ಆನೇಕಲ್: ಬೆಂಗಳೂರಿನಲ್ಲಿ ಅವೈಜ್ಞಾನಿಕ ರಸ್ತೆಗೆ ಮತ್ತೊಂದು ಜೀವ ಬಲಿಯಾಗಿದೆ. ಎಲೆಕ್ಟ್ರಾನಿಕ್ ಸಿಟಿಯ ವೀರಸಂದ್ರ ಬಳಿ ಲಾರಿ ಡಿಕ್ಕಿಯಾಗಿ ಗೂಡ್ಸ್ ಆಟೋದಲ್ಲಿದ್ದ ಮಹಿಳೆ ಆಟೋದಿಂದ ಕೆಳಗೆಬಿದ್ದು ಮೃತಪಟ್ಟಿದ್ದಾರೆ. ಪ್ರಮೀಳಾ(42) ಮೃತ ದುರ್ದೈವಿ.
ಘಟನೆಯಲ್ಲಿ ಬಾಲಕಿ ಸೇರಿ ಮೂವರಿಗೆ ಗಂಭೀರ ಗಾಯಗಳಾಗಿವೆ. ಗಾಯಳುಗಳನ್ನು ಖಾಸಗಿ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಮೇಲ್ಸೇತುವೆ ಇಳಿಜಾರಿನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ, ಹಾಗೂ ಲಾರಿ ಚಾಲಕನ ಅತಿವೇಗವೇ ಅಪಘಾತಕ್ಕೆ ಕಾರಣ ಎಂದು ಸಾರ್ವಜನಿಕರು ಆಕ್ರೋಶ ಹೊರ ಹಾಕಿದ್ದಾರೆ. ಎಲೆಕ್ಟ್ರಾನಿಕ್ ಸಿಟಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮರಕ್ಕೆ ನೇಣು ಬಿಗಿದುಕೊಂಡು ವೃದ್ಧ ಆತ್ಮಹತ್ಯೆ
ಬೆಂಗಳೂರು: ಉತ್ತರ ತಾಲೂಕಿನ ಹೊನ್ನಸಂದ್ರ ಗ್ರಾಮದ ಬಳಿ ಮರಕ್ಕೆ ನೇಣು ಬಿಗಿದುಕೊಂಡು ರಾಜಪ್ಪ(60) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕುಟುಂಬದವರು ನನ್ನ ಮಾತು ಕೇಳುತ್ತಿಲ್ಲವೆಂದು ಮನನೊಂದು ರಾಜಪ್ಪ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೃತ ರಾಜಪ್ಪ ಹೊನ್ನಸಂದ್ರ ಕ್ರಾಸ್ನಲ್ಲಿ ಹೋಟೆಲ್ ನಡೆಸುತ್ತಿದ್ದರು. ಕುಟುಂಬದಲ್ಲಿ ಕ್ಷುಲಕ ಕಾರಣಕ್ಕೆ ಆಗಾಗ ಜಗಳ ನಡೆಯುತ್ತಿತ್ತು. ಮನೆಯಲ್ಲಿ ಮಗ, ಸೊಸೆ, ಮೊಮ್ಮಕ್ಕಳು ಯಾರು ತನ್ನ ಮಾತು ಕೇಳುತ್ತಿಲ್ಲವೆಂದು ಮನನೊಂದು ವೃದ್ಧ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಸ್ತೆ ಬದಿ ನಿಲ್ಲಿಸಿದ್ದ ನೀರಿನ ಟ್ಯಾಂಕರ್ಗೆ ಬೈಕ್ ಡಿಕ್ಕಿ, ಇಬ್ಬರ ಸಾವು
ರಸ್ತೆ ಬದಿ ನಿಲ್ಲಿಸಿದ್ದ ನೀರಿನ ಟ್ಯಾಂಕರ್ಗೆ ಬೈಕ್ ಡಿಕ್ಕಿಯಾಗಿ ಇಬ್ಬರು ಮೃತಪಟ್ಟ ಘಟನೆ ಹುಬ್ಬಳ್ಳಿ ನಗರದ ಗದಗ ರಸ್ತೆಯಲ್ಲಿ ನಡೆದಿದೆ. ಅಪಘಾತದಲ್ಲಿ ಓರ್ವ ಸ್ಥಳದಲ್ಲೇ ಮೃತಪಟ್ಟಿದ್ದು ಆಸ್ಪತ್ರೆಗೆ ಸಾಗಿಸುವಾಗ ಮತ್ತೊಬ್ಬರು ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಹುಬ್ಬಳ್ಳಿ ಉತ್ತರ ಸಂಚಾರಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಡೆತ್ನೋಟ್ ಬರೆದಿಟ್ಟು ಯುವತಿ ನೇಣಿಗೆ ಶರಣು
ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಕಾಮಸಮುದ್ರದಲ್ಲಿ ಡೆತ್ನೋಟ್ ಬರೆದಿಟ್ಟು ಯುವತಿ ನೇಣಿಗೆ ಶರಣಾಗಿರುವ ಘಟನೆ ನಡೆದಿದೆ. ನೇಣು ಬಿಗಿದುಕೊಂಡು ಉಷಾ(22) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸರ್ಕಾರಿ ಕೆಲಸ ನೇಮಕಕ್ಕೆ ಕ್ರಿಮಿನಲ್ ಕೇಸೊಂದು ಅಡ್ಡಿಯಾಗಿತ್ತು. ಇದರಿಂದ ಮನನೊಂದು ಡೆತ್ನೋಟ್ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನನ್ನ ಸಾವಿಗೆ ವ್ಯವಸ್ಥೆಯೇ ಕಾರಣ ಎಂದು ಉಲ್ಲೇಖ ಮಾಡಿದ್ದಾರೆ.
ಜಮೀನು ವಿಚಾರವಾಗಿ 2 ಕುಟುಂಬಗಳ ನಡುವೆ ಜಗಳ ಆಗಿತ್ತು. ಉಷಾ ತಾಯಿ ಯಶೋಧಮ್ಮ ಕುಟುಂಬಸ್ಥರು ಮತ್ತು ನಾಗರಾಜ ಕುಟುಂಬದ ನಡುವೆ ಜಗಳ ಆಗಿ ಕೇಸ್ ಆಗಿತ್ತು. ಜಮೀನಿನ ಜಗಳದಲ್ಲಿ ಉಷಾ A3 ಆರೋಪಿಯಾಗಿದ್ದರು. ಈ ಪ್ರಕರಣದಲ್ಲಿ ರಾಜಿ ಆಗುವಂತೆ ಎದುರಾಳಿಗೆ ಉಷಾ ಮನವಿ ಮಾಡಿದ್ದಾರೆ. ಆದ್ರೆ ಇದಕ್ಕೆ ಒಪ್ಪದ ನಾಗರಾಜ್ ಕುಟುಂಬ ಉಷಾರನ್ನು ನಿಂದಿಸಿದ್ದರು. ಚಾರ್ಜ್ಶೀಟ್ನಲ್ಲಿರುವ ಹೆಸರು ಕೈ ಬಿಡುವಂತೆಯೂ ಉಷಾ ಮನವಿ ಮಾಡಿದ್ದಾರೆ. ರಾಜಿ ಆಗದ ಕಾರಣ ಆರೋಪಿಯಾಗಿಯೇ ಉಳಿದಿದ್ದಾಳೆ. ಇದು ಸರ್ಕಾರಿ ಕೆಲಸಕ್ಕೆ ಅಡ್ಡಿಯಾಗುವ ಭೀತಿ ಹಿನ್ನೆಲೆ ನನ್ನ ಸಾವಿಗೆ ಕುಟುಂಬ ಕಾರಣ ಅಲ್ಲ, ವ್ಯವಸ್ಥೆ ಕಾರಣ ಅಂತ ಡೆತ್ ನೋಟ್ನಲ್ಲಿ ಉಲ್ಲೇಖಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಾಗರಾಜ್ ಮತ್ತಿತರರ ವಿರುದ್ಧ ಪರಶುರಾಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Published On - 6:25 pm, Mon, 22 August 22