Spowdi: ಸಣ್ಣ ರೈತರ ಹಾಗೂ ಇಂದಿನ ಕೆಲ ಸಮಸ್ಯೆಗಳಿಗೆ ಸ್ಪೌಡಿ ಕೃಷಿ ವ್ಯವಸ್ಥೆಯಿಂದ ಪರಿಹಾರ; ವಿವರ ಇಲ್ಲಿದೆ

| Updated By: ganapathi bhat

Updated on: Nov 24, 2021 | 4:30 PM

ಸ್ಪೌಡಿಯ ಹೊಸತನವನ್ನು ಭಾರತಕ್ಕೆ ತರುವಲ್ಲಿ ಹೆಚ್ಚು ಆಸಕ್ತಿ ವಹಿಸಿರುವ ಬಗ್ಗೆ ಹೇಳಿದ್ದಾರೆ. ಸ್ಪೌಡಿಯ ಸೋಲಾರ್ ಪವರ್​ನ ಮೊಬೈಲ್ ಇರಿಗೇಷನ್ ವ್ಯವಸ್ಥೆಯ ಬಗ್ಗೆ ಕೇಳಿದಾಗ ಅದು ಭಾರತದ ಸಣ್ಣ ರೈತರಿಗೆ ಸರಿಹೊಂದುವಂತಿದೆ ಎಂದು ತಿಳಿಸಿದ್ದಾರೆ.

Spowdi: ಸಣ್ಣ ರೈತರ ಹಾಗೂ ಇಂದಿನ ಕೆಲ ಸಮಸ್ಯೆಗಳಿಗೆ ಸ್ಪೌಡಿ ಕೃಷಿ ವ್ಯವಸ್ಥೆಯಿಂದ ಪರಿಹಾರ; ವಿವರ ಇಲ್ಲಿದೆ
ಸ್ಪೌಡಿ
Follow us on

ಸ್ವೀಡನ್​​ನ ಗ್ರೀನ್​ಟೆಕ್ ಸ್ಟಾರ್ಟ್​ ಅಪ್ ಸ್ಪೌಡಿಯು ನಾಲ್ಕು ವರ್ಷದ ಬಳಿಕ ಭಾರತ- ಸ್ವೀಡನ್ ಇನ್ನೋವೇಷನ್ ಅಸೆಲೆರೇಟರ್ ಪ್ರೋಗ್ರಾಂಅನ್ನು ಆಯ್ದುಕೊಂಡಿದೆ. ಅದರಂತೆ ಶೂನ್ಯ ಎಮಿಷನ್ ಕೃಷಿಯಿಂದ ಪರಿಹಾರ ಕಾರ್ಯ ಆಗಿದೆ. ಈ ಯೋಜನೆಯಿಂದ ರೈತರಿಗೆ ಅನುಕೂಲ ಆಗಲಿರುವ ಬಗ್ಗೆ ಬ್ಯುಸಿನೆಸ್ ಸ್ವೀಡನ್ ಹೇಳಿದೆ. ಬ್ಯುಸಿನೆಸ್ ಸ್ವೀಡನ್​ನ (ಭಾರತ) ಪವನ್ ತಹ್ಲಾನಿ, ಸ್ಪೌಡಿಯ ಹೊಸತನವನ್ನು ಭಾರತಕ್ಕೆ ತರುವಲ್ಲಿ ಹೆಚ್ಚು ಆಸಕ್ತಿ ವಹಿಸಿರುವ ಬಗ್ಗೆ ಹೇಳಿದ್ದಾರೆ. ಸ್ಪೌಡಿಯ ಸೋಲಾರ್ ಪವರ್​ನ ಮೊಬೈಲ್ ಇರಿಗೇಷನ್, ಭಾರತದ ಸಣ್ಣ ರೈತರಿಗೆ ಸರಿಹೊಂದುವಂತಿದೆ ಎಂದು ವ್ಯವಸ್ಥೆಯ ಬಗ್ಗೆ ತಿಳಿಸಿದ್ದಾರೆ.

ಸ್ಪೌಡಿಯ ಸೌರ ಶಕ್ತಿಯ ಮುಖ್ಯಾಂಶಗಳು ಹೀಗಿದೆ:

  • ಭಾರತದ ವಾತಾವರಣದಲ್ಲಿ ಇದು ಪರೀಕ್ಷೆಗೆ ಒಳಪಟ್ಟಿದೆ
  • ಈ ವಿಧಾನದಲ್ಲಿ ಡೀಸೆಲ್ ಬಳಕೆ ಇರುವುದಿಲ್ಲ. ಸೂರ್ಯ ಹಾಗೂ ಸೌರಶಕ್ತಿಯ ಮೇಲೆ ಮಾತ್ರ ಇದು ಅವಲಂಬಿತವಾಗಿದೆ
  • ಸಿಒ2 ಹೊರಸೂಸುವಿಕೆ ಕೂಡ ಇಲ್ಲಿ ಇರುವುದಿಲ್ಲ. ಡೀಸೆಲ್ ಪಂಪ್​ಗೆ ಹೋಲಿಸಿದರೆ ಇಲ್ಲಿ ಕಾರ್ಬನ್ ಡೈ ಆಕ್ಸೈಡ್ ಹೊರಸೂಸುವಿಕೆ ಇರುವುದಿಲ್ಲ
  • ಕೃಷಿಗೆ ನೀರಿನ ಬಳಕೆ ಸಮರ್ಪಕವಾಗಿ ಇರಲಿದೆ
  • ರೈತರು ಹೆಚ್ಚು ಪರಿಣಾಮಕಾರಿಯಾಗಿ ಕೃಷಿ ಮಾಡುವಂತೆ ಮತ್ತು ಉತ್ತಮ ಬೆಳೆ ಪಡೆಯುವಲ್ಲಿ, ಹೆಚ್ಚು ಲಾಭಗಳಿಸಲು ಸಹಾಯ ಮಾಡಲಿದೆ
  • ವಾತಾವರಣಕ್ಕೆ ಉತ್ತಮವಾಗಿದೆ
  • ಮೇಕ್ ಇನ್ ಇಂಡಿಯಾ ಧ್ಯೇಯದೊಂದಿಗೆ ಇರಲಿದೆ. ಸ್ಪೌಡಿ, ಬೆಂಗಳೂರಿನಲ್ಲಿ ಈ ಸಂಬಂಧ ವೆಂಚರ್ ಒಂದನ್ನು ಆರಂಭಿಸಿದೆ
  • ಭಾರತದಲ್ಲಿ ಸರಿಸುಮಾರು 125 ಮಿಲಿಯನ್ ಸಣ್ಱ ಪ್ರಮಾಣದಲ್ಲಿ ಕೃಷಿ ಮಾಡುವ ರೈತರಿದ್ದಾರೆ. ಅಂಥವರಲ್ಲಿ ಸುಮಾರು ಒಂದು ಎಕರೆಯಷ್ಟು ಅಥವಾ ಅದಕ್ಕಿಂತ ಕಡಿಮೆ ಭೂಮಿ ಇರುತ್ತದೆ. ಇಂಥಾ ಕಡೆ ವಿದ್ಯುತ್ ಶಕ್ತಿ ವ್ಯತ್ಯಯ, ಡೀಸೆಲ್ ಬೆಲೆಯಲ್ಲಿ ಏರಿಕೆ, ನೀರು ಪೋಲು ಮುಂತಾದ ಕಾರಣಗಳು ತೊಡಕಾಗಿ ಕಾಣುತ್ತವೆ. ಅಲ್ಲದೆ ಕಾರ್ಬನ್ ಹೊರಸೂಸುವಿಕೆ, ಅದರ ಪರಿಣಾಮಗಳು ಆರೋಗ್ಯ, ಜೀವನದ ಮೇಲೆ ಕೂಡ ಪರಿಣಾಮ ಬೀರುತ್ತದೆ. ಇದಕ್ಕೆ ಪರಿಹಾರವಾಗಿ ಸ್ಪೌಡಿ ಯೋಜನೆ ಇರಲಿದೆ

ಸಣ್ಣ ಪ್ರಮಾಣದ ಕೃಷಿಯಲ್ಲಿ ತೊಡಗಿಸಿಕೊಳ್ಳುವ ರೈತರಿಗೆ ಸ್ವಚ್ಛ ಮತ್ತು ಸುಸ್ಥಿರ ಕೃಷಿ ಪರಿಹಾರ ನೀಡುವ ಹಾಗೂ ಆ ಮೂಲಕ ಉತ್ತಮ ಫಸಲು ಪಡೆಯುವ ಉದ್ದೇಶವನ್ನು ಸ್ಪೌಡಿ ಹೊಂದಿದೆ. ಭಾರತದ ಸಣ್ಣ ರೈತರು ಎದುರಿಸುತ್ತಿರುವ ಸಮಸ್ಯೆಗೆ ಈ ಸ್ಪೌಡಿ ಕೃಷಿ ವ್ಯವಸ್ಥೆ ಸಹಕಾರಿ ಆಗಲಿದೆ. ಹವಾಮಾನ ಗುಣಮಟ್ಟ, ಸ್ವಚ್ಛ ವಾತಾವರಣ ಮತ್ತು ಉತ್ತಮ ಜೀವನವನ್ನು ನೀಡಲು ಇದು ಸಹಾಯ ಮಾಡಲಿದೆ.

2019ರಲ್ಲಿ ಭಾರತದಲ್ಲಿ ಈ ಪರೀಕ್ಷೆ ಆರಂಭಿಸಲಾಯಿತು. ಭಾರತದ ವಿವಿಧ ರಾಜ್ಯಗಳಾದ ಬಿಹಾರ, ಛತ್ತೀಸಗಡ, ಕೇರಳ, ಕರ್ನಾಟಕ, ಗುಜರಾತ್ ಸಹಿತ ವಿವಿಧ ಕಡೆಗಳಲ್ಲಿ ಟೆಸ್ಟ್ ಫಾರ್ಮಿಂಗ್ ನಡೆಸಲಾಗಿದೆ. ಕರ್ನಾಟಕದಲ್ಲಿ ಸದ್ಯ ಬೆಂಗಳೂರು ಹೊರವಲಯದಲ್ಲಿ ಡೆಮೊ ಫಾರ್ಮ್ ಇದೆ ಎಂದು ಸಂಸ್ಥೆಯ ರೂಪಾಲಿ ಮೆಹ್ರಾ ಮಾಹಿತಿ ನೀಡಿದ್ದಾರೆ. ಹೆಚ್ಚಿನ ಮಾಹಿತಿಗೆ ಸ್ಪೌಡಿ ಫಾರ್ಮ್ ವೆಬ್​ಸೈಟ್​ಗೆ ಭೇಟಿ ನೀಡಬಹುದು.

ಇದನ್ನೂ ಓದಿ: ಕೃಷಿ ಕಾನೂನು ಹಿಂತೆಗೆದುಕೊಳ್ಳುವ ಮಸೂದೆಗಳನ್ನು ಕೇಂದ್ರ ಬುಧವಾರ ಅನುಮೋದಿಸುವ ಸಾಧ್ಯತೆ: ವರದಿ

ಇದನ್ನೂ ಓದಿ: ಕೃಷಿ ಕಾಯ್ದೆ ವಿರುದ್ಧ ಹೋರಾಟದಲ್ಲಿ ಮೃತಪಟ್ಟ ರೈತರ ಕುಟುಂಬಗಳಿಗೆ ತೆಲಂಗಾಣ ಸರ್ಕಾರದಿಂದ 3 ಲಕ್ಷ ಪರಿಹಾರ

Published On - 4:35 pm, Mon, 22 November 21