ಮೀನುಗಾರರ ಜೀವನಮಟ್ಟ ಸುಧಾರಣೆಗೆ ಮೀನುಗಾರರಿಗೆ 100 ಬೋಟ್​​​​​  ಮತ್ತು 10 ಸಾವಿರ ಮನೆಗಳ ಮಂಜೂರು : ಮುಖ್ಯಮಂತ್ರಿ ಬೊಮ್ಮಾಯಿ

| Updated By: ವಿವೇಕ ಬಿರಾದಾರ

Updated on: Jul 04, 2022 | 9:15 PM

ಮೀನುಗಾರಿಕೆ ಉತ್ಪಾದನೆ, ರಫ್ತು ಮಾಡಲು ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಬೆಂಗಳೂರಿನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಮೀನುಗಾರರ ಜೀವನಮಟ್ಟ ಸುಧಾರಣೆಗೆ ಮೀನುಗಾರರಿಗೆ 100 ಬೋಟ್​​​​​  ಮತ್ತು 10 ಸಾವಿರ ಮನೆಗಳ ಮಂಜೂರು : ಮುಖ್ಯಮಂತ್ರಿ ಬೊಮ್ಮಾಯಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
Follow us on

ಬೆಂಗಳೂರು: ಮೀನುಗಾರಿಕೆ (Fishery) ಉತ್ಪಾದನೆ, ರಫ್ತು ಮಾಡಲು ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಬೆಂಗಳೂರಿನಲ್ಲಿ (Bengaluru) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ಹೇಳಿದ್ದಾರೆ. ಆಳ ಸಮುದ್ರದ ಮೀನುಗಾರಿಕೆಗೆ ಹೆಚ್ಚು ಒತ್ತು ನೀಡಲಾಗುತ್ತೆ.  ಮೀನುಗಾರರ (Fisherman) ಜೀವನಮಟ್ಟ ಸುಧಾರಣೆಗೆ ಮೀನುಗಾರರಿಗೆ 100 ಬೋಟ್​​​​​  ಮತ್ತು 10 ಸಾವಿರ ಮನೆಗಳನ್ನು ಮಂಜೂರು ಮಾಡುತ್ತೇನೆ ಎಂದು ತಿಳಿಸಿದರು.

ಎಂಟು ಬೋಟ್ ಬಂದರುಗಳು ನವೀಕರಣ ಮಾಡಲು ಸೂಚಿಸಿದ್ದೇನೆ. ಸೈಕಲ್ ನಲ್ಲಿ ಮೀನು ಮಾರಾಟ ಮಾಡಲು ಅವಕಾಶ ಮಾಡಿಕೊಡುತ್ತೇನೆ. ಲಾಲ್ ಬಾಗ್​​ನಲ್ಲೂ ಪಿಪಿಟಿ ಮಾಡಲ್​​ನಲ್ಲಿ ಅಕ್ವೇರಿಯಂ ನಿರ್ಮಾಣ ಮಾಡುತ್ತೇವೆ. ಇದರಿಂದ ಕೂಡ ಜಿಡಿಪಿ ಹೆಚ್ಚಾಗುತ್ತದೆ. ಇದಕ್ಕಾಗಿ ಮೋದಿಯವರು ಪ್ರತ್ಯೇಕವಾಗಿ ಮೀನುಗಾರಿಕೆ ಇಲಾಖೆ ತೆರೆದಿದ್ದಾರೆ.

ಇದನ್ನು ಓದಿ: ರೈಫಲ್ ಶೂಟರ್​​ಗೆ ರೈಫಲ್ ಖರೀದಿಸಲು ಹಣ ನೀಡುವ ಭರವಸೆ ನೀಡಿದ ಡಿ.ಕೆ ಶಿವಕುಮಾರ್​

ಈ ಬಾರಿ ಒಂದು ಮಿಲಿಯನ್ ಟನ್ ಮೀನು ಉತ್ಪಾದನೆಯಾಗಿದೆ. ಪ್ರತಿ ವರ್ಷ ಹೆಚ್ಚಾಗುತ್ತ‌ ಹೋದರೆ ಪ್ರಗತಿ ಆಗುತ್ತದೆ. ದುಡಿಯುವ ವರ್ಗಕ್ಕೆ ಸರ್ಕಾರ ಹೆಚ್ಚು ಒತ್ತು ನೀಡುತ್ತೆ. ರೈತರಂತೆ ಮೀನುಗಾರರ ಮಕ್ಕಳಿಗೆ ಶಿಕ್ಷಣ ವೇತನ ನೀಡಲು ಸರ್ಕಾರ ನಿರ್ಧರಿಸಲಿದೆ. ಲಾಲ್ ಬಾಗ್ ಹಾಗೂ ಮಂಗಳೂರಲ್ಲಿ ಅಕ್ವೇರಿಯಂ ಕೆಲಸ ಬೇಗ ಬೇಗ ಮಾಡಿ. ತಟ್ಟನೆ ಕೆಲಸ ಮಾಡಿ, ತುಗ್ಯೂಯಾಲೆ ರೀತಿಯಲ್ಲಿ ಕೆಲಸ ಆಗುವುದು ಬೇಡ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮೀನು ಜಲಚರ, ಸೃಷ್ಟಿಕರ್ತನ ಅದ್ಭುತವಾದ ಶಕ್ತಿಯಾಗಿದೆ. ಅದರಲ್ಲಿ ಇರುವ ಸೌಂದರ್ಯ, ಸೂಕ್ಷತೆ ಬೇರೆ ಪ್ರಾಣಿಗಳಲ್ಲಿ ನೋಡೋಕೆ ಆಗಲ್ಲ. ಜಲಚರಗಳಲ್ಲಿ ತಮ್ಮದೇ ಆದ ಲೋಕ ಇರುತ್ತೆ. ಜಲಚರಕ್ಕೆ ನಮ್ಮಿಂದಲೇ ಅಷ್ಟೇ ತೊಂದರೆ. ಅವುಗಳಿಂದ ನಮಗೆ ತೊಂದರೆ ‌ಇಲ್ಲ. ಸೃಷ್ಟಿಯ ಒಂದು ಭಾಗ, ಅದರ ಜೊತೆಗೆ ನಾವು ಬದುಕಬೇಕು. ಸೃಷ್ಟಿಯ ಬಿಟ್ಟು ಬದುಕಲು ಆಗಲ್ಲ, ಮುಂದಿನ ಪೀಳಿಗೆಗೆ ಇದನ್ನು ಉಳಿಸಿಕೊಂಡು ಹೋಗಬೇಕು ಎಂದು ಹೇಳಿದರು.

ಇದನ್ನು ಓದಿ: ಕಲ್ಯಾಣ ಕರ್ನಾಟಕ ಭಾಗದಲ್ಲಿ 5 ಸಾವಿರ ಶಿಕ್ಷಕರ ನೇಮಕ -ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಪ್ರಕಟ

ಇನ್ ಲ್ಯಾಂಡ್ ಫಿಶಿಂಗ್ ನಿಂದ ಬಹಳಷ್ಟು ಮೀನು ಉತ್ಪಾದನೆ ಆಗುತ್ತೆ. ಹತ್ತು ವರ್ಷಗಳಲ್ಲಿ ಇದರ ಉತ್ಪಾದನೆ ಕಡಿಮೆ ಆಗಿದೆ. ಮೀನುಗಾರಿಕೆ ಅಗ್ರಿಕಲ್ಚರ್ ನ ಒಂದು ಭಾಗ. ಬರುವ ದಿನಗಳಲ್ಲಿ ಮೀನುಗಾರಿಕೆ ಉತ್ಪಾದನೆ, ಮೀನುಗಾರಿಕೆ ರಪ್ತು ಮೇಲೆ ಹೆಚ್ಚು ಒತ್ತು ನೀಡುತ್ತೇನೆ. ಒಂದು ಕೆರೆ ಮೀನುಗಾರಿಕೆಗೆ ಮೀಸಲಿಡಲಾಗಿದೆ. ಮೀನುಗಾರಿಕೆ ಬಂದರ್ ಕ್ಲೀನ್ ಮಾಡಿ ಎಂದು ತಿಳಿಸಿದರು.