
ಬೀದರ್, ಸೆಪ್ಟೆಂಬರ್ 25: ಕರ್ನಾಟಕದಲ್ಲಿ ರಾಜ್ಯ ಸರ್ಕಾರದ ಮಹತ್ವ ಆಕಾಂಕ್ಷೆ ಯೋಜನೆ ಜಾತಿಗಣತಿ (caste census) ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ಹಮ್ಮಿಕೊಂಡಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಸದ್ಯ ಎಲ್ಲೆಡೆ ನೆಟ್‌ವರ್ಕ್ ಸಮಸ್ಯೆ ಉಂಟಾಗಿದೆ. ಪರಿಣಾಮ ಸಮೀಕ್ಷೆ ಬಂದ ಶಿಕ್ಷಕರು ಮೊಬೈಲ್ ನೆಟ್ವರ್ಕ್ಗಾಗಿ (network) ಮರ ಮತ್ತು ನಿರೀನ ಟ್ಯಾಂಕ್ ಹತ್ತುವ ಪರಿಸ್ಥಿತಿ ನಿರ್ಮಾಣವಾಗಿದೆ.
ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಮೊಬೈಲ್ ನೆಟ್‌ವರ್ಕ್ ಅನಿವಾರ್ಯ. ಆದರೆ ಮೊಬೈಲ್ ನೆಟ್‌ವರ್ಕ್ ಸಿಗದ ಕಾರಣ ಗಣತಿದಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಬೀದರ್ ಜಿಲ್ಲೆಯ ಮಹಾರಾಷ್ಟ್ರದ ಗಡಿಯಲ್ಲಿ ಬರುವ ಔರಾದ್, ಕಮಲನಹರ, ಬಸವ ಕಲ್ಯಾಣ, ಹುಲಸೂರು ತಾಲೂಕಿನ ಕೆಲವು ಗ್ರಾಮ ಹಾಗೂ ತಾಂಡಾಗಳಲ್ಲಿ ಮೊಬೈಲ್ ನೆಟ್‌ವರ್ಕ್ ಸಮಸ್ಯೆ ಉಂಟಾಗಿದೆ. ನೆಟ್ವರ್ಕ್ಗಾಗಿ ಶಿಕ್ಷಕರು ಮರ ಮತ್ತು ನೀರಿನ ಟ್ಯಾಂಕ್ ಹತ್ತಿದ ಆಶ್ಚರ್ಯಕರ ಸಂಗತಿಗಳು ನಡೆದಿವೆ.
ಇದನ್ನೂ ಓದಿ: ಗೊಂದಲದ ಜಾತಿಗಣತಿ: ನೆಟ್‌ವರ್ಕ್, ಆ್ಯಪ್ ಸಮಸ್ಯೆಯಿಂದ ಸಿಬ್ಬಂದಿ ಪರದಾಟ
ಸೆಪ್ಟೆಂಬರ್ 22 ರಂದು ಆರಂಭಗೊಂಡಿರುವ ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆಗೆ ಹಲವು ರೀತಿಯ ತಾಂತ್ರಿಕ ದೋಷದಿಂದ ಆರಂಭದಲ್ಲೇ ವಿಘ್ನ ಶುರುವಾದಂತಾಗಿದೆ. ನೆಟ್‌ವರ್ಕ್, ತರಬೇತಿ ಸೇರಿದಂತೆ ಹಲವು ರೀತಿಯ ಗೊಂದಲಗಳು ಸೃಷ್ಟಿಯಾಗಿವೆ.
ಸದ್ಯ ಜನಗಣತಿ ಆರಂಭಗೊಂಡು ಮೂರು ದಿನಗಳು ಕಳೆದರೂ ಪರಿಹಾರವಿಲ್ಲ. ಹೀಗಾಗಿ ಬೀದರ್ ಜಿಲ್ಲೆಯಲ್ಲಿ ವೇಗವಾಗಿ ಸರ್ವೆ ಕಾರ್ಯ ನಡೆಯುತ್ತಿಲ್ಲ. ಜಿಲ್ಲೆಯಲ್ಲಿ 3,381 ಜನರಿಂದ ಸರ್ವೆಕಾರ್ಯ ನಡೆಯುತ್ತಿದೆ. ಸುಮಾರು 3.69 ಲಕ್ಷ ಕುಟುಂಬದ ಸಮೀಕ್ಷೆ ಕಾರ್ಯ ನಡೆಯಬೇಕಿದೆ.
ಆರಂಭದಿಂದಲೂ ಧರ್ಮ, ಜಾತಿ, ಆರ್ಥಿಕ ಮಾಹಿತಿ ಯಾವ ರೀತಿ ನೀಡಬೇಕು ಎಂಬ ಗೊಂದಲಕ್ಕೆ ಒಳಗಾದ ಕುಟುಂಬಗಳು ಸೇರಿದಂತೆ ಗಣತಿದಾರರು ಇದೀಗ ನೆಟ್‌ವರ್ಕ್ ಸಿಗದೇ ಇರುವುದು ಇನ್ನೊಂದು ವಿಘ್ನ ಎದುರಾಗಿದೆ.
ಇದನ್ನೂ ಓದಿ: ಬೆಂಗಳೂರು ಹೊರತುಪಡಿಸಿ ರಾಜ್ಯಾದ್ಯಂತ ಜಾತಿಗಣತಿ ಶುರು: ಹಲವಡೆ ಸಿಗದ ಕಿಟ್, ಟ್ರೈನಿಂಗ್ ಇಲ್ಲ, ಸರ್ವರ್ ಸಮಸ್ಯೆ
ದಿನಕ್ಕೆ ಹತ್ತು ಕುಟುಂಬಗಳ ಶೈಕ್ಷಣಿಕ ಮತ್ತು ಸಾಮಾಜಿಕ ಜಾತಿ ಗಣತಿ ಮಾಡಬೇಕು ಎಂಬ ಗುರಿ ನೀಡಲಾಗಿದೆ. ಆದರೆ ನೆಟ್‌ವರ್ಕ್ ಸಮಸ್ಯೆಯಿಂದ ಇಲ್ಲಿಯವರೆಗೆ ವೇಗವಾಗಿ ಗಣತಿ ಕಾರ್ಯ ನಡೆಯದೇ ಇರುವುದು ಜಿಲ್ಲಾಡಳಿತಕ್ಕೆ ತಲೆನೋವಾಗಿ ಪರಿಣಮಿಸಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.