ಬೀದರ್: ಜಿಲ್ಲೆಯಲ್ಲಿ ತಡ ರಾತ್ರಿ ಸುರಿದ ಮಳೆಯಿಂದಾಗಿ ಅಪಾರ ಪ್ರಮಾಣದ ಹಾನಿಯಾಗಿದೆ. ನೂರಾರು ಎಕರೆಯಷ್ಟು ಜಮೀನಿನಲ್ಲಿ ಬೆಳೆಸಿದ್ದ ಜೋಳ, ಕುಸುಬಿ, ಕಬ್ಬು ಬೆಳೆ ನಾಶವಾಗಿದ್ದು, ರೈತರನ್ನ ಕಂಗಾಲು ಮಾಡಿದೆ. ಗುಡುಗು ಸಿಡಿಲು ಆಲಿಕಲ್ಲು ಸಹಿತ ಭಾರೀ ಮಳೆಯಿಂದ ಬೃಹತ್ ಗಾತ್ರದ ಮರಗಳು ನೆಲ್ಲಕ್ಕುರುಳಿದ್ದು, ಕೆಲವು ಕಡೆ ಮನೆಗಳ ಮೇಲೆಯೂ ಮರ ಬಿದ್ದು ಜಖಂಗೊಂಡಿವೆ. ಗಾಳಿ ಮಳೆಯಿಂದಾಗಿ ಕೋಳಿ ಸಾಕಾಣಿಕೆ ಸೇಡ್ ಗಾಳಿಗೆ ಹಾರಿ ಹೋಗಿದ್ದು ಸಾವಿರಾರು ಕೋಳಿಗಳು ಸಾವನಪ್ಪಿದೆ. ಇನ್ನು ನಿಟ್ಟೂರು, ಕೂಡ್ಲಿ ಹಾಗೂ ನಾಗೂರು ಗ್ರಾಮದ ಸುಮಾರು 500 ಎಕರೆಗೂ ಅಧಿಕ ಜೋಳ ಮಳೆಯಿಂದಾಗಿ ನೆಲ್ಲಕಚ್ಚಿದ್ದು ಸಂಪೂರ್ಣವಾಗಿ ಹಾನಿಯಾಗಿದೆಂದು ಇಲ್ಲಿನ ರೈತರು ಹೇಳುತ್ತಿದ್ದಾರೆ.
ಆಲಿಕಲ್ಲು ಸಹಿತ ಗಾಳಿ ಮಳೆ ಸುರಿದ ಪರಿಣಾಮವಾಗಿ ಹತ್ತಾರು ಮನೆಗಳು ಕುಸಿದಿವೆ, ಎರಡು ಮನೆಗಳ ಮೇಲೆ ಬೃಹತ್ ಗಾತ್ರದ ಮರಗಳು ಮನೆಯ ಮೇಲೆ ಬಿದ್ದಿರುವ ಪರಿಣಾಮವಾಗಿ ಕುಟುಂಸ್ಥರು ಸ್ವಲ್ಪದರಲ್ಲಿಯೇ ಪಾರಾಗಿದ್ದು ಇರುವುದಕ್ಕೆ ಆಸರೆಯಾಗಿದ್ದ ಮನೆ ಕುಸಿದ ಪರಿಣಾಮ ಇಡೀ ಕುಟುಂಬಗಳು ಬೀದಿಗೆ ಬಂದಂತಾಗಿದೆ. ಕಳೆದ ಮೂರು ವರ್ಷದಿಂದ ಜಿಲ್ಲೆಯಲ್ಲಿ ಮುಂಗಾರು ಮಳೆ ಕಳೆದ ಹತ್ತಾರು ವರ್ಷದಿಂದ ಮಾರ್ಚ್ ತಿಂಗಳಿನಲ್ಲಿ ಆಗಿರಲಿಲ್ಲ. ಆದರೆ ಈಗ ಏಕಾಏಕಿ ಸುರಿದ ಮಳೆಯಿಂದಾಗಿ ಜೋಳ ಬೆಳೆಸಿದ ರೈತರು ಕಂಗಾಲಾಗಿದ್ದು ನಷ್ಟ ಅನುಭವಿಸುವ ಸ್ಥಿತಿ ನಿರ್ಮಾಣವಾಗಿದೆ. ಎರಡು ದಿನದಿಂದ ಸುರಿದ ನಿರಂತರ ದಾಖಲೆ ಪ್ರಮಾಣದ ಮೆಳೆಯಿಂದಾಗಿ ರೈತರು ಬೆಳೆದ ಬೆಳೆ ಸಂಪೂರ್ಣವಾಗಿ ನಾಶವಾಗಿದೆ.
ಇದನ್ನೂ ಓದಿ:ಚಿಕ್ಕಬಳ್ಳಾಪುರ: ಅಕಾಲಿಕ ಮಳೆ ಗಾಳಿಯಿಂದ ನೆಲಕಚ್ಚಿದ ಅಪಾರ ಪ್ರಮಾಣದ ತರಕಾರಿ ಬೆಳೆ, ಕಂಗಾಲಾದ ರೈತರು
ಜೋಳ ಚಿಯಾ, ತರಕಾರಿ ಬೆಳೆಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ. ನೀರಿನಲ್ಲಿ ಬೆಳೆ ಮುಳುಗಿದ್ದರಿಂದ ಜೋಳದ ಕಾಳು ಮೊಳಕೆಯೊಡೆದು ಸಂಪೂರ್ಣವಾಗಿ ನಾಶವಾಗುವ ಭಯ ರೈತರನ್ನ ಕಾಡುತ್ತಿದೆ. ಜೊತೆಗೆ ಜೋಳ ಸಂಪೂರ್ಣವಾಗಿ ಕಪ್ಪಗಾಗುವ ಭೀತಿ ಕೂಡ ಎದುರಾಗಿದೆ. ಒಂದು ಎಕರೆಗೆ ಕನಿಷ್ಠ ಅಂದರೂ 3 ರಿಂದ 4 ಸಾವಿರ ರೂಪಾಯಿಯನ್ನು ಖರ್ಚು ಮಾಡಿ ಬಿತ್ತಿದ ಬೆಳೆ ಸಂಪೂರ್ಣವಾಗಿ ನಾಶವಾಗಿದೆಯೆಂದು ರೈತರು ತಮ್ಮ ಅಳಲನ್ನ ತೋಡಿಕೊಂಡಿದ್ದಾರೆ. ಇನ್ನು ಮಳೆಯ ಹೊಡೆತಕ್ಕೆ ಸಿಲುಕಿ ಮನೆ ಕಳೆದುಕೊಂಡ ಕುಟುಂಬ ಈಗ ಬೀದಿಗೆ ಬಿದ್ದಿದ್ದು ನಮಗೆ ಮನೆಕಟ್ಟಿಸಿಕೊಡಿ ಎಂದು ಜಿಲ್ಲಾಡಳಿತಕ್ಕೆ ಮನವಿ ಮಾಡಿಕೊಳ್ಳುತ್ತಿದ್ದಾರೆ.
ಈ ಬಾರಿ ಬೀದರ್ ಜಿಲ್ಲೆಯ ರೈತರ ಸ್ಥಿತಿ ಶೋಚನೀಯವಾಗಿದೆ. ಕುಸುಬಿ, ಜೋಳ, ಬೆಳೆಗಾರರ ಪರಿಸ್ಥಿತಿ ಸಂಪೂರ್ಣವಾಗಿ ಹದೆಗಿಟ್ಟಿದ್ದು ಮತ್ತೆ ಸಾಲದ ಸುಳಿಯಲ್ಲಿ ಸಿಲುಕುವಂತಾ ಸ್ಥಿತಿ ನಿರ್ಮಾಣವಾಗಿದೆ. ಬೆಳೆಯನ್ನೆ ನಂಬಿಕೊಂಡಿದ್ದ ರೈತರಿಗೆ ಬರಸಿಡಿಲಿನಂತೆ ಬಂದ ಮಳೆ ರೈತರ ಬದುಕನ್ನ ಬರ್ಬಾದ್ ಮಾಡಿದೆ. ಒಟ್ಟಿನಲ್ಲಿ ರೈತರು ಬೆಳೆದ ಬೆಳೆ ಕೈಗೆ ಬರುವಷ್ಟರಲ್ಲಿ ಮಣ್ಣುಪಾಲಾಗಿದ್ದು ರೈತ ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾನೆ. ಈಗಲಾದರೂ ಸರ್ಕಾರ ನೆರವಿಗೆ ಬರಬೇಕೆಂದು ರೈತರು ಸರಕಾರಕ್ಕೆ ವಿನಂತಿಸುತ್ತಿದ್ದಾರೆ.
ವರದಿ: ಸುರೇಶ್ ನಾಯಕ್ ಟಿವಿ9 ಬೀದರ್
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ