AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಮೃತ್ ಪೌಲ್ ಕಲ್ಬುರ್ಗಿಯಲ್ಲಿ ಬೆಳಗಿನ ಜಾವ ಸಿಸಿಟಿವಿ ಆಫ್ ಮಾಡಿಸಿ, ಆನ್ಸರ್ ಶೀಟ್ ತಿದ್ದಿಸಿದ್ದಾರೆ – ಗೃಹ ಸಚಿವ ಆರಗ ಜ್ಞಾನೇಂದ್ರ

ಎಷ್ಟೇ ದೊಡ್ಡಮಟ್ಟದ ಅಧಿಕಾರಿ ಭಾಗಿಯಾಗಿದ್ರೂ ಬಂಧನ ಮಾಡ್ತೇವೆ. ಕಾಂಗ್ರೆಸ್ ಆಡಳಿತದಲ್ಲಿ ನೇಮಕಾತಿ ಹಗರಣ ಮುಚ್ಚಿ ಹಾಕಿದ್ರು. ಆದ್ರೆ ನಾವು ಪಾರದರ್ಶಕವಾಗಿ ತನಿಖೆ ನಡೆಸಿ ಕ್ರಮ ಕೈಗೊಂಡಿದ್ದೇವೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.

ಅಮೃತ್ ಪೌಲ್  ಕಲ್ಬುರ್ಗಿಯಲ್ಲಿ ಬೆಳಗಿನ ಜಾವ ಸಿಸಿಟಿವಿ ಆಫ್ ಮಾಡಿಸಿ, ಆನ್ಸರ್ ಶೀಟ್ ತಿದ್ದಿಸಿದ್ದಾರೆ - ಗೃಹ ಸಚಿವ ಆರಗ ಜ್ಞಾನೇಂದ್ರ
ಅಮೃತ್ ಪೌಲ್ ಕಲ್ಬುರ್ಗಿಯಲ್ಲಿ ಬೆಳಗಿನ ಜಾವ ಸಿಸಿಟಿವಿ ಆಫ್ ಮಾಡಿಸಿ, ಆನ್ಸರ್ ಶೀಟ್ ತಿದ್ದಿದ್ದಾರೆ - ಗೃಹ ಸಚಿವ ಆರಗ ಜ್ಞಾನೇಂದ್ರ
TV9 Web
| Edited By: |

Updated on:Jul 04, 2022 | 7:02 PM

Share

ಬೆಂಗಳೂರು: PSI ಹಗರಣದಲ್ಲಿ ಎಡಿಜಿಪಿ ಅಮೃತ್ ಪಾಲ್‌ ಬಂಧನವಾದ ಬಳಿಕ ಬೆಂಗಳೂರಿನಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಸುದ್ದಿಗೋಷ್ಠಿ ನಡೆಸಿ, ಹೆಚ್ಚಿನ ಮಾಹಿತಿ ನೀಡಿದ್ದಾರೆ. ಪ್ರಕರಣದ ಬಗ್ಗೆ ಪಾರದರ್ಶಕವಾಗಿ ತನಿಖೆ ನಡೆಸುತ್ತಿದ್ದೇವೆ. ಹೈಕೋರ್ಟ್‌ ಹೇಳುವ ಮೊದಲೇ ನಾವು ಕ್ರಮ ಕೈಗೊಂಡಿದ್ದೇವೆ. ವಿಚಾರಣೆ ನಡೆಸಿ ಸೂಕ್ತ ಸಾಕ್ಷ್ಯಾಧಾರ ಸಿಕ್ಕ ಬಳಿಕ ಪಾಲ್ ಬಂಧನವಾಗಿದೆ. ಅಕ್ರಮವಾಗಿ ಪರೀಕ್ಷೆ ಬರೆದವರು, ಹಣ ಪಡೆದವರೂ ಬಂಧನಕ್ಕೀಡಾಗಿದ್ದಾರೆ. ತನಿಖೆ ನಡೆಸಿ ಪ್ರಕರಣದ ರೂವಾರಿಯನ್ನು ಬಂಧಿಸಲಾಗಿದೆ. ಆರಂಭದಲ್ಲಿ ಅಕ್ರಮದ ಬಗ್ಗೆ ಸೂಕ್ತ ಸಾಕ್ಷ್ಯಾಧಾರಗಳು ಇರಲಿಲ್ಲ. ಹೀಗಾಗಿ ಅಕ್ರಮ ನಡೆದಿಲ್ಲವೆಂದು ನಾನು ಸದನದಲ್ಲಿ ಹೇಳಿದ್ದೆ. ಒಎಂಆರ್ ಶೀಟ್ ತಿದ್ದಿದ್ದು ಗೊತ್ತಾದ ಬಳಿಕ ಮುಖ್ಯಮಂತ್ರಿ ಗಮನಕ್ಕೆ ತಂದೆವು. ಕೂಡಲೇ ತನಿಖೆಗೆ ಆದೇಶ ನೀಡಿದ್ದೇನೆ. ಉನ್ನತ ಅಧಿಕಾರಿಗಳನ್ನು ತನಿಖೆಗೊಳಪಡಿಸಿ ಕ್ರಮ ಕೈಗೊಂಡಿದ್ದೇವೆ. ನಾನು ಸದನದಲ್ಲಿ ಹೇಳಿಕೆ ನೀಡಿದ್ದಾಗ ತನಿಖೆಯೇ ನಡೆದಿರಲಿಲ್ಲ ಎಂದು ಆರಂಭದ ಮಾತುಗಳನ್ನ ಹೇಳಿದ್ದಾರೆ.

ಅಮೃತ್ ಪೌಲ್ ರಿಕ್ರ್ಯೂಟ್ ಮೆಂಟ್ ಹೆಡ್ ಆಗಿದ್ದರು. ಕಲ್ಬುರ್ಗಿಯಲ್ಲಿ ಶಾಲೆಯಲ್ಲಿ ಬೆಳಗಿನ ಜಾವ ಇಡೀ ಬಿಲ್ಡಿಂಗ್ ಸಿಸಿ ಟಿವಿ ಆಫ್ ಮಾಡಿಸಿದ್ದಾರೆ. ಅಫ್ ಮಾಡಿಸಿ ಆನ್ಸರ್ ಶೀಟ್ ಈ ವೇಳೆ ತಿದ್ದಿದ್ದಾರೆ. ಅದಕ್ಕೆಲ್ಲಾ ಜವಾಬ್ದಾರಿ ಇವರೇ ಅಲ್ವೇ? ಹಾಗಾಗಿ ಡಿವೈಎಸ್ ಪಿ, ದಫೇದಾರ್, ಸಿಬ್ಬಂದಿ ಅರೆಸ್ಟ್ ಮಾಡಲಾಗಿತ್ತು. ಅವರು ಕೊಟ್ಟ ಮಾಹಿತಿ ಮೇಲೆ ಅಮೃತ್ ಪೌಲ್ ರನ್ನು ವಿಚಾರಿಸಲಾಗಿದೆ. 18 ಗಂಟೆಗಳ ಕಾಲ ವಿಚಾರಣೆ ನಡೆಸಲಾಗಿದೆ. ಇವರು ಭಾಗಿಯಾಗಿರುವುದು ಕಂಡು ಬಂದ ಹಿನ್ನೆಲೆ ಅರೆಸ್ಟ್ ಮಾಡಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ಎಷ್ಟೇ ದೊಡ್ಡಮಟ್ಟದ ಅಧಿಕಾರಿ ಭಾಗಿಯಾಗಿದ್ರೂ ಬಂಧನ ಮಾಡ್ತೇವೆ. ಕಾಂಗ್ರೆಸ್ ಆಡಳಿತದಲ್ಲಿ ನೇಮಕಾತಿ ಹಗರಣ ಮುಚ್ಚಿ ಹಾಕಿದ್ರು. ಆದ್ರೆ ನಾವು ಪಾರದರ್ಶಕವಾಗಿ ತನಿಖೆ ನಡೆಸಿ ಕ್ರಮ ಕೈಗೊಂಡಿದ್ದೇವೆ ಎಂದರು. ಇನ್ನು ಐಎಎಸ್ ಅಧಿಕಾರಿ ಜೆ.ಮಂಜುನಾಥ್‌ರನ್ನು ಭ್ರಷ್ಟಾಚಾರ ಪ್ರಕರಣದಲ್ಲಿಎಸಿಬಿ ವಶಕ್ಕೆ ಪಡೆದು, ವಿಚಾರಣೆ ನಡೆಸುತ್ತಿದೆ.

Published On - 7:01 pm, Mon, 4 July 22