AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಂಗಳೂರಿನಲ್ಲಿ ಮಹಿಳೆ ಮೇಲೆ ಅತ್ಯಾಚಾರ: ಪತಿ ಸೇರಿ ಪೊಲೀಸ್​ ಕಾನ್ಸ್​ಟೇಬಲ್​​ನ ಬಂಧನ

ಮಂಗಳೂರಿನಲ್ಲಿ ಮಹಿಳೆಯ ಮೇಲೆ ಅತ್ಯಾಚಾರ ಆರೋಪದಡಿ ಕಾನ್ಸ್​ಟೇಬಲ್​ನನ್ನು ಅರೆಸ್ಟ್ ಮಾಡಲಾಗಿದೆ. ಪತಿಯ ಸಹಕಾರ ಪಡೆದು ಮಹಿಳೆಗೆ ಲೈಂಗಿಕ ದೌರ್ಜನ್ಯವೆಸಗಿರುವಂತಹ ಘಟನೆ ನಡೆದಿದೆ. ಈ ಪ್ರಕರಣದಲ್ಲಿ ಸಂತ್ರಸ್ತೆಯ ಪತಿಯನ್ನು ಕೂಡ ಪೊಲೀಸರು ಬಂಧಿಸಿದ್ದಾರೆ. ಪೊಲೀಸ್ ಕಮಿಷನರ್ ಸುಧೀರ್ ಕುಮಾರ್​ಗೆ ಮಹಿಳೆ ದೂರು ನೀಡಿದ್ದರು.

ಮಂಗಳೂರಿನಲ್ಲಿ ಮಹಿಳೆ ಮೇಲೆ ಅತ್ಯಾಚಾರ: ಪತಿ ಸೇರಿ ಪೊಲೀಸ್​ ಕಾನ್ಸ್​ಟೇಬಲ್​​ನ ಬಂಧನ
ಪೊಲೀಸ್ ಠಾಣೆ ಕಾನ್ಸ್‌ಟೇಬಲ್ ಚಂದ್ರನಾಯಕ್
ಪೃಥ್ವಿರಾಜ್​ ಬಿ.ಯು. ಮಂಗಳೂರು
| Updated By: ಗಂಗಾಧರ​ ಬ. ಸಾಬೋಜಿ|

Updated on: Jul 16, 2025 | 1:55 PM

Share

ಮಂಗಳೂರು, ಜುಲೈ 16: ಮಹಿಳೆಯ ಮೇಲೆ ಅತ್ಯಾಚಾರ ಆರೋಪ ಹಿನ್ನಲೆ ಪೊಲೀಸ್​ ಕಾನ್ಸ್​ಟೇಬಲ್​​ನನ್ನು ಮಂಗಳೂರಿನ ಕಂಕನಾಡಿ ಪೊಲೀಸರು ಬಂಧಿಸಿದ್ದಾರೆ. ಕಾವೂರು ಪೊಲೀಸ್ ಠಾಣೆ ಕಾನ್ಸ್‌ಟೇಬಲ್ ಚಂದ್ರನಾಯಕ್ ಬಂಧಿತ ಆರೋಪಿ. ಇದೇ ಪ್ರಕರಣದಲ್ಲಿ ಪತ್ನಿಯ ಖಾಸಗಿ ವಿಡಿಯೋ ಸೆರೆ ಹಿಡಿದು ಬ್ಲ್ಯಾಕ್‌ಮೇಲ್​ ಮಾಡುತ್ತಿದ್ದ ಗಂಡನನ್ನು ಕೂಡ ಬಂಧಿಸಲಾಗಿದೆ. ಪೊಲೀಸ್ ಕಮಿಷನರ್ ಸುಧೀರ್ ಕುಮಾರ್​ಗೆ ಮಹಿಳೆ ದೂರು ನೀಡಿದ್ದರು.

ನಡೆದದ್ದೇನು? 

ಸಂತ್ರಸ್ತ ಮಹಿಳೆಗೆ ಮದುವೆಯಾಗಿ ಕೆಲ ವರ್ಷ ಆಗಿತ್ತು. ಪತ್ನಿಯ ಖಾಸಗಿ ವಿಡಿಯೋವನ್ನು ಪತಿ ಸೆರೆ ಹಿಡಿದಿದ್ದ. ಈ ವಿಡಿಯೋ ತೋರಿಸಿ ಬ್ಲ್ಯಾಕ್‌ಮೇಲ್​​​ ಕೂಡ ಮಾಡುತ್ತಿದ್ದ. ತಾನು ಹೇಳಿದವರ ಜೊತೆ ಮಲಗಬೇಕು ಅಂತ ಟಾರ್ಚರ್ ಕೊಟ್ಟಿದ್ದ. ವಿಡಿಯೋ ಇಟ್ಟುಕೊಂಡು ಬೇರೆಯವರ ಹಾಸಿಗೆಗೆ ಪತ್ನಿಯನ್ನು ಆರೋಪಿ ಪತಿ ದೂಡಿದ್ದ. ಇದರಿಂದ ತುಂಬಾ ನೊಂದಿದ್ದ ಸಂತ್ರಸ್ತೆ ಪೊಲೀಸನ ಸಂಪರ್ಕ ಮಾಡಿದ್ದಾರೆ.

ಇದನ್ನೂ ಓದಿ: ಮಂಗಳೂರು: ಉಪನ್ಯಾಸಕರಿಂದಲೇ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ, ಬೆಂಗಳೂರಿನಲ್ಲಿ ಮೂವರ ಬಂಧನ

ಇದನ್ನೂ ಓದಿ
Image
ಉಪನ್ಯಾಸಕರಿಂದಲೇ ವಿದ್ಯಾರ್ಥಿನಿ ಮೇಲೆ ರೇಪ್, ಬೆಂಗಳೂರಿನಲ್ಲಿ ಮೂವರ ಬಂಧನ
Image
ಪ್ರತ್ಯೇಕ ಘಟನೆ: ಮಂಡ್ಯ, ಮಂಗಳೂರಿನಲ್ಲಿ ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ
Image
ಬಿಜೆಪಿ ಮುಖಂಡನ ಪುತ್ರನಿಂದ ಯುವತಿಗೆ ವಂಚನೆ ಪ್ರಕರಣ: ಭೂಗತ ಪಾತಕಿ ಎಂಟ್ರಿ!
Image
ಹಿಂದೂ ಮುಖಂಡನ ಮೊಬೈಲ್​ನಲ್ಲಿ ರಾಜಕಾರಣಿಯೊಬ್ಬರ ಅಶ್ಲೀಲ ವಿಡಿಯೋ ಪತ್ತೆ!

ಬೇರೆಯವರ ಮೂಲಕ ಕಾವೂರು ಪೊಲೀಸ್ ಚಂದ್ರನಾಯಕ್ ಪರಿಚಯವಾಗಿದೆ. ವಿಡಿಯೋ ಡಿಲೀಟ್ ಮಾಡಿಸುವಂತೆ ಚಂದ್ರನಾಯಕನಿಗೆ ಸಂತ್ರಸ್ತೆ ಮನವಿ ಮಾಡಿದ್ದರು. ಆ ಮೂಲಕ ಚಂದ್ರನಾಯಕ್ ತನ್ನ  ಪೊಲೀಸ್ ಪವರ್ ಬಳಸಿ ವಿಡಿಯೋವನ್ನು ಡಿಲೀಟ್ ಮಾಡಿಸಿದ್ದ. ಬಳಿಕ ದಂಪತಿ ನಡುವೆ ರಾಜಿ ಮಾಡಿಸಿದ್ದ.

ಇದನ್ನೂ ಓದಿ: ಪ್ರತ್ಯೇಕ ಘಟನೆ: ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಉದ್ಯಮಿ, ಚಾಕೊಲೇಟ್ ಕೊಡಿಸುವುದಾಗಿ ಬಾಲಕಿ ಮೇಲೆ ಅತ್ಯಾಚಾರ

ಈ ವೇಳೆ ಪೊಲೀಸಪ್ಪ ಸಂತ್ರಸ್ತೆ ಪತಿ ಬಳಿ ವಿಶ್ವಾಸದಿಂದ ಇದ್ದ. ಪತಿಯ ಸಹಕಾರ ಪಡೆದು ಮಹಿಳೆಗೆ ಲೈಂಗಿಕ ದೌರ್ಜನ್ಯವೆಸಗಿದ್ದಾನೆ. ಚಂದ್ರನಾಯಕ್​ ಪದೇ ಪದೇ ಮಹಿಳೆಯನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾನೆ. ಇತ್ತ ಸಂತ್ರಸ್ತೆ ಪತಿಗೆ ಸಂಪೂರ್ಣ ಬೆಂಬಲ ನೀಡಿ ಹಳೇ ಚಾಳಿ ಮುಂದುವರೆಸಲು ಕಾನ್ಸ್‌ಟೇಬಲ್​ ಸಹಕರಿಸಿದ್ದ. ಇದರಿಂದ ದಾರಿ ಕಾಣದೆ ಸಂತ್ರಸ್ತೆ ಪೊಲೀಸ್ ಆಯುಕ್ತ‌ ಸುಧೀರ್ ಕುಮಾರ್ ರೆಡ್ಡಿ ಮೊರೆ ಹೋಗಿದ್ದರು. ಇದೀಗ ಇಬ್ಬರ ಬಂಧನವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.