
ಬೆಂಗಳೂರು, ಆಗಸ್ಟ್ 22: ವಾರಾಂತ್ಯದ ರಜೆ ಮತ್ತು ಗೌರಿ- ಗಣೇಶ ಹಬ್ಬ (Gauri-Ganesha Festival) ಅಂತ ಬೆಂಗಳೂರಿನಿಂದ (Bengaluru) ಅನೇಕ ಜನರು ತಮ್ಮ ಊರಿಗೆ ಹೋಗಲು ಸಜ್ಜಾಗಿದ್ದಾರೆ. ಇದನ್ನೇ, ಬಂಡವಾಳ ಮಾಡಿಕೊಂಡಿರುವ ಕೆಲ ಖಾಸಗಿ ಬಸ್ ಮಾಲೀಕರು ಪ್ರಯಾಣದ ದರವನ್ನು ದುಪಟ್ಟು ಮಾಡಿದ್ದಾರೆ. ನಾಳೆ ನಾಲ್ಕನೇ ಶನಿವಾರ ರಜೆ, ಭಾನುವಾರ ರಜೆ ಸೋಮವಾರ ಒಂದು ದಿನ ರಜೆ ತೆಗೆದುಕೊಂಡರೆ ಮಂಗಳವಾರ ಗೌರಿ ಹಬ್ಬ, ಬುಧವಾರ ಗಣೇಶ ಹಬ್ಬ ಒಟ್ಟು ಐದು ದಿನಗಳ ರಜೆ ಸಿಗಲಿದೆ. ಈ ಹಿನ್ನೆಲೆಯಲ್ಲಿ ಸಾಕಷ್ಟು ಉದ್ಯೋಗಿಗಳು ಈಗಾಗಲೇ ತಮ್ಮ ಕಚೇರಿಗಳಿಗೆ ರಜೆ ಹಾಕಿದ್ದಾರೆ. ಇದನ್ನು ಬಂಡವಾಳ ಮಾಡಿಕೊಂಡಿರುವ ಖಾಸಗಿ ಬಸ್ ಮಾಲೀಕರು, ಟಿಕೆಟ್ ದರ ದುಪ್ಪಟ್ಟು ಮಾಡಿದ್ದಾರೆ.
ಬೆಂಗಳೂರು-ಧರ್ಮಸ್ಥಳ
ಬೆಂಗಳೂರು-ಮೈಸೂರು
ಬೆಂಗಳೂರು-ಕೊಡಗು
ಬೆಂಗಳೂರು-ಚಿಕ್ಕಮಗಳೂರು
ಬೆಂಗಳೂರು-ಮಂಗಳೂರು
ಬೆಂಗಳೂರು-ಧಾರವಾಡ
ಬೆಂಗಳೂರು-ಹುಬ್ಬಳ್ಳಿ
ಬೆಂಗಳೂರು- ಕಾರವಾರ
ಬೆಂಗಳೂರು-ಕಲಬುರಗಿ
ಬೆಂಗಳೂರು-ಶಿವಮೊಗ್ಗ
ಇದನ್ನೂ ಓದಿ: ಪಿಒಪಿ ಗಣೇಶ ತಯಾರಿ, ಮಾರಾಟ ಮಾಡಿದ್ರೆ ಕ್ರಿಮಿನಲ್ ಕೇಸ್
ಖಾಸಗಿ ಬಸ್ಗಳು ದುಪ್ಪಟ್ಟು ಹಣ ವಸೂಲಿ ಮಾಡುತ್ತಿರುವುದರಿಂದ ಪ್ರಯಾಣಿಕರಿಗೆ ಸಾಕಷ್ಟು ತೊಂದರೆಯಾಗಿದೆ. ಊರುಗಳಿಗೆ ತೆರಳುವ ದಾವಂತದಲ್ಲಿರುವವರು ಟಿಕೆಟ್ ದರ ಕೇಳಿ ದಂಗಾಗಿದ್ದಾರೆ.
Published On - 3:57 pm, Fri, 22 August 25