ಶಿರಸಿಯಲ್ಲಿ ಗುಡುಗು, ಗಾಳಿ ಸಹಿತ ಭಾರೀ ಮಳೆ; ವರುಣನ ಆರ್ಭಟದಿಂದ ಮಾರಿಕಾಂಬಾ ಜಾತ್ರೆಗೆ ಅಡ್ಡಿ
ಗಾಳಿಯಿಂದಾಗಿ ಹಲವು ಕಡೆಯಲ್ಲಿ ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಶಿರಸಿ ನಗರ ಸೇರಿದಂತೆ ಗ್ರಾಮೀಣ ಭಾಗದಲ್ಲಿಯೂ ವ್ಯಾಪಕ ಮಳೆಯಾಗಿದೆ. ಭಾರೀ ಗಾಳಿ, ಮಳೆಗೆ ಶಿರಸಿ ಮಾರಿಕಾಂಬೆಯನ್ನು ಇರಿಸಿರುವ ಜಾತ್ರಾ ಗದ್ದುಗೆಯ ಚಪ್ಪರದ ಮೇಲ್ಭಾಗಕ್ಕೆ ಹಾನಿಯಾಗಿದೆ. ಶಿರಸಿ, ಸಿದ್ಧಾಪುರ ತಾಲೂಕಿನಾದ್ಯಂತ ಭಾರೀ ಮಳೆ ಮುಂದುವರಿದಿದೆ.
ಉತ್ತರ ಕನ್ನಡ: ಜಿಲ್ಲೆಯ ಶಿರಸಿಯಲ್ಲಿ ಇಂದು(ಮಾರ್ಚ್ 18) ಗುಡುಗು, ಗಾಳಿ ಸಹಿತ ಭಾರೀ ಮಳೆಯಾಗಿದೆ(Rain). ವರುಣನ ಆರ್ಭಟದಿಂದ ಮಾರಿಕಾಂಬಾ ಜಾತ್ರೆಗೆ (marikamba jatre) ಅಡ್ಡಿಯಾಗಿದ್ದು, ಭಾರೀ ಗಾಳಿಯಿಂದಾಗಿ ಜಾತ್ರಾ ಅಂಗಡಿಯ ಮೇಲ್ಚಾವಣಿಗಳು ಹಾರಿ ಹೋಗುತ್ತಿವೆ. ಗಾಳಿ, ಮಳೆಯಿಂದ ರಕ್ಷಣೆ ಪಡೆದುಕೊಳ್ಳಲು ಜಾತ್ರೆಗೆ ಬಂದ ಭಕ್ತರು(Devotees) ಹರಸಾಹಸ ಪಡುತ್ತಿದ್ದಾರೆ. ಕಳೆದ ಒಂದು ತಾಸಿನಿಂದ ಎಡಬಿಡದೆ ಗಾಳಿ ಸಹಿತ ಮಳೆ ಸುರಿಯುತ್ತಿದೆ.
ಗಾಳಿಯಿಂದಾಗಿ ಹಲವು ಕಡೆಯಲ್ಲಿ ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಶಿರಸಿ ನಗರ ಸೇರಿದಂತೆ ಗ್ರಾಮೀಣ ಭಾಗದಲ್ಲಿಯೂ ವ್ಯಾಪಕ ಮಳೆಯಾಗಿದೆ. ಭಾರೀ ಗಾಳಿ, ಮಳೆಗೆ ಶಿರಸಿ ಮಾರಿಕಾಂಬೆಯನ್ನು ಇರಿಸಿರುವ ಜಾತ್ರಾ ಗದ್ದುಗೆಯ ಚಪ್ಪರದ ಮೇಲ್ಭಾಗಕ್ಕೆ ಹಾನಿಯಾಗಿದೆ. ಶಿರಸಿ, ಸಿದ್ಧಾಪುರ ತಾಲೂಕಿನಾದ್ಯಂತ ಭಾರೀ ಮಳೆ ಮುಂದುವರಿದಿದೆ.
ಬಿಸಿಲ ಧಗೆಯಿಂದ ಕಂಗೆಟ್ಟಿದ್ದ ಉಡುಪಿಯಲ್ಲಿ ಸುರಿದ ಮಳೆ
ಉಡುಪಿ ಜಿಲ್ಲೆ ಕಾರ್ಕಳ ತಾಲೂಕಿನಲ್ಲಿ ಮಳೆಯಾಗಿದೆ. ಇನ್ನೂ ಮೋಡ ಕವಿದ ವಾತಾವರಣ ಇದ್ದು, ಕೆಲವೆಡೆ ಸಾಧಾರಣ ಮಳೆಯಾಗಿದೆ. ಕಳೆದ ಒಂದು ವಾರದಿಂದ ಮಿತಿಮೀರಿದ್ದ ಬಿಸಿಲ ಧಗೆಗೆ ಸದ್ಯ ನಿರಾಳತೆ ಸಿಕ್ಕಂತೆ ಆಗಿದೆ. ಸದ್ಯ ಕರಾವಳಿ ಜಿಲ್ಲೆಗಳಲ್ಲಿ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಕಾರ್ಕಳ ಉತ್ಸವದ ಸಭಾಕಾರ್ಯಕ್ರಮಕ್ಕೆ ಮಳೆ ಅಡ್ಡಿಯಾಗಿದೆ.
ಚಿಕ್ಕಮಗಳೂರು: ಕಳಸ ಪಟ್ಟಣದ ಸುತ್ತಮುತ್ತ ಬಿರುಗಾಳಿ ಸಹಿತ ಭಾರೀ ಮಳೆ
ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನಲ್ಲಿ ಮಳೆಯ ಅಬ್ಬರ ಹೆಚ್ಚಾಗಿದೆ. ವರ್ಷದ ಮೊದಲ ಮಳೆಯ ಅಬ್ಬರಕ್ಕೆ ಜನತೆ ಕಂಗಾಲಾಗಿದ್ದಾರೆ. ಬಿರುಗಾಳಿ ಮಳೆಗೆ ವಿದ್ಯುತ್ ಕಂಬಗಳು ಉರುಳಿಬಿದ್ದಿವೆ. ಹಲವೆಡೆ ಮನೆ ಮೇಲಿನ ಶೀಟ್ಗಳು ಹಾರಿಹೋಗಿದೆ. ಇನ್ನೂ ರಸ್ತೆ ಮೇಲೆ ಉರುಳಿ ಬಿದ್ದ ಮರದ ಕೊಂಬೆಗಳಿಂದ ವಾಹನ ಸಂಚಾರಕ್ಕೆ ಅಡಚಣೆಯಾಗಿದೆ. ಶೃಂಗೇರಿ ತಾಲೂಕಿನ ಹಲವೆಡೆ ಕೂಡ ಭಾರೀ ಮಳೆಯಾಗಿದೆ.
ಹಾವೇರಿ ಜಿಲ್ಲೆಯ ಕೆಲವೆಡೆ ಆರ್ಭಟಿಸಿದ ಮಳೆರಾಯ
ಹಾವೇರಿ: ಜಿಲ್ಲೆಯ ಹಾನಗಲ್ ಪಟ್ಟಣ, ಅರಳೇಶ್ವರ ಗ್ರಾಮ ಸೇರಿದಂತೆ ಕೆಲವೆಡೆ ಮಳೆಯಾಗಿದೆ. ಹತ್ತರಿಂದ ಹದಿನೈದು ನಿಮಿಷಗಳ ಕಾಲ ಮಳೆ ಸುರಿದಿದೆ. ಗಾಳಿ ಮತ್ತು ಗುಡುಗಿನೊಂದಿಗೆ ಮಳೆರಾಯ ಆರ್ಭಟಿಸಿದ್ದಾನೆ. ಒಟ್ಟಾರೆ ಬಿಸಿಲಿನಿಂದ ಕಂಗೆಟ್ಟಿದ್ದ ಜನರಿಗೆ ಮಳೆರಾಯ ತಂಪೆರೆದಿದ್ದಾನೆ.
ಇದನ್ನೂ ಓದಿ: Karnataka Weather Today: ಕರಾವಳಿ, ಮಲೆನಾಡಿನಲ್ಲಿ ಇಂದು ತುಂತುರು ಮಳೆ; ಕೇರಳ, ತಮಿಳುನಾಡಿನಲ್ಲಿ ವರುಣನ ಆರ್ಭಟ
ಶಿರಸಿಯಲ್ಲಿ ಅದ್ದೂರಿ ಮಾರಿಕಾಂಬಾ ಜಾತ್ರೆ; ಜನಸಾಗರದ ನಡುವೆ ರಾರಾಜಿಸಿದ ಅಪ್ಪು ಭಾವಚಿತ್ರವಿರುವ ಬಾವುಟ
Published On - 8:26 pm, Fri, 18 March 22