ಬೆತ್ತಲೆ ಓಡಾಟ, ಫೋನ್ ನೋಡಿ ಲೈಂಗಿಕ ಕ್ರಿಯೆಗೆ ಒತ್ತಾಯ: ಸೈಕೋ ಪತಿ ಕಾಟಕ್ಕೆ ಪತ್ನಿ ಕಂಗಾಲು

ಪತಿಯ ವಿಚಿತ್ರ ವರ್ತನೆ ಮತ್ತು ಲೈಂಗಿಕ ಕಿರುಕುಳದಿಂದ ಬೇಸತ್ತ ಪತ್ನಿ ಪೊಲೀಸರಿಗೆ ದೂರು ನೀಡಿರುವ ಪ್ರಸಂಗ ಬೆಂಗಳೂರಲ್ಲಿ ನಡೆದಿದೆ. ಮದುವೆಯ ನಂತರ ಪತಿ ಸೈಕೋ ರೀತಿ ವರ್ತಿಸುತ್ತಿದ್ದು, ಫೋನ್ ನೋಡಿ ಲೈಂಗಿಕ ಕ್ರಿಯೆಗೆ ಒತ್ತಾಯಿಸುತ್ತಾನೆ. ಮನೆಯವರ ಮುಂದೆಯೇ ಬೆತ್ತಲೆಯಾಗಿ ಓಡಾಡಿ ಮುಜುಗರ ಉಂಟುಮಾಡುತ್ತಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾಳೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಬೆತ್ತಲೆ ಓಡಾಟ, ಫೋನ್ ನೋಡಿ ಲೈಂಗಿಕ ಕ್ರಿಯೆಗೆ ಒತ್ತಾಯ: ಸೈಕೋ ಪತಿ ಕಾಟಕ್ಕೆ ಪತ್ನಿ ಕಂಗಾಲು
ಪತಿ ವಿರುದ್ಧ ಪತ್ನಿ ದೂರು
Edited By:

Updated on: Dec 30, 2025 | 1:06 PM

ಬೆಂಗಳೂರು, ಡಿಸೆಂಬರ್​​ 30: ಅವರಿಬ್ಬರು ಒಂದೇ ಖಾಸಗಿ ಕಂಪನಿಯಲ್ಲಿ ಸಹೋದ್ಯೋಗಿಗಳು. ಹೆಚ್​​ಆರ್​​ ಆಗಿದ್ದ ಇಬ್ಬರ ಪರಿಚಯ ಬಳಿಕ ಪ್ರೀತಿಗೆ ತಿರುಗಿತ್ತು. ಯುವತಿಯನ್ನು ಪ್ರೀತಿಸಿದ್ದ ಆತ ಆಕೆಯ ಮನೆಯವರನ್ನೂ ಒಪ್ಪಿಸಿದ್ದ. ಬಳಿಕ ಸೆಪ್ಟೆಂಬರ್​​ 03, 2025ರಂದು ಚಿಂತಾಮಣಿಯಲ್ಲಿ ಕುಟುಂಬಸ್ಥರೇ ನಿಂತು ಇವರ ವಿವಾಹವನ್ನೂ ನಡೆಸಿದ್ದರು. ಆದರೀಗ ಸೈಕೋ ಪತಿ ಕಾಟಕ್ಕೆ ಪತ್ನಿ ಬೆಚ್ಚಿಬಿದ್ದಿದ್ದಾಳೆ. ತಾನು ಮದುವೆಯಾಗಿದ್ದು ಇಂತವನನ್ನಾ ಎಂದು ಗೋಗರೆಯುತ್ತಿದ್ದಾಳೆ.

ಹೌದು, ಮದುವೆಯಾಗಿ ಕೆಲ ದಿನಗಳು ಚೆನ್ನಾಗಿಯೇ ಇದ್ದ ಪತಿ ಮಂಜುನಾಥ್ ಈಗ​ ಸೈಕೋ ರೀತಿ ವರ್ತಿಸುತ್ತಿರೋದನ್ನು ಕಂಡು ಪತ್ನಿ ಬೆಚ್ಚಿಬಿದ್ದಿದ್ದಾಳೆ. ಫೋನ್ ನೋಡಿ ಲೈಂಗಿಕ ಕ್ರಿಯೆಗೆ ಒತ್ತಾಯ ಮಾಡುವ ಈತ, ಮನೆಯಲ್ಲಿ ಎಲ್ಲರ ಮುಂದೆಯೇ ಬೆತ್ತಲೆಯಾಗಿ ಓಡಾಡ್ತಾನೆ. ಅತ್ತೆ ಮಾವನ ಮುಂದೆಯೇ ಬಟ್ಟೆಯಿಲ್ಲದೆ ತಿರುಗಾಡೋದಲ್ಲದೆ, ಹಾಗೆಯೇ ಪ್ಯಾಸೇಜ್​​ಗೆ ಕೂಡ ಹೋಗಿ ಅಕ್ಕ ಪಕ್ಕದವರಿಗೂ ಮುಜುಗರ ಉಂಟುಮಾಡ್ತಿದ್ದಾನೆ ಎಂದು ಪತ್ನಿ ಆರೋಪಿಸಿದ್ದಾಳೆ. ಗಂಡನ ವಿಚಿತ್ರ ವರ್ತನೆ, ಕಿರುಕುಳಕ್ಕೆ ಬೇಸತ್ತಿರೋ ಮಹಿಳೆ ಇದೀಗ ಪೊಲೀಸ್​​ ಠಾಣೆ ಮೆಟ್ಟಿಲೇರಿ ಪತಿ ವಿರುದ್ಧವೇ ದೂರು ದಾಖಲಿಸಿದ್ದಾಳೆ.

ಇದನ್ನೂ ಓದಿ: ನ್ಯಾಯ ಕೊಡಿಸಿ, ಇಲ್ಲದಿದ್ರೆ ಸಾಯ್ತೀನಿ; ಪತಿಗಾಗಿ ಪತ್ನಿ ಪ್ರೊಟೆಸ್ಟ್​​

ದೂರಲ್ಲಿ ಏನಿದೆ?

ತನಗೆ ಅವಾಚ್ಯ ಶಬ್ದಗಳಿಂದ ಬೈದು ದೈಹಿಕ ಮತ್ತು ಮಾನಸಿಕವಾಗಿ ಹಿಂಸೆಕೊಟ್ಟಿದ್ದ ಗಂಡ ಮಂಜುನಾಥ್​​ ಮನೆ ಬಿಟ್ಟು ಹೋಗಿದ್ದ. ಬಳಿಕ ಮತ್ತೆ ಮನೆ ಬಳಿ ಬಂದ ಆತ, ತನಗೆ ಮತ್ತು ತಾಯಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಹಲ್ಲೆಗೂ ಯತ್ನಿಸಿದ್ದಾನೆ. ಆತನ ಈ ಕೃತ್ಯಕ್ಕೆ ತನ್ನ ಅತ್ತೆ ಮತ್ತು ಮಾವ ಕೂಡ ಬೆಂಬಲ ನೀಡುತ್ತಿದ್ದಾರೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿ ಕೇಂದ್ರ ವಿಭಾಗದ ಮಹಿಳಾ ಠಾಣೆ ಪೊಲೀಸರು ತನಿಖೆ‌ ನಡೆಸುತ್ತಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 12:58 pm, Tue, 30 December 25