ಬೆಂಗಳೂರಿಗೆ ನಾಳೆಯಿಂದ ಎಂದಿನಂತೆ ಕಾವೇರಿ ನೀರು ಪೂರೈಕೆ: ಬೆಂಗಳೂರು ಜಲ ಮಂಡಳಿ ಹಿರಿಯ ಅಧಿಕಾರಿ

ಬೆಂಗಳೂರಿಗೆ ನಾಳೆಯಿಂದ ಎಂದಿನಂತೆ ಕಾವೇರಿ ನೀರು ಪೂರೈಕೆಯಾಗಲಿದ್ದು, ಬೆಳಗ್ಗೆ ಅಥವಾ ಮಧ್ಯಾಹ್ನದೊಳಗೆ ನೀರು ಪೂರೈಕೆಯಲ್ಲಿ ಯಥಾಸ್ಥಿತಿ ಕಾಪಾಡಿಕೊಳ್ಳಲಾಗುತ್ತದೆ ಎಂದು ಬೆಂಗಳೂರು ಜಲ ಮಂಡಳಿಯ ಸಾರ್ವಜನಿಕ ಸಂಪರ್ಕಾಧಿಕಾರಿ ಮಾಹಿತಿ ನೀಡಿದ್ದಾರೆ.

ಬೆಂಗಳೂರಿಗೆ ನಾಳೆಯಿಂದ ಎಂದಿನಂತೆ ಕಾವೇರಿ ನೀರು ಪೂರೈಕೆ: ಬೆಂಗಳೂರು ಜಲ ಮಂಡಳಿ ಹಿರಿಯ ಅಧಿಕಾರಿ
ಬೆಂಗಳೂರು ಜಲ ಮಂಡಳಿ
Follow us
TV9 Web
| Updated By: ವಿವೇಕ ಬಿರಾದಾರ

Updated on:Sep 06, 2022 | 10:02 PM

ಬೆಂಗಳೂರು: ಬೆಂಗಳೂರಿಗೆ (Bengaluru) ನಾಳೆಯಿಂದ ಎಂದಿನಂತೆ ಕಾವೇರಿ ನೀರು (Kaveri water) ಪೂರೈಕೆಯಾಗಲಿದ್ದು, ಬೆಳಗ್ಗೆ ಅಥವಾ ಮಧ್ಯಾಹ್ನದೊಳಗೆ ನೀರು ಪೂರೈಕೆಯಲ್ಲಿ ಯಥಾಸ್ಥಿತಿ ಕಾಪಾಡಿಕೊಳ್ಳಲಾಗುತ್ತದೆ ಎಂದು ಬೆಂಗಳೂರು ಜಲ ಮಂಡಳಿಯ (BWSSB) ಸಾರ್ವಜನಿಕ ಸಂಪರ್ಕಾಧಿಕಾರಿ ಮಾಹಿತಿ ನೀಡಿದ್ದಾರೆ. ಸದ್ಯ 4TH ಸ್ಟೇಜ್‌ನ ಫೇಸ್ 2ರ ಪಂಪ್‌ ಸಿದ್ಧಗೊಳಿಸಿ ಕಾರ್ಯಾರಂಭ ಮಾಡಲಾಗಿದೆ. ಫೇಸ್‌ 2ರ ಪಂಪ್ ಸೆಟ್‌ 110 ಎಂಎಲ್‌ಡಿ ನೀರು ಸಾಮರ್ಥ್ಯಹೊಂದಿದೆ. ಉಳಿದ ಕಾರ್ಯ ತ್ವರಿತಗತಿಯಲ್ಲಿ ಆಗುತ್ತೆ. ಇಂದು ತಡರಾತ್ರಿಯವರೆಗೆ ದುರಸ್ತಿ ಕಾರ್ಯ ನಡೆಯಲಿದೆ.

ನಾಳೆಯಿಂದ ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬೆಂಗಳೂರು ಜಲಮಂಡಳಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.  ಟಿಕೆ ಹಳ್ಳಿಯಲ್ಲಿ ಮಳೆ ನೀರು ತೆರುವು ಮಾಡಲಾಗಿದೆ. ಟಿಕೆ ಹಳ್ಳಿಯ ಜಲಸಂಗ್ರಹಗಾರದ ಪೇಸ್ 3 ಹಾಗೂ ಪೇಸ್ 4 ಪಂಪ್ ಮೋಟಾರ್ ದುರಸ್ಥಿ ಕಾರ್ಯ ಯಶಸ್ವಿಯಾಗಿದೆ.

14450 ಎಂಎಲ್ ಡಿ ನೀರನ್ನು ಎಂದಿನಂತೆ ಬೆಂಗಳೂರಿಗೆ ಸರಬರಾಜು ಮಾಡಲಾಗುತ್ತೆ ನಾಳೆಯಿಂದ ಬೆಂಗಳೂರು ಜನತೆಗೆ ನೀರಿನ ವ್ಯತ್ಯಯವಾಗೋದಿಲ್ಲ ಅಂತಾ ಜಲಮಂಡಳಿ ಅಧಿಕಾರಿಗಳು ಸಿಎಂ ಬೊಮ್ಮಾಯಿ ಅವರಿಗೆ ಮಾಹಿತಿ ನೀಡಿದ್ದಾರೆ.

ಟಿಕೆ ಹಳ್ಳಿ ಜಲಮಂಡಳಿಗೆ ನುಗ್ಗಿದ ಮಳೆ ನೀರು ಹೊರಕ್ಕೆ; ಯಂತ್ರಗಳಿಗೆ ಚಾಲನೆ ನೀಡಿದ ಅಧಿಕಾರಿಗಳು

ಮಂಡ್ಯ: ಬಿಡಬ್ಲ್ಯೂಎಸ್ಎಸ್​ಬಿ(BWSSB) ಬೆಂಗಳೂರಿಗರಿಗೆ ಗುಡ್ ನ್ಯೂಸ್ ಕೊಟ್ಟಿದೆ. ರಾಜಧಾನಿ ಬೆಂಗಳೂರಿಗೆ ಕಾವೇರಿ ನೀರು ಸರಬರಾಜು ಮಾಡುವ ಟಿಕೆ ಹಳ್ಳಿ ಜಲ ಮಂಡಳಿಗೆ ನೀರು ನುಗ್ಗಿದ್ದು ಯಂತ್ರಗಳು ನೀರಲ್ಲಿ ಮುಳುಗಿದ್ದವು. ಸದ್ಯ ಸಿಬ್ಬಂದಿ ನೀರನ್ನು ತೆರವುಗೊಳಿಸಿ ಯಂತ್ರಗಳನ್ನು ಪರಿಶೀಲಿಸಿ ಮರು ಚಾಲನೆಗೆ ಸಿದ್ಧರಾಗಿದ್ದಾರೆ. ಈ ಮೂಲಕ ಕಾವೇರಿ ಜಲಾಯನ ಅಧಿಕಾರಿಗಳು ರಾಜಧಾನಿ ಮಂದಿಗೆ ರಿಲೀಫ್ ಕೊಟ್ಟಿದ್ದಾರೆ.

ನಿನ್ನೆ ಸುರಿದ ಭಾರೀ ಮಳೆಯಿಂದ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಟಿಕೆ ಹಳ್ಳಿ ಜಲ ಮಂಡಳಿಗೆ ನೀರು ನುಗ್ಗಿತ್ತು. ನೀರು ನುಗಿದ್ದ ಪರಿಣಾಮ ಸೆಕ್ಟರ್ 4 ರ ನೀರು ಸರಬರಾಜು ಕೇಂದ್ರಗಳು ಮುಳುಗಡೆಯಾಗಿದ್ದವು. ಟಿಕೆ ಹಳ್ಳಿಯ ಕಾವೇರಿ ಜಲಾಯನ ಕೇಂದ್ರ ರಾಜಧಾನಿ ಬೆಂಗಳೂರಿಗೆ ಕಾವೇರಿ ನೀರು ಸರಬರಾಜು ಮಾಡುವ ಕೆಲಸ ಮಾಡುತ್ತದೆ. ಸದ್ಯ ನೀರು ತಗಿಯುವಲ್ಲಿ ಸಿಬ್ಬಂದಿ ಭಾಗಶಃ ಯಶಸ್ವಿಯಾಗಿದ್ದಾರೆ. ಕಾವೇರಿ ಜಲಮಂಡಳಿಯ 4 ನೇ ಹಂತಕ್ಕೆ ಮಳೆ ನೀರು ನುಗ್ಗಿದೆ. BWSSB ಅಧಿಕಾರಿಗಳು ಈಗಾಗ್ಲೆ ಒಂದು ಯಂತ್ರವನ್ನ ಪ್ರಾಯೋಗಿಕವಾಗಿ ಚಾಲನೆ ಕೊಟ್ಟಿದ್ದಾರೆ. ನಾಳೆ ಮಧ್ಯಾಹ್ನದ ವೇಳೆಗೆ ಎಲ್ಲಾ ಯಂತ್ರಗಳನ್ನೂ ಚಾಲನೆ ಮಾಡುವ ಭರವಸೆಯನ್ನು ಅಧಿಕಾರಿಗಳು ನೀಡಿದ್ದು ನಾಳೆ ಮಧ್ಯಾಹ್ನದಿಂದಲೇ ಯಂತ್ರಗಳು ಕೆಲಸ ಮಾಡಲಿವೆ.

ರಾಜ್ಯದ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:41 pm, Tue, 6 September 22

ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಮರಣಾಂತ ಉಪವಾಸ ಸತ್ಯಾಗ್ರಹ, ಪ್ರಶಾಂತ್ ಕಿಶೋರ್ ಬಂಧನ
ಆಮರಣಾಂತ ಉಪವಾಸ ಸತ್ಯಾಗ್ರಹ, ಪ್ರಶಾಂತ್ ಕಿಶೋರ್ ಬಂಧನ
ಈ ವಾರದ ಟಾಸ್ಕ್​ ಗೆದ್ದರೆ ಸಿಗಲಿದೆ ಡೈರೆಕ್ಟ್​ ಫಿನಾಲೆಗೆ ಏರುವ ಟಿಕೆಟ್
ಈ ವಾರದ ಟಾಸ್ಕ್​ ಗೆದ್ದರೆ ಸಿಗಲಿದೆ ಡೈರೆಕ್ಟ್​ ಫಿನಾಲೆಗೆ ಏರುವ ಟಿಕೆಟ್
Daily Devotional: ಪಚ್ಚ ಕರ್ಪೂರದ ಮಹತ್ವ ಮತ್ತು ಉಪಯೋಗ ತಿಳಿಯಿರಿ
Daily Devotional: ಪಚ್ಚ ಕರ್ಪೂರದ ಮಹತ್ವ ಮತ್ತು ಉಪಯೋಗ ತಿಳಿಯಿರಿ
ಈ ರಾಶಿಯವರಿಗೆ ಇಂದು ಹಣಕಾಸಿನ ವಿಷಯದಲ್ಲಿ ಒಳ್ಳೆಯದಾಗುತ್ತೆ
ಈ ರಾಶಿಯವರಿಗೆ ಇಂದು ಹಣಕಾಸಿನ ವಿಷಯದಲ್ಲಿ ಒಳ್ಳೆಯದಾಗುತ್ತೆ