ಬೀದರ್: ಶ್ರೀರಾಮ ಸ್ನಾನ ಮಾಡಿ ಪಾಪ ನಾಶ ಮಾಡಿಕೊಂಡ 125 ಎಕರೆಯ ಕೆರೆ ದುಃಸ್ಥಿತಿಯಲ್ಲಿದೆ, ಸರ್ಕಾರ ಕಣ್ಮುಚ್ಚಿ ಕುಳಿತಿದೆ
ಬೀದರ್ ನಗರದಲ್ಲಿ ಶತಮಾನಗಳಷ್ಟು ಹಳೆಯದಾದ ಪಾಪವಿನಾಶ ದೇವಸ್ಥಾನ ಮತ್ತು 125 ಎಕರೆಯ ಬೃಹತ್ತಾದ ಐತಿಹಾಸಿಕ ಕೆರೆಯೂ ಇದೆ. ರಾವಣನನ್ನು ಯುದ್ದದಲ್ಲಿ ರಾಮ ಹತ್ಯೆ ಮಾಡಿದಾಗ ರಾವಣ ಶ್ರೀರಾಮನಿಗೆ ಬ್ರಹ್ಮಹತ್ಯೆ ದೋಷದ ಶಾಪ ಕೊಟ್ಟ. ಆಗ ರಾಮ ತಪಸ್ಸು ಮಾಡಿ ಇಲ್ಲಿನ ಕೆರೆಯಲ್ಲಿ ಸ್ನಾನ ಮಾಡಿ ಪಾಪ ನಾಶ ಮಾಡಿಕೊಂಡ ಎಂದು ಹೇಳಲಾಗುತ್ತದೆ. ಆದರೆ ಇವೆರಡೂ ಈಗ ದುಃಸ್ಥಿತಿಯಲ್ಲಿವೆ. ಸರ್ಕಾರ ಮಾತ್ರ ನಿದ್ರಿಸುತ್ತಿದೆ.
ಅದು ನೂರಾರು ವರ್ಷದಷ್ಟು ಪುರಾತನ ಕೆರೆಯದು. ಕೆರೆಯ ಸುತ್ತಮುತ್ತಲೂ ನೂರಾರು ಎಕರೆಯಷ್ಟು ಸುಂದರ ಅರಣ್ಯ ಪ್ರದೇಶವಿದೆ. ಇಲ್ಲಿನ ಅರಣ್ಯದಲ್ಲಿ ವಿವಿಧ ಜಾತಿ ಔಷಧಿ ಸಸ್ಯಗಳು, ಹತ್ತಾರು ಜಾತಿಯ ಪಕ್ಷಿಗಳು ಇವೆ. ಇಂತಹ ಐತಿಹಾಸಿಕ ಕೆರೆಯಿಂದು ಮಲಿನವಾಗುತ್ತಿದ್ದು ಜಲಚರಗಳ ಜೀವಕ್ಕೆ ಕುತ್ತು ಬರುತ್ತಿದೆ. ಬೀದರ್ ಒಂದು ಸಣ್ಣ ಜಿಲ್ಲೆಯಾದರೂ ಅಲ್ಲಿ ಸಾಕಷ್ಟು ಧಾರ್ಮಿಕ ಐತಿಹಾಸಿಕ ತಾಣಗಳು ಇವೆ. ಬೀದರ್‌ನಲ್ಲಿರುವ ಪಾಪನಾಶಿನಿ ಶಿವನ ದೇವಾಲಯಕ್ಕೆ ಹೋದ್ರೆ ನಿಮ್ಮ ಪಾಪಗಳೆಲ್ಲಾ ಪರಿಹಾರವಾಗುತ್ತಂತೆ. ಅಂತಹ ಒಂದು ಭವ್ಯ ಕ್ಷೇತ್ರ ಇದಾಗಿದೆ. ಇಲ್ಲಿನ ಉದ್ಭವ ಶಿವಲಿಂಗದ ದರ್ಶನ ಮಾಡಿದ್ರೆ ಪುಣ್ಯ ಲಭಿಸುತ್ತಂತೆ.
ಬೀದರ್ ನಗರದಲ್ಲಿರುವ ಪಾಪವಿನಾಶ ಮಂದಿರ ಒಂದು ಶತಮಾನದಷ್ಟು ಹಳೆಯದಾದ ದೇವಸ್ಥಾನ, ಶ್ರೀರಾಮಚಂದ್ರ ರಾವಣನನ್ನು ಯುದ್ದದಲ್ಲಿ ಹತ್ಯೆ ಮಾಡಿದಾಗ ರಾವಣ ಶ್ರೀರಾಮನಿಗೆ ಬ್ರಹ್ಮಹತ್ಯೆ ದೋಷದ ಶಾಪ ಕೊಟ್ಟಾಗ ಶ್ರಿರಾಮ ತಪಸ್ಸು ಮಾಡಿ ಈ ಕೆರೆಯಲ್ಲಿ ಸ್ನಾನ ಮಾಡಿ ಪಾಪ ನಾಶ ಮಾಡಿಕೊಂಡು ಹೋಗಿದ್ದನೆಂದು ಹೇಳಲಾಗುತ್ತದೆ. ಹೀಗಾಗಿಯೇ ಅಂದಿನಿಂದ ಈ ದೇವಸ್ಥಾನಕ್ಕೆ ಪಾಪ ನಾಶ ಮಂದಿರ ಎಂದು ಹೆಸರು ಬರುತ್ತದೆ. ಈ ದೇವಸ್ಥಾನದಲ್ಲಿ ಉದ್ಭವ ಲಿಂಗವಿದ್ದು ರಾಜ್ಯವಷ್ಟೇ ಅಲ್ಲದೇ ನೆರೆಯ ರಾಜ್ಯಗಳಾದ ಆಂಧ್ರಪ್ರದೇಶ, ಮಹಾರಾಷ್ಟ್ರದಿಂದ ಶ್ರಾವಣ ಮಾಸದಲ್ಲಿ ಸಾಗೋರಾಪಾದಿಯಲ್ಲಿ ಭಕ್ತರ ದಂಡು ಇಲ್ಲಿಗೆ ಆಗಮಿಸಿ ದೇವರ ದರ್ಶನ ಪಡೆದುಕೊಂಡು ಹೋಗುತ್ತಾರೆ.
ಆದರೆ ಇಂತಹ ಕೆರೆಯಿಂದು ಮಲೀನವಾಗುತ್ತಿದೆ. ಈ ಐತಿಹಾಸಿಕ ಕೆರೆಯ ಸುತ್ತಮುತ್ತಲೂ ಸುಂದರವಾದ ಪರಿಸರವಿದ್ದು ನೂರಾರು ಬಗೆಯ ಪಕ್ಷಿಗಳು ಇಲ್ಲಿ ವಾಸವಾಗಿವೆ. ಈ ಕೆರೆಯ ನೀರು ಮಲಿನವಾಗುತ್ತಿದೆ. ಪಾಪನಾಶ ಕೆರೆಯನ್ನ ಜನರು ಮಲಿನ ಮಾಡಬಾಡಬಾರದು ಎಂದು ಅರ್ಚಕ ಶಿವಕುಮಾರ್ ಪೂಜಾರ ಮನವಿ ಮಾಡಿದ್ದಾರೆ.
ಸುಮಾರು 125 ಎಕರೆ ವಿಸ್ತೀರ್ಣದ ಬೃಹತ್ತಾದ ಐತಿಹಾಸಿಕ ಕೆರೆ ಇದಾಗಿದೆ. ಕೆರೆಯ ಸುತ್ತಮುತ್ತಲಿರುವ ಪರಿಸರದಲ್ಲಿ ನೂರಾರು ಔಷಧಿ ಸಸ್ಯಗಳಿಗೆ ಹತ್ತಾರು ಬಗೆಯ ಪಕ್ಷಿಗಳಿಗೆ ನವಿಲುಗಳಿಗೆ ಇಲ್ಲಿನ ವಾತಾವರಣ ಇದೀಗ ಮಾರಕವಾಗಿ ಪರಿಣಮಿಸಿದೆ. ಸುಂದರ ಪರಿಸರದ ನಡುವೆ ಇರುವ ಈ ಕೆರೆ ರಕ್ಷಣೆ ಮಾಡಬೇಕಾದ ಜಿಲ್ಲಾಡಳಿತ ಮೌನವಾಗಿದ್ದು ಭಕ್ತರು ಆಕ್ರೋಶಗೊಂಡಿದ್ದಾರೆ.
Also Read: ಜನವರಿ 22ರಂದು ರಾಜ್ಯದ ಶಾಲೆಗಳಿಗೆ ರಜೆ ನೀಡುವಂತೆ ಹಿಂದೂ ಸಂಘಟನೆಗಳ ಒತ್ತಾಯ
ಇಲ್ಲಿನ ಪಾಪನಾಶ ಕೆರೆಯ ಪರಿಸರದಲ್ಲಿ ಅನೇಕ ಬಗೆಯ ಗಿಡ ಮರಗಳು ಇವೆ. ನವಿಲು, ಕೊಕ್ಕರೆ, ಗ್ರೇಹಾರ್ನ್ ಬಿಲ್, ಬಡಿಗನ ಹಕ್ಕಿ, ಕರಿಭೀಮಾ, ಬೂದು ಕೊಕ್ಕರೆ, ಪೆರಾಡೈಸ್ ಫ್ಲೈಕ್ಯಾಚರ್, ಓರಿಯಂಟಲ್ ಡಾರ್ಟರ್, ರಿವರ್ಟನ್, ಪಿಟ್ಟಾ ಸೇರಿದಂತೆ 50 ಬಗೆಯ ಪಕ್ಷಿಗಳು ವಾಸವಾಗಿವೆ. ಫ್ಲೆಮಿಂಗೊ, ಹಿಮಾಲಯದ ಬ್ಲ್ಯೂಕ್ಯಾಪ್ ರಾಕ್‌ಥ್ರಸ್ ಸೇರಿ ಅನೇಕ ಹಕ್ಕಿಗಳು ಚಳಿಗಾಲದಲ್ಲಿ ಇಲ್ಲಿಗೆ ವಲಸೆ ಬರುತ್ತವೆ.
ಮೊಲ, ಅಳಿಲು, ಮುಂಗುಸಿ, ಹಾವುಗಳು ಇಲ್ಲಿ ಕಾಣಸಿಗುತ್ತವೆ. ಕೆರೆಯ ನೀರು ಮಲಿನವಾದರೆ ಇವುಗಳ ಪ್ರಾಣಕ್ಕೆ ಕುತ್ತು ಬರಲಿದೆ ಎನ್ನುತ್ತಾರೆ ತಜ್ಞರು. -ಈ ದೇವಸ್ಥಾನಕ್ಕೆ ಬರುವ ಭಕ್ತರು ಕೂಡಾ ತಮ್ಮ ಮನೆಯಲ್ಲಿ ಪೂಜೆ ಪುನಸ್ಕಾರ ಮಾಡಿದ ವಸ್ತುಗಳನ್ನ ತಂದು ಈ ಕೆರೆಯಲ್ಲಿ ಹಾಕುತ್ತಿದ್ದಾರೆ. ಇದರಿಂದ ಕೆರೆಯ ನೀರು ವಿಷವಾಗತೊಡಗಿದ್ದು ಇಂದರಿಂದಾಗಿ ಕೆರೆಯಲ್ಲಿರುವ ಜಲಚರಗಳ ಪ್ರಾಣಹಾನಿಗೂ ಕೂಡಾ ಕಾರಣವಾಗುತ್ತಿವೆ. ಇದು ಸಹಜವಾಗಿಯೇ ಇಲ್ಲಿಗೆ ಬರುವ ಭಕ್ತರಲ್ಲಿ ಅಸಮಾಧಾನಕ್ಕೆ ಕಾರಣವಾಗುತ್ತಿದ್ದು ಇಲ್ಲಿನ ಕೆರೆಯನ್ನ ಸ್ವಚ್ಚಗೊಳಿಸಿ ಸುಂದರವಾದ ಪರಿಸರ ಕಾಪಾಡಿ ಎಂದು ಭಕ್ತರು ವಿನಂತಿಸಿದ್ದಾರೆ.
ಪ್ರತಿವರ್ಷ ಈ ದೇವಾಲಯಕ್ಕೆ ಲಕ್ಷಾಂತರ ರೂಪಾಯಿ ದೇಣಿಗೆ ರೂಪದಲ್ಲಿ ಭಕ್ತರು ಕೊಡುತ್ತಿದ್ದಾರೆ. ಆದರೆ ಇಲ್ಲಿಗೆ ಬರುವ ಹಣ ಸರಕಾರದ ಬೊಕ್ಕಸ ಸೇರುತ್ತಿದೆ. ಆದರೆ ದೇವಾಲಯದ ಕೆರೆಯ ಸ್ವಚ್ಚತೆಗೆ ಮಾತ್ರ ಗಮನಹರಿಸದಿರುವುದು ವಿರ್ಯಾಸವೇ ಸರಿ. ಲಕ್ಷಾಂತರ ಭಕ್ತರನ್ನ ಹೊಂದಿರುವ ಈ ದೇವಾಲಯಕ್ಕೆ ಮೂಲಭೂತ ಸೌಲಭ್ಯ ಕಲ್ಪಿಸಿಕೊಡುವ ಅನಿವಾರ್ಯತೆ ಈಗ ಸರಕಾರದ ಮೇಲಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ