ಬೆಂಗಳೂರಿನಲ್ಲಿ ಭಾರಿ ಮಳೆಗೆ ವಿಪ್ರೊ ಕಂಪನಿಯ ಕಾಂಪೌಂಡ್ ಕುಸಿತ!

| Updated By: sandhya thejappa

Updated on: Oct 16, 2021 | 1:14 PM

ಬೆಂಗಳೂರಿನಲ್ಲಿ ಮತ್ತೊಂದು ಬಹುಮಹಡಿ ಕಟ್ಟಡ ವಾಲಿದೆ. ಏಳು ಅಂತಸ್ತಿನ ಕಟ್ಟಡ ಕುಸಿಯುವ ಹಂತದಲ್ಲಿದೆ. ಬಿನ್ನಿಮಿಲ್ ವೃತ್ತದ ಬಳಿಯ ಪೊಲೀಸ್ ಕ್ವಾರ್ಟಸ್​ನ ಕಟ್ಟಡ ಕುಸಿಯುವ ಹಂತದಲ್ಲಿದ್ದು, ಕ್ವಾರ್ಟಸ್​ನಲ್ಲಿ 32 ಕುಟುಂಬಗಳು ವಾಸವಾಗಿದ್ದವು.

ಬೆಂಗಳೂರಿನಲ್ಲಿ ಭಾರಿ ಮಳೆಗೆ ವಿಪ್ರೊ ಕಂಪನಿಯ ಕಾಂಪೌಂಡ್ ಕುಸಿತ!
ಕುಸಿದ ವಿಪ್ರೊ ಕಂಪನಿಯ ಕಾಂಪೌಂಡ್
Follow us on

ಆನೇಕಲ್: ಬೆಂಗಳೂರಿನಲ್ಲಿ ದಿನಕ್ಕೊಂದು ಕಟ್ಟಡ ಕುಸಿಯುತ್ತಿದೆ. ಮಳೆ ಅವಾಂತರದಿಂದ ಕಳೆದ ರಾತ್ರಿ ವಿಪ್ರೊ ಕಂಪನಿಯ ಕಾಂಪೌಂಡ್ ಕುಸಿದಿದೆ. ಭಾರಿ ಮಳೆಗೆ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಬಳಿಯ ವಿಪ್ರೊ ಕಂಪನಿಯ ಕಾಂಪೌಂಡ್ ಕುಸಿತಗೊಂಡಿದ್ದು, ಕಂಪನಿಯ ಒಳಗೆ ಮಳೆ ನೀರು ನುಗ್ಗಿದೆ. ಕಾಂಪೌಂಡ್ ಕುಸಿದು ಬಿದ್ದ ಸ್ಥಳದಿಂದ ನೀರು ನುಗ್ಗಿದೆ. ಕಾಂಪೌಂಡ್ ಗೋಡೆ 3ರಿಂದ 4 ಕಡೆ ಬಿರುಕು ಬಿಟ್ಟಿದೆ. 2 ವರ್ಷದ ಹಿಂದೆ ಇದೇ ರೀತಿ ಕಾಂಪೌಂಡ್ ಕುಸಿದಿತ್ತು. ಇನ್ನಷ್ಟು ಮಳೆಯಾದರೆ ಸಂಪೂರ್ಣ ಕಾಂಪೌಂಡ್ ಕುಸಿಯುವ ಆತಂಕ ಇದೆ.

ಮತ್ತೇ ಮಳೆ ಬಂದರೆ ಕಾಂಪೌಂಡ್ ಕುಸಿಯುವ ಬೀತಿಯಲ್ಲಿ ಸ್ಥಳೀಯರಿದ್ದಾರೆ. ಕಾಂಕ್ರೀಟ್ ಮತ್ತು ದಿಂಡು ಕಲ್ಲುಗಳಿಂದ ಕಾಂಪೌಂಡ್​ನ ನಿರ್ಮಿಸಲಾಗಿದೆ. ಕಾಂಪೌಂಡ್ ಕುಸಿದಿದ್ದರೂ ವಿಪ್ರೋ ಕಂಪನಿ ಅಧಿಕಾರಿಗಳು ಸ್ಥಳಕ್ಕೆ ಬಂದಿಲ್ಲ. ಸದ್ಯ ಕುಸಿದ ಸ್ಥಳಕ್ಕೆ ಶಾಸಕ ಎಂ ಕೃಷ್ಣಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಕೃಷ್ಣಪ್ಪ, ವಿಪ್ರೋ ಅಧಿಕಾರಿಗಳ ಮೇಲೆ ಗರಂ ಆಗಿದ್ದಾರೆ. ಸ್ಥಳಕ್ಕೆ ಭೇಟಿ ನೀಡುವಾಗ ಯಾವೊಬ್ಬ ವಿಪ್ರೋ ಅಧಿಕಾರಿಗಳು ಸ್ಥಳಕ್ಕೆ ಬರದಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ದೂರು ದಾಖಲಿಸಿ ಸಂಬಂಧಿಸಿದವರನ್ನ ಅರೆಸ್ಟ್ ಮಾಡಿ ಅಂತ ಶಾಸಕ ಎಂ ಕೃಷ್ಣಪ್ಪ ತಿಳಿಸಿದ್ದಾರೆ.

ಮತ್ತೊಂದು ಬಹುಮಹಡಿ ಕಟ್ಟಡ
ಬೆಂಗಳೂರಿನಲ್ಲಿ ಮತ್ತೊಂದು ಬಹುಮಹಡಿ ಕಟ್ಟಡ ವಾಲಿದೆ. ಏಳು ಅಂತಸ್ತಿನ ಕಟ್ಟಡ ಕುಸಿಯುವ ಹಂತದಲ್ಲಿದೆ. ಬಿನ್ನಿಮಿಲ್ ವೃತ್ತದ ಬಳಿಯ ಪೊಲೀಸ್ ಕ್ವಾರ್ಟಸ್​ನ ಕಟ್ಟಡ ಕುಸಿಯುವ ಹಂತದಲ್ಲಿದ್ದು, ಕ್ವಾರ್ಟಸ್​ನಲ್ಲಿ 32 ಕುಟುಂಬಗಳು ವಾಸವಾಗಿದ್ದವು. ಕಟ್ಟಡ ವಾಲುತ್ತಿದ್ದಂತೆ ಸಿಬ್ಬಂದಿ ಖಾಲಿ ಮಾಡಿಸಿ ಮುಂಜಾಗ್ರತೆ ಕೈಗೊಳ್ಳಲಾಗಿದೆ.

ಇದನ್ನೂ ಓದಿ

‘ಎರಡೂ ಡೋಸ್​ ಲಸಿಕೆ ಪಡೆದ ಭಾರತೀಯರು ಯುಎಸ್​ಗೆ ಪ್ರಯಾಣ ಮಾಡಬಹುದು’ -ಶ್ವೇತ ಭವನದಿಂದ ಹೊಸ ಮಾರ್ಗಸೂಚಿ ಘೋಷಣೆ

Sunny Deol: ‘ಗದರ್​ 2’ ಚಿತ್ರ ಘೋಷಿಸಿದ ಸನ್ನಿ ಡಿಯೋಲ್​: ಮೋಷನ್​ ಪೋಸ್ಟರ್​ ಜತೆ ರಿಲೀಸ್​ ಬಗ್ಗೆಯೂ ಸಿಕ್ತು ಮಾಹಿತಿ

Published On - 11:01 am, Sat, 16 October 21