ವಯನಾಡ್​ ಗುಡ್ಡ ಕುಸಿತ: ಪ್ರವಾಹದಲ್ಲಿ ಕೊಚ್ಚಿಕೊಂಡು ಬಂದ ಸಾವಿರಾರು ಮರಗಳು

| Updated By: ಕಿರಣ್ ಹನುಮಂತ್​ ಮಾದಾರ್

Updated on: Aug 02, 2024 | 5:00 PM

ವಯನಾಡ್​ ಜಿಲ್ಲೆಯಲ್ಲಿ ನಡೆದ ಗುಡ್ಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತಪಟ್ಟವರ ಸಂಖ್ಯೆ ಏರುತ್ತಲೇ ಇದೆ. ಇನ್ನು ಈ ಪ್ರವಾಹದಲ್ಲಿ ಸಾವಿರಾರು ಮರಗಳು ಕೊಚ್ಚಿಕೊಂಡು ಬಂದಿದ್ದು, ಟಿಂಬರ್ ಡಿಪ್ಪೋಗಳಲ್ಲಿ ಜೋಡಿಸಿಟ್ಟಿರುವಂತೆ ಕಾಣುತ್ತಿದೆ. ಸುಮಾರು 15 ಅಡಿ ಎತ್ತರಕ್ಕೆ ನೀರು ಹರಿದಿದ್ದು, ಈ ದೃಶ್ಯಗಳೆ ಪ್ರವಾಹದ ಭೀಕರತೆ ಹೇಳುತ್ತಿದೆ.

ಕೇರಳ, ಆ.02: ಕೇರಳದ ವಯನಾಡು ಜಿಲ್ಲೆಯಲ್ಲಿ ಭೀಕರ ಭೂಕುಸಿತ ದುರಂತಕ್ಕೆ ಸಂಬಂಧಿಸಿದಂತೆ ಮೃತರ ಸಂಖ್ಯೆ 316ಕ್ಕೆ ಏರಿಕೆಯಾಗಿದೆ. ಇನ್ನು ಈ ಪ್ರವಾಹದಲ್ಲಿ ಸಾವಿರಾರು ಮರಗಳು ಕೊಚ್ಚಿಕೊಂಡು ಬಂದಿದ್ದು, ಟಿಂಬರ್ ಡಿಪ್ಪೋಗಳಲ್ಲಿ ಜೋಡಿಸಿಟ್ಟಿರುವಂತೆ ಕಾಣುತ್ತಿದೆ. ಸುಮಾರು 15 ಅಡಿ ಎತ್ತರಕ್ಕೆ ನೀರು ಹರಿದಿದ್ದು, ಈ ದೃಶ್ಯಗಳೆ ಪ್ರವಾಹದ ಭೀಕರತೆ ಹೇಳುತ್ತಿದೆ. ನದಿ ಹಾದು ಹೋಗಿರುವ ದಡದಲ್ಲಿ ರಾಶಿ ರಾಶಿಯಾಗಿ ಮರಗಳು ಇವೆ. ಶಾಲೆಯ ಮೊದಲನೇ ಮಹಡಿಯ ಮೇಲಿನವರೆಗೂ ನೀರು ಹರಿದಿದೆ. ಇನ್ನು ಸಾವನ್ನಪ್ಪಿರುವವರಲ್ಲಿ 29 ಮಕ್ಕಳು ಇದ್ದಾರೆ. 200ಕ್ಕೂ ಅಧಿಕ ಜನರಿಗೆ ಗಾಯವಾಗಿದ್ದು, ವಿವಿಧ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. 298ಕ್ಕೂ ಅಧಿಕ ಜನರು ನಾಪತ್ತೆಯಾಗಿರುವ ಮಾಹಿತಿ ಇದ್ದು, ನಾಪತ್ತೆಯಾದವರಿಗಾಗಿ ಶೋಧ ಕಾರ್ಯ ಮುಂದುವರೆದಿದೆ.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Published on: Aug 02, 2024 04:59 PM