ರಾಜಕಾಲುವೆ ಮೇಲೆ ಕಟ್ಟಡ ನಿರ್ಮಾಣಕ್ಕೆ ಅನುಮತಿ ಕೊಟ್ಟಿದ್ಯಾರು? ಡಿಕೆ ಶಿವಕುಮಾರ್ ವಿರುದ್ಧ ಸಚಿವ ಡಾ ಸುಧಾಕರ್ ವಾಗ್ದಾಳಿ
ಮಳೆಯ ಅವಾಂತರವನ್ನು ರಾಜ್ಯ ಸರ್ಕಾರ ಸವಾಲಾಗಿ ಸ್ವೀಕರಿಸಿದೆ. ಎಲ್ಲವನ್ನೂ ರಾಜಕಾರಣ ಮಾಡಲು ಹೊರಟಿದ್ದಾರೆ. ಬೆಂಗಳೂರಿಗೆ ಅರ್ಬನ್ ಮಾಸ್ಟರ್‌ಪ್ಲ್ಯಾನ್ ಇಲ್ಲ. ಕಾಂಗ್ರೆಸ್ ನವರು ವಸತಿ ಬಡಾವಣೆಗಳಿಗೆ ಬೇಕಾಬಿಟ್ಟಿ ಅನುಮತಿ ಕೊಟ್ಟಿದ್ದಾರೆ.
ಚಿಕ್ಕಬಳ್ಳಾಪುರ: ಬಫರ್‌ಜೋನ್‌ಗಳಲ್ಲಿ ಬಡಾವಣೆಗೆ ಅನುಮತಿ ಕೊಟ್ಟಿದ್ದು ಯಾರು? ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್(DK Shivakumar) ವಿರುದ್ಧ ಸಚಿವ ಡಾ.ಕೆ.ಸುಧಾಕರ್(Dr K Sudhakar) ವಾಗ್ದಾಳಿ ನಡೆಸಿದ್ದಾರೆ. ರಾಜಕಾಲುವೆ ಮೇಲೆ ಕಟ್ಟಡ ನಿರ್ಮಾಣಕ್ಕೆ ಅನುಮತಿ ಕೊಟ್ಟಿದ್ಯಾರು? ವಸತಿ ಬಡಾವಣೆಯಿಂದ ತಗ್ಗು ಪ್ರದೇಶಗಳು ಜಲಾವೃತವಾಗಿವೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.
ಇಂದು ಬೆಂಗಳೂರು ಜಲಾವೃತವಾಗಲು ಕಾರಣವೇನು ಅಂತ ಯಾರಾದ್ರು ಯೋಚನೆ ಮಾಡಿದ್ದೀರಾ? ಇರೋ ಬರೋ ಕೆರೆ ಕುಂಟೆಗಳನ್ನು ನುಂಗಿದ್ದು ಯಾರು? ಕೆರೆಗಳ ಒತ್ತುವರಿ ಮಾಡಿದ್ದು ಯಾರು? ವಸತಿ ಬಡಾವಣೆ ಮಾಡಿದ್ದು ಯಾರು? ಬೆಂಗಳೂರನ್ನು ಹಾಳು ಮಾಡುವ ಸರ್ಕಾರಗಳು ಬಂದು ಹೋಗಿವೆ. ಬೆಂಗಳೂರನ್ನು ಹಾಳು ಮಾಡಿದ್ದರಿಂದ ಅದರ ಬಳುವಳಿಯನ್ನು ಈಗ ನಾವು ಸ್ವೀಕರಿಸುವಂತಾಗಿದೆ ಎಂದು ಆರೋಗ್ಯ ಖಾತೆ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಡಿಕೆ ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿಗೆ ಅರ್ಬನ್ ಮಾಸ್ಟರ್‌ಪ್ಲ್ಯಾನ್ ಇಲ್ಲ
ಮಳೆಯ ಅವಾಂತರವನ್ನು ರಾಜ್ಯ ಸರ್ಕಾರ ಸವಾಲಾಗಿ ಸ್ವೀಕರಿಸಿದೆ. ಎಲ್ಲವನ್ನೂ ರಾಜಕಾರಣ ಮಾಡಲು ಹೊರಟಿದ್ದಾರೆ. ಬೆಂಗಳೂರಿಗೆ ಅರ್ಬನ್ ಮಾಸ್ಟರ್‌ಪ್ಲ್ಯಾನ್ ಇಲ್ಲ. ಕಾಂಗ್ರೆಸ್ ನವರು ವಸತಿ ಬಡಾವಣೆಗಳಿಗೆ ಬೇಕಾಬಿಟ್ಟಿ ಅನುಮತಿ ಕೊಟ್ಟಿದ್ದಾರೆ. ಬೆಂಗಳೂರು ನಗರ ಹಾಳು ಮಾಡಿದ್ದು ಯಾರೆಂದು ಚರ್ಚೆ ಆಗಲಿ. ಬೆಂಗಳೂರಲ್ಲಿ ಯಾವಯಾವ ಪ್ರದೇಶಗಳನ್ನು ನುಂಗಿ ಹಾಕಲಾಗಿದೆ ಎಂದು ಚಿಕ್ಕಬಳ್ಳಾಪುರದಲ್ಲಿ ಡಿ.ಕೆ.ಶಿವಕುಮಾರ್‌ಗೆ ಸಚಿವ ಸುಧಾಕರ್ ಪ್ರಶ್ನೆ ಮಾಡಿದ್ದಾರೆ.
ಬಿಜೆಪಿಯವರು ಜೆಡಿಎಸ್ಗೆ ಒಳ್ಳೇ ಮಕ್ಮಲ್ ಟೋಪಿ ಹಾಕಿದ್ದಾರೆ: ವಿರೋಧ ಪಕ್ಷಗಳ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ
ಚಾಮರಾಜನಗರ: ಮೈಸೂರು ಪಾಲಿಕೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ವಿಚಾರಕ್ಕೆ ಸಂಬಂಧಿಸಿ ಗುಂಡ್ಲುಪೇಟೆಯಲ್ಲಿ ಜೆಡಿಎಸ್ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. ಮೇಯರ್ ಚುನಾವಣೆಯಲ್ಲಿ ಜೆಡಿಎಸ್ನವರು ಮಂಗಗಳಾಗಿದ್ದಾರೆ. ಮೇಯರ್, ಉಪಮೇಯರ್ ಸ್ಥಾನವನ್ನು ಬಿಜೆಪಿಗೆ ಬಿಟ್ಟುಕೊಟ್ಟಿದ್ದಾರೆ. ಬಿಜೆಪಿಯವರು ಜೆಡಿಎಸ್ಗೆ ಒಳ್ಳೇ ಮಕ್ಮಲ್ ಟೋಕಿ ಹಾಕಿದ್ದಾರೆ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಮಕ್ಮಲ್ ಟೋಪಿ ಹಾಕಿ ಎರಡೂ ಸ್ಥಾನವನ್ನು ಹೊಡೆದುಕೊಂಡಿದ್ದಾರೆ. ಮೂರು ಪಕ್ಷಗಳು ಏಕಾಂಗಿಯಾಗಿ ಸ್ಪರ್ಧಿಸಿದ್ರೆ ಕಾಂಗ್ರೆಸ್ ಅಧಿಕಾರಕ್ಕೆ ಬರ್ತಿತ್ತು. ಜೆಡಿಎಸ್ನವರು ಬಿಜೆಪಿ ಪಕ್ಷದ ಜೊತೆ ಹೋಗುವುದು ಜಾತ್ಯತೀತವಾ? ಜೆಡಿಎಸ್ ಪಕ್ಷದವರಿಗೆ ರಾಜಕೀಯ ಘನತೆ ಇಲ್ಲ. ಜೆಡಿಎಸ್ ಅವಕಾಶವಾದಿ ಪಕ್ಷ ಎಂಬುದು ಮತ್ತೊಮ್ಮೆ ಸಾಬೀತಾಗಿದೆ ಎಂದು ಸಿದ್ದರಾಮಯ್ಯ ಟೀಕೆ ಮಾಡಿದ್ದಾರೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 9:27 pm, Tue, 6 September 22