ಇಂದಿನಿಂದ ಹಲಾಲ್​ಗೆ ಬಹಿಷ್ಕಾರ ಆಂದೋಲನ, ಹಲಾಲ್ ಮಾಡಿರುವ ಮಾಂಸ ಖರೀದಿಸಬೇಡಿ; ಕಾಳಿ ಸ್ವಾಮೀಜಿ

| Updated By: sandhya thejappa

Updated on: Mar 29, 2022 | 12:57 PM

ಹಲಾಲ್ ಮಾಡುವುದು ಅಲ್ಲಾನಿಗೆ ಅರ್ಪಿಸಿದಂತೆ. ಇದನ್ನ ತಂದು ನಾವು ಹಬ್ಬ ಹರಿದಿನಗಳನ್ನ ಮಾಡಬೇಕಾದ ಸ್ಥಿತಿ ಇದೆ. ಹಾಲಾಲ್ ಮಾಡುವಾಗ ಮೆಕ್ಕಾ ಕಡೆ ಮುಖ ತಿರುಗಿಸಬೇಕಂತೆ. ಕುತ್ತಿಗೆ ಒಂದು ನರ ಕಟ್ ಮಾಡಬೇಕಂತೆ.

ಇಂದಿನಿಂದ ಹಲಾಲ್​ಗೆ ಬಹಿಷ್ಕಾರ ಆಂದೋಲನ, ಹಲಾಲ್ ಮಾಡಿರುವ ಮಾಂಸ ಖರೀದಿಸಬೇಡಿ; ಕಾಳಿ ಸ್ವಾಮೀಜಿ
ದೇವರಿಗೆ ಪೂಜೆ ಸಲ್ಲಿಸಿದ ಕಾಳಿ ಸ್ವಾಮೀಜಿ
Follow us on

ಬೆಂಗಳೂರು: ಇಂದಿನಿಂದ ಹಲಾಲ್ಗೆ ಬಹಿಷ್ಕಾರ (Halal Boycott) ಆಂದೋಲನ ಮಾಡುವುದಾಗಿ ತಿಳಿಸಿದ ಕಾಳಿ ಸ್ವಾಮೀಜಿ (Kali Swamiji), ಸ್ವತಃ ತಾವೇ ಕೋಳಿ ಕತ್ತರಿಸಿ ಹಲಾಲ್ ಬಾಯ್ಕಾಟ್ ಅಭಿಯಾನಕ್ಕೆ ಚಾಲನೆ ನೀಡಿದರು. ಹಿಂದವೀ ಮೀಟ್ ಮಾರ್ಟ್ನಲ್ಲಿ ಕಾಳಿ ಸ್ವಾಮೀಜಿ ಕಾಳಿ ದೇವರ ಫೋಟೋಗೆ ಪೂಜೆ ಸಲ್ಲಿಸಿದರು. ಬಳಿಕ ನಾಟಿ ಕೋಳಿ ಬಲಿ ನೀಡಿದ್ದಾರೆ. ಸ್ವಾಮೀಜಿ ಸ್ವತಃ ತಾವೇ ಕೋಳಿಯನ್ನು ಕತ್ತರಿಸಿದ್ದಾರೆ. ಈ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಹಿಂದೂ ಧರ್ಮದಲ್ಲಿ ಅನೇಕ ಯತಿಗಳು ಇದ್ದಾರೆ. ಸಾತ್ವಿಕ, ರಾಜಸಿ, ತಾಮಸಿ ಗುಣಗಳಿರುವ ಯತಿಗಳಿದ್ದಾರೆ. ಹಲಾಲ್ ಮಾಡಿರುವ ಮಾಂಸ ಖರೀದಿಸಬೇಡಿ ಅಂತ ರಾಜಸಿ, ತಾಮಸಿ ಗುಣಗಳ ಯತಿಗಳು ನಿಮ್ಮ ಭಕ್ತರಿಗೆ ತಿಳಿಸಿ ಅಂತ ಹೇಳಿದ್ದಾರೆ.

ಹಲಾಲ್ ಮಾಡುವುದು ಅಲ್ಲಾನಿಗೆ ಅರ್ಪಿಸಿದಂತೆ. ಇದನ್ನ ತಂದು ನಾವು ಹಬ್ಬ ಹರಿದಿನಗಳನ್ನ ಮಾಡಬೇಕಾದ ಸ್ಥಿತಿ ಇದೆ. ಹಾಲಾಲ್ ಮಾಡುವಾಗ ಮೆಕ್ಕಾ ಕಡೆ ಮುಖ ತಿರುಗಿಸಬೇಕಂತೆ. ಕುತ್ತಿಗೆ ಒಂದು ನರ ಕಟ್ ಮಾಡಬೇಕಂತೆ. ಇದೆಲ್ಲಾ ಮಾಡಿದ ಮೇಲೆ ಅದು ಅಲ್ಲಾಗೆ ಅರ್ಪಿಸಿದಂತೆ. ಹಲಾಲ್ ಮಾಡದೇ ಇರುವುದು ಇಸ್ಲಾಂ ಪ್ರಕಾರ ಹರಾಮ್ ಅಂತೆ. ಹಲಾಲ್ ಮಾಡಿರುವುದು ಹಿಂದೂಗಳಿಗೆ ಹರಾಮ್. ಹಲಾಲ್ ಬಾಯ್ಕಾಟ್ ಮಾಡುವ ಅಭಿಯಾನ ರಾಜ್ಯಾದ್ಯಂತ ಮಾಡುತ್ತೇವೆ. ಅನೇಕ ಹೋಟೆಲ್ಗಳಲ್ಲಿ ಹಲಾಲ್ ಅಂತ ಬೋರ್ಡ್ ಹಾಕಿರುತ್ತಾರೆ. ಇದರ ಅಗತ್ಯ ಏನಿದೆ, ಕಿತ್ತು ಬಿಸಾಕಿ ಅಂತ ಕಾಳಿ ಸ್ವಾಮೀಜಿ ಆಕ್ರೋಶ ಹೊರಹಾಕಿದ್ದಾರೆ.

ಯಾರು ಹಿಂದೂಗಳು ಮಾಂಸ ಅಂಗಡಿಗಳು ತೆರೆಯಲು ಮುಂದಾಗುತ್ತಾರೋ ಅವರಿಗೆ ಸಹಕಾರ ಕೊಡುತ್ತೇವೆ. ಹಿಂದವೀ ಮೀಟ್ ಮಾರ್ಟ್ನಿಂದ ಉಚಿತ ತರಬೇತಿ ಕೊಡುತ್ತೇವೆ. ಎಲ್ಲರೂ ಈ ಅಭಿಯಾನಕ್ಕೆ ಕೈ ಜೋಡಿಸಿ ಅಂತ ಹಿಂದೂ ಧರ್ಮದ ಯತಿಗಳಿಗೆ ಕಾಳಿ ಸ್ವಾಮೀಜಿ ಕರೆ ನೀಡಿದ್ದಾರೆ. ರಾಜಸಿ, ತಾಮಸಿ ಗುಣಗಳನ್ನ ಹೊಂದಿರುವ ಯತಿಗಳು ಮುಂದೆ ಬನ್ನಿ. ನಿರ್ಮಲಾನಂದ ಶ್ರೀಗಳೇ, ಚುಂಚನಕಟ್ಟೆಯಲ್ಲಿ ಭಾನುವಾರ ಮರಿಗಳು ಬಲಿಯಾಗುತ್ತವೆ. ಆ ನಿಮ್ಮ ಭಕ್ತರಿಗೆ ಮನವಿ ಮಾಡಿ. ಮಹಮದೀಯರ ಹಲಾಲ್ ಮಾಡಿದ ಮಾಂಸವನ್ನ ತರಬೇಡಿ ಅಂತ. ಸೇವಾಲಾಲ್ ಸ್ವಾಮೀಜಿಗಳೇ ನಿಮ್ಮ ತಾಂಡ್ಯಗಳಲ್ಲಿ ಬಹಳ ವಿಜೃಂಭಣೆಯಿಂದ ಅಚರಣೆ ಮಾಡಲಾಗತ್ತದೆ. ನಿಮ್ಮ ಭಕ್ತರಿಗೆ ತಾಕೀತು ಮಾಡಿ. ಒಬ್ಬ ಮುಲ್ಲಾ ಅವರ ಭಕ್ತರಿಗೆ ನಿಮ್ಮ ಆಹಾರ ನಿಯಮ ಹೀಗೆ ಇರಬೇಕು ಅಂತ ಹೇಳುವಾಗ, ನೀವು ನಿಮ್ಮ ಭಕ್ತರ ಆಹಾರ ಹೀಗೆ ಇರಬೇಕು ಅಂತ ಹೇಳಿ ಎಂದರು.

ಅವರ ದೇವರಿಗೆ ಒಪ್ಪಿಸಿದ್ದು ನಮ್ಮ ದೇವರಿಗೆ ಎಂಜಲು- ಸಿಟಿ ರವಿ:
ಹಲಾಲ್ ಮಾಂಸವನ್ನ ಬಹಿಷ್ಕರಿಸುವ ಹಕ್ಕು ನಮಗಿದೆ ಅಂತ ಬೆಂಗಳೂರಿನಲ್ಲಿ ಬಿಜೆಪಿ ನಾಯಕ ಸಿಟಿ ರವಿ ಹೇಳಿಕೆ ನೀಡಿದ್ದಾರೆ. ಮುಸ್ಲಿಮರ ಧಾರ್ಮಿಕ ಕ್ರಿಯೆ ಹಲಾಲ್ ಅವರಿಗೆ ಪ್ರಿಯ. ಹಲಾಲ್ ಕ್ರಿಯೆಯನ್ನ ಎಲ್ಲರೂ ಒಪ್ಪಿಕೊಳ್ಳಬೇಕಿಲ್ಲ. ಹಲಾಲ್ ಇಲ್ಲದ ಮಾಂಸವನ್ನ ಮುಸ್ಲಿಮರು ತಿಂದರೆ, ಹಲಾಲ್ ಆಗಿರುವ ಮಾಂಸವನ್ನ ಹಿಂದೂಗಳು ತಿನ್ನುತ್ತಾರೆ. ಹಿಂದಿನ ನಿಯಮಗಳನ್ನ ಈಗಲೂ ಒಪ್ಪಿಕೊಳ್ಳಲಾಗುತ್ತಾ? ಹಲಾಲ್ ಎನ್ನುವುದು ಒಂದು ಆರ್ಥಿಕ ಜಿಹಾದ್. ಮುಸ್ಲಿಮರು ಇನ್ನೊಬ್ಬರ ಜೊತೆ ವ್ಯಾಪಾರ ಮಾಡಬಾರದು. ಹಲಾಲ್ ಮಾಂಸವನ್ನ ಬಹಿಷ್ಕರಿಸಿ ಅಂದರೆ ತಪ್ಪೇನು? ಹಲಾಲ್ ಮಾಂಸ ಅವರ ದೇವರಿಗೆ ಒಪ್ಪಿಸಿದ್ದು. ಅವರ ದೇವರಿಗೆ ಒಪ್ಪಿಸಿದ್ದು ನಮ್ಮ ದೇವರಿಗೆ ಎಂಜಲು. ಹಿಂದೂಗಳ ಅಂಗಡಿಯಿಂದ ಅವರು ಮಾಂಸ ಖರೀದಿಸ್ತ್ತಾರಾ? ಮುಸ್ಲಿಮರ ಅಂಗಡಿಯಲ್ಲಿ ಖರೀದಿಸಲು ಯಾಕೆ ಹೇಳ್ತೀರಿ? ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ

ನನ್ನ ವಿರುದ್ಧ ದೂರು ಕೊಟ್ಟ ಹೆಸರಿನವರಿಗೆ ಯಾವುದೇ ಗುತ್ತಿಗೆ ಕೊಟ್ಟಿಲ್ಲ: ಈಶ್ವರಪ್ಪ

ಪುನೀತ್ ನಿಧನರಾಗಿ 5 ತಿಂಗಳು, ಕುಟುಂಬ ಸದಸ್ಯರಿಂದ ಪೂಜೆ ಸಲ್ಲಿಕೆ; ಸಮಾಧಿಗೆ ಭೇಟಿ ನೀಡಿ, ನಮನ ಸಲ್ಲಿಸಿದ ಆರ್​ಜಿವಿ

Published On - 11:34 am, Tue, 29 March 22