Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಿಜಾಬ್ ವಿಚಾರ ಇಷ್ಟೆಲ್ಲಾ ನಡೆಯುತ್ತಿರುವಾಗ ಗುಪ್ತಚರ ಇಲಾಖೆ ಏನು ಮಾಡ್ತಿತ್ತು; ಕಾಂಗ್ರೆಸ್ ಶಾಸಕ‌ ರಮೇಶ್ ಕುಮಾರ್

ಗುಪ್ತಚರ ಇಲಾಖೆಯವರು ಮುಖ್ಯಮಂತ್ರಿಗಳಿಗೆ ಸಲಹೆ ಕೊಟ್ಟು ಕೊಟ್ಟು ಸಿಎಂಗಳು ಸೋತು ಮನೆಗೆ ವಾಪಸ್ ಬಂದಿದ್ದು. ಸಮಾಜದ ಶಾಂತಿ ಭಂಗ ಮಾಡುವವರನ್ನು ಪತ್ತೆ ಹಚ್ಚಬೇಕು. ಹಾಗಾದಾಗ ಶಾಂತಿಯಿಂದ ಬದುಕಲು ಸಾಧ್ಯ ಎಂದು ವಿಧಾನಸಭೆಯಲ್ಲಿ ಕಾಂಗ್ರೆಸ್ ಶಾಸಕ‌ ರಮೇಶ್ ಕುಮಾರ್ ತಿಳಿಸಿದ್ದಾರೆ.

ಹಿಜಾಬ್ ವಿಚಾರ ಇಷ್ಟೆಲ್ಲಾ ನಡೆಯುತ್ತಿರುವಾಗ ಗುಪ್ತಚರ ಇಲಾಖೆ ಏನು ಮಾಡ್ತಿತ್ತು; ಕಾಂಗ್ರೆಸ್ ಶಾಸಕ‌ ರಮೇಶ್ ಕುಮಾರ್
ಕಾಂಗ್ರೆಸ್ ಶಾಸಕ‌ ರಮೇಶ್ ಕುಮಾರ್
Follow us
TV9 Web
| Updated By: preethi shettigar

Updated on:Mar 23, 2022 | 7:05 PM

ಬೆಂಗಳೂರು: ಹಿಜಾಬ್ ವಿಚಾರ ಇಷ್ಟೆಲ್ಲಾ ನಡೆಯುತ್ತಿರುವಾಗ ಗುಪ್ತಚರ ಇಲಾಖೆ ಏನು ಮಾಡುತ್ತಿತ್ತು? ಹಿಜಾಬ್ (Hijab) ವಿಚಾರದ ಬೆಳವಣಿಗೆಯಲ್ಲಿ ಗುಪ್ತಚರ ಇಲಾಖೆ ವಿಫಲವಾಗಿದೆ. ಮಕ್ಕಳ ಮೈಂಡ್ ವಾಶ್ ಮಾಡುವ ಇಂತಹ ಘಟನೆಗಳ ಬಗ್ಗೆ ಎಚ್ಚೆತ್ತುಕೊಂಡಿದ್ದರೆ ಇಂತಹ ಅನಾಹುತಗಳು ಆಗುತ್ತಿತ್ತಾ? ಗುಪ್ತಚರ ಇಲಾಖೆ ಸತ್ತು ಹೋಗಿತ್ತಾ?  ಗುಪ್ತಚರ ಇಲಾಖೆಯವರು ಮುಖ್ಯಮಂತ್ರಿಗಳಿಗೆ ಸಲಹೆ ಕೊಟ್ಟು ಕೊಟ್ಟು ಸಿಎಂಗಳು ಸೋತು ಮನೆಗೆ ವಾಪಸ್ ಬಂದಿದ್ದು. ಸಮಾಜದ ಶಾಂತಿ ಭಂಗ ಮಾಡುವವರನ್ನು ಪತ್ತೆ ಹಚ್ಚಬೇಕು. ಹಾಗಾದಾಗ ಶಾಂತಿಯಿಂದ ಬದುಕಲು ಸಾಧ್ಯ ಎಂದು ವಿಧಾನಸಭೆಯಲ್ಲಿ ಕಾಂಗ್ರೆಸ್(Congress) ಶಾಸಕ‌ ರಮೇಶ್ ಕುಮಾರ್(Ramesh kumar) ತಿಳಿಸಿದ್ದಾರೆ.

ಬಳಿಕ ಮಾತನಾಡಿದ ಅವರು, ಗುಪ್ತಚರ ಇಲಾಖೆಯ ಡಿಜಿ ಪ್ರತಿನಿತ್ಯ ಸಿಎಂಗೆ ಮಾಹಿತಿ ನೀಡುತ್ತಾರೆ. ಅವರಿಗೆ ಮಾಹಿತಿ ಕೊಡುವುದು ಅವರ ಕೆಳಗಿನ ಅಧಿಕಾರಿಗಳು. ನಮ್ಮೂರಲ್ಲಿ ಒಬ್ಬ ಇಂಟಲಿಜೆನ್ಸ್ ಇದ್ದಾರೆ. ಅವರು ನಿತ್ಯ ನನ್ನ ಕಾರ್ ಚಾಲಕನಿಗೆ ಕರೆ ಮಾಡಿ ಸಾಹೇಬ್ರು ಎಲ್ಲಿ ಹೋಗ್ತಾರೆ ಎಂದು ವಿಚಾರಿಸುತ್ತಾರೆ. ನಾನು ಬೆಂಗಳೂರು ಬಿಟ್ಟರೆ ಮನೆಗೆ ಮನೆ ಬಿಟ್ಟರೆ ತೋಟಕ್ಕೆ ಹೋಗುತ್ತೇನೆ. ಅವನು ಕೊಡೋದೇ ಇಂಟಲಿಜೆನ್ಸ್. ಇವರನ್ನು ಅವಲಂಬಿಸಿಕೊಂಡು ರಾಜ್ಯ ನಡೆಸಲು ನಾವು ನಿಂತಿದ್ದೇವೆ. ಆದರೆ ಅವರು ಜವಾಬ್ದಾರಿಯಿಂದ ವಿಮುಖರಾದಾಗ ಕಷ್ಟಗಳನ್ನು ಎದುರಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.

ಗುಪ್ತಚರ ಇಲಾಖೆ ಇಲ್ಲದಿರುತ್ತಿದ್ದರೆ ನಾವೆಲ್ಲಾ ಬದುಕಿರುತ್ತಿರಲಿಲ್ಲ: ಸಚಿವ ಈಶ್ವರಪ್ಪ

ರಮೇಶ್​ ಕುಮಾರ್​ ಮಾತಿಗೆ ಸಚಿವ ಈಶ್ವರಪ್ಪ ಪ್ರತಿಕ್ರಿಯೆ ನೀಡಿದ್ದು, ಗುಪ್ತಚರ ಇಲಾಖೆ ತನ್ನ ಕೆಲಸ ತಾನು ಮಾಡುತ್ತಿದೆ. ಗುಪ್ತಚರ ಇಲಾಖೆ ಇಲ್ಲದಿರುತ್ತಿದ್ದರೆ ನಾವೆಲ್ಲಾ ಬದುಕಿರುತ್ತಿರಲಿಲ್ಲ. ಅಂದು ಶಿವಮೊಗ್ಗದಲ್ಲಿ ಯುವಕನ ಹತ್ಯೆ ಆದಾಗ ಗುಪ್ತಚರ ಇಲಾಖೆ ಕೆಲಸ ಮಾಡದೇ ಇದ್ದರೆ ಎಷ್ಟೋ ಹೆಣಗಳು ಬೀಳ್ತಾ ಇದ್ದವು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ರಾಜ್ಯದಲ್ಲಿ ಯುಗಾದಿಯನ್ನ ಧಾರ್ಮಿಕ ದಿನವನ್ನಾಗಿ ಆಚರಿಸಲು ಮುಜರಾಯಿ‌ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಸೂಚನೆ

ಎಂಪಿ ರೇಣುಕಾಚಾರ್ಯ ಪುತ್ರಿಯ ಜಾತಿ ಪ್ರಮಾಣ ಪತ್ರದ ಬಗ್ಗೆ ವಿಧಾನಸಭೆಯಲ್ಲಿ ಜಟಾಪಟಿ; ಏನಿದು ವಿಚಾರ?

Published On - 6:59 pm, Wed, 23 March 22