ಅಶ್ಲೀಲವಾಗಿ ಮೆಸೇಜ್​​, ವರದಕ್ಷಿಣೆ ಕಿರುಕುಳ: ಪೊಲೀಸ್​​ ಪತಿ ಕಾಟಕ್ಕೆ ಪತ್ನಿ ಕಂಗಾಲು

ಅಶ್ಲೀಲ ಮೆಸೇಜ್ ಮಾಡೋದಲ್ಲದೆ ವರದಕ್ಷಿಣೆ ಮತ್ತು ಮಾನಸಿಕ ಕಿರುಕುಳ ಕೊಡ್ತಾನೆ ಎಂದು ಯುವತಿಯೋರ್ವರು ಪೊಲೀಸ್ ಕಾನ್ಸ್‌ಟೇಬಲ್ ಪತಿ ವಿರುದ್ಧವೇ ಬೀದರ್​​ನಲ್ಲಿ ಆರೋಪಿಸಿದ್ದಾರೆ. ಈ ಬಗ್ಗೆ ದೂರು ನೀಡಿದರೂ ಪೊಲೀಸರು ಕ್ರಮ ಕೈಗೊಂಡಿಲ್ಲ. ಮಕ್ಕಳಾಗಿಲ್ಲವೆಂದು ವರದಕ್ಷಿಣೆಗೂ ಗಂಡ ಬೇಡಿಕೆ ಇಟ್ಟಿದ್ದಾನೆ. ಜೀವ ಬೆದರಿಕೆಯೂ ಇರುವ ಕಾರಣ ತನಗೆ ರಕ್ಷಣೆ ನೀಡುವ ಜೊತೆಗೆ ನ್ಯಾಯ ಒದಗಿಸುವಂತೆ ಯುವತಿ ಆಗ್ರಹಿಸಿದ್ದಾರೆ.

ಅಶ್ಲೀಲವಾಗಿ ಮೆಸೇಜ್​​, ವರದಕ್ಷಿಣೆ ಕಿರುಕುಳ: ಪೊಲೀಸ್​​ ಪತಿ ಕಾಟಕ್ಕೆ ಪತ್ನಿ ಕಂಗಾಲು
ಮಚೇಂದ್ರ ಮತ್ತು ಸೀನಾ ದಂಪತಿ
Edited By:

Updated on: Jan 12, 2026 | 4:03 PM

ಬೀದರ್​​, ಜನವರಿ 12: ಪೊಲೀಸ್​​ ಕಾನ್ಸ್​​ಟೇಬಲ್ ಪತಿ ಅಶ್ಲೀಲವಾಗಿ ಮೆಸೇಜ್ ಮಾಡಿ ಕಿರುಕುಳ ನೀಡೋದಲ್ಲದೆ, ಮಾನಸಿಕ ಹಿಂಸೆ ಮತ್ತು ಜೀವ ಬೆದರಿಕೆಯೊಡ್ಡಿದ್ದಾನೆ ಎಂದು ಬೀದರ್​​ ಜಿಲ್ಲೆಯ ಔರಾದ್​ನಲ್ಲಿ ಯುವತಿಯೋರ್ವರು ಆರೋಪಿಸಿದ್ದಾರೆ. ಚಿಟಗುಪ್ಪ ಮೂಲದ ಕಾನ್ಸ್​​ಟೇಬಲ್​​ ಮಚೇಂದ್ರ ವಿರುದ್ಧ ಆರೋಪ ಕೇಳಿಬಂದಿದ್ದು, ಈ ಬಗ್ಗೆ ದೂರು ನೀಡಿದರೂ ಪೊಲೀಸರು ಕ್ರಮ ಕೈಗೊಂಡಿಲ್ಲ ಎಂದು ಸಂತ್ರಸ್ತೆ ಸೀನಾ ಹೇಳಿದ್ದಾರೆ.

‘ಅಕ್ಕನ ಮಗಳ ಮದುವೆ ಆಗೋದಾಗಿ ಬೆದರಿಕೆ’

ಬೆಂಗಳೂರಿನ ಮೈಕೋ ಲೇಔಟ್ ಟ್ರಾಫಿಕ್ ಠಾಣೆ ಪಿಸಿ ಆಗಿರುವ ಮಚೇಂದ್ರ ಮತ್ತು ಆತನ ಕುಟುಂಬಸ್ಥರು ವರದಕ್ಷಿಣೆ ನೀಡುವಂತೆ ಕಿರುಕುಳ ನೀಡುತ್ತಿದ್ದಾರೆ. ವರದಕ್ಷಿಣೆ ಕೊಡದಿದ್ರೆ ಅಕ್ಕನ ಮಗಳನ್ನ ಮದುವೆ ಆಗೋದಾಗಿ ಪತಿ ಬೆದರಿಕೆ ಹಾಕುತ್ತಿದ್ದು, ಈ ಬಗ್ಗೆ ಮೈಕೋ ಲೇಔಟ್ ಠಾಣೆಯಲ್ಲಿ ದೂರು ನೀಡಿದ್ರೂ ಯಾವುದೇ ಕ್ರಮ ಆಗಿಲ್ಲ. ಈ ಹಿಂದೆ ಔರಾದ್ ತಾಲೂಕಿನ ಚಿಂತಾಕಿ ಠಾಣೆಯಲ್ಲೂ​​ FIR​ ಆಗಿದ್ದು,  ಯಾವುದೇ ಪ್ರಯೋಜನ ಆಗಿಲ್ಲ. ಹೀಗಾಗಿ ನಮಗೆ ರಕ್ಷಣೆ ನೀಡುವ ಜೊತೆಗೆ ನ್ಯಾಯ ಕೊಡಿಸಿ ಎಂದು ಸಂತ್ರಸ್ತ ಯುವತಿ ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಮರಣ ತಂದ ಮಹಿಳೆ ಸಂಗ; ಕೊನೆಗೂ ಬದುಕಲಿಲ್ಲ ಎಂಜಿನಿಯರ್​​!

ಸಂತ್ರಸ್ತ ಯುವತಿ ಅಳಲು

2022ರ ಡಿಸೆಂಬರ್ 14ರಂದು ಮಚೇಂದ್ರ, ಸೀನಾ ಮದುವೆ ಆಗಿತ್ತು. ಆರಂಭದಲ್ಲಿ ದಂಪತಿ ಬೆಂಗಳೂರಿನಲ್ಲಿ ಸುಖವಾಗಿಯೇ ಇದ್ದರು. ನಂತರ ಹುಷಾರಿಲ್ಲ ಅಂತ ಪತ್ನಿಯನ್ನ ಮಚೇಂದ್ರ ತವರು ಮನೆಗೆ ಬಿಟ್ಟಿದ್ದ. ಬಳಿಕ 15 ತಿಂಗಳು ಕಳೆದ್ರೂ ಆಕೆಯನ್ನು ವಾಪಸ್ ಕರೆದುಕೊಂಡು ಹೋಗಿಲ್ಲ. ಇದನ್ನು ಪ್ರಶ್ನೆ ಮಾಡಿದ್ದಕ್ಕೆ ಮಕ್ಕಳು ಆಗಿಲ್ಲ, ಹೀಗಾಗಿ ತನೆಗೆ ವರದಕ್ಷಿಣೆ ನೀಡುವಂತೆ ಆತ ಬೇಡಿಕೆ ಇಟ್ಟಿದ್ದಾನೆ. ಈಗಾಗಲೇ 26 ಲಕ್ಷ ರೂ. ಖರ್ಚು ಮಾಡಿ ಮದುವೆ ಮಾಡಿದ್ದೇವೆ. ಆ ಸಾಲವೇ ನಮಗೆ ತೀರಿಸಲಾಗಿಲ್ಲ ಈಗ ಮತ್ತೆ ವರದಕ್ಷಿಣೆ ನೋಡೋದು ಹೇಗೆ ಎಂದು ಸಂತ್ರಸ್ತೆ ಟಿವಿ9 ಬಳಿ ಅಳಲು ತೋಡಿಕೊಂಡಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.