AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾಳೆಯಿಂದ ಜಾತಿಗಣತಿ: ಸಮೀಕ್ಷೆ ವೇಳೆ ನೀವು ಈ 60 ಪ್ರಶ್ನೆಗಳಿಗೆ ಉತ್ತರ ನೀಡಲು ಸಜ್ಜಾಗಿರಿ

ಕರ್ನಾಟಕದಲ್ಲಿ ಜಾತಿಗಣತಿ ಜ್ವಾಲೆ ಧಗಧಗಿಸುತ್ತಿದ್ದು, ಹಲವು ಗೊಂದಲಗಳ ನಡುವೆ ನಾಳೆಯಿಂದ ರಾಜ್ಯಾದ್ಯಂತ ಜಾತಿಗಣತಿ ಶುರುವಾಗುತ್ತಿದೆ. ಶಿಕ್ಷಕರಿಗೆ ತರಬೇತಿ ನೀಡಲಾಗಿದ್ದು, ನಾಳೆ ಬೆಳಗ್ಗೆಯಾದ್ರೆ ಜಾತಿಗಣತಿ ಆರಂಭವಾಗಲಿದೆ. ಈ ಮಧ್ಯೆ ಗೊಂದಲದ ಗೂಡಾಗಿರೋ ಕೈಪಿಡಿಯಲ್ಲಿ ಹಲವು ಅಂಶಗಳಿಗೆ ಕೊಕ್ ನೀಡಲಾಗಿದೆ. ಕ್ರಿಶ್ಚಿಯನ್ ಧರ್ಮದ ಜೊತೆ ಹಿಂದೂ ಜಾತಿಗಳನ್ನ ಸೇರಿಸಿದ್ದಕ್ಕೆ ಬಿಜೆಪಿ ನಾಯಕರು ಕೆರಳಿ ಕೆಂಡವಾಗಿದ್ದಾರೆ. ಹೀಗಾಗಿ ಅದನ್ನು ಕೈಬಿಡಲಾಗಿದೆ. ಇನ್ನು ಜಾತಿಗಣತಿಗೆಂದು ನಿಮ್ಮ ಮನೆಗೆ ಬರುವವರಿಗೆ ಬರೋಬ್ಬರಿ 60 ಪ್ರಶ್ನೆಗಳಿಗೆ ಉತ್ತರಿಸಬೇಕಿದೆ.

ನಾಳೆಯಿಂದ ಜಾತಿಗಣತಿ: ಸಮೀಕ್ಷೆ ವೇಳೆ  ನೀವು ಈ 60 ಪ್ರಶ್ನೆಗಳಿಗೆ ಉತ್ತರ ನೀಡಲು ಸಜ್ಜಾಗಿರಿ
Karnataka Caste Census
ರಮೇಶ್ ಬಿ. ಜವಳಗೇರಾ
|

Updated on:Sep 21, 2025 | 4:38 PM

Share

ಬೆಂಗಳೂರು, (ಸೆಪ್ಟೆಂಬರ್ 21): ಹಲವು ಗೊಂದಲ, ಗದ್ದಲ ವಿರೋಧಗಳ ನಡುವೆಯೂ ನಾಳೆಯಿಂದ (ಸೆಪ್ಟೆಂಬರ್ 24) ಕರ್ನಾಟಕದಲ್ಲಿ ಜಾತಿಗಣತಿ (Karnataka Caste Census ) ಶುರುವಾಗಲಿದೆ. ಸಮುದಾಯಗಳ ತೀವ್ರ ಒತ್ತಡಕ್ಕೆ ಮಣಿದ ಸರ್ಕಾರ ಜಾತಿಗಣತಿ ನಮೂನೆಯಿಂದ ಹಿಂದೂ ಕ್ರೈಸ್ತಗೆ ಕೊಕ್ ನೀಡಿದೆ. ಕ್ರೈಸ್ತ ಜೊತೆ ನಾನಾ ಹಿಂದೂ ಜಾತಿ ಉಲ್ಲೇಖಕ್ಕೆ ಬ್ರೇಕ್ ಹಾಕಿದೆ. ತೀವ್ರ ವಿರೋಧ ವ್ಯಕ್ತವಾದ ಬೆನ್ನಲ್ಲೇ ರಾಜ್ಯ ಹಿಂದುಳಿದ ಆಯೋಗ ಜಾತಿ ಗಣತಿಯಿಂದ 33 ಜಾತಿಗಳನ್ನು ಪಟ್ಟಿಯಿಂದ ತೆಗೆದಿದೆ. ಇನ್ನು ಆಯಾ ಸಮಾಜದ ಮುಖಂಡರುಗಳು, ಸ್ವಾಮೀಜಿಗಳು ಸಭೆ ಮಾಡಿ ಜಾತಿ ಕಲಂನಲ್ಲಿ ಏನೆಲ್ಲಾ ಬರೆಯಿಸಬೇಕೆಂದು ಈಗಾಗಲೇ ಕರೆ ನೀಡಿದ್ದು, ಜಾತಿಗಣತಿಗೆಂದು ನಿಮ್ಮ ಮನೆಗೆ ಬರುವವರಿಗೆ ಬರೋಬ್ಬರಿ 60 ಪ್ರಶ್ನೆಗಳಿಗೆ ಉತ್ತರಿಸಬೇಕಿದೆ. ಹಾಗೇ ಯಾವೆಲ್ಲಾ ದಾಖಲೆಗಳನ್ನು ರೆಡಿ ಇಟ್ಟುಕೊಳ್ಳಬೇಕೆಂಬ ವಿವರ ಕೆಳಗಿನಂತಿದೆ.

ಸಮೀಕ್ಷೆಗೆ ಬೇಕಾಗುವ ದಾಖಲಾತಿಗಳು

  • ರೇಷನ್ ಕಾರ್ಡ್.
  • ಮನೆಯಲ್ಲಿ ಇರುವ ಎಲ್ಲಾ ಸದಸ್ಯರ ಆಧಾರ್ ಕಾರ್ಡ್.
  • ಆಧಾರ್ ಕಾರ್ಡಿಗೆ ಲಿಂಕ್ ಆಗಿರುವ ಮೊಬೈಲ್ ನಂಬರ್
  • ಎಲೆಕ್ಷನ್ ಐಡಿ ಕಾರ್ಡ್

ಇದನ್ನೂ ಓದಿ: ಜಾತಿಗಣತಿ ಗೊಂದಲ​: ಕ್ರಿಶ್ಚಿಯನ್ ಉಪ-ಜಾತಿಗಳ ಹೆಸರು ಕೈಬಿಟ್ಟ ಆಯೋಗ

ಜಾತಿಗಣತಿಯ 60 ಪ್ರಶ್ನೆಗಳು

  1. ಮನೆಯ ಮುಖ್ಯಸ್ಥರ ಹೆಸರು
  2.  ತಂದೆಯ ಹೆಸರು
  3.  ತಾಯಿಯ ಹೆಸರು
  4. ಕುಟುಂಬದ ಕುಲಹೆಸರು
  5.  ಮನೆ ವಿಳಾಸ
  6.  ಮೊಬೈಲ್ ಸಂಖ್ಯೆ
  7.  ರೇಷನ್ ಕಾರ್ಡ್ ಸಂಖ್ಯೆ
  8.  ಆದಾರ್ ಸಂಖ್ಯೆ
  9.  ಮತದಾರರ ಗುರುತಿನ ಚೀಟಿ ಸಂಖ್ಯೆ
  10.  ಕುಟುಂಬದ ಒಟ್ಟು ಸದಸ್ಯರು
  11. ಧರ್ಮ
  12.  ಜಾತಿ / ಉಪಜಾತಿ
  13. ಜಾತಿ ವರ್ಗ (SC/ST/OBC/General/Other)
  14. ಜಾತಿ ಪ್ರಮಾಣ ಪತ್ರ ಇದೆಯೇ?
  15. . ಪ್ರಮಾಣ ಪತ್ರ ಸಂಖ್ಯೆ
  16. . ಜನ್ಮ ದಿನಾಂಕ
  17. . ವಯಸ್ಸು
  18. ಲಿಂಗ (ಪುರುಷ/ಸ್ತ್ರೀ/ಇತರೆ)
  19. ವೈವಾಹಿಕ ಸ್ಥಿತಿ
  20. ಜನ್ಮ ಸ್ಥಳ
  21. ವಿದ್ಯಾಭ್ಯಾಸದ ಮಟ್ಟ
  22. ಮನೆಯಲ್ಲಿ ಓದಲು ಬಲ್ಲವರು ಎಷ್ಟು?
  23. ಮಕ್ಕಳು ಶಾಲೆಗೆ ಹೋಗುತ್ತಿದ್ದಾರೆಯೇ?
  24. ಶಾಲೆಯ ಪ್ರಕಾರ (ಸರ್ಕಾರಿ/ಖಾಸಗಿ)
  25. ಮನೆಯಲ್ಲಿ ಶಾಲೆ ಬಿಟ್ಟವರು ಇದೆಯೇ?
  26. ಮನೆಯ ಮುಖ್ಯ ಉದ್ಯೋಗ
  27. ಎಷ್ಟು ಜನರು ಉದ್ಯೋಗದಲ್ಲಿದ್ದಾರೆ?
  28. ಕೆಲಸದ ಪ್ರಕಾರ (ಸರ್ಕಾರಿ/ಖಾಸಗಿ)
  29. ನಿರುದ್ಯೋಗಿಗಳು ಇದೆಯೇ?
  30. ದಿನಸಿ ಆದಾಯ
  31. ತಿಂಗಳ ಆದಾಯ
  32. ತಿಂಗಳ ಖರ್ಚು
  33. ಸಾಲ ಇದೆಯೇ?
  34. BPL ಕಾರ್ಡ್ ಇದೆಯೇ?
  35. ಪಿಂಚಣಿ ಪಡೆಯುತ್ತೀರಾ?
  36. ಒಟ್ಟು ಜಮೀನು
  37. ಕೃಷಿ/ನಿವಾಸಿ ಜಮೀನು?
  38. ಮನೆ ಸ್ವಂತದ್ದೇ/ಬಾಡಿಗೆ?
  39. ಮನೆಯ ಪ್ರಕಾರ (ಕಚ್ಚಾ/ಪಕ್ಕಾ)
  40. ವಿದ್ಯುತ್ ಸಂಪರ್ಕ ಇದೆಯೇ?
  41. ಕುಡಿಯುವ ನೀರಿನ ಮೂಲ
  42. ಶೌಚಾಲಯ ಇದೆಯೇ?
  43. ಮನೆಯಲ್ಲಿ ಎಷ್ಟು ಕೊಠಡಿಗಳು?
  44. ಇಂಟರ್ನೆಟ್/ಮೊಬೈಲ್ ಸೌಲಭ್ಯ ಇದೆಯೇ?
  45. ವಾಹನ ಇದೆಯೇ (ಸೈಕಲ್/ಬೈಕ್/ಕಾರು/ಟ್ರಾಕ್ಟರ್)?
  46. ರೇಷನ್ ಸಬ್ಸಿಡಿ ಸಿಗುತ್ತಿದೆಯೇ?
  47. ವಸತಿ ಯೋಜನೆ ಲಾಭ ಪಡೆದಿದ್ದೀರಾ?
  48. ವಿದ್ಯಾರ್ಥಿವೇತನ ಪಡೆದಿದ್ದೀರಾ?
  49.  ಮೀಸಲಾತಿ ಲಾಭ ಪಡೆದಿದ್ದೀರಾ?
  50.  ಆರೋಗ್ಯ ಯೋಜನೆ ಲಾಭ ಇದೆಯೇ?
  51. ಮನೆಯಲ್ಲಿ ವಿಧವೆ ಇದೆಯೇ?
  52. ಅಂಗವಿಕಲರು ಇದೆಯೇ?
  53. ಹಿರಿಯ ನಾಗರಿಕರು (೬೦+) ಇದೆಯೇ?
  54. ಆರು ವರ್ಷದೊಳಗಿನ ಮಕ್ಕಳು ಎಷ್ಟು?
  55. ಯುವಕರು (೧೮–೩೫) ಎಷ್ಟು?
  56. ಯಾವುದೇ ಸಾಮಾಜಿಕ ಸಂಘ/ಸಂಸ್ಥೆಯಲ್ಲಿ ಸೇರಿದ್ದೀರಾ?
  57. ಮನೆಯಲ್ಲಿ ನೋಂದಾಯಿತ ಮತದಾರರು ಎಷ್ಟು?
  58. ಮತದಾನ ಮಾಡುವವರೇ?
  59. ಜಾತಿ ಆಧಾರದ ಮೇಲೆ ಬೇಧಭಾವ ಅನುಭವಿಸಿದ್ದೀರಾ?
  60. ಜಾತಿ ಸಮೀಕ್ಷೆಯಿಂದ ನಿಮಗೆ ಏನು ಪ್ರಯೋಜನ?

ಸೋಮವಾರದಿಂದ ಪ್ರಾರಂಭವಾಗುವ ಗಣತಿ ಕಾರ್ಯದ ಈ ಮೇಲಿನ 60 ಪ್ರಶ್ನೆಗಳಿಗೆ ಉತ್ತರ ನೀಡಲು ತಯಾರಿ ಮಾಡಿಕೊಳ್ಳಿ

Published On - 3:56 pm, Sun, 21 September 25