳಲ್ಲಿ ಜಯ ಸಾಧಿಸಿದೆ. ಅದರಂತೆ +1.081 ನೆಟ್ ರನ್ ರೇಟ್ನೊಂದಿಗೆ ಒಟ್ಟು 8 ಅಂಕಗಳನ್ನು ಕಲೆಹಾಕಿ 2ನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ.

ಪಂಜಾಬ್ ಕಿಂಗ್ಸ್: ಶ್ರೇಯಸ್ ಅಯ್ಯರ್ ಮುಂದಾಳತ್ವದಲ್ಲಿ ಕಣಕ್ಕಿಳಿಯುತ್ತಿರುವ ಪಂಜಾಬ್ ಕಿಂಗ್ಸ್ ತಂಡವು ಆಡಿದ 5 ಮ್ಯಾಚ್ಗಳಲ್ಲಿ ಎರಡರಲ್ಲಿ ಸೋಲನುಭವಿಸಿದೆ. ಈ ಮೂಲಕ +0.065 ನೆಟ್ ರನ್ ರೇಟ್ನೊಂದಿಗೆ 6 ಅಂಕಗಳನ್ನು ಪಡೆದಿರುವ ಪಂಜಾಬ್ ಕಿಂಗ್ಸ್ ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ.

ಕೊಲ್ಕತ್ತಾ ನೈಟ್ ರೈಡರ್ಸ್: ಅಜಿಂಕ್ಯ ರಹಾನೆ ಸಾರಥ್ಯದಲ್ಲಿ ಕಣಕ್ಕಿಳಿಯುತ್ತಿರುವ ಹಾಲಿ ಚಾಂಪಿಯನ್ ಕೆಕೆಆರ್ ತಂಡವು ನಿರೀಕ್ಷಿತ ಪ್ರದರ್ಶನ ನೀಡದಿದ್ದರೂ, ಕಳೆದ 4 ಪಂದ್ಯಗಳಲ್ಲಿ 2 ರಲ್ಲಿ ಜಯ ಸಾಧಿಸಿದೆ. ಈ ಮೂಲಕ +0.070 ನೆಟ್ ರನ್ ರೇಟ್ ಪಡೆದಿರುವ ಕೆಕೆಆರ್ 4 ಅಂಕಗಳೊಂದಿಗೆ ಐದನೇ ಸ್ಥಾನದಲ್ಲಿದೆ.

ಇನ್ನುಳಿದಂತೆ ಲಕ್ನೋ ಸೂಪರ್ ಜೈಂಟ್ಸ್ (4 ಅಂಕಗಳು), ರಾಜಸ್ಥಾನ್ ರಾಯಲ್ಸ್ (4 ಅಂಕಗಳು), ಮುಂಬೈ ಇಂಡಿಯನ್ಸ್ (2 ಅಂಕಗಳು), ಚೆನ್ನೈ ಸೂಪರ್ ಕಿಂಗ್ಸ್ (2 ಅಂಕಗಳು) ಸನ್ರೈಸರ್ಸ್ ಹೈದರಾಬಾದ್ (2 ಅಂಕಗಳು) ಕ್ರಮವಾಗಿ 6 ರಿಂದ 10ನೇ ಸ್ಥಾನಗಳನ್ನು ಅಲಂಕರಿಸಿದೆ.



















