ಎರಡು ಪಾರ್ಟ್ನಲ್ಲಿ ಕಥೆ ಹೇಳೋದನ್ನು ನಿಲ್ಲಿಸಿದ ರಾಜಮೌಳಿ; ಕೊನೆ ಆಗಲಿದೆ ಟ್ರೆಂಡ್?
ರಾಜಮೌಳಿ ಅವರು ಪ್ರಾರಂಭಿಸಿದ ಎರಡು ಪಾರ್ಟ್ಗಳ ಚಿತ್ರಗಳ ಟ್ರೆಂಡ್ಗೆ ಅವರೇ ತೆರೆ ಎಳೆಯುತ್ತಿದ್ದಾರೆ. ಮಹೇಶ್ ಬಾಬು ಅಭಿನಯದ SSMB29 ಚಿತ್ರ ಒಂದೇ ಭಾಗದಲ್ಲಿ ಬಿಡುಗಡೆಯಾಗಲಿದೆ. ಬಾಹುಬಲಿ ಚಿತ್ರದ ಯಶಸ್ಸಿನ ನಂತರ ಈ ಟ್ರೆಂಡ್ ಅನೇಕ ನಿರ್ಮಾಪಕರು ಅನುಸರಿಸಿದ್ದಾರೆ. ಆದರೆ, ಕಥೆಯನ್ನು ಅನಗತ್ಯವಾಗಿ ಎಳೆದು ಹಣ ಸಂಪಾದಿಸುವ ಉದ್ದೇಶದಿಂದ ಇದನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂದು ರಾಜಮೌಳಿ ಅವರು ಅಭಿಪ್ರಾಯಪಟ್ಟಿದ್ದಾರೆ.

ಎರಡು ಪಾರ್ಟ್ನಲ್ಲಿ ಕಥೆ ಹೇಳುವ ಟ್ರೆಂಡ್ನ ಭಾರತದಲ್ಲಿ ಹೆಚ್ಚು ಪ್ರಚಲಿತ ಮಾಡಿದ್ದು ನಿರ್ದೇಶಕ ಎಸ್ಎಸ್ ರಾಜಮೌಳಿ (SS Rajamouli) ಎಂದರೂ ತಪ್ಪಾಗಲಾರದು. ‘ಬಾಹುಬಲಿ’ ಚಿತ್ರದ ಕಥೆಯನ್ನು ಒಂದು ಭಾಗದಲ್ಲಿ ಹೇಳದೇ ಎರಡು ಭಾಗದಲ್ಲಿ ಅದನ್ನು ಜನರ ಮುಂದೆ ತರಲಾಯಿತು. ಇದಕ್ಕೆ ಕಾರಣವೂ ಇತ್ತು ಎನ್ನಿ. ಏಕೆಂದರೆ, ಸಿನಿಮಾದ ಕಥೆ ಹೆಚ್ಚಿನ ಅವಧಿಯನ್ನು ಬೇಡುತ್ತಿದ್ದರಿಂದ ಈ ರೀತಿ ಮಾಡಿದರು. ಆದರೆ, ಈಗ ಎಲ್ಲರೂ ಅದನ್ನು ದುರ್ಬಳಕೆ ಮಾಡಿಕೊಂಡರು. ಹೀಗಾಗಿ, ಇದನ್ನು ನಿಲ್ಲಿಸಲು ರಾಜಮೌಳಿ ನಿರ್ಧರಿಸಿದ್ದಾರೆ. ಮುಂಬರುವ ಮಹೇಶ್ ಬಾಬು ಚಿತ್ರಕ್ಕಾಗಿ ಅವರು ಈ ಫಾರ್ಮ್ಯಾಟ್ನಿಂದ ಹೊರಗೆ ಬರುತ್ತಿದ್ದಾರೆ.
ರಾಜಮೌಳಿ ಅವರು ಮೊದಲು ‘ಬಾಹುಬಲಿ’ ಮಾಡಿದರು. ಆ ಬಳಿಕೆ ಕೆಲವೇ ವರ್ಷಗಳಲ್ಲಿ ‘ಬಾಹುಬಲಿ 2’ ಚಿತ್ರವನ್ನು ತೆಗೆದುಕೊಂಡು ಬಂದರು. ಆ ಬಳಿಕ ಸಾಲು ಸಾಲು ಚಿತ್ರಗಳು ಎರಡು ಪಾರ್ಟ್ಗಳಲ್ಲಿ ಬಂದವು. ಸಿನಿಮಾಗೆ ಅಗತ್ಯ ಇದೆಯೋ ಇಲ್ಲವೋ ಹಣ ಮಾಡುವದಕ್ಕಾಗಿ ಈ ತಂತ್ರ ಉಪಯೋಗಿಸಿದರು. ಇದು ರಾಜಮೌಳಿ ಬೇಸರಕ್ಕೆ ಕಾರಣ ಆಗಿದೆ. ಕಥೆಯನ್ನು ಎಳೆದಾಡಿ ಎರಡು ಪಾರ್ಟ್ನಲ್ಲಿ ಸಿನಿಮಾ ತರುತ್ತಿರುವುದನ್ನು ನೋಡಿ ರಾಜಮೌಳಿ ಬೇಸರಗೊಂಡಿದ್ದಾರಂತೆ.
ರಾಜಮೌಳಿ ಅವರು ಹೊಸ ಸಿನಿಮಾ ಘೋಷಿಸಿದ್ದಾರೆ. ಇದಕ್ಕೆ ತಾತ್ಕಾಲಿಕವಾಗಿ ‘SSMB 29’ ಎಂದು ಶೀರ್ಷಿಕೆ ಇಟ್ಟಿದ್ದು ಗೊತ್ತೇ ಇದೆ. ಈ ಚಿತ್ರ ಎರಡು ಪಾರ್ಟ್ನಲ್ಲಿ ಬರಲಿದೆ ಎಂದು ಹೇಳಲಾಗಿತ್ತು. ಆದರೆ, ಇದಕ್ಕೆ ಬ್ರೇಕ್ ಹಾಕಲಾಗಿದ್ದು, ಒಂದೇ ಭಾಗದಲ್ಲಿ ಸಿನಿಮಾ ಬರುತ್ತಿದೆ. ಈ ವಿಚಾರ ಕೇಳಿ ಫ್ಯಾನ್ಸ್ ಕೂಡ ನಿಟ್ಟುಸಿರು ಬಿಟ್ಟಿದ್ದಾರೆ.
ಈ ಮೊದಲು ರಿಲೀಸ್ ಆದ ‘ಆರ್ಆರ್ಆರ್’ ಚಿತ್ರದ ಅವಧಿ ದೀರ್ಘವಾಗಿದ್ದ ಹೊರತಾಗಿಯೂ ರಾಜಮೌಳಿ ಅವರು ಒಂದೇ ಪಾರ್ಟ್ನಲ್ಲಿ ಸಿನಿಮಾ ಮಾಡಿದ್ದರು. ಈಗ ಅವರ ಹೊಸ ಚಿತ್ರವನ್ನೂ ಹಾಗೆಯೇ ಮಾಡಲಿದ್ದಾರೆ. ಇದರಿಂದ ಮಹೇಶ್ ಬಾಬು ಅವರು ಈ ಚಿತ್ರ ಮುಗಿದ ಬಳಿಕ ಮತ್ತೊಂದು ಸಿನಿಮಾದಲ್ಲಿ ತೊಡಗಿಕೊಳ್ಳಬಹುದು.
ಇದನ್ನೂ ಓದಿ: ‘ಬಾಹುಬಲಿ 2’ ದಾಖಲೆ ಮುರಿಯಲು ರೆಡಿ ಆದ ‘ಪುಷ್ಪ 2’ ಸಿನಿಮಾ
ರಾಜಮೌಳಿ ಅವರು ಈ ಟ್ರೆಂಡ್ನ ಆರಂಭಿಸಿದವರು. ಈಗ ಟ್ರೆಂಡ್ ಆರಂಭಿಕನಿಂದಲೇ ಇದನ್ನು ಕೊನೆ ಮಾಡುವ ಪ್ರಯತ್ನ ನಡೆದಿದೆ. ಇನ್ನಾದರೂ ಈ ಟ್ರೆಂಡ್ನ ದುರುಪಯೋಗ ಮಾಡೋದನ್ನು ಕೆಲವರು ಬಿಡುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ. ರಾಜಮೌಳಿ ಚಿತ್ರದಲ್ಲಿ ಮಹೇಶ್ ಬಾಬುಗೆ ಪ್ರಿಯಾಂಕಾ ಚೋಪ್ರಾ ಜೊತೆ ಆಗಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.