ಬೆಂಗಳೂರು: ಬಲವಂತದ ಮತಾಂತರ ಗಂಭೀರ ವಿಷಯ. ಬಲವಂತದ ಮತಾಂತರ ನಿಲ್ಲದೆ ಹೋದರೆ ದೇಶಕ್ಕೆ ಭಾರಿ ಅಪಾಯದ ದಿನಗಳು ಎದುರಾಗಲಿದೆ ಅಂತ ಸುಪ್ರೀಂಕೋರ್ಟ್ ಆತಂಕ ವ್ಯಕ್ತಪಡಿಸಿದೆ. ಇದ್ರ ಬೆನ್ನಲ್ಲೇ ರಾಜ್ಯದಲ್ಲಿ ಮತಾಂತರ ಹೆಚ್ಚು ಸದ್ದು ಮಾಡ್ತಿದೆ. ಮತಾಂತರ ನಿಷೇಧ ಕಾಯ್ದೆ(Anti Conversion Bill) ಜಾರಿ ಬಳಿಕ ಪೊಲೀಸರು(Yeshwanthpur police) ಮೊದಲ ಆರೋಪಿಯನ್ನು ಅರೆಸ್ಟ್ ಮಾಡಿದ್ದು ಈ ಸಂಬಂಧ ಚಾರ್ಜ್ ಶೀಟ್ ಸಲ್ಲಿಸಲು ತಯಾರಿ ನಡೆಸಿದ್ದಾರೆ.
ಯಶವಂತಪುರದಲ್ಲಿ ಮತಾಂತರ ಮಾಡಿದ ಆರೋಪದಲ್ಲಿ ಪೊಲೀಸರು ಯುವಕನನ್ನು ಅರೆಸ್ಟ್ ಮಾಡಿದ್ದರು. ಇದು ಮತಾಂತರ ನಿಷೇಧ ಕಾಯ್ದೆ ಜಾರಿ ಬಳಿಕ ಅರೆಸ್ಟ್ ಆದ ಮೊದಲ ಪ್ರಕರಣ. ಆದ್ರೆ ಆರೋಪಿಯನ್ನು ಅರೆಸ್ಟ್ ಮಾಡಿ 15 ದಿನಗಳ ಬಳಿಕ ಪೊಲೀಸರು ಆರೋಪಿಯನ್ನು ಬಿಟ್ಟು ಕಳಿಸಿದ್ದಾರೆ. ಸೈಯದ್ ಮೊಹಿನ್(24) ಎಂಬ ಆರೋಪಿ ಯುವತಿಯನ್ನು ಬಲವಂತವಾಗಿ ಮತಾಂತರ ಮಾಡಲು ಯತ್ನಿಸಿದ್ದ. ಈ ಸಂಗತಿ ತಿಳಿಯುತ್ತಿದ್ದಂತೆ ಯುವತಿಯ ಪೋಷಕರು ತಮ್ಮ ಮಗಳನ್ನು ಕರೆದುಕೊಂಡು ಊರು ಬಿಟ್ಟಿದ್ದರು. ಉತ್ತರ ಪ್ರದೇಶಕ್ಕೆ ಹೋಗಿ ತಮ್ಮ ಕುಟುಂಬ ಕಟ್ಟಿಕೊಂಡಿದ್ದರು. ಮತ್ತೊಂದೆಡೆ ಈ ಪ್ರಕರಣ ಸಂಬಂಧ ಪೊಲೀಸರು ಆರೋಪಿಯನ್ನು ಬಂಧಿಸಿ ಬಳಿಕ 15 ದಿನಗಳ ನಂತರ ಬಿಡುಗಡೆ ಮಾಡಿದ್ದಾರೆ.
ಸದ್ಯ ಪ್ರಕರಣ ಸಂಬಂಧ ಯಶವಂತಪುರ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಮತಾಂತರದಲ್ಲಿ ಯುವಕನ ಹೊರತು ಬೇರೆಯವರ ಪಾತ್ರ ಕಂಡು ಬಂದಿಲ್ಲ. ಈ ನಡುವೆ ತನಿಖೆ ನಡೆಸಿ 24ನೇ ಎಸಿಎಂಎಂ ಕೋರ್ಟ್ಗೆ ಚಾರ್ಜ್ ಶೀಟ್ ಸಲ್ಲಿಸಲು ಪೊಲೀಸರು ತಯಾರಿ ನಡೆಸಿದ್ದಾರೆ. ಪ್ರಕರಣ ಸಂಬಂಧ ಒಂದು ತಿಂಗಳಲ್ಲಿ ಚಾರ್ಜ್ ಶೀಟ್ ಸಲ್ಲಿಸಲಿದ್ದಾರೆ.
ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಮತ್ತೆ ಮುನ್ನೆಲೆಗೆ ಬಂದ ಮತಾಂತರ ವಿವಾದ; ಮತಾಂತರವಾಗುವಂತೆ ಪತ್ನಿಯಿಂದ ಪತಿಗೆ ಒತ್ತಡ
ಘಟನೆ ವಿವರ
ಪ್ರೀತಿ ಹೆಸರಲ್ಲಿ 19 ವರ್ಷದ ಯುವತಿಯನ್ನ ಮದುವೆಯಾಗಲು ಮುಂದಾಗಿದ್ದ ಸೈಯದ್ ಮೊಯಿನ್, ಮದುವೆಯಾಗಲು ಮತಾಂತರ ಆಗಬೇಕು ಎಂದು ಯುವತಿಯನ್ನ ಮತಾಂತರ ಮಾಡಿದ್ದ. ಮದುವೆ ಮಾಡಿಕೊಳ್ಳಲೆಂದೆ ಯುವತಿ ಅಕ್ಟೋಬರ್ 5 ರಂದು ಮನೆಯಿಂದ ಕಾಣೆಯಾಗಿದ್ದಳು. ಮಗಳು ಕಾಣೆಯಾದ ಬಗ್ಗೆ ಮರುದಿನ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಪೋಷಕರು ಮಿಸ್ಸಿಂಗ್ ಕೇಸ್ ದಾಖಲಿಸಿದ್ದರು. ಬಳಿಕ ಯುವತಿ ಪೋಷಕರು ತಮ್ಮ ಮಗಳಿಗೆ ಪೇನುಕೊಂಡದಲ್ಲಿ ಮತಾಂತರ ಮಾಡಿದ್ದಾರೆ ಎಂದು ದೂರು ನೀಡಿದರು. ಕರ್ನಾಟಕ ಮತಾಂತರ ನಿಷೇಧ ಕಾಯ್ದೆಯಡಿ ಪೊಲೀಸರು ಆರೋಪಿ ಸೈಯದ್ನನ್ನು ಬಂಧಿಸಿ ಜೈಲಿಗಟ್ಟಿದ್ದರು.