Bengaluru Rains: ಬೆಂಗಳೂರಿನಲ್ಲಿ ಸೋಮವಾರ ಎಲ್ಲೆಲ್ಲಿ ಎಷ್ಟು ಮಳೆಯಾಗಿದೆ? ಇಲ್ಲಿದೆ ವಿವರ

| Updated By: ರಮೇಶ್ ಬಿ. ಜವಳಗೇರಾ

Updated on: Oct 10, 2023 | 8:03 AM

Bengaluru Rain: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಿನ್ನೆ(ಅಕ್ಟೋಬರ್ 09) ಸಂಜೆ ಶುರುವಾದ ಮಳೆ ಇಡೀ ರಾತ್ರಿ ಧಾರಾಕಾರವಾಗಿ ಸುರಿದಿದೆ. ಈ ರಣ ಮಳೆಯೊಂದಾಗಿ ಜನ ತತ್ತರಿಸಿ ಹೋಗಿದ್ದಾರೆ. ಹಾಗಾದ್ರೆ, ಬೆಂಗಳೂರು ನಗರದಲ್ಲಿ ಎಲ್ಲೆಲ್ಲಿ ಎಷ್ಟು ಮಳೆಯಾಗಿದೆ ಎನ್ನುವ ವಿವರ ಇಲ್ಲಿದೆ ನೋಡಿ.

Bengaluru Rains: ಬೆಂಗಳೂರಿನಲ್ಲಿ ಸೋಮವಾರ ಎಲ್ಲೆಲ್ಲಿ ಎಷ್ಟು ಮಳೆಯಾಗಿದೆ? ಇಲ್ಲಿದೆ ವಿವರ
ಬೆಂಗಳೂರು ಮಳೆ
Follow us on

ಬೆಂಗಳೂರು, (ಅಕ್ಟೋಬರ್ 10): ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ  (Bengaluru) ನಿನ್ನೆ(ಅಕ್ಟೋಬರ್ 09) ಸಂಜೆ ಶುರುವಾದ ಮಳೆ (Rain) ಇಡೀ ರಾತ್ರಿ ಧಾರಾಕಾರವಾಗಿ ಸುರಿದಿದೆ. ಈ ರಣ ಮಳೆಯೊಂದಾಗಿ ಜನ ತತ್ತರಿಸಿ ಹೋಗಿದ್ದಾರೆ. ಅಲ್ಲದೇ ಸಿಲಿಕಾನ್ ಸಿಟಿಯ ರಸ್ತೆಗಳು ಕೆರೆಯಂತಾಗಿದ್ದವು. ಇನ್ನು ಅಂಡರ್ ಪಾಸ್ ಗಳು ಜಲಾವೃತವಾಗಿವೆ. ಟ್ರಾಫಿಕ್​ ಕಥೆ ಅಂತೂ ಕೇಳಲೇ ಬಾರದು. ಮಳೆರಾಯನ ಅಬ್ಬರಕ್ಕೆ ರಸ್ತೆಗಳು ಜಲಾವೃತಗೊಂಡು ವಾಹನ ಸವಾರರ ಪರದಾಡಿದ್ದರು. ಇನ್ನು ಕೆಂಗೇರಿ ಭಾಗದಲ್ಲಿ ಅತಿ ಹೆಚ್ಚು ಮಳೆ ಸುರಿದಿದೆ. ಇನ್ನುಳಿದ ಕಡೆಗಳಲ್ಲಿ ಎಷ್ಟು ಪ್ರಮಾಣದಲ್ಲಿ ಮೆಳೆಯಾಗಿದೆ ಎನ್ನುವ ವಿವರ ಈ ಕೆಳಗಿನಂತಿದೆ.

ಎಲ್ಲೆಲ್ಲಿ ಎಷ್ಟು ಮಳೆ

  • ಕೆಂಗೇರಿ 8.3 ಸೆಂ.ಮೀ
  • ಅಂಜನಾಪುರ 7.6 ಸೆಂ.ಮೀ
  • ಆರ್.ಆರ್.ನಗರ 6.8 ಸೆಂ.ಮೀ
  • ಹೆಚ್.ಎ.ಎಲ್ ವಿಮಾನ ನಿಲ್ದಾಣ 6.4
  • ನಾಯಂಡಹಳ್ಳಿ 6.3
  • ಕೊಟ್ಟಿಗೆಪಾಳ್ಯ 6.2
  • ಬಿಳೇಕಹಳ್ಳಿ 5.9
  • ಪೀಣ್ಯ 5.8
  • ನಾಗಪುರ 5.5
  • ಅರೆಕೆರೆ 5.4
  • ಮಾರತಹಳ್ಳಿ 5.3
  • ಬಾಗಲಕುಂಟೆ 5.3
  • ಕೋರಮಂಗಲ 4.9
  • ದಯಾನಂದ ನಗರ 4.9
  • ವಿದ್ಯಾಪೀಠ 4.8
  • ಬಿಟಿಎಂ ಲೇಔಟ್ 4.4
  • ಸಿಂಗಸಂದ್ರ 4.3
  • ಹೊರಮಾವು 4.2ಇದನ್ನೂ ಓದಿ: ಮಳೆಗೆ ಬೆಂಗಳೂರು ತತ್ತರ; ಕರಿಯಮ್ಮ ಅಗ್ರಹಾರ ಬಳಿ ರಸ್ತೆ ಜಲಾವೃತ, ವಾಹನಗಳಲ್ಲಿ ಸಿಲುಕಿದ್ದ 50ಕ್ಕೂ ಹೆಚ್ಚು ಜನರ ರಕ್ಷಣೆ

    ಧಾರಾಕಾರ ಮಳೆಗೆ ತತ್ತರಿಸಿದ ಜನ

    ರಾಜಧಾನಿ ಬೆಂಗಳೂರಿನಲ್ಲಿ ನಿನ್ನೆ ಮಳೆಗೆ ಮೆಜೆಸ್ಟಿಕ್, ಕೆ.ಆರ್.ಮಾರ್ಕೆಟ್, ಸದಾಶಿವನಗರ, ಶಾಂತಿನಗರ, ರಿಚ್​ಮಂಡ್ ಟೌನ್, BTM ಲೇಔಟ್, ವಿಜಯನಗರ, ರಾಜರಾಜೇಶ್ವರಿ ನಗರ, ಕೆಂಗೇರಿ, ನಾಯಂಡಹಳ್ಳಿ, ಹೊಸಕೆರೆಹಳ್ಳಿ ಸೇರಿದಂತೆ ಹಲವೆಡೆ ಮಳೆಯಾಗಿದೆ. ಮಳೆಯಿಂದ ರಸ್ತೆಯಲ್ಲಿ ನೀರು ನಿಂತು ವಾಹನ ಸವಾರರು, ರಸ್ತೆ ಬದಿ ವ್ಯಾಪಾರಿಗಳ ಪರದಾಟ ನಡೆಸಿದ್ರು. ಮಳೆಯಿಂದ ನಗರದ ಹಲವೆಡೆ ಟ್ರಾಫಿಕ್ ಜಾಮ್​ ಉಂಟಾಗಿತ್ತು.

ಬೆಂಗಳೂರಿನಲ್ಲಿ ಧಾರಾಕಾರ ಮಳೆಗೆ ಜನ ತತ್ತರಿಸಿ ಹೋಗಿದ್ದಾರೆ. ಹೊಸೂರು ರಸ್ತೆಯ ರೂಪೇನಾ ಅಗ್ರಹಾರ, ಹರಳೂರು ಜಂಕ್ಷನ್, ನಾಯಂಡಹಳ್ಳಿ, ಶೇಷಾದ್ರಿಪುರಂ, ರೈಲ್ವೆ ಅಂಡರ್​ಪಾಸ್, ವಿಜಯನಗರದ ಧನಂಜಯ ಪ್ಯಾಲೇಸ್ ಬಳಿ ಜಲಾವೃತಗೊಂಡಿದ್ವು. ಬನ್ನೇರುಘಟ್ಟ ರಸ್ತೆ, ನಾಗಾರ್ಜುನ ಜಂಕ್ಷನ್, ಅನಿಲ್ ಕುಂಬ್ಳೆ ವೃತ್ತ, ಕಲ್ಯಾಣನಗರ ಬ್ರಿಡ್ಜ್, ಹೆಸರಘಟ್ಟದಲ್ಲಿ ರಸ್ತೆ ಜಲಮಯವಾಗಿದ್ವು. ರಸ್ತೆಯಲ್ಲಿ ಹೊಳೆಯಂತೆ ಹರಿಯುತ್ತಿರುವ ನೀರು ಹರಿಯುತ್ತಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ