ಬೀದರ್, ಡಿಸೆಂಬರ್ 12: ಎರಡು ವಾರದಲ್ಲಿ 10ಕ್ಕೂ ಹೆಚ್ಚು ಜನರಿಗೆ ಕೋತಿಯೊಂದು (monkey) ಕಚ್ಚಿರುವಂತಹ ಘಟನೆ ಬೀದರ್ ತಾಲೂಕಿನ ಚಿಟ್ಟಾವಾಡಿ ಗ್ರಾಮದಲ್ಲಿ ನಡೆದಿದೆ. ಸದ್ಯ ಮಂಗನ ದಾಳಿಯಿಂದಾಗಿ ಚಿಟ್ಟಾವಾಡಿ ಗ್ರಾಮಸ್ಥರು ಬೆಚ್ಚಿಬಿದಿದ್ದಾರೆ. ಕೋತಿಯನ್ನ ಸೆರೆ ಹಿಡಿದು ಕಾಡಿಗೆ ಬಿಡುವಂತೆ ಅರಣ್ಯ ಇಲಾಖೆಗೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.
ನಿನ್ನೆ ಗ್ರಾಮದ ಲಲಿತಾ ಎಂಬುವರ ಕಾಲಿಗೆ ಕೋತಿ ಕಚ್ಚಿದೆ. ಗಾಯಾಳು ಮಹಿಳೆಗೆ ವೈದ್ಯರು ನಾಲ್ಕು ಹೊಲಿಗೆ ಹಾಕಿದ್ದಾರೆ. ಕೋತಿ ಕಾಟದಿಂದಾಗಿ ಮಕ್ಕಳು ಮನೆಯಿಂದ ಹೊರಬರಲು ಹೆದರುವಂತಾಗಿದೆ.
ಇತ್ತೀಚೆಗೆ ಕೋಟೆನಾಡು ಚಿತ್ರದುರ್ಗದ ಐಯುಡಿಪಿ ಬಡಾವಣೆಯಲ್ಲಿ ಮಂಗಗಳ ಗುಂಪೊಂದು ಬಿಡಾರ ಹೂಡಿತ್ತು. ಮಕ್ಕಳು ಹೊರಗೆ ಓಡಾಡುವಂತಿಲ್ಲ. ವೃದ್ಧರು ಹಾಲು, ಹಣ್ಣು , ತರಕಾರಿ ತರುವಂತಿಲ್ಲ. ಮಹಿಳೆಯರು ಅಡುಗೆ ಮನೆಯಲ್ಲಿ ಕೆಲಸ ಮಾಡುವಂತಿಲ್ಲ. ಎಲ್ಲಿ ನೋಡಿದರಲ್ಲಿ ಮಂಗಗಳು ದಾಂಗುಡಿಯಿಟ್ಟು ಜನರ ನೆಮ್ಮದಿ ಕೆಡಿಸಿದ್ದವು.
ಇದನ್ನೂ ಓದಿ: ಬಾಲಕನ ಮೇಲೆ ನಾಯಿ ಡೆಡ್ಲಿ ಅಟ್ಯಾಕ್: ರಕ್ತ ಸಿಕ್ತವಾದ ಮಗುವನಿ ಸ್ಥಿತಿ ನೋಡಿ ಬೆಚ್ಚಿಬಿದ್ದ ಸ್ಥಳೀಯರು
ಕೆಲವರಿಗೆ ತಲೆ, ಮೈ ಕೈ ಪರಿಚಿದ ಘಟನೆಗಳು ನಡೆದಿದ್ದವು. ಹೀಗಾಗಿ, ಅರಣ್ಯ ಇಲಾಖೆ, ನಗರಸಭೆ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಮಂಗಗಳನ್ನು ಸ್ಥಳಾಂತರಿಸಬೇಕೆಂಬುದು ಆಗ್ರಹಿಸಿದ್ದರು.
ಮನೆಯ ಕಾವಲಿಗೆ ಇದ್ದ ಸಾಕು ನಾಯಿಯ ಮೇಲೆ ಚಿರತೆಯೊಂದು ಅಟ್ಯಾಕ್ ಮಾಡಿ ನಾಯಿಯನ್ನ ಹೊತ್ತೊಯ್ದ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಗಂಗಾಧರನಗರದಲ್ಲಿ ನಡೆದಿತ್ತು. ಗ್ರಾಮದ ರಾಮದಾಸ್ ಎಂಬುವವರ ಮನೆಯಲ್ಲಿ ಘಟನೆ ನಡೆದಿದ್ದು, ನಾಯಿಯನ್ನ ಚಿರತೆ ಹೊತ್ತೊಯ್ದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು.
ಇದನ್ನೂ ಓದಿ: ಬೆಂಗಳೂರಿನಲ್ಲಿ ಹೆಚ್ಚಾದ ಬೀದಿ ನಾಯಿಗಳ ಕಾಟ; ಕಬ್ಬನ್ ಪಾರ್ಕ್ ನಲ್ಲೂ ಸಾಕುನಾಯಿಗಳ ಮಾಲೀಕರಿಂದ ರೂಲ್ಸ್ ಬ್ರೇಕ್
ಇನ್ನು ಗ್ರಾಮದಲ್ಲಿ ಹಲವು ದಿನಗಳಿಂದ ಚಿರತೆ ಉಪಟಳ ಹೆಚ್ಚಾಗಿದ್ದು, ಚಿರತೆ ಸೆರೆ ಹಿಡಿಯುವಂತೆ ಗ್ರಾಮಸ್ಥರು ಮನವಿ ಮಾಡಿದರೂ ಅರಣ್ಯ ಇಲಾಖೆ ಅಧಿಕಾರಿಗಳು ಕ್ಯಾರೆ ಎಂದಿಲ್ಲ. ಇದರಿಂದ ರಾತ್ರಿ ವೇಳೆ ಮನೆಯಿಂದ ಹೊರಬರಲು ನಿವಾಸಿಗಳು ಹೆದರುವಂತಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.