AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೀದರ್: ಸ್ವಂತ ಕಟ್ಟಡವಿಲ್ಲದೆ ಕಲ್ಯಾಣ ಮಂಟಪದಲ್ಲಿ ನಡೆಸುತ್ತಿರುವ ಹಾಸ್ಟೆಲ್; ಇಲ್ಲೂ ಸೌಲಭ್ಯಗಳ ಕೊರತೆ

ಒಂದು ತಾಲೂಕಿಗೆ ಮಂಜೂರಾದ್ ಹಾಸ್ಟೇಲ್ ಅನ್ನ ಇನ್ನೊಂದು ತಾಲೂಕಿನಲ್ಲಿ ನಡೆಸಲು ಬರೋದಿಲ್ಲ ಆದರೂ ಬೇರೆ ತಾಲೂಕಿನಿಂದ ಇಂದಿರಾಗಾಂಧಿ ಹಾಸ್ಟೇಲ್ ಅನ್ನ ಎತ್ತಂಗಡಿ ಮಾಡಿಕೊಂಡು ಬಂದು ಬಾಡಿಗೆಯಾಸೆಗಾಗಿ ಬಲ್ಲೂರು (ಜೆ) ಗ್ರಾಮದಲ್ಲಿನ ಕಲ್ಯಾಣ ಮಂಟಪದಲ್ಲಿ ನಡೆಸುತ್ತಿರುವ ಹಾಸ್ಟೆಲ್​ನಲ್ಲಿ ತಂದು ನಡೆಸಲಾಗುತ್ತಿದೆ.

ಬೀದರ್: ಸ್ವಂತ ಕಟ್ಟಡವಿಲ್ಲದೆ ಕಲ್ಯಾಣ ಮಂಟಪದಲ್ಲಿ ನಡೆಸುತ್ತಿರುವ ಹಾಸ್ಟೆಲ್; ಇಲ್ಲೂ ಸೌಲಭ್ಯಗಳ ಕೊರತೆ
ಬೀದರ್: ಕಲ್ಯಾಣ ಮಂಟಪದಲ್ಲಿ ನಡೆಸುತ್ತಿರುವ ಹಾಸ್ಟೆಲ್​ನಲ್ಲಿ ಶೌಚಾಲದ ಸಮಸ್ಯೆ, ರಾತ್ರಿ ನಿದ್ರೆಗೂ ಕಷ್ಟಕಷ್ಟ
TV9 Web
| Edited By: |

Updated on:Dec 04, 2022 | 3:40 PM

Share

ಬೀದರ್: ಜಿಲ್ಲೆಯ ಔರಾದ್ ತಾಲೂಕಿನ (Aurad taluk) ಬಲ್ಲೂರು (ಜೆ) ಗ್ರಾಮದಲ್ಲಿ ನಡೆಯಬೇಕಾಗಿದ್ದ ವತಸಿ ಶಾಲೆ (Hostel Problem)ಯನ್ನ ಬೀದರ್ ತಾಲೂಕಿನ ಜನವಾಡಾ ಗ್ರಾಮದ ಬಳಿಯ ಒಂದು ಕಲ್ಯಾಣ ಮಂಟಪದಲ್ಲಿ ನಡೆಸಲಾಗುತ್ತಿದೆ. ಒಂದು ತಾಲೂಕಿಗೆ ಮಂಜೂರಾದ್ ಹಾಸ್ಟೇಲ್ ಅನ್ನ ಇನ್ನೊಂದು ತಾಲೂಕಿನಲ್ಲಿ ನಡೆಸಲು ಸಾಧ್ಯವಿಲ್ಲ. ಹೀಗಿದ್ದಾಗಲೂ ಬೇರೆ ತಾಲೂಕಿನಿಂದ ಇಂದಿರಾಗಾಂಧಿ ಹಾಸ್ಟೇಲ್ (Indira Gandhi Hostel) ಅನ್ನ ಎತ್ತಂಗಡಿ ಮಾಡಿಕೊಂಡು ಬಂದು ಬಾಡಿಗೆಯಾಸೆಗಾಗಿ ಇಲ್ಲಿ ತಂದು ನಡೆಸಲಾಗುತ್ತಿದೆ. ಮೊದಲೇ ಸೂಕ್ತ ಕಟ್ಟಡವಿಲ್ಲದೆ ಪರದಾಡುತ್ತಿದ್ದ ಮಕ್ಕಳಿಗೆ ಮತ್ತೊಂದು ಹಾಸ್ಟೆಲ್​ ಅನ್ನು ಇದರಲ್ಲೇ ನಡೆಸುತ್ತಿರುವುದರಿಂದ ಸಮಸ್ಯೆಗಳು ಮತ್ತಷ್ಟು ಹೆಚ್ಚಾಗಿವೆ.

ವಸತಿ ಶಾಲೆ ನಡೆಯುತ್ತಿರುವುದು ಹೈಟೆಕ್ ಮಾದರಿಯ ಕಟ್ಟಡದಲ್ಲ. ಬದಲಾಗಿ ಕಲ್ಯಾಣ ಮಂಟಪದಲ್ಲಿ ಈ ಶಾಲೆ ನಡೆಯುತ್ತಿದೆ. ಈ ವಸತಿ ಶಾಲೆಯಲ್ಲಿ 240 ಮಕ್ಕಳು ಓದುತ್ತಿದ್ದು ಹೆಣ್ಣುಮಕ್ಕಳು ಹಾಗೂ ಗಂಡು ಮಕ್ಕಳು ಒಂದೆ ಶಾಲೆಯಲ್ಲಿ ಓದುವ ಅವಕಾಶವಿದ್ದು ಎಲ್ಲಾ ಮಕ್ಕಳು ಇಲ್ಲಿಯೇ ಓದುತ್ತಿದ್ದಾರೆ. ಒಂದೂವರೆ ವರ್ಷದ ಹಿಂದೆ ಈ ವಸತಿ ಶಾಲೆಯನ್ನ ಇಲ್ಲಿಗೆ ಶಿಪ್ಟ್ ಮಾಡಿದ್ದು ಅಂದಿನಿಂದಲೂ ಇದೆ ಕಲ್ಯಾಣ ಮಂಟಪದಲ್ಲಿಯೇ ಹಾಸ್ಟೆಲ್ ನಡೆಯುತ್ತಿದೆ.

ಇದನ್ನೂ ಓದಿ: ಬೆಂಗಳೂರು: ಪಾರಿವಾಳ ಹಿಡಿಲು ಹೋಗಿ ವಿದ್ಯುತ್​ ಶಾಕ್​ಗೆ ಒಳಗಾಗಿದ್ದ ಓರ್ವ ಬಾಲಕ ಚಿಕಿತ್ಸೆ ಫಲಿಸದೆ ಸಾವು

ಇದರಿಂದ ಮಕ್ಕಳಿಗೆ ಸಾಕಷ್ಟು ಕಲಿಕೆಗೆ ಅನಾನುಕೂಲವಾಗುತ್ತಿದ್ದು ಅಲ್ಲಿಯೇ ಊಟ, ಅಲ್ಲೇ ಪಾಠ, ಅಲ್ಲಿಯೇ ವಸತಿ, ಅಲ್ಲೆ ಸ್ನಾನ ಮಾಡಬೇಕಾದ ಸ್ಥಿತಿ ಇಲ್ಲಿನ ಮಕ್ಕಳಿಗಿದೆ. ಇನ್ನೂ, ಇಲ್ಲಿ ಓದುತ್ತಿರುವ ಹೆಣ್ಣುಮಕ್ಕಳ ಸ್ಥಿತಿಯಂತೂ ಗಣಗೋರವಾಗಿದ್ದು ಸ್ನಾನ ಮತ್ತು ಶೌಚಾಲಯಕ್ಕೆ ಹೋಗಲು ಸಾಕಷ್ಟು ಸಮಸ್ಯೆಗಳನ್ನು ಹೆಣ್ಣು ಮಕ್ಕಳು ಎದುರಿಸುತ್ತಿದ್ದಾರೆ. ರಾತ್ರಿ ನಿದ್ದೆ ಮಾಡುವುದು ಕೂಡಾ ಕಷ್ಟವಾಗಿದ್ದು ನಮಗೆ ಬೇರೆ ಕಡೆ ಸ್ಥಳಾಂತರ ಮಾಡಿಸಿ ಎಂದು ಇಲ್ಲಿನ ಮಕ್ಕಳು ಮನವಿ ಮಾಡುತ್ತಿದ್ದಾರೆ.

ವರದಿ: ಸುರೇಶ್ ನಾಯಕ್, ಟಿವಿ9 ಬೀದರ್

ಮತ್ತಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:40 pm, Sun, 4 December 22

ರಜತ್-ಗಿಲ್ಲಿ ಕಣ್ಣಿಗೆ ಬಟ್ಟೆ: ನಕ್ಕು ಸುಸ್ತಾದ ಸುದೀಪ್
ರಜತ್-ಗಿಲ್ಲಿ ಕಣ್ಣಿಗೆ ಬಟ್ಟೆ: ನಕ್ಕು ಸುಸ್ತಾದ ಸುದೀಪ್
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ
Pulse Polio Campaign: ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿದ ಡಿಕೆ ಶಿವಕುಮಾರ್
Pulse Polio Campaign: ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿದ ಡಿಕೆ ಶಿವಕುಮಾರ್
ಡಿಕೆ ಶಿವಕುಮಾರ್​​​ ಭೇಟಿ ಬಗ್ಗೆ ಕೆಎನ್​ ರಾಜಣ್ಣ ಸ್ಫೋಟಕ ಹೇಳಿಕೆ
ಡಿಕೆ ಶಿವಕುಮಾರ್​​​ ಭೇಟಿ ಬಗ್ಗೆ ಕೆಎನ್​ ರಾಜಣ್ಣ ಸ್ಫೋಟಕ ಹೇಳಿಕೆ