ಕಾರಂಜಾ ಡ್ಯಾಂ ನಿರ್ಮಾಣ: ಭೂಮಿ ಕಳೆದುಕೊಂಡ ರೈತರಿಂದ ವಿಭಿನ್ನ ಪ್ರತಿಭಟನೆ

ಕಾರಂಜಾ ಡ್ಯಾಂ ನಿರ್ಮಾಣದಿಂದ‌ ಭೂಮಿ ಕಳೆದುಕೊಂಡ ರೈತರು ವೈಜ್ಞಾನಿಕ ಪರಿಹಾರಕ್ಕೆ ಆಗ್ರಹಿಸಿ ವಿಭಿನ್ನ ಪ್ರತಿಭಟನೆ ಮಾಡುತ್ತಿದ್ದಾರೆ.

ಕಾರಂಜಾ ಡ್ಯಾಂ ನಿರ್ಮಾಣ: ಭೂಮಿ ಕಳೆದುಕೊಂಡ ರೈತರಿಂದ ವಿಭಿನ್ನ ಪ್ರತಿಭಟನೆ
ರೈತರ ಪ್ರತಿಭಟನೆ
Edited By: ವಿವೇಕ ಬಿರಾದಾರ

Updated on: Sep 14, 2022 | 3:24 PM

ಬೀದರ್: ಕಾರಂಜಾ ಡ್ಯಾಂ (Karanja Dam) ನಿರ್ಮಾಣದಿಂದ‌ ಭೂಮಿ ಕಳೆದುಕೊಂಡ ರೈತರು (Farmers) ವೈಜ್ಞಾನಿಕ ಪರಿಹಾರಕ್ಕೆ ಆಗ್ರಹಿಸಿ ವಿಭಿನ್ನ ಪ್ರತಿಭಟನೆ ಮಾಡುತ್ತಿದ್ದಾರೆ. ಕೇಶ ಮುಂಡನೆ ಮಾಡಿಸಿಕೊಳ್ಳುವ‌ ಮುಕಾಂತರ ಸರಕಾರದ ಗಮನ ಸೇಳೆಯಲು ವಿಭಿನ್ನ ಪ್ರತಿಭಟನೆ ಮಾಡುತ್ತಿದ್ದಾರೆ, ರೈತರು ಕಾರಂಜಾ ಡ್ಯಾಂ ನಿರ್ಮಾಣದಿಂದ‌ ಭೂಮಿ ಮತ್ತು ಮನೆಗಳು ಮುಳುಗಡೆಯಾಗಿವೆ. ಹೀಗಾಗಿ ಕಳೆದಕೊಂಡ ಭೂಮಿಗಳಗಿಗೆ ವೈಜ್ಞಾನಿಕ ಪರಿಹಾರಕ್ಕೆ ಆಗ್ರಹಿಸಿ ಕಳೆದ 76 ದಿನದಿಂದ ಜಿಲ್ಲಾ ಉಸ್ತುವಾರಿ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ಕಚೇರಿ ಎದುರು ಅಹೋ ರಾತ್ರಿ ಧರಣಿ ನಡೆಸುತ್ತಿದ್ದಾರೆ.

ಡ್ಯಾಂ‌ ನಿರ್ಮಾಣದ ವೇಳೆ ಸೂಕ್ತ ವೈಜ್ಞಾನಿಕ ಪರಿಹಾರ ಕೊಡುವುದಾಗಿ ಸರ್ಕಾರ ರೈತರ ಜಮೀನು ‌ಸ್ವಾಧೀನ‌ ಪಡಿಸಿಕೊಂಡಿತ್ತು. ಡ್ಯಾಂ‌ ನಿರ್ಮಾಣದಿಂದ ರೈತರು 15 ಸಾವಿರ ಎಕರೆಯಷ್ಟು ‌ಜಮೀನು‌ ಕಳೆದುಕೊಂಡಿದ್ದರು. ಜಮೀನು ಕಳೆದುಕೊಂಡ ‌ರೈತರಿಗೆ ಸರ್ಕಾರ ವೈಜ್ಞಾನಿಕ ಪರಿಹಾರ ಕೊಡದೆ ಎಕರೆಗೆ ಹತ್ತು ಸಾವಿರ ಕೊಟ್ಟಿತ್ತು. ರೈತರು ಸೂಕ್ತ ಪರಿಹಾರ ಕೊಡುವಂತೆ 1975 ರಿಂದ ಪ್ರತಿಭಟನೆ ‌ಮಾಡುತ್ತಲೆ ಬಂದಿದ್ದಾರೆ.

ಆದರೆ ಇಲ್ಲಿಯ ವರೆಗೂ ಕೂಡಾ ಯಾವ ಸರಕಾರ ರೈತರ ಸಮಸ್ಯೆಯನ್ನು ಪರಿಹರಿಸುವ ಕೆಲಸ ಮಾಡಿಲ್ಲ. ಹೀಗಾಗಿ ರೈತರು ಕಳೆದ 76 ದಿನಗಳಿಂದ ಅಹೋರಾತ್ರಿ ಹೋರಾಟ ಮಾಡುತ್ತಿದ್ದಾರೆ. ಕಾರಂಜಾ ಜಲಾಶಯ ದಿಂದ 28 ಹಳ್ಳಿಗಳ ರೈತರು ಭೂಮಿ ಮನೆಗಳನ್ನು ಕಳೆದುಕೊಂಡಿದ್ದಾರೆ.

ಮತ್ತಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

TV9 Web

TV9 Kannada

Read More
Loading...
Unable to load recommendations.
Follow Us