Women’s Day Special: ನಗರದ ಪೊಲೀಸ್ ಠಾಣೆಗಳಲ್ಲಿ ಒಂದು ದಿನ ಸ್ಟೇಷನ್​ ಹೌಸ್ ಅಫೀಸರ್​ಗಳಾಗಿ ಮಹಿಳಾ ಸಿಬ್ಬಂದಿ ನೇಮಕ

| Updated By: preethi shettigar

Updated on: Mar 08, 2022 | 3:49 PM

ಕಮೀಷನರ್ ಸೂಚನೆಯಂತೆ ಇಂದು ಸ್ಟೇಷನ್ ಅಫೀಸರ್​ಗಳಾಗಿ ಮಹಿಳಾ ಸಿಬ್ಬಂದಿ ಕಾರ್ಯಾನಿರ್ವಹಿಸುತ್ತಿದ್ದಾರೆ. ವಾಕಿ ಟಾಕಿ ಹಿಡಿದು ಕಂಟ್ರೋಲ್‌ ರೂಂ ಜೊತೆ ಮಹಿಳಾ ಸಿಬ್ಬಂದಿ ಸಂವಹನ, ಠಾಣೆಯ ಕಚ್ಚಾ ಪುಸ್ತಕ, ಡೈರಿ, ಕೇಸ್ ಫೈಲ್​ಗಳ ಪರಿಶೀಲನೆಯಲ್ಲಿ ನಿರತರಾಗಿದ್ದಾರೆ.

Women’s Day Special: ನಗರದ ಪೊಲೀಸ್ ಠಾಣೆಗಳಲ್ಲಿ ಒಂದು ದಿನ ಸ್ಟೇಷನ್​ ಹೌಸ್ ಅಫೀಸರ್​ಗಳಾಗಿ ಮಹಿಳಾ ಸಿಬ್ಬಂದಿ ನೇಮಕ
ಸ್ಟೇಷನ್ ಹೌಸ್ ಅಫೀಸರ್​ಗಳಾಗಿ ಮಹಿಳಾ ಸಿಬ್ಬಂದಿ ನೇಮಕ
Follow us on

ಬೆಂಗಳೂರು: ಇಂದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ(International Women’s Day 2022) ಹಿನ್ನಲೆಯಲ್ಲಿ ಬೆಂಗಳೂರು ನಗರದ ಪೊಲೀಸ್ ಠಾಣೆಗಳಲ್ಲಿ ಮಹಿಳಾ ಸಿಬ್ಬಂದಿಗಳದೇ(Women officers) ದರ್ಬಾರ್ ಶುರುವಾದಂತಾಗಿದೆ. ಮಹಿಳಾ ದಿನಾಚರಣೆ ಪ್ರಯುಕ್ತ ಇಂದು (ಮಾರ್ಚ್​ 08) ಒಂದು ದಿನ ಸ್ಟೇಷನ್ ಹೌಸ್ ಅಫೀಸರ್​ಗಳಾಗಿ ಮಹಿಳಾ ಸಿಬ್ಬಂದಿಗಳನ್ನು ನೇಮಕ ಮಾಡಿದ್ದಾರೆ. ಈ ಬಗ್ಗೆ ನಿನ್ನೆ ನಗರದ ಪೊಲೀಸ್ ಕಮೀಷನರ್(Police commissioner) ಆದೇಶ ಹೊರಡಿಸಿದ್ದರು.

ಕಮೀಷನರ್ ಸೂಚನೆಯಂತೆ ಇಂದು ಸ್ಟೇಷನ್ ಅಫೀಸರ್​ಗಳಾಗಿ ಮಹಿಳಾ ಸಿಬ್ಬಂದಿ ಕಾರ್ಯಾನಿರ್ವಹಿಸುತ್ತಿದ್ದಾರೆ. ವಾಕಿ ಟಾಕಿ ಹಿಡಿದು ಕಂಟ್ರೋಲ್‌ ರೂಂ ಜೊತೆ ಮಹಿಳಾ ಸಿಬ್ಬಂದಿ ಸಂವಹನ, ಠಾಣೆಯ ಕಚ್ಚಾ ಪುಸ್ತಕ, ಡೈರಿ, ಕೇಸ್ ಫೈಲ್​ಗಳ ಪರಿಶೀಲನೆಯಲ್ಲಿ ನಿರತರಾಗಿದ್ದಾರೆ.

ಸ್ಟೇಷನ್ ಅಫೀಸರ್ ಆಗಿರುವುದಕ್ಕೆ ಮಹಿಳಾ ಸಿಬ್ಬಂದಿ ಸಂತಸ

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಹಿನ್ನಲೆಯಲ್ಲಿ ಪೊಲೀಸ್ ಠಾಣೆಗಳಿಗೆ ಸಿಂಗಾರ ಮಾಡಲಾಗಿದೆ. ಸ್ಟೇಷನ್ ಅಫೀಸರ್ ಆಗಿರುವುದಕ್ಕೆ ಮಹಿಳಾ ಸಿಬ್ಬಂದಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ಪಿಂಕ್ ಬಲೂನ್​ಗಳಿಂದ ಸಿಂಗಾರಗೊಂಡ ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ಕೇಕ್ ಕತ್ತರಿಸುವ ಮೂಲಕ ಮಹಿಳಾ ದಿನಾಚರಣೆಯನ್ನು ಸಂಭ್ರಮಿಸಿದ್ದಾರೆ. ಒಟ್ಟಾರೆ ಇಂದು ಠಾಣೆಗಳಲ್ಲಿ ಠಾಣಾ ಅಧಿಕಾರಿಗಳಾಗಿ ಮಹಿಳಾ ಸಿಬ್ಬಂದಿಗಳಿಗೆ ಅವಕಾಶ ನೀಡಲಾಗಿದೆ.  ಸದ್ಯ ಮಹಿಳಾ ಸಿಬ್ಬಂದಿ ಶರಣಮ್ಮ ಎಂಬುವವರನ್ನು ಸ್ಟೇಷನ್ ಎಸ್ಎಚ್ಒ ಆಗಿ ನಿಯೋಜನೆ ಮಾಡಲಾಗಿದೆ.

ಇದನ್ನೂ ಓದಿ:
ಮಹಿಳೆಯರಿಗೆ ಸ್ಪೂರ್ತಿಯಾದ ರಾಯಚೂರಿನ ಮೊದಲ ಮಹಿಳಾ ಆಟೋ ಚಾಲಕಿ; ಇಲ್ಲಿದೆ ಸ್ವಾವಲಂಬಿ ಬದುಕಿನ ಯಶೋಗಾಥೆ

Women‘s Day 2022: ಮಹಿಳಾ ದಿನಾಚರಣೆಯಂದು ಜೀವನದಲ್ಲಿ ಸಾಧನೆ ಕಂಡ ಮಹಿಳೆಯರ ಅದ್ಭುತ ದೃಶ್ಯಕಾವ್ಯ