ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಾಳೆ ಭಾರತ್ ಬಂದ್ಗೆ ಕರೆ
ಬೆಂಗಳೂರು: ನಾಳೆ ದೇಶಾದ್ಯಂತ ಕಾರ್ಮಿಕ ಸಂಘಟನೆಗಳಿಂದ ಮುಷ್ಕರಕ್ಕೆ ಕರೆ ನೀಡಲಾಗಿದೆ. ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಾರ್ಮಿಕರ ಮುಷ್ಕರ ಮಾಡಲು ನಿರ್ಧರಿಸಿದ್ದಾರೆ. ಹುಬ್ಬಳ್ಳಿ, ಕೊಪ್ಪಳ, ಮಡಿಕೇರಿ, ಮಂಗಳೂರು ಮತ್ತು ಬಾಗಲಕೋಟೆ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಅನೇಕ ಸಂಘಟನೆಗಳು ಬೆಂಬಲ ನೀಡಿವೆ. ನಾಳೆ ಇಡೀ ದೇಶ ಸ್ತಬ್ದವಾಗಲಿದೆಯಾ? ರಾಜ್ಯಕ್ಕೆ ಇದರ ಬಿಸಿ ತಟ್ಟುತ್ತಾ ಎಂಬ ಪ್ರಶ್ನೆಗಳು ಜನಸಾಮಾನ್ಯರಲ್ಲಿ ಎದ್ದಿವೆ. ಕಾರ್ಮಿಕ ಪ್ರಮುಖ ಬೇಡಿಕೆಗಳು: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಾರ್ಮಿಕರ ಮುಷ್ಕರಕ್ಕೆ ಕರೆ ನೀಡಿದ್ದಾರೆ. ಇವರ ಬೇಡಿಕೆಗಳೇನು […]
ಬೆಂಗಳೂರು: ನಾಳೆ ದೇಶಾದ್ಯಂತ ಕಾರ್ಮಿಕ ಸಂಘಟನೆಗಳಿಂದ ಮುಷ್ಕರಕ್ಕೆ ಕರೆ ನೀಡಲಾಗಿದೆ. ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಾರ್ಮಿಕರ ಮುಷ್ಕರ ಮಾಡಲು ನಿರ್ಧರಿಸಿದ್ದಾರೆ. ಹುಬ್ಬಳ್ಳಿ, ಕೊಪ್ಪಳ, ಮಡಿಕೇರಿ, ಮಂಗಳೂರು ಮತ್ತು ಬಾಗಲಕೋಟೆ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಅನೇಕ ಸಂಘಟನೆಗಳು ಬೆಂಬಲ ನೀಡಿವೆ. ನಾಳೆ ಇಡೀ ದೇಶ ಸ್ತಬ್ದವಾಗಲಿದೆಯಾ? ರಾಜ್ಯಕ್ಕೆ ಇದರ ಬಿಸಿ ತಟ್ಟುತ್ತಾ ಎಂಬ ಪ್ರಶ್ನೆಗಳು ಜನಸಾಮಾನ್ಯರಲ್ಲಿ ಎದ್ದಿವೆ.
ಕಾರ್ಮಿಕ ಪ್ರಮುಖ ಬೇಡಿಕೆಗಳು: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಾರ್ಮಿಕರ ಮುಷ್ಕರಕ್ಕೆ ಕರೆ ನೀಡಿದ್ದಾರೆ. ಇವರ ಬೇಡಿಕೆಗಳೇನು ಎಂಬುವುದನ್ನು ನೋಡುವುದಾದರೆ. -ಕಾರ್ಮಿಕರಿಗೆ ಕನಿಷ್ಠ ವೇತನ ₹21 ಸಾವಿರ ನಿಗದಿ ಮಾಡಬೇಕು -ಸಾರ್ವಜನಿಕ ವಲಯಗಳನ್ನು ಖಾಸಗೀಕರಣ ಮಾಡಬಾರದು -ಖಾತ್ರಿ ಪಿಂಚಣಿಗಾಗಿ ತಿಂಗಳಿಗೆ ಕನಿಷ್ಠ ₹10,000 ನೀಡಬೇಕು -ಬೆಲೆ ಏರಿಕೆ ನಿಯಂತ್ರಣಕ್ಕೆ ಸಾರ್ವತ್ರಿಕ ಪಡಿತರ ವ್ಯವಸ್ಥೆ -ಆರ್ಥಿಕ ಹಿಂಜರಿತದಿಂದಾಗಿ ಉದ್ಯೋಗ ಕಳೆದುಕೊಂಡಿದ್ದಾರೆ -ಕಾರ್ಮಿಕರಿಗೆ ಉದ್ಯೋಗ, ವೇತನ ಗಳಿಕೆಯ ರಕ್ಷಣೆ -ದೇಶದ ಕಟ್ಟಡ ಕಾರ್ಮಿಕರು, ಆಟೋ ಚಾಲಕರು ಸೇರಿದಂತೆ ಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ, ಪಿಂಚಣಿ ನೀಡಬೇಕು -ಕಲ್ಯಾಣ ಯೋಜನೆ ಅನುದಾನ ನೀಡಬೇಕು -ಮಹಿಳಾ ದೌರ್ಜನ್ಯ ತಡೆ ಸಮಿತಿಯನ್ನು ರಚನೆ ಮಾಡಬೇಕು -ಮಹಿಳಾ ಕಾರ್ಮಿಕರ ರಾತ್ರಿ ಪಾಳಿಯನ್ನು ರದ್ದು ಮಾಡಬೇಕು -ರೈತರ ಬೆಳೆಗಳಿಗೆ ನ್ಯಾಯಯುತ ಬೆಲೆಗಾಗಿ ಡಾ ಸ್ವಾಮಿನಾಥ್ ವರದಿ ಜಾರಿಮಾಡಬೇಕು -ಸಾಲಮನ್ನ, ರೈತರ ಆತ್ಮಹತ್ಯೆ ತಡೆ, ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಬಲಪಡಿಸಬೇಕು ಈ ರೀತಿ ಅನೇಕ ಬೇಡಿಕೆಗೆ ಆಗ್ರಹಿಸಿ ನಾಳೆ ದೇಶ ವ್ಯಾಪ್ತಿ ಬಂದ್ಗೆ ಕರೆ ನೀಡಲಾಗಿದೆ.
Published On - 10:38 am, Tue, 7 January 20