ಶಾಲೆಗಳಲ್ಲಿ ಭಗವದ್ಗೀತೆ ಬೋಧನೆ: ಪ್ರಧಾನಿ ಮೋದಿ ಕಮಿಟ್ಮೆಂಟ್ ದೃಢವಾಗಿದೆ- ಮಾಜಿ ಪ್ರಧಾನಿ ದೇವೇಗೌಡ ಶ್ಲಾಘನೆ

| Updated By: ಸಾಧು ಶ್ರೀನಾಥ್​

Updated on: Mar 18, 2022 | 7:49 PM

Bhagavad Gita : ಪ್ರಧಾನಿ ಮೋದಿ ವಿದೇಶಕ್ಕೆ ಹೋದಾಗ ಬೆಲೆಬಾಳುವ ಬೇರೆ ಯಾವುದಾದರೂ ವಸ್ತು ಕೊಂಡೊಯ್ಯಬಹುದಿತ್ತು. ನಮ್ಮ ಪ್ರಧಾನಿ ಬೇರೆ ದೇಶಗಳಿಗೆ ಹೋದಾಗ ಆ ದೇಶದ ನಾಯಕರಿಗೆ ಭಗವದ್ಗೀತೆ ಕೊಡುತ್ತಾರೆ. ಆದರೆ ಅವರು ಹಾಗೆ ಮಾಡಲಿಲ್ಲ, ಅದು ಅವರ ಕಮಿಟ್ಮೆಂಟ್ ತೋರಿಸುತ್ತೆ ಎಂದು ಪರೋಕ್ಷವಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವ ನಡೆಯನ್ನು ಶ್ಲಾಘಿಸಿದರು.

ಶಾಲೆಗಳಲ್ಲಿ ಭಗವದ್ಗೀತೆ ಬೋಧನೆ: ಪ್ರಧಾನಿ ಮೋದಿ ಕಮಿಟ್ಮೆಂಟ್ ದೃಢವಾಗಿದೆ- ಮಾಜಿ ಪ್ರಧಾನಿ ದೇವೇಗೌಡ ಶ್ಲಾಘನೆ
ಭಗವದ್ಗೀತೆ ಬೋಧನೆ: ಪ್ರಧಾನಿ ಮೋದಿ ಕಮಿಟ್ಮೆಂಟ್ ದೃಢವಾಗಿದೆ- ಮಾಜಿ ಪ್ರಧಾನಿ ದೇವೇಗೌಡ ಶ್ಲಾಘನೆ
Follow us on

ಹಾಸನ: ಹೊಳೆನರಸೀಪುರದಲ್ಲಿ ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡ ಅವರು (HD Deve gowda) ರಾಜ್ಯದ ಪಠ್ಯಕ್ರಮದಲ್ಲಿ ಭಗವದ್ಗೀತೆ ಬೋಧನೆ ವಿಚಾರ ಪ್ರಸ್ತಾಪಿಸಿ ಮಾತನಾಡಿದ್ದು, ಈಗಾಗಲೆ ಗುಜರಾತ್ ಶಾಲೆಗಳಲ್ಲಿ ಭಗವದ್ಗೀತೆ ಬೋಧನೆ ಸೇರಿಸಿದ್ದಾರೆ. ನಮ್ಮ ರಾಜ್ಯದಲ್ಲಿ ಏನು ಮಾಡುತ್ತಾರೊ ಗೊತ್ತಿಲ್ಲ. ಯಾವುದೋ ಒಂದು ವಿಚಾರ ಮನಸ್ಸಿನಲ್ಲಿ ಇಟ್ಟುಕೊಂಡು ಅವರು ಹೋಗುತ್ತಿದ್ದಾರೆ. ಈ ಬಗ್ಗೆ ನಾನು ಏನೂ ಹೇಳಲ್ಲ, ಮಹಾಭಾರತ ಹತ್ತಾರು ಬಾರಿ ಓದಿದೀನಿ, ಆದರೆ ಭಗವದ್ಗೀತೆ (Bhagavad Gita) ಪೂರ್ಣ ಓದಿಲ್ಲ. ನಮ್ಮ ಪ್ರಧಾನಿಗಳು (Narendra Modi) ಬೇರೆ ದೇಶಗಳಿಗೆ ಹೋದಾಗ ಆ ದೇಶದ ನಾಯಕರಿಗೆ ಭಗವದ್ಗೀತೆ ಕೊಡುತ್ತಾರೆ. ನಮ್ಮ ದೇಶದ ಹಿನ್ನೆಲೆ ತಿಳಿಸುತ್ತಾರೆ, ಇದರ ಬಗ್ಗೆ ನಾನು ವಾದ ವಿವಾದ ಮಾಡಲ್ಲ. ಅವರು ವಿದೇಶಕ್ಕೆ ಹೋದಾಗ ಬೆಲೆಬಾಳುವ ಬೇರೆ ಯಾವುದಾದರೂ ವಸ್ತು ಕೊಂಡೊಯ್ಯಬಹುದಿತ್ತು. ಆದರೆ ಅವರು ಹಾಗೆ ಮಾಡಲಿಲ್ಲ, ಅದು ಅವರ ಕಮಿಟ್ಮೆಂಟ್ ತೋರಿಸುತ್ತೆ ಎಂದು ಪರೋಕ್ಷವಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವ ನಡೆಯನ್ನು ಶ್ಲಾಘಿಸಿದರು.

ಕುಮಾರಸ್ವಾಮಿ ಅಪಸ್ವರ:
ಸೋಜಿಗದ ಸಂಗತಿಯೆಂದರೆ ಹಾಸನ ಜಿಲ್ಲೆ ಹೊಳೆನರಸೀಪುರ ತಾಲ್ಲೂಕಿನ ಟಿ ಮಾಯಗೌಡನಹಳ್ಳಿ ಗ್ರಾಮದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಮಾತನಾಡುತ್ತಾ ರಾಜ್ಯದಲ್ಲಿಯೂ ವಿದ್ಯಾರ್ಥಿಗಳಿಗೆ ಭಗವಗ್ದೀತೆ ಬೋಧನೆ ಮಾಡುವ ವಿಚಾರದ ಬಗ್ಗೆ ಅಪಸ್ವರ ಎತ್ತಿದ್ದಾರೆ. ನಮಗೆ ಬೇಕಿರುವುದು ಜನರಿಗೆ ಬದುಕನ್ನ ಕಟ್ಟಿ ಕೊಡುವ ಕಾರ್ಯಕ್ರಮ. ಅಲ್ಲೆಲ್ಲೋ ಗುಜರಾತ್ ನಲ್ಲಿ (Gujarat) ಪಠ್ಯಪುಸ್ತಕದಲ್ಲಿ ಭಗವದ್ಗೀತೆ ಇಡುತ್ತಾರೆಂಬ ವಿಚಾರ ಇಲ್ಲೂ ಚರ್ಚೆ ಆರಂಭ ಆಗುವಂತೆ ಮಾಡಿದೆ. ನಮ್ಮ ಸಂಸ್ಕತಿಯಲ್ಲಿ ಭಗವಗ್ದೀತೆಯನ್ನ ಕುಟುಂಬದಲ್ಲೇ ಹೇಳಿಕೊಡ್ತಾರೆ. ಸರ್ಕಾರ ಇರೋದು ಮಕ್ಕಳ ಬದುಕು ಕಟ್ಟಿಕೊಡೋದಕ್ಕೆ ಎಂದು ಎಚ್ಚರಿಸಿದ್ದರು.

ನಾವು ಹಿಜಾಬ್ ಪರವೂ ಇಲ್ಲಾ, ವಿರುದ್ಧವೂ ಇಲ್ಲ: ದೇವೇಗೌಡ
ಹಿಜಾಬ್ ವಿಚಾರದಲ್ಲಿ ನಮ್ಕ ಪಕ್ಷದ ನಿಲುವು ಸ್ಪಷ್ಟವಾಗಿದೆ. ಹೈಕೋರ್ಟ್ ತೀರ್ಪಿಗೆ ಎಲ್ಲರೂ ಬದ್ದರಾಗಬೇಕು ಎನ್ನೋದು ನಮ್ಮ ನಿಲುವು. ನಾವು ಅದರ ಪರವೂ ಇಲ್ಲಾ ವಿರುದ್ಧವೂ ಇಲ್ಲ. ಕಾಂಗ್ರೆಸ್ -ಬಿಜೆಪಿ ನಡುವೆ ಇದರ ಬಗ್ಗೆ ತುಂಬಾ ಕಿತ್ತಾಟ ಆಗಿತ್ತು, ಆಗಲೂ ನಾನು ಅದನ್ನೇ ಹೇಳಿದ್ದೆ. ಕುಮಾರಸ್ವಾಮಿ ಅವರು ಕೂಡ ವೈಯಕ್ತಿಕ ವಾಗಿ ಹಿಜಾಬ್ ಬಗ್ಗೆ ಏನೂ ಮಾತನಾಡಲ್ಲ ಎಂದಿದಾರೆ. ಸರ್ಕಾರ ಕೊಡೋ ಯೂನಿಫಾರ್ಮ್ ಬಟ್ಟೆಯನ್ನೇ ತಲೆ ಮೇಲೆ ಹಾಕಿಕೊಳ್ಳಬಹುದು ಅನ್ನೋದು ಕುಮಾರಸ್ವಾಮಿ ಅಭಿಪ್ರಾಯವಾಗಿದೆ. ಈ ವಿಚಾರದಲ್ಲಿ ಸರ್ಕಾರ, ಪೋಷಕರು, ವಿಪಕ್ಷಗಳು ಕೂತು ಮಾತನಾಡಿ ಸಮಸ್ಯೆ ಬಗೆಹರಿಸಿದರೆ ಒಳ್ಳೆಯದು. ಹಿಜಾಬ್ ವಿವಾದ ಮಾತುಕತೆ ಮೂಲಕ ಬಗೆಹರಿಸಿ ಎಂದು ಗೌಡರು ಸಲಹೆ ನೀಡಿದರು.

ಇದನ್ನೂ ಓದಿ:
ನವೀನ್‌ ದೇಹ ಭಾನುವಾರ ಆಗಮನ: ಮನೆಯಲ್ಲಿ ಪೂಜೆ ಸಲ್ಲಿಸಿ, ಮೆಡಿಕಲ್ ಕಾಲೇಜಿಗೆ ಶರೀರ ದಾನ -ನವೀನ್ ತಂದೆ ಶೇಖರಗೌಡ

Published On - 7:30 pm, Fri, 18 March 22