ಅಮಿತ್​ ಶಾ ವಿರುದ್ಧ ಯೋಗೇಶ್ವರ್ ಆಡಿಯೋ ವೈರಲ್​: ಇದು ಒಂದು ರೀತಿಯ ಕ್ರೈಂ ಎಂದ ವಿ.ಎಸ್.ಉಗ್ರಪ್ಪ

| Updated By: ಗಂಗಾಧರ​ ಬ. ಸಾಬೋಜಿ

Updated on: Jan 15, 2023 | 6:25 PM

ಬಿಜೆಪಿಯ ಹಾಲಿ ಶಾಸಕರು ಸಿ.ಪಿ.ಯೋಗೇಶ್ವರ್​ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನು ನೋಡಿದರೆ ರಾಜ್ಯ ರಾಜಕಾರಣದಲ್ಲಿ ಆತಂಕಕಾರಿ ಬೆಳವಣಿಗೆ ನಡೆಯುತ್ತಿದೆ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಹೇಳಿದರು.

ಅಮಿತ್​ ಶಾ ವಿರುದ್ಧ ಯೋಗೇಶ್ವರ್ ಆಡಿಯೋ ವೈರಲ್​: ಇದು ಒಂದು ರೀತಿಯ ಕ್ರೈಂ ಎಂದ ವಿ.ಎಸ್.ಉಗ್ರಪ್ಪ
ಮಾಜಿ ಸಂಸದ ವಿ.ಎಸ್.ಉಗ್ರಪ್ಪ
Image Credit source: vijaykarnataka.com
Follow us on

ಬೆಂಗಳೂರು: ಅಮಿತ್​ ಶಾ ರೌಡಿ ಮೋರ್ಚಾ ರೀತಿಯಲ್ಲಿ ಬಿಜೆಪಿ ಪಾರ್ಟಿ ಕಟ್ಟುತ್ತಾರೆ ಎಂದು ಬಿಜೆಪಿ (BJP) ಎಂಎಲ್​ಸಿ ಯೋಗೇಶ್ವರ್ (C P Yogeshwar) ಹೇಳಿದ್ದಾರೆ ಎನ್ನಲಾದ ಆಡಿಯೋ ಒಂದು ವೈರಲ್​ ಆಗಿದೆ. ಈ ಹೇಳಿಕೆ ಒಂದು ರೀತಿಯ ಕ್ರೈಂ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ (V.S. Ugrappa) ಹೇಳಿದರು. ಕೆಪಿಸಿಸಿ ಕಛೇರಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ರಾಜ್ಯ ರಾಜಕಾರಣದಲ್ಲಿ ಆತಂಕಕಾರಿ ಬೆಳವಣಿಗೆ ನಡೆಯುತ್ತಿದೆ. ಕೇಂದ್ರ ಗೃಹ ಸಚಿವ ಅಮಿತ್​ ಶಾ ರೌಡಿಸಂ ಮಾಡುವ ಪ್ರವರ್ತಿ ಇದೆ ಎಂದು ಆಡಿಯೋದಲ್ಲಿ ಇದೆ. ಯೋಗೇಶ್ವರ್ ಆಡಿಯೋ ಕೇಳಿದ್ರೆ ಈ ಬಾರಿ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ ಎಂದು ನಿಶ್ಚಿತವಾಗಿದೆ. ಇದು ಬಿಜೆಪಿ ಅವರಿಗೂ ಖಾತ್ರಿಯಾಗಿದೆ ಎಂದು ಕಿಡಿಕಾರಿದರು.

ಬಿಜೆಪಿ ಜನಾದೇಶಕ್ಕೆ ವಿರುದ್ಧವಾಗಿ ಆಪರೇಷನ್ ಕಮಲದ ತಯಾರಿ ಮಾಡುತ್ತಿದೆ

ಇನ್ನು ಬಿಜೆಪಿ ಚುನಾವಣೆ ಮುಂಚೆಯೇ ಆಪರೇಷನ್ ಕಮಲದ ತಯಾರಿ ಮಾಡ್ತಿದ್ದಾರೆ. ಬಿಜೆಪಿ ಜನಾದೇಶಕ್ಕೆ ವಿರುದ್ಧವಾಗಿ ಆಪರೇಷನ್ ಕಮಲದ ತಯಾರಿ ಮಾಡ್ತಿದ್ದಾರೆ. ಯೋಗೇಶ್ವರ್ ​ಒಬ್ಬ ಅನುಭವಿ ರಾಜಕಾರಣಿ. ಅಮಿತ್​ ಶಾ ರೌಡಿಸಂ ಬಗ್ಗೆ ಜನರ ಮುಂದೆ ಇಟ್ಟಿದ್ದಾರೆ ಯೋಗೇಶ್ವರ್​​. ಇದ್ದರಿಂದ ಯೋಗೇಶ್ವರ್ ​ಇತಿಹಾಸದ ಪುಟಗಳಲ್ಲಿ ಸೇರಿಕೊಳ್ಳಲಿದ್ದಾರೆ. ಮಿಸ್ಟರ್ ಮೋದಿ ಅವರೆ ಯೋಗೇಶ್ವರ್ ಹೇಳಿಕೆಗೆ ನಿಮ್ಮ ನಿಲುವು ಏನು? ಯೋಗೇಶ್ವರ್ ​ಬಗ್ಗೆ ಆರ್​ಎಸ್​ಎಸ್ ನಿಲುವು ಏನು ಅನ್ನೊದು ಕುಡ ಹೇಳಬೇಕು ಎಂದರು.

ಇದನ್ನೂ ಓದಿ: ಅಮಿತ್​ ಶಾ ಬಗ್ಗೆ ಮಾತನಾಡಿದ್ದಾರೆನ್ನಲಾದ ಆಡಿಯೋ ವೈರಲ್ ಬಗ್ಗೆ ಸ್ಪಷ್ಟನೆ ನೀಡಿದ ಸಿ.ಪಿ.ಯೋಗೇಶ್ವರ್​​

ಸಿ.ಪಿ.ಯೋಗೇಶ್ವರ್ ಸ್ಪಷ್ಟನೆ  

ಬಿಜೆಪಿ ಎಂಎಲ್​ಸಿ ಸಿ.ಪಿ.ಯೋಗೇಶ್ವರ್ ರಾಮನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ನಾನು ಅಧಿಕೃತವಾಗಿ ಎಲ್ಲೂ ಮಾತನಾಡಿಲ್ಲ. ಖಾಸಗಿಯಾಗಿ ಮಾತನಾಡಿರುವ ವಿಚಾರ ಇರಬಹುದು. ಅದು ನನ್ನದೇ ವಾಯ್ಸ್​ ಎಂಬುದು ಗೊತ್ತಿಲ್ಲ ಎಂದು ಯೋಗೇಶ್ವರ್​ ಸ್ಪಷ್ಟನೆ ನೀಡಿದರು. ಏನೇ ಇದ್ದರೂ ನಾನು ಪಕ್ಷ ಸಂಘಟನೆಯ ಬಗ್ಗೆ ಮಾತನಾಡಿದ್ದೇನೆ. ಗ್ರಾಮೀಣ ಭಾಷೆಯಲ್ಲಿ ಕೆಲವು ವಿಚಾರಗಳನ್ನು ಮಾತನಾಡಿದ್ದೇನೆ. ನನ್ನ ಮನಸ್ಸಿನಲ್ಲಿ ಪಕ್ಷ ಸಂಘಟನೆ ಮಾಡೋದು ಅಷ್ಟೇ ಇರೋದು. ಆ ದೃಷ್ಟಿಯಲ್ಲಿ ನಾನು ಮಾತನಾಡಿರಬಹುದು ಅಷ್ಟೇ ಎಂದು ಹೇಳಿದರು.

ಇದನ್ನೂ ಓದಿ: 2023ರ ಚುನಾವಣೆಗೆ ನಾನು ಬಿಜೆಪಿಯಿಂದಲೇ ಸ್ಪರ್ಧೆ ಮಾಡುತ್ತೇನೆ: ಕುಮಾರಸ್ವಾಮಿ ವಿರುದ್ಧ ತೊಡೆತಟ್ಟಿದ ಸಿ.ಪಿ.ಯೋಗೇಶ್ವರ್

ಬಿಜೆಪಿಗೆ ಬರುವಂತೆ ಸಂಸದೆ ಸುಮಲತಾಗೂ ಮನವಿ

ಮಂಡ್ಯ ಸಂಸದೆ ಸುಮಲತಾ ಅಂಬರೀಶ್​​ ಬಿಜೆಪಿ ಸೇರ್ಪಡೆ ವಿಚಾರವಾಗಿ ಅವರು ಪ್ರತಿಕ್ರಿಯೆ ನೀಡಿದ್ದು, ವರಿಷ್ಠರ ಮಟ್ಟದಲ್ಲಿ ಈ ಬಗ್ಗೆ ಮಾತನಾಡಿದ್ದೇವೆ.​ ಸುಮಲತಾರನ್ನ ಪಕ್ಷಕ್ಕೆ ಸೇರಿಸಿಕೊಳ್ಳಬೇಕೆಂದು ಮನವಿ ಮಾಡಿದ್ದೇವೆ. ಬಿಜೆಪಿಗೆ ಬರುವಂತೆ ಸಂಸದೆ ಸುಮಲತಾಗೂ ಮನವಿ ಮಾಡಿದ್ದೇವೆ. ಕಾಂಗ್ರೆಸ್​, ಜೆಡಿಎಸ್​ ದ್ವಂದ್ವ ನಿಲುವಿನ ಬಗ್ಗೆ ಸುಮಲತಾಗೂ ಗೊತ್ತಿದೆ. ಬಿಜೆಪಿ ಅವಧಿಯಲ್ಲಿ ಮಂಡ್ಯದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಆಗಿದೆ ಎಂದು ಸಿ.ಪಿ.ಯೋಗೇಶ್ವರ್​ ತಿಳಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನ ಓದಲು ಇಲ್ಲಿ ಕ್ಲಿಕ್ ಮಾಡಿ.